ಪಿಎಂಇಂಡಿಯಾ
ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ) ಮಂಡಳಿಯು ಅನುಮೋದಿಸಿರುವ ಹೊಸ ಸುತ್ತಿನ ಜಿ ಎಸ್ ಟಿ ಸುಧಾರಣೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಗತಿಸಿದ್ದಾರೆ. ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯನ್ನು ಸರಳ, ಹೆಚ್ಚು ಪರಿಣಾಮಕಾರಿ ಮತ್ತು ನಾಗರಿಕ-ಸ್ನೇಹಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಈ ಶಿಫಾರಸುಗಳು ಮಹತ್ವದ ಹೆಜ್ಜೆಯಾಗಿವೆ ಎಂದು ಅವರು ಬಣ್ಣಿಸಿದ್ದಾರೆ. ಬಂಧನಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ತೆಗೆದುಹಾಕುವುದು, ಅಪರಾಧೇತರವಾಗಿಸುವಿಕೆಯ ವ್ಯಾಪ್ತಿ ವಿಸ್ತರಣೆ ಮತ್ತು ಕಾರ್ಯವಿಧಾನಗಳ ಸರಳೀಕರಣಕ್ಕೆ ಸಂಬಂಧಿಸಿದ ಮಂಡಳಿಯ ಶಿಫಾರಸುಗಳನ್ನು ಶ್ರೀ ಮೋದಿ ಅವರು ವಿವರಿಸುತ್ತಾ, ಈ ಕ್ರಮಗಳು ತೆರಿಗೆದಾರರು ಮತ್ತು ಉದ್ಯಮಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶ್ರೀ ಮೋದಿ ಅವರ ಎಕ್ಸ್ ಪೋಸ್ಟ್ ಹೀಗಿದೆ:
ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ) ಮಂಡಳಿಯು ಅನುಮೋದಿಸಿರುವ ಹೊಸ ಸುತ್ತಿನ ಜಿ ಎಸ್ ಟಿ ಸುಧಾರಣೆಗಳನ್ನು ನಾನು ಸ್ವಾಗತಿಸುತ್ತೇನೆ.
ಬಂಧನಕ್ಕೆ ಸಂಬಂಧಿಸಿದ ನಿಬಂಧನೆಗಳನ್ನು ತೆಗೆದು ಹಾಕುವುದು, ಅಪರಾಧ ಮುಕ್ತಗೊಳಿಸುವಿಕೆಯ ವ್ಯಾಪ್ತಿ ವಿಸ್ತರಣೆ ಮತ್ತು ಸರಳೀಕೃತ ಕಾರ್ಯವಿಧಾನಗಳ ಕುರಿತಾದ ಮಂಡಳಿಯ ಶಿಫಾರಸುಗಳು ಅತ್ಯಂತ ಸಕಾರಾತ್ಮಕ ಪರಿಣಾಮ ಬೀರಲಿವೆ.
ಗುರಿ ಸ್ಪಷ್ಟವಾಗಿದೆ:
ತ್ವರಿತ ನಿರ್ಧಾರಗಳು.
ನಿಯಮ ಪಾಲನಾ ವೆಚ್ಚಗಳ ಕಡಿತ.
ಸ್ವಯಂ ಮರುಪಾವತಿಗಳು.
ವಿಶ್ವಾಸಾಧಾರಿತ ಆಡಳಿತ.
ಜಿ ಎಸ್ ಟಿ ಯನ್ನು ಇನ್ನಷ್ಟು ಪರಿಣಾಮಕಾರಿ, ಪಾರದರ್ಶಕ ಮತ್ತು ನಾಗರಿಕ-ಸ್ನೇಹಿಯನ್ನಾಗಿ ಮಾಡುವ ನಮ್ಮ ನಿರಂತರ ಪ್ರಯತ್ನಗಳಿಗೆ ಇವು ಅನುಗುಣವಾಗಿವೆ.
*****
I welcome the new round of GST reforms approved by the GST Council. The Council’s recommendations on removal of arrest provisions, greater decriminalisation and simpler procedures will have a very positive impact. The focus is clear: Faster decisions. Lower compliance costs. Automated refunds. Trust-based administration. These are in line with our constant efforts to make GST more efficient, transparent and citizen-friendly.
— Narendra Modi (@narendramodi) October 8, 2026