Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೆನಡಾ ಪ್ರಧಾನಮಂತ್ರಿ ಮಾರ್ಕ್ ಕಾರ್ನಿ ಜತೆ ಆತ್ಮೀಯ ಹಾಗೂ ಫಲಪ್ರದ ಮಾತುಕತೆ ನಡೆಸಿದ ಪ್ರಧಾನಮಂತ್ರಿ; ಕಾರ್ಯತಂತ್ರದ ಪಾಲುದಾರಿಕೆ ಬಲವರ್ಧನೆ ಕುರಿತು ಚರ್ಚೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆನಡಾ ಪ್ರಧಾನಮಂತ್ರಿ ಮಾರ್ಕ್ ಕಾರ್ನಿ ಅವರೊಂದಿಗೆ ಆತ್ಮೀಯ ಮತ್ತು ಫಲಪ್ರದ ಮಾತುಕತೆ ನಡೆಸಿದರು.

ಭಾರತ–ಕೆನಡಾ ಸಂಬಂಧಗಳಲ್ಲಿ ಕಂಡುಬಂದಿರುವ ಸಕಾರಾತ್ಮಕ ಪ್ರಗತಿಯನ್ನು ಮುಂದುವರಿಸಲು ಉಭಯ ನಾಯಕರು ಸಮ್ಮತಿಸಿದರು. ವ್ಯಾಪಾರ, ಇಂಧನ, ತಂತ್ರಜ್ಞಾನ, ಭದ್ರತೆ ಮತ್ತು ಜನರ ನಡುವಿನ ಸಂಬಂಧ ಸೇರಿದಂತೆ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಕ್ಷೇತ್ರಗಳಲ್ಲಿ ಸ್ಪಷ್ಟ ಫಲಿತಾಂಶಗಳನ್ನು ಸಾಧಿಸಲು ಒಗ್ಗೂಡಿ ಕಾರ್ಯನಿರ್ವಹಿಸಲು ನಿರ್ಧರಿಸಿದರು.

ಭಾರತ ಮತ್ತು ಕೆನಡಾ ಜತೆಯಾಗಿ ಹೆಚ್ಚು ಸ್ಥಿರ ಹಾಗೂ ಸಮೃದ್ಧ ಜಗತ್ತಿನ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು.

ಈ ಕುರಿತು ಶ್ರೀ ನರೇಂದ್ರ ಮೋದಿ ತಮ್ಮ ‘ಎಕ್ಸ್‌’ ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ:

“ಪ್ರಧಾನಮಂತ್ರಿ ಮಾರ್ಕ್ ಕಾರ್ನಿ ಅವರೊಂದಿಗೆ ಆತ್ಮೀಯ ಮತ್ತು ಫಲಪ್ರದ ಮಾತುಕತೆ ನಡೆಸಿದೆನು.

ಭಾರತ–ಕೆನಡಾ ಸಂಬಂಧಗಳಲ್ಲಿನ ಸಕಾರಾತ್ಮಕ ಪ್ರಗತಿಯನ್ನು ಆಧರಿಸಿ, ವ್ಯಾಪಾರ, ಇಂಧನ, ತಂತ್ರಜ್ಞಾನ, ಭದ್ರತೆ ಮತ್ತು ಜನರ ನಡುವಿನ ಸಂಪರ್ಕ ಸೇರಿದಂತೆ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಕ್ಷೇತ್ರಗಳಲ್ಲಿ ಸ್ಪಷ್ಟ ಫಲಿತಾಂಶಗಳನ್ನು ಸಾಧಿಸಲು ಒಗ್ಗೂಡಿ ಕಾರ್ಯನಿರ್ವಹಿಸಲು ನಾವು ಸಮ್ಮತಿಸಿದ್ದೇವೆ.

ಭಾರತ ಮತ್ತು ಕೆನಡಾ ಜತೆಯಾಗಿ ಹೆಚ್ಚು ಸ್ಥಿರ ಹಾಗೂ ಸಮೃದ್ಧ ಜಗತ್ತಿನ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿವೆ.

@MarkJCarney”

 

*****