ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಮತ್ತು ದೇಶದ ಆರ್ಥಿಕತೆ, ಮಾರುಕಟ್ಟೆಗಳು ಮತ್ತು ಜನರೊಂದಿಗೆ ಅದರ ಸಂಬಂಧಗಳನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಬ್ಲೂಮ್ಬರ್ಗ್ನ ಯೋಜನೆಗಳನ್ನು ಸ್ವಾಗತಿಸಿದ್ದಾರೆ.
ಮೈಕ್ ಬ್ಲೂಮ್ಬರ್ಗ್ ಅವರು ತಮ್ಮ ‘ಎಕ್ಸ್’ನಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು “ಸತತ ಅವಧಿಗಳಲ್ಲಿ ಭಾರತದ ಅತಿ ದೀರ್ಘಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿ” ಎಂದು ಬಣ್ಣಿಸಿದ್ದಾರೆ. ಭಾರತದ ವೇಗದ ಆರ್ಥಿಕ ಬೆಳವಣಿಗೆ ಹಾಗೂ ಜಾಗತಿಕ ನಾಯಕತ್ವದತ್ತ ಸಾಗುತ್ತಿರುವುದನ್ನು ಅವರು ಶ್ಲಾಘಿಸಿದ್ದಾರೆ. ಭಾರತದ ಭವಿಷ್ಯದ ಕುರಿತು ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನೂ ಉಲ್ಲೇಖಿಸಿರುವ ಅವರು, ಭಾರತದಲ್ಲಿ ಬ್ಲೂಮ್ಬರ್ಗ್ ಸಂಸ್ಥೆಯ 30ನೇ ವರ್ಷ ಮತ್ತು ದೇಶದಲ್ಲಿ ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಯೋಜನೆಗಳ ಕುರಿತು ಚರ್ಚಿಸಿದ್ದು ಸಂತಸ ತಂದಿದೆ ಎಂದು ಹೇಳಿದ್ದಾರೆ.
ಮೈಕ್ ಬ್ಲೂಮ್ಬರ್ಗ್ ಅವರ ‘ಎಕ್ಸ್’ ಪೋಸ್ಟ್ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಅವರನ್ನು ಭೇಟಿಯಾಗಿದ್ದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಭಾರತದಲ್ಲಿ 30 ವರ್ಷಗಳನ್ನು ಪೂರೈಸಿರುವ ಬ್ಲೂಮ್ಬರ್ಗ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಹಾಗೂ ದೇಶದ ಆರ್ಥಿಕತೆ, ಮಾರುಕಟ್ಟೆಗಳು ಮತ್ತು ಜನರೊಂದಿಗೆ ತನ್ನ ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ಗಾಢಗೊಳಿಸುವ ಬ್ಲೂಮ್ಬರ್ಗ್ನ ಯೋಜನೆಗಳನ್ನು ಶ್ರೀ ನರೇಂದ್ರ ಮೋದಿ ಸ್ವಾಗತಿಸಿದರು. ಭಾರತದ ಪ್ರಗತಿಯ ಪಯಣದಿಂದ ವಿವಿಧ ಕ್ಷೇತ್ರಗಳಲ್ಲಿ ಸೃಷ್ಟಿಯಾಗುತ್ತಿರುವ ಅಪಾರ ಅವಕಾಶಗಳನ್ನೂ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.
ಪ್ರಧಾನಮಂತ್ರಿ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ;
“ಇಂದು ಬೆಳಿಗ್ಗೆ ನಿಮ್ಮನ್ನು ಭೇಟಿಯಾಗಿದ್ದು ಸಂತೋಷವಾಯಿತು.
ಭಾರತದಲ್ಲಿ 30 ವರ್ಷಗಳನ್ನು ಪೂರೈಸಿರುವ ಬ್ಲೂಮ್ಬರ್ಗ್ ಸಂಸ್ಥೆಗೆ ಅಭಿನಂದನೆಗಳು. ಭಾರತದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಹಾಗೂ ನಮ್ಮ ಆರ್ಥಿಕತೆ, ಮಾರುಕಟ್ಟೆಗಳು ಮತ್ತು ಜನರೊಂದಿಗೆ ತನ್ನ ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ತೀವ್ರಗೊಳಿಸುವ ಬ್ಲೂಮ್ಬರ್ಗ್ನ ಯೋಜನೆಗಳನ್ನು ನಾವು ಸ್ವಾಗತಿಸುತ್ತೇವೆ.
ಭಾರತದ ಪ್ರಗತಿಯ ಪಯಣವು ವಿವಿಧ ಕ್ಷೇತ್ರಗಳಲ್ಲಿ ಅಪಾರ ಅವಕಾಶಗಳನ್ನು ಸೃಷ್ಟಿಸುತ್ತಲೇ ಇದೆ.’’
*****
It was a delight meeting you this morning. Congratulations to Bloomberg on completing 30 years in India. We welcome Bloomberg's plans to expand its presence in India and deepen its engagement with our economy, markets and people. India’s growth story continues to create immense opportunities across sectors.
— Narendra Modi (@narendramodi) October 13, 2026