2026ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಮಹಿಳೆಯರ ಡಿಸ್ಕಸ್ ಥ್ರೋ (ಚಕ್ರ ಎಸೆತ) F54 ವಿಭಾಗದಲ್ಲಿ ಭವ್ಯ ಗೆಲುವು ಸಾಧಿಸಿದ ಸುವರ್ಣ ರಾಜ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದನೆ ಸಲ್ಲಿಸಿದ್ದಾರೆ.
ಸುವರ್ಣ ರಾಜ್ ಅವರ ಈ ಯಶಸ್ಸು ಅವರ ಕಠಿಣ ಪರಿಶ್ರಮ, ದೃಢ ನಿಶ್ಚಯ ಮತ್ತು ಕ್ರೀಡಾ ಶ್ರೇಷ್ಠತೆಯ ಕಡೆಗಿನ ಅಚಲ ಬದ್ಧತೆಯ ಫಲವಾಗಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ. ಭಾರತವು ಈ ಅದ್ಭುತ ಗೆಲುವನ್ನು ಸಂಭ್ರಮಿಸುತ್ತಿದೆ ಎಂದು ತಿಳಿಸಿರುವ ಅವರು, ಸುವರ್ಣ ರಾಜ್ ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸಿದ್ದಾರೆ.
ಪ್ರಧಾನಮಂತ್ರಿಗಳ ಕಾರ್ಯಾಲಯವು ‘ಎಕ್ಸ್’ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದೆ:
“2026ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಮಹಿಳೆಯರ ಡಿಸ್ಕಸ್ ಥ್ರೋ F54 ವಿಭಾಗದಲ್ಲಿ ಭವ್ಯ ಗೆಲುವು ಸಾಧಿಸಿದ ಸುವರ್ಣ ರಾಜ್ ಅವರಿಗೆ ಅಭಿನಂದನೆಗಳು! ಅವರ ಈ ಯಶಸ್ಸು ಅವರ ಕಠಿಣ ಪರಿಶ್ರಮ, ದೃಢ ನಿಶ್ಚಯ ಮತ್ತು ಕ್ರೀಡಾ ಶ್ರೇಷ್ಠತೆಯ ಕಡೆಗಿನ ಅಚಲ ಬದ್ಧತೆಯ ಫಲವಾಗಿದೆ. ಭಾರತವು ಈ ಅದ್ಭುತ ಗೆಲುವನ್ನು ಸಂಭ್ರಮಿಸುತ್ತಿದೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi”
*****
Congratulations to Suvarna Raj on her magnificent victory in the Women's Discus Throw F54 event at the Asian Para Games 2026! Her success is the result of her hard work, perseverance and unwavering commitment to sporting excellence. India celebrates this wonderful triumph. Best wishes for the endeavours ahead: PM @narendramodi
— PMO India (@PMOIndia) October 22, 2026