Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸ್ವಾತಿ ಚೌಧರಿ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮಹಿಳಾ W1 ಬಿಲ್ಲುಗಾರಿಕೆ (Archery) ವಿಭಾಗದಲ್ಲಿ, ತಮ್ಮ ಚೊಚ್ಚಲ ಪ್ರವೇಶದಲ್ಲೇ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿರುವ ಸ್ವಾತಿ ಚೌಧರಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ. ಈ ವಿಭಾಗದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕ ಇದಾಗಿದೆ.

ಇದು ಅತ್ಯಂತ ವಿಶೇಷ ಸಾಧನೆ ಎಂದು ಬಣ್ಣಿಸಿರುವ ಶ್ರೀ ಮೋದಿ, ಅವರ ದೃಢ ನಿಶ್ಚಯವು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದಾರೆ. ಅವರು ಮುಂದೆಯೂ ದೇಶಕ್ಕೆ ಹೆಮ್ಮೆ ತರುವಂತಹ ಸಾಧನೆಗಳನ್ನು ಮುಂದುವರಿಸಲಿ ಎಂದು ಪ್ರಧಾನಿ ಆಶಿಸಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯವು ‘ಎಕ್ಸ್’ ಪೋಸ್ಟ್ ಹೀಗೆ ಹಂಚಿಕೊಂಡಿದೆ:

“ಭಾರತೀಯ ಪ್ಯಾರಾ ಬಿಲ್ಲುಗಾರಿಕೆಗೆ ಇದೊಂದು ಅತ್ಯಂತ ವಿಶೇಷ ಸಾಧನೆ!

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಮಹಿಳಾ W1 ಬಿಲ್ಲುಗಾರಿಕೆ ವಿಭಾಗದಲ್ಲಿ, ತಮ್ಮ ಚೊಚ್ಚಲ ಪ್ರವೇಶದಲ್ಲೇ ಬೆಳ್ಳಿ ಪದಕ ಗೆಲ್ಲುವ ಮೂಲಕ ಸ್ವಾತಿ ಚೌಧರಿ ಇತಿಹಾಸ ನಿರ್ಮಿಸಿದ್ದಾರೆ. ಅವರ ದೃಢ ನಿಶ್ಚಯವು ನಿಜಕ್ಕೂ ಶ್ಲಾಘನೀಯ. ಅವರು ಮುಂದೆಯೂ ದೇಶಕ್ಕೆ ಹೆಮ್ಮೆ ತರುವ ಸಾಧನೆಗಳನ್ನು ಮುಂದುವರಿಸಲಿ: ಪ್ರಧಾನಮಂತ್ರಿ @narendramodi”

 

*****