Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ರವಿ ಕಾರ್ತಿಕ್ ಬುಡಿಗಿನಾ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಪುರುಷರ 50 ಮೀಟರ್ ಫ್ರೀಸ್ಟೈಲ್ S13 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ರವಿ ಕಾರ್ತಿಕ್ ಬುಡಿಗಿನಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

ಅವರ ಈ ಸಾಧನೆಯ ಬಗ್ಗೆ ಬಹಳ ಹೆಮ್ಮೆಯಿದೆ ಎಂದು ತಿಳಿಸಿದ ಶ್ರೀ ಮೋದಿ, ಅವರ ಉತ್ಸಾಹ ಮತ್ತು ಬದ್ಧತೆ ಶ್ಲಾಘನೀಯ ಎಂದು ಬಣ್ಣಿಸಿದರು. ಅಲ್ಲದೇ, ಅವರ ಮುಂದಿನ ಕ್ರೀಡಾ ಸ್ಪರ್ಧೆಗಳಿಗೆ ಶುಭ ಹಾರೈಸಿದರು.

ಪ್ರಧಾನಮಂತ್ರಿಗಳ ಕಾರ್ಯಾಲಯವು ‘ಎಕ್ಸ್’ ಪೋಸ್ಟ್ ನಲ್ಲಿ ಹೀಗೆ ಹಂಚಿಕೊಂಡಿದೆ:

“ಪುರುಷರ 50 ಮೀಟರ್ ಫ್ರೀಸ್ಟೈಲ್ S13 ವಿಭಾಗದಲ್ಲಿ ಕಂಚಿನ ಪದಕ ಗೆದ್ದ ರವಿ ಕಾರ್ತಿಕ್ ಬುಡಿಗಿನಾ ಅವರ ಬಗ್ಗೆ ಬಹಳ ಹೆಮ್ಮೆಯಿದೆ. ಅವರ ಉತ್ಸಾಹ ಮತ್ತು ಬದ್ಧತೆ ಶ್ಲಾಘನೀಯ. ಅವರ ಮುಂದಿನ ಸ್ಪರ್ಧೆಗಳಿಗೆ ಶುಭ ಹಾರೈಕೆಗಳು: ಪ್ರಧಾನಮಂತ್ರಿ @narendramodi”

 

*****