2026ರ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಪುರುಷರ ಲಾಂಗ್ ಜಂಪ್ ಟಿ 44/ಟಿ62/ಟಿ64 ಸ್ಪರ್ಧೆಯಲ್ಲಿ ಅದ್ಭುತ ಜಿಗಿತದೊಂದಿಗೆ ಚಿನ್ನದ ಪದಕವನ್ನು ಗೆದ್ದ ಸೋಲೈರಾಜ್ ಧರ್ಮರಾಜ್ ಅವರನ್ನು ಅವರ ಅತ್ಯುತ್ತಮ ಕ್ರೀಡಾ ಪ್ರದರ್ಶನಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಅಭಿನಂದಿಸಿದ್ದಾರೆ.
ತಮ್ಮದೇ ಆದ ಏಷ್ಯನ್ ದಾಖಲೆಯನ್ನು ಮೀರಿಸುವುದರ ಮೂಲಕ, ಅವರು ಮತ್ತೊಮ್ಮೆ ತಮ್ಮ ಅದ್ಭುತ ಕೌಶಲ್ಯ ಮತ್ತು ದೃಢನಿಶ್ಚಯವನ್ನು ಪ್ರದರ್ಶಿಸಿದ್ದಾರೆ ಎಂದು ಶ್ರೀ ಮೋದಿಯವರು ಗಮನಿಸಿದ್ದಾರೆ.
ಪ್ರಧಾನಮಂತ್ರಿಯವರ ಕಾರ್ಯಾಲಯವು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದೆ:
“ಸೋಲೈರಾಜ್ ಧರ್ಮರಾಜ್ ಅವರು ಏಷ್ಯನ್ ಪ್ಯಾರಾ ಕ್ರೀಡಾಕೂಟ 2026ರ ಪುರುಷರ ಲಾಂಗ್ ಜಂಪ್ ಟಿ44/ಟಿ62/ಟಿ64 ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ, ಅದ್ಭುತ ಜಿಗಿತದೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ತಮ್ಮದೇ ಆದ ಏಷ್ಯನ್ ದಾಖಲೆಯನ್ನು ಮೀರಿಸುವುದರ ಮೂಲಕ, ಅವರು ಮತ್ತೊಮ್ಮೆ ತಮ್ಮ ಅದ್ಭುತ ಕೌಶಲ್ಯ ಮತ್ತು ದೃಢನಿಶ್ಚಯವನ್ನು ಪ್ರದರ್ಶಿಸಿದ್ದಾರೆ. ಈ ಅತ್ಯುತ್ತಮ ವಿಜಯಕ್ಕಾಗಿ ಸೋಲೈರಾಜ್ ಅವರಿಗೆ ಅಭಿನಂದನೆಗಳು. ಅವರು ಕ್ರೀಡಾ ಜಗತ್ತಿನ ಸಾಧನೆಗಳಲ್ಲಿ ಹೆಚ್ಚಿನ ಎತ್ತರವನ್ನು ಸಾಧಿಸುವುದನ್ನು ಮುಂದುವರಿಸಲಿ: ಪ್ರಧಾನಮಂತ್ರಿ @narendramodi”
*****
Solairaj Dharmaraj has delivered an exceptional performance in the Men’s Long Jump T44/T62/T64 event at the Asian Para Games 2026, winning Gold with a phenomenal jump. By surpassing his own Asian Record, he has once again demonstrated his tremendous skills and determination. Congratulations to Solairaj on this outstanding triumph. May he continue to achieve greater heights: PM @narendramodi
— PMO India (@PMOIndia) October 22, 2026