Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಗೇಮ್ಸ್‌ ನಲ್ಲಿ ಚಿನ್ನ ಗೆದ್ದಿರುವ ಅಂಜನಾಬೆನ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ


ಏಷ್ಯನ್ ಪ್ಯಾರಾ ಗೇಮ್ಸ್ 2026ರ ಮಹಿಳೆಯರ 400 ಮೀಟರ್ ಟಿ47 ಸ್ಪರ್ಧೆಯಲ್ಲಿ ಅತ್ಯುತ್ತಮ ಸಮಯ ನಿರ್ವಹಣೆಯೊಂದಿಗೆ ಚಿನ್ನದ ಪದಕ ಜಯಿಸಿರುವ ಅಂಜನಾಬೆನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

ಅವರ ಅಸಾಧಾರಣ ವೇಗ, ಏಕಾಗ್ರತೆ ಮತ್ತು ದೃಢನಿಶ್ಚಯವು ದೇಶಕ್ಕೆ ಅಪಾರ ಹರ್ಷ ತಂದಿದೆ ಎಂದು ತಿಳಿಸುತ್ತಾ ಶ್ರೀ ಮೋದಿ ಅವರು, ಅಂಜನಾಬೆನ್‌ ಅವರು ಮುಂದಿನ ವರ್ಷಗಳಲ್ಲಿಯೂ ಹೀಗೆಯೇ ಅತ್ಯುತ್ತಮ ಪ್ರದರ್ಶನ ನೀಡಿ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಆಶಿಸಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್‌ ಪೋಸ್ಟ್‌ ನಲ್ಲಿ ಹೀಗೆ ಹೇಳಿದೆ:

“ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ ಮಹಿಳೆಯರ 400 ಮೀಟರ್ ಟಿ47 ಸ್ಪರ್ಧೆಯಲ್ಲಿ ಅತ್ಯುತ್ತಮ ಸಮಯ ನಿರ್ವಹಣೆಯೊಂದಿಗೆ ಸ್ಪರ್ಣ ಜಯಿಸಿರುವ ಅಂಜನಾಬೆನ್ ಅವರಿಗೆ ಅಭಿನಂದನೆಗಳು. ಅವರ ಅಸಾಧಾರಣ ವೇಗ, ಏಕಾಗ್ರತೆ ಮತ್ತು ದೃಢನಿಶ್ಚಯವು ದೇಶಕ್ಕೆ ಅಪಾರ ಸಂತೋಷ  ತಂದಿದೆ. ಅವರು ಮುಂಬರುವ ವರ್ಷಗಳಲ್ಲಿಯೂ ಹೀಗೆಯೇ ಉತ್ತಮ ಸಾಧನೆ ಮಾಡುತ್ತಾ, ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಹಾರೈಸುತ್ತೇನೆ: ಪ್ರಧಾನಮಂತ್ರಿ @narendramodi”

 

*****