ಏಷ್ಯನ್ ಪ್ಯಾರಾ ಗೇಮ್ಸ್ 2026ರ ಮಹಿಳೆಯರ ಸಿಂಗಲ್ಸ್ ಎಸ್ ಯು 5 ಪ್ಯಾರಾ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿರುವ ಮನೀಷಾ ರಾಮದಾಸ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.
ಸತತ ಎರಡನೇ ಆವೃತ್ತಿಯಲ್ಲಿ ಕಂಚಿನ ಪದಕವನ್ನು ಜಯಿಸಿರುವುದು ಅವರ ಸ್ಥಿರತೆ ಮತ್ತು ಕ್ರೀಡೆಯ ಮೇಲಿನ ಬದ್ಧತೆಯನ್ನು ಪ್ರತಿಬಿಂಬಿಸಿದೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. ಮನೀಷಾ ಅವರ ಪ್ರಯತ್ನಗಳು ಮತ್ತು ಸ್ಪರ್ಧಾತ್ಮಕ ಮನೋಭಾವವು ನಿಜಕ್ಕೂ ಶ್ಲಾಘನೀಯವಾದುದು, ಮುಂಬರುವ ವರ್ಷಗಳಲ್ಲಿಯೂ ಅವರು ಇನ್ನಷ್ಟು ಹೆಚ್ಚಿನ ಯಶಸ್ಸು ಗಳಿಸಲಿ ಎಂದು ಅವರು ಆಶಿಸಿದ್ದಾರೆ.
ಪ್ರಧಾನಮಂತ್ರಿಗಳ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:
“ಮನೀಷಾ ರಾಮದಾಸ್ ಅವರಿಗೆ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಮತ್ತೊಂದು ಪದಕ!
ಏಷ್ಯನ್ ಪ್ಯಾರಾ ಗೇಮ್ಸ್ 2026ರ ಮಹಿಳಾ ಸಿಂಗಲ್ಸ್ ಎಸ್ ಯು 5 ಪ್ಯಾರಾ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿರುವ ಮನೀಷಾ ಅವರಿಗೆ ಅಭಿನಂದನೆಗಳು! ಸತತ ಎರಡನೇ ಆವೃತ್ತಿಯಲ್ಲಿ ಕಂಚಿನ ಪದಕವನ್ನು ಗೆದ್ದಿರುವುದು, ಕ್ರೀಡೆಯ ಮೇಲಿರುವ ಅವರ ಸ್ಥಿರತೆ ಮತ್ತು ಬದ್ಧತೆಯ ಪ್ರತಿಬಿಂಬವಾಗಿದೆ. ಅವರ ಪ್ರಯತ್ನ ಮತ್ತು ಸ್ಪರ್ಧಾತ್ಮಕ ಮನೋಭಾವ ನಿಜಕ್ಕೂ ಶ್ಲಾಘನೀಯ. ಮುಂಬರುವ ವರ್ಷಗಳಲ್ಲಿ ಅವರು ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಹಾರೈಸುತ್ತೇನೆ: ಪ್ರಧಾನಮಂತ್ರಿ @narendramodi”
*****
Another Asian Para Games medal for Manisha Ramadass! Congratulations to Manisha on winning Bronze in the Women's Singles SU5 Para Badminton event at the Asian Para Games 2026! Securing a Bronze Medal for the second consecutive edition reflects her consistency and commitment to the sport. Her efforts and competitive spirit are truly commendable. May she continue to achieve greater success in the years ahead: PM @narendramodi
— PMO India (@PMOIndia) October 22, 2026