Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತವು 14 ಪದಕಗಳಿಂದ 114 ಪದಕಗಳವರೆಗೆ ಸಾಧಿಸಿರುವ ಗಮನಾರ್ಹ ಸಾಧನೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತವು 14 ಪದಕಗಳಿಂದ 114 ಪದಕಗಳವರೆಗೆ ಸಾಧಿಸಿರುವ ಗಮನಾರ್ಹ ಸಾಧನೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಈ ಸಾಧನೆಯು ದೇಶದ ಕ್ರೀಡಾಪಟುಗಳಲ್ಲಿರುವ ಅಪಾರ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಕ್ರೀಡಾಪಟುಗಳು 30 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ, ಐದು ವಿಶ್ವ ದಾಖಲೆಗಳನ್ನು ಹಾಗೂ ಒಂಬತ್ತು ಏಷ್ಯನ್ ದಾಖಲೆಗಳನ್ನು ಸ್ಥಾಪಿಸಿದ್ದಾರೆ ಮತ್ತು ನಾಲ್ಕು ಸ್ಪರ್ಧೆಗಳಲ್ಲಿ ಪದಕ ವೇದಿಕೆಯ ಎಲ್ಲಾ ಸ್ಥಾನಗಳನ್ನು (ಚಿನ್ನ, ಬೆಳ್ಳಿ ಮತ್ತು ಕಂಚು) ಭಾರತೀಯರೇ ಅಲಂಕರಿಸುವ ಮೂಲಕ ಸಂಪೂರ್ಣ ಪ್ರಾಬಲ್ಯ ಮೆರೆದಿದ್ದಾರೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದ್ದಾರೆ.

ಎರಡು ಪ್ರಮುಖ ಸಾಧನೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿರುವ ಶ್ರೀ ನರೇಂದ್ರ ಮೋದಿ ಅವರು, ಏಷ್ಯನ್ ಪ್ಯಾರಾ ಕ್ರೀಡಾಕೂಟಕ್ಕೆ ಮೊದಲ ಬಾರಿಗೆ ಪದಾರ್ಪಣೆ ಮಾಡಿದ 61 ಕ್ರೀಡಾಪಟುಗಳ ಪೈಕಿ 36 ಮಂದಿ ಪದಕಗಳನ್ನು ಗೆದ್ದು ಹಿಂತಿರುಗಿದ್ದಾರೆ ಎಂದು ತಿಳಿಸಿದರು. ಅಲ್ಲದೆ, ಭಾಗವಹಿಸಿದ 56 ಮಹಿಳಾ ಕ್ರೀಡಾಪಟುಗಳಲ್ಲಿ 34 ಮಂದಿ ಪದಕಗಳನ್ನು ಗೆದ್ದಿದ್ದಾರೆ ಎಂದೂ ಅವರು ಹೇಳಿದರು.

ದೃಢ ಸಂಕಲ್ಪವಿದ್ದರೆ ಯಾವುದೇ ಕನಸು ದೊಡ್ಡದಲ್ಲ ಮತ್ತು ಯಾವುದೇ ಸವಾಲು ಅಸಾಧ್ಯವಲ್ಲ ಎಂಬುದನ್ನು ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ ಎಂದು ಪ್ರಧಾನ ಮಂತ್ರಿ ಹೇಳಿದರು. ಯುವಕರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದನ್ನು ಸಮಾಜವು ಅನುಮಾನದಿಂದ ಅಥವಾ ಅಸಮ್ಮತಿಯಿಂದ ನೋಡುತ್ತಿದ್ದ ಕಾಲ ಈಗ ಮುಗಿದಿದೆ ಎಂದ ಅವರು, ಪ್ರತಿಭೆಯುಳ್ಳವರಿಗೆ ಭಾರತವು ಬೆಂಬಲ ನೀಡುತ್ತದೆ ಮತ್ತು ಅವರನ್ನು ಹುರಿದುಂಬಿಸುತ್ತದೆ ಎಂದು ಹೇಳಿದರು.

ಶ್ರೀ ಮೋದಿ ಅವರು ತಮ್ಮ X ಪೋಸ್ಟ್ ನಲ್ಲಿಹೀಗೆ ಬರೆದಿದ್ದಾರೆ;

“14 ರಿಂದ 114 

ಒಂದೆಡೆ, ಇದು ಕೇವಲ ಒಂದು ಸಂಖ್ಯೆ… ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತದ ಏಳಿಗೆಯನ್ನು ಸೂಚಿಸುವ ಅಂಕಿ ಅಂಶವಷ್ಟೇ.

ಆದರೆ, ಮುಖ್ಯವಾಗಿ ಈ ಅದ್ಭುತ ಸಾಧನೆಯು ಇನ್ನೊಂದು ವಿಷಯವನ್ನು ಸಾರುತ್ತದೆ… ಅದು ನಮ್ಮ ಕ್ರೀಡಾಪಟುಗಳಲ್ಲಿರುವ ಅಪಾರ ಸಾಮರ್ಥ್ಯ ಮತ್ತು ಪ್ರತಿಭೆ.

ಈ ವರ್ಷ ನಾವು ಸಾಧಿಸಿದ್ದು ಇಷ್ಟು:

30 ಚಿನ್ನದ ಪದಕಗಳು + 5 ವಿಶ್ವ ದಾಖಲೆಗಳು + 9 ಏಷ್ಯನ್ ದಾಖಲೆಗಳು + 4 ಕ್ರೀಡಾ ಸ್ಪರ್ಧೆಗಳಲ್ಲಿ ಭಾರತೀಯರೇ ಅಗ್ರಸ್ಥಾನಗಳನ್ನು (ಪೋಡಿಯಂ) ಸಂಪೂರ್ಣವಾಗಿ ಆಕ್ರಮಿಸಿಕೊಂಡರು!

ನನಗೆ ವಿಶೇಷವಾಗಿ ಇಷ್ಟವಾದ ಎರಡು ಅಂಕಿಅಂಶಗಳು ಇಲ್ಲಿವೆ:

ಏಷ್ಯನ್ ಪ್ಯಾರಾ ಗೇಮ್ಸ್‌ಗೆ ಮೊದಲ ಬಾರಿಗೆ ಪದಾರ್ಪಣೆ ಮಾಡಿದ 61 ಕ್ರೀಡಾಪಟುಗಳ ಪೈಕಿ, 36 ಮಂದಿ ಪದಕಗಳೊಂದಿಗೆ ಮರಳಿದ್ದಾರೆ.

ಭಾಗವಹಿಸಿದ 56 ಮಹಿಳಾ ಕ್ರೀಡಾಪಟುಗಳಲ್ಲಿ 34 ಮಂದಿ ಪದಕ ವಿಜೇತರಾಗಿದ್ದಾರೆ!

ದೃಢ ಸಂಕಲ್ಪವೊಂದಿದ್ದರೆ, ಯಾವುದೇ ಕನಸು ಅಂತಹ ದೊಡ್ಡದಲ್ಲ ಮತ್ತು ಯಾವುದೇ ಸವಾಲು ಅಸಾಧ್ಯವಲ್ಲ ಎಂಬುದನ್ನು ನಮ್ಮ ಕ್ರೀಡಾಪಟುಗಳು ಸಾಬೀತುಪಡಿಸಿದ್ದಾರೆ.

ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಬಯಸುವ ಯುವಕರನ್ನು ಸಮಾಜವು ಅನುಮಾನದಿಂದ ಅಥವಾ ಅಸಮ್ಮತಿಯಿಂದ ನೋಡುತ್ತಿದ್ದ ಕಾಲ ಈಗ ಕಳೆದುಹೋಗಿದೆ.

ಈಗ, ನಿಮ್ಮಲ್ಲಿ ಪ್ರತಿಭೆಯಿದ್ದರೆ, ಭಾರತವು ನಿಮಗೆ ಬೆಂಬಲ ನೀಡುತ್ತದೆ ಮತ್ತು ನಿಮ್ಮನ್ನು ಹುರಿದುಂಬಿಸುತ್ತದೆ.

ಬನ್ನಿ, ಆಡಿ ಮತ್ತು ಮಿಂಚಿ!”