Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅವರು ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು ಹಾಗೂ ದೀಪಾವಳಿ ಹಬ್ಬವು ಕತ್ತಲೆಯ ವಿರುದ್ಧದ ಸಂಕಲ್ಪವನ್ನು ಸಂಕೇತಿಸುತ್ತದೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೀಪಾವಳಿಯ ಸಂದರ್ಭದಲ್ಲಿ ದೇಶದ ಎಲ್ಲಾ ನಾಗರಿಕರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.

ಬೆಳಕಿನ ಹಬ್ಬವು ಇಡೀ ದೇಶವನ್ನು ಬೆಳಗಿಸುತ್ತದೆ ಮತ್ತು ಕತ್ತಲೆಯನ್ನು ಜಯಿಸುವ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಹಬ್ಬ ಮತ್ತು ಮುಂದಿನ ದಿನಗಳು ಎಲ್ಲರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಅವರು ಹಾರೈಸಿದರು.

ದೀಪಾವಳಿಯನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತೇನೆ ಮತ್ತು ಈ ಹಿಂದಿನ ವರ್ಷಗಳಂತೆ, ಈ ವರ್ಷವೂ ದೇಶದ ವೀರ ಸೈನಿಕರೊಂದಿಗೆ ಹಬ್ಬವನ್ನು ಆಚರಿಸುವ ಸಂಪ್ರದಾಯವನ್ನು ಮುಂದುವರಿಸುವುದಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ದೀಪಾವಳಿ ಶುಭಾಶಯಗಳ ವೀಡಿಯೊ ಸಂದೇಶವನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು ಎಕ್ಸ್‌ ತಾಣದಲ್ಲಿ ಈ ರೀತಿ ಬರೆದಿದ್ದಾರೆ;

“ದೀಪಾವಳಿಯ ಶುಭಾಶಯಗಳು!”

 

*****