Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವೆಂಬರ್ 19 ರಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕುರಿತ ಇಲಾಖಾ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ನವೆಂಬರ್ 19 ರಂದು ಸಂಜೆ 4:30ಕ್ಕೆ ನವದೆಹಲಿಯ ‘ಸುಷ್ಮಾ ಸ್ವರಾಜ್ ಭವನ’ದಲ್ಲಿ ನಡೆಯಲಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕುರಿತ ಇಲಾಖಾ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

2026ರ ನವೆಂಬರ್ 18-19ರಂದು ನಡೆಯುತ್ತಿರುವ ಈ ಎರಡು ದಿನಗಳ ಇಲಾಖಾ ಶೃಂಗಸಭೆಯು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಹಾಗೂ ವಿಕಲಚೇತನರ ಸಬಲೀಕರಣ ವಲಯಗಳಿಗೆ ಸಂಬಂಧಿಸಿದ ವಿವಿಧ ರಾಜ್ಯಗಳ ರಾಜಕೀಯ ನಾಯಕತ್ವ ಮತ್ತು ಅಧಿಕಾರಿಗಳನ್ನು ಒಂದೇ ವೇದಿಕೆಗೆ ತರಲಿದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲು, ರಾಷ್ಟ್ರೀಯ ಆದ್ಯತೆಗಳ ಸಾಮೂಹಿಕ ಮಾಲೀಕತ್ವವನ್ನು ಉತ್ತೇಜಿಸಲು ಮತ್ತು ಕೇಂದ್ರ-ರಾಜ್ಯಗಳ ನಿಕಟ ಸಹಯೋಗದ ಮೂಲಕ ಫಲಿತಾಂಶಗಳನ್ನು ವೇಗಗೊಳಿಸಲು ಪ್ರಧಾನಮಂತ್ರಿಗಳು ರೂಪಿಸಿರುವ ಇಲಾಖಾ ಶೃಂಗಸಭೆಗಳ ಸರಣಿಯಲ್ಲಿ ಇದು ಮೂರನೆಯದಾಗಿದೆ.

ಶೃಂಗಸಭೆಯು ನಾಲ್ಕು ಪ್ರಮುಖ ವಿಷಯಾಧಾರಿತ ಕ್ಷೇತ್ರಗಳ ಕುರಿತು ಚರ್ಚಿಸಲಿದೆ:

  1. ನಶಾ ಮುಕ್ತ ಭಾರತಕ್ಕಾಗಿ ಮಾದಕವಸ್ತು ತಡೆಗಟ್ಟುವಿಕೆ ಮತ್ತು ಬೇಡಿಕೆ ತಗ್ಗಿಸುವ ಕಾರ್ಯತಂತ್ರದ ಪುನರ್ವಿಮರ್ಶೆ.
  2. ಒಂದು ರಾಷ್ಟ್ರ ಒಂದು ವಿದ್ಯಾರ್ಥಿವೇತನ ಪೋರ್ಟಲ್ – ಸುಲಭವಾಗಿ ಲಭ್ಯವಾಗುವ ವಿದ್ಯಾರ್ಥಿವೇತನಗಳು, ಸಬಲ ವಿದ್ಯಾರ್ಥಿಗಳು.
  3. ಆರಂಭಿಕ ಹಸ್ತಕ್ಷೇಪ ಮತ್ತು ಅಂಗವೈಕಲ್ಯದ ಹೊರೆ ತಗ್ಗಿಸುವಿಕೆ.
  4. ವಿಕಸಿತ ಭಾರತಕ್ಕಾಗಿ ಸುಗಮ್ಯ ಭಾರತ.

ಈ ಇಲಾಖಾ ಶೃಂಗಸಭೆಯು ಅನುಷ್ಠಾನದ ಸವಾಲುಗಳನ್ನು ಪರಿಹರಿಸುವುದು ಹಾಗೂ ಆಡಳಿತ ಮತ್ತು ಸೇವಾ ವಿತರಣೆಯನ್ನು ಸುಧಾರಿಸುವುದರತ್ತ ಗಮನಹರಿಸುವುದರೊಂದಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲು, ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಮತ್ತು ಪ್ರಮುಖ ವಲಯದ ಆದ್ಯತೆಗಳ ಕುರಿತು ಚರ್ಚಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ.

 

*****