ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಬೆಳಿಗ್ಗೆ ಸುಷ್ಮಾ ಸ್ವರಾಜ್ ಭವನದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಇಲಾಖಾ ಶೃಂಗ ಸಭೆಯ ಸಮಾರೋಪ ಅಧಿವೇಶನವನ್ನು ಅಧ್ಯಕ್ಷತೆ ವಹಿಸಿದ್ದರು.
ಶೃಂಗಸಭೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಒಟ್ಟುಗೂಡಿಸಿ, ಸಾಮಾಜಿಕ ಒಳಗೊಳ್ಳುವಿಕೆಯನ್ನು ಬಲಪಡಿಸುವುದು, ಅಂಗವಿಕಲರ ಸಬಲೀಕರಣ, ಮಾದಕ ವ್ಯಸನ ತಡೆ ಮತ್ತು ಸಾರ್ವಜನಿಕ ಭಾಗವಹಿಸುವಿಕೆಗೆ ನವೀನ ವಿಧಾನಗಳ ಕುರಿತು ಕೇಂದ್ರೀಕೃತ ಚರ್ಚೆಗಳನ್ನು ನಡೆಸಿತು
ಪ್ರಧಾನಮಂತ್ರಿ ವಿಸ್ತೃತ ಚರ್ಚೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಶೃಂಗ ಸಭೆಯಿಂದ ಮೂಡಿ ಬಂದ ಚರ್ಚೆಗಳು ಮತ್ತು ಕ್ರಮದ ಟಿಪ್ಪಣಿಗಳು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆಯ ಭಾವನೆಯ ಉದ್ದೇಶವನ್ನು ಪ್ರತಿಬಿಂಬಿಸುತ್ತವೆ ಎಂಬುದನ್ನು ಗಮನಿಸಿದರು. ಸ್ಪರ್ಧಾತ್ಮಕ ಮತ್ತು ಸಹಕಾರದ ಒಕ್ಕೂಟ ಮನೋಭಾವವು ಕಾರ್ಯಕ್ರಮ ಜಾರಿಗೆ ಮಾರ್ಗದರ್ಶನ ನೀಡಬೇಕು, ರಾಜ್ಯಗಳು ಪರಸ್ಪರ ಅನುಭವಗಳು ಮತ್ತು ನವೀನತೆಗಳಿಂದ ಕಲಿಯಬೇಕು ಎಂದು ಅವರು ಒತ್ತಿಹೇಳಿದರು.
ಜನ ಭಾಗಿದಾರಿಯ ಮಹತ್ವವನ್ನು ಒತ್ತಿಹೇಳಿ, ಪ್ರಧಾನಮಂತ್ರಿ ಸಮುದಾಯ ಭಾಗವಹಿಸುವಿಕೆ ಪೋಷಕರಲ್ಲಿ ಅಂಗವೈಕಲ್ಯಗಳು ಉದ್ಭವವಾಗುತ್ತಿರುವ ಮತ್ತು ಬೆಳವಣಿಗೆಯಾಗುತ್ತಿರುವ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮುಂಚಿತ ಗುರುತಿಸುವಿಕೆಯ ಮಹತ್ವದ ಬಗ್ಗೆ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂಬುದರತ್ತ ಗಮನ ಸೆಳೆದರು. ಹಿಂಜರಿಕೆ, ಸಾಮಾಜಿಕ ಕಳಂಕದ ಭಯ ಮತ್ತು ಜಾಗೃತಿ ಕೊರತೆಯಿಂದ ಪೋಷಕರು ತಮ್ಮ ಮಕ್ಕಳಿಗೆ ಸಮಯೋಚಿತ ಬೆಂಬಲ ಪಡೆಯಲು ಅಥವಾ ಗುರುತಿಸಲು ಅಡ್ಡಿಯಾಗುತ್ತದೆ ಎಂಬುದನ್ನೂ ಅವರು ಗಮನಿಸಿದರು. ಸಮುದಾಯ ಆಧಾರಿತ ವಿಧಾನವು ಪೋಷಕರ ಹಿಂಜರಿಕೆಯನ್ನು ಪರಿಹರಿಸಲು ಮತ್ತು ಆರಂಭಿಕ ಮಧ್ಯಪ್ರವೇಶ/ ಹಸ್ತಕ್ಷೇಪವನ್ನು ಹೆಚ್ಚು ಸ್ವೀಕಾರಾರ್ಹವಾಗಿಸಲು ಸಹಾಯ ಮಾಡಬಹುದು ಎಂಬುದನ್ನೂಅವರು ಗುರುತಿಸಿದರು. ಜಾಗೃತಿ ಮೂಡಿಸುವಲ್ಲಿ ನವೀನ ವಿಧಾನಗಳನ್ನು ವಿಶೇಷವಾಗಿ ತಂತ್ರಜ್ಞಾನವನ್ನು ಬಳಸಿಕೊಂಡು ಮಹತ್ವದ ಸಂದೇಶಗಳನ್ನು ಸರಳ ಮತ್ತು ಸುಲಭವಾಗಿ ತಲುಪಬಹುದಾದ ರೀತಿಯಲ್ಲಿ ಸಂವಹನ ಮಾಡಲು ಕರೆ ನೀಡಿದರು. ರಾಜ್ಯಗಳು ಕಡಿಮೆ ವೆಚ್ಚದ ಪರಿಕರಗಳು ಮತ್ತು ಸಹಾಯಕ ಸಾಧನಗಳನ್ನು ಅಭಿವೃದ್ಧಿಪಡಿಸಲು ನವೋದ್ಯಮಿಗಳನ್ನು ಪ್ರೋತ್ಸಾಹಿಸಲು ಸ್ಟಾರ್ಟ್-ಅಪ್ ಸ್ಪರ್ಧೆಗಳನ್ನು ವಿಶೇಷವಾಗಿ ಚಲನೆ, ಪ್ರವೇಶ ಲಭ್ಯತೆ ಮತ್ತು ಕ್ರೀಡೆ ಹಾಗು ದೈನಂದಿನ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯನ್ನು ಸುಧಾರಿಸಲು ಆಯೋಜಿಸಬಹುದು ಎಂದು ಸೂಚಿಸಿದರು.
ನಶಾಮುಕ್ತ ಭಾರತ ಅಭಿಯಾನದ ಬಗ್ಗೆ ಚರ್ಚಿಸುವಾಗ, ಮಾದಕದ್ರವ್ಯ ದುರುಪಯೋಗವನ್ನು ಎದುರಿಸುವ ಪ್ರಯತ್ನಗಳು ಸಾಮಾನ್ಯ ಮತ್ತು ಸಂಕೇತಾತ್ಮಕ ಚಟುವಟಿಕೆಗಳಿಗಿಂತ ಮೀರಿ ಹೋಗಬೇಕು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಯುವಜನರಲ್ಲಿ ಜಾಗೃತಿ ಮೂಡಿಸಲು ಮತ್ತು ವ್ಯಾಪಕ ಸಾಮಾಜಿಕ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಪ್ರಬಂಧ ಬರವಣಿಗೆ, ಚರ್ಚಾ ಸ್ಪರ್ಧೆಗಳು, ಭಾಷಣ ಸ್ಪರ್ಧೆಗಳು ಮತ್ತು ಇತರ ಚಟುವಟಿಕೆಗಳ ಮೂಲಕ ಶಾಲೆಗಳು ಭಾಗವಹಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು. ವ್ಯಸನವನ್ನು ಯಶಸ್ವಿಯಾಗಿ ಜಯಿಸಿದ ವ್ಯಕ್ತಿಗಳ ಅನುಭವಗಳನ್ನು ಹಂಚಿಕೊಳ್ಳುವ ಮಹತ್ವವನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿದರು.
ರಾಷ್ಟ್ರವೇ ಒಂದಾಗಿ ಪಾಲ್ಗೊಳ್ಳುವ ದೃಷ್ಟಿಕೋನದ ಬಗ್ಗೆ ಒತ್ತಿಹೇಳಿದ, ಪ್ರಧಾನಮಂತ್ರಿ ಸಮುದಾಯಗಳು, ಆಧ್ಯಾತ್ಮಿಕ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಚಿವಾಲಯಗಳು ನಶಾಮುಕ್ತ ಭಾರತದ ಪ್ರಯತ್ನಗಳಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳುವಂತೆ ಕರೆ ನೀಡಿದರು. ಸಮಾಜವೇ ಚಳವಳಿಯಲ್ಲಿ ಸಕ್ರಿಯ ಭಾಗವಹಿಸಿದಾಗ ಮಾತ್ರ ಶಾಶ್ವತ ವರ್ತನೆ ಬದಲಾವಣೆ ಸಾಧ್ಯ ಎಂದು ಅವರು ಒತ್ತಿಹೇಳಿದರು.
ಸಾಮಾನ್ಯ ರಾಷ್ಟ್ರೀಯ ಪ್ರಯತ್ನದಲ್ಲಿ ಕೇಂದ್ರ ಮತ್ತು ರಾಜ್ಯಗಳು ಪಾಲುದಾರರು ಎಂಬುದನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು ಶೃಂಗಸಭೆಯಲ್ಲಿ ತೋರಿಸಿದ ಸಂಯುಕ್ತ ಬದ್ಧತೆಯನ್ನು ಸ್ಪರ್ಧಾತ್ಮಕ ಮತ್ತು ಸಹಕಾರಾತ್ಮಕ ಫೆಡರಲಿಸಂ ಮನೋಭಾವದಲ್ಲಿ ಮುಂದುವರೆಸಬೇಕು, ಎಲ್ಲರನ್ನು ಒಳಗೊಳ್ಳುವ ಮತ್ತು ಶಕ್ತಿಶಾಲಿ ವಿಕಸಿತ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
*****
Chaired the valedictory session of the Departmental Summit on Social Justice and Empowerment. Key focus areas: Greater Jan Bhagidari in social schemes. Encouraging StartUps to build affordable assistive technologies. A whole-of-society approach towards a Nasha Mukt Bharat. https://t.co/e0HTNYb8hc
— Narendra Modi (@narendramodi) November 19, 2026