Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತವು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ಬಗ್ಗೆ ಮತ್ತು ಕೌಶಲ್ಯವನ್ನು ಆಯ್ಕೆಯ ವೃತ್ತಿಜೀವನ ವಿಧಾನವಾಗಿ ರೂಪಿಸುತ್ತಿರುವ ಬಗ್ಗೆ ವಿವರಿಸುವ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ರಾಜ್ಯ ಖಾತೆ ಸಚಿವರಾದ ಶ್ರೀ ಜಯಂತ್ ಚೌಧರಿ ಅವರ ಲೇಖನವೊಂದನ್ನು ಹಂಚಿಕೊಂಡಿದ್ದಾರೆ. ಕೌಶಲ್ಯಾಭಿವೃದ್ಧಿಯತ್ತ ದೇಶ ಹೆಚ್ಚಿನ ಗಮನಹರಿಸುತ್ತಿರುವ ಬಗ್ಗೆ ಹಾಗೂ ಕೌಶಲ್ಯವನ್ನು ಆಯ್ಕೆಯ ವೃತ್ತಿಜೀವನದ ವಿಧವಾಗಿ ರೂಪಿಸುವುದರ ಮಹತ್ವವನ್ನು ಈ ಲೇಖನದಲ್ಲಿ ವಿವರಿಸಿದ್ದಾರೆ. 

ಶ್ರೀ ಚೌಧರಿ ಅವರು ಮುಂಬರುವ ‘ವರ್ಲ್ಡ್‌ ಸ್ಕಿಲ್ಸ್ ಏಷ್ಯಾ 2027’, ಐಟಿಐಗಳನ್ನು ಮೇಲ್ದರ್ಜೆಗೇರಿಸುವ ‘ಪಿಎಂ-ಸೇತು’ ಉಪಕ್ರಮ ಹಾಗೂ ಉದ್ಯಮ-ಸಂಪರ್ಕಿತ ತರಬೇತಿಯನ್ನು ಬಲಪಡಿಸುವ ಪ್ರಯತ್ನಗಳ ಬಗ್ಗೆ ತಿಳಿಸಿದ್ದಾರೆ. ಈ ಉಪಕ್ರಮಗಳು ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಉದಯೋನ್ಮುಖ ಅವಕಾಶಗಳಿಗೆ ಯುವಜನರನ್ನು ಹೇಗೆ ಸಜ್ಜುಗೊಳಿಸುತ್ತಿದೆ ಎಂಬುದನ್ನು ಅವರು ವಿವರಿಸಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯದ ಎಕ್ಸ್‌ ಪೋಸ್ಟ್‌ ಹೀಗಿದೆ: 

“ಭಾರತವು ತನ್ನ ಕೌಶಲ್ಯದ ಪಯಣವನ್ನು ಜಾಗತಿಕ ವೇದಿಕೆಯತ್ತ ಕೊಂಡೊಯ್ಯುತ್ತಿದೆ!

ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ರಾಜ್ಯ ಖಾತೆ ಸಚಿವರಾದ ಶ್ರೀ @jayantrld ಅವರು, ಕೌಶಲ್ಯ ಅಭಿವೃದ್ಧಿಯತ್ತ ದೇಶದ ಹೆಚ್ಚುತ್ತಿರುವ ಗಮನದ ಬಗ್ಗೆ ಹಾಗೂ ಕೌಶಲ್ಯ ತರಬೇತಿಯನ್ನು ಆದ್ಯತೆಯ ವೃತ್ತಿಜೀವನ ಮಾರ್ಗವನ್ನಾಗಿ ರೂಪಿಸುವುದರ ಮಹತ್ವದ ಕುರಿತು ಬರೆದಿದ್ದಾರೆ.

ಅವರು ಮುಂಬರುವ ‘ವರ್ಲ್ಡ್‌ ಸ್ಕಿಲ್ಸ್ ಏಷ್ಯಾ 2027’, ಐಟಿಐ  ಗಳನ್ನು ಉನ್ನತೀಕರಿಸುವ ‘ಪಿಎಂ-ಸೇತು’ ಉಪಕ್ರಮ ಮತ್ತು ಉದ್ಯಮ-ಸಂಪರ್ಕಿತ ತರಬೇತಿಯನ್ನು ಬಲಪಡಿಸುವ ಪ್ರಯತ್ನಗಳ ಬಗ್ಗೆ ತಿಳಿಸಿದ್ದಾರೆ. ಜೊತೆಗೆ, ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಉದಯೋನ್ಮುಖ ಅವಕಾಶಗಳಿಗೆ ಯುವಜನರನ್ನು ಸಿದ್ಧಪಡಿಸುವಲ್ಲಿ ಈ ಉಪಕ್ರಮಗಳು ಹೇಗೆ ಪೂರಕವಾಗಿವೆ ಎಂಬುದನ್ನೂ ಅವರು ವಿವರಿಸಿದ್ದಾರೆ.”

 

*****