Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

“ನ್ಯಾಯಾಂಗ ಸುಧಾರಣೆಗಳು – ಇತ್ತೀಚಿನ ಜಾಗತಿಕ ಪ್ರವೃತ್ತಿಗಳು”ಪುಸ್ತಕ ಬಿಡುಗಡೆ ಮಾಡಿ ಮತ್ತು ಪ್ರಥಮ ಪ್ರತಿಯನ್ನು ರಾಷ್ಟ್ರಪತಿಗಳಿಗೆ ಅರ್ಪಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಇಂದು “ನ್ಯಾಯಾಂಗ ಸುಧಾರಣೆಗಳು – ಇತ್ತೀಚಿನ ಜಾಗತಿಕ ಪ್ರವೃತ್ತಿಗಳು” (ಜ್ಯುಡಿಷಿಯಲ್ ರಿಫಾರ್ಮ್ಸ್ – ರೀಸೆಂಟ್ ಗ್ಲೋಬಲ್ ಟ್ರೆಂಡ್ಸ್) ಪುಸ್ತಕವನ್ನು ಬಿಡುಗಡೆ ಮಾಡಿದರು ಮತ್ತು ಪ್ರಥಮ ಪ್ರತಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಹೊಸ, ಪರಸ್ಪರ ಅವಲಂಬಿತ ಜಾಗತಿಕ ವ್ಯವಸ್ಥೆಯೊಂದಿಗೆ ಭಾರತ ತನ್ನ ವೇಗವನ್ನು ಕಾಯ್ದುಕೊಳ್ಳಬೇಕು ಎಂದರು. ಜಾಗತಿಕವಾಗಿ ಮಹತ್ವದ ಪಾತ್ರ ವಹಿಸುವ ಅವಕಾಶ ಭಾರತಕ್ಕಿದೆ ಎಂದು ಅವರು ಹೇಳಿದರು. ಹೀಗೆ ಮಾಡಲು, ಈ ತ್ವರಿತ ಬೆಳವಣಿಗೆಗಳಿಗೆ ಸೂಕ್ತ ನೀತಿಗಳನ್ನು ರೂಪಿಸುವ ಮೂಲಕ ವೇಗವಾಗಿ ಹೊಂದಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದರು.

ತಾವು ದಿನಕ್ಕೊಂದು ಹಳೆಯ ಕಾನೂನು ರದ್ದು ಮಾಡುವ ಭರವಸೆ ನೀಡಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಈವರೆಗೆ ಕೇಂದ್ರ ಸರ್ಕಾರ ಸುಮಾರು 1200 ಕಾನೂನುಗಳನ್ನು ರದ್ದು ಮಾಡಿದೆ ಎಂದರು. ಸಮರ್ಥವಾದ ಆಡಳಿತವು ನ್ಯಾಯಾಂಗದ ಮೇಲಿನ ಒತ್ತಡ ಕಡಿಮೆ ಮಾಡಬಲ್ಲದು ಎಂದೂ ಅವರು ಹೇಳಿದರು.

*****