Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಖಂಡಾಂತರ ಕ್ಷಿಪಣಿಗಳ ತಡೆ ಸಾಮರ್ಥ್ಯದ ಯಶಸ್ವೀ ಪ್ರಯೋಗ ನಡೆಸಿದ ರಕ್ಷಣಾ ವಿಜ್ಞಾನಿಗಳಿಗೆ ಪ್ರಧಾನಿ ಅಭಿನಂದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಖಂಡಾಂತರ ಕ್ಷಿಪಣಿ ತಡೆ ವಿಚಾರದಲ್ಲಿ ಭಾರತದ ಸಾಮರ್ಥ್ಯಯನ್ನು ಯಶಸ್ವಿಯಾಗಿ ಪ್ರದರ್ಶಿಸಿದ ರಕ್ಷಣಾ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

“ಖಂಡಾಂತರ ಕ್ಷಿಪಣಿ ನಿಗ್ರಹ ಸಾಮರ್ಥ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಿದ ರಕ್ಷಣಾ ವಿಜ್ಞಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.

ಇದರೊಂದಿಗೆ ಭಾರತ, ಇಂಥ ಸಾಮರ್ಥ್ಯ ಇರುವ ಆಯ್ದ ಐದು ರಾಷ್ಟ್ರಗಳ ಗುಂಪನ್ನು ಸೇರಿದೆ. ಇದು ಇಡೀ ದೇಶಕ್ಕೆ ಒಂದು ಹೆಮ್ಮೆಯ ಅಪೂರ್ವ ಕ್ಷಣ”, ಎಂದು ಪ್ರಧಾನಿ ಹೇಳಿದ್ದಾರೆ.

*****