Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹೆರಿಗೆ ಸವಲತ್ತು ತಿದ್ದುಪಡಿ ಮಸೂದೆಗೆ ಲೋಕಸಭೆ ಅನುಮೋದನೆ ಪ್ರಧಾನಿ ಪ್ರಶಂಸೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಲೋಕಸಭೆಯಲ್ಲಿ ಹೆರಿಗೆ ಸವಲತ್ತು ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ದೊರೆತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಮತ್ತು ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಪ್ರಯತ್ನದಲ್ಲಿ ಹೆಜ್ಜೆಗುರುತಿನ ಕ್ಷಣ ಎಂದು ಬಣ್ಣಿಸಿದ್ದಾರೆ.

“ಹೆರಿಗೆ ಸವಲತ್ತು ತಿದ್ದುಪಡಿ ವಿಧೇಯಕ ಲೋಕಸಭೆಯಲ್ಲಿ ಅನುಮೋದನೆಗೊಂಡಿರುವುದು ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಕಡೆಗಿನ ನಮ್ಮ ಪ್ರಯತ್ನದಲ್ಲಿ ಹೆಜ್ಜೆಗುರುತಿನ ಕ್ಷಣವಾಗಿದೆ.

ಹೆರಿಗೆ ಸವಲತ್ತು ತಿದ್ದುಪಡಿ ವಿಧೇಯಕವು, ತಾಯಿ ಮತ್ತು ಮಗುವಿನ ಉತ್ತಮ ಆರೋಗ್ಯದ ಖಾತ್ರಿ ಒದಗಿಸುತ್ತದೆ. ಹೆರಿಗೆ ರಜೆಯಲ್ಲಿನ ಹೆಚ್ಚಳ ಸ್ವಾಗತಾರ್ಹ ಅಂಶವಾಗಿದೆ.

ಮಹಿಳೆಯರ ನೌಕರಿಯನ್ನು ಇದು ಸಂರಕ್ಷಿಸುತ್ತದೆ. ಹೆರಿಗೆ ಸವಲತ್ತು ತಿದ್ದುಪಡಿ ವಿಧೇಯಕಕ್ಕೆ ಧನ್ಯವಾದಗಳು. ಕಚೇರಿಗಳಲ್ಲಿ ಶಿಶು ಪಾಲನಾ ಕೇಂದ್ರ (crèche) ಕಡ್ಡಾಯಗೊಳಿಸಿರುವುದೂ ಪ್ರಶಂಸನಾರ್ಹ.”,ಎಂದು ಪ್ರಧಾನಿ ತಿಳಿಸಿದ್ದಾರೆ.

AKT/NT