Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೇರಳದ (ತ್ರಿಚೂರ್) ತ್ರಿಸ್ಸೂರ್ ನಲ್ಲಿನ ಅಂಚೆ ಇಲಾಖೆಗೆ ಸೇರಿದ ಜಮೀನು ಮತ್ತು ಕಟ್ಟಡವನ್ನು ಪಟ್ಟಾಲಂ ರಸ್ತೆ ಅಗಲೀಕರಣಕ್ಕಾಗಿ ತ್ರಿಸ್ಸೂರ್ ಮುನಿಸಿಪಲ್ ಕಾರ್ಪೊರೇಷನ್ ಗೆ ಹಸ್ತಾಂತರಿಸಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇರಳದ (ತ್ರಿಚೂರ್) ತ್ರಿಸ್ಸೂರ್ ನಲ್ಲಿನ ಅಂಚೆ ಇಲಾಖೆಗೆ ಸೇರಿದ 16.5 ಗುಂಟೆ ಜಮೀನು ಮತ್ತು ಕಟ್ಟಡವನ್ನು ಸಾರ್ವಜನಿಕ ಹಿತದಲ್ಲಿ ಜಮೀನಿಗೆ ಪರ್ಯಾಯವಾಗಿ ಜಮೀನು ನೀತಿಯಡಿ ಪಟ್ಟಾಲಂ ರಸ್ತೆ ಅಗಲೀಕರಣಕ್ಕಾಗಿ ತ್ರಿಸ್ಸೂರ್ ಮುನಿಸಿಪಲ್ ಕಾರ್ಪೊರೇಷನ್ ಗೆ ಹಸ್ತಾಂತರಿಸಲು ತನ್ನ ಅನುಮೋದನೆ ನೀಡಿದೆ.

ಅಂಚೆ ಇಲಾಖೆಯು ತಾನು ನೀಡುವಷ್ಟೇ ಅಳತೆಯ ಅಂದರೆ 16.5 ಗುಂಟೆ ಜಮೀನನ್ನು ಹಾಲಿ ಇರುವ ತ್ರಿಸೂರ್ ಕೇಂದ್ರೀಯ ಅಂಚೆ ಕಚೇರಿಯಿಂದ 200 ಮೀಟರ್ ದೂರದಲ್ಲಿ ಪಡೆಯಲಿದೆ. ಅಲ್ಲದೆ ತ್ರಿಸ್ಸೂರ್ ಮುನಿಸಿಪಲ್ ಕಾರ್ಪೊರೇಷನ್ ತನ್ನದೇ ಖರ್ಚಿನಲ್ಲಿ ಅಂಚೆ ಇಲಾಖೆಯು ನಿರ್ದಿಷ್ಟಪಡಿಸುವ ರೀತಿಯಲ್ಲಿ 3500 ಚದರಡಿ ಪ್ರದೇಶದಲ್ಲಿ ಅಂಚೆ ಕಚೇರಿ ಕಟ್ಟಿಕೊಡಲಿದೆ. ಇದರಲ್ಲಿ ಆವರಣ ಗೋಡೆ ಎರಡು ಗೇಟುಗಳೂ ಸೇರಿರುತ್ತವೆ. ಅಪಘಾತ ರಹಿತವಾದ ಸಂಚಾರಕ್ಕಾಗಿ, ಮತ್ತು ಆ ಪ್ರದೇಶದ ಜನರ ಲಾಭಕ್ಕಾಗಿ ಹಾಲಿ ಇರುವ ಪಟ್ಟಾಲಂ ರಸ್ತೆಯನ್ನು ಅಗಲೀಕರಣಕ್ಕೆ ಸಂಬಂಧಿಸಿದ ಪ್ರಸ್ತಾಪವನ್ನು ತ್ರಿಸ್ಸೂರು ಮುನಿಸಿಪಲ್ ಕಾರ್ಪೊರೇಷನ್ ಇಟ್ಟಿತ್ತು.

ಪರಿಗಣನೆಯಲ್ಲಿರುವ ಈ ಪ್ರಸ್ತಾಪವು ಈ ಬಡಾವಣೆಯಲ್ಲಿರುವ ಜನರು ಯಾವುದೇ ಸಂಚಾರದ ಅಡಚಣೆ ಇಲ್ಲದೆ ಸರಾಗವಾಗಿ ಮತ್ತು ಅಲ್ಪಾವಧಿಯಲ್ಲಿ ಹಾಲಿ ಇರುವ ತ್ರಿಸ್ಸೂರ್ ಕೇಂದ್ರೀಯ ಅಂಚೆ ಕಚೇರಿಯ ಮುಂದಿನ ರಸ್ತೆಯಲ್ಲಿ ಸಾಗಲು ಅನುಕೂಲಕರವಾಗಿದೆ.

*****

AKT/VBA/SH