ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಜರ್ಮನಿಯ ಛಾನ್ಸಲರ್ ಆಂಗೆಲಾ ಮರ್ಕೆಲ್ ಅವರಿಂದು ಬರ್ಲಿನ್ ನಲ್ಲಿ 4ನೇ ಭಾರತ ಜರ್ಮನಿ ಅಂತರ ಸರ್ಕಾರೀಯ ಸಮಾಲೋಚನೆಯ ಸಹ ಅಧ್ಯಕ್ಷತೆ ವಹಿಸಿದ್ದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಮಂತ್ರಿ, ಯುರೋಪ್ ಮತ್ತು ವಿಶ್ವದ ಬಗ್ಗೆ ಮಾರ್ಕೆಲ್ ಅವರ ದೃಷ್ಟಿಕೋನವನ್ನು ಪ್ರಶಂಸಿಸಿದರು.
ಫಲಶ್ರುತಿ ಆಧಾರಿತ ಚಾಲನೆಯು ಎರಡೂ ದೇಶಗಳ ನಡುವಿನ ಬಾಂಧವ್ಯದಲ್ಲಿ ಇಂದ್ರಿಯ ಗ್ರಾಹ್ಯವಾಗಿದೆ ಎಂದರು.
ಜರ್ಮನಿಯಿಂದ ಭಾರತಕ್ಕೆ ಬರುವ ವಿದೇಶೀ ಹೂಡಿಕೆ, ಅದರಲ್ಲೂ ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಹೆಚ್ಚಳವಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಜರ್ಮನ್ ಪಾಲುದಾರಿಕೆಯು ಕೌಶಲ ಅಭಿವೃದ್ಧಿ ಅಭಿಯಾನಕ್ಕೆ ಮಹತ್ವದ್ದಾಗಿ ಎಂದ ಪ್ರಧಾನಿ, ಜರ್ಮನಿಯ ಮಾನದಂಡಗಳು “ಜಾಗತಿಕ ಮೈಲಿಗಲ್ಲುಗಳಾಗಿವೆ’’ ಇವು ಭಾರತಕ್ಕೆ ಮಹತ್ವದ್ದಾಗಿವೆ ಎಂದರು. ಕ್ರೀಡಾ ಕ್ಷೇತ್ರದಲ್ಲಿ ಅದರಲ್ಲೂ ಫುಟ್ಬಾಲ್ ನಲ್ಲಿ ಸಹಕಾರ ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ಹೇಳಿದರು. ಚರ್ಚೆಯಲ ಸಮಯದಲ್ಲಿ ಬಂದ ಹವಾಮಾನ ಸಂರಕ್ಷಣೆ ಮತ್ತು ಸ್ಮಾರ್ಟ್ ಸಿಟಿಯಂಥ ಧ್ಯೇಯಗಳ ಬಗ್ಗೆ ಪ್ರಧಾನಮಂತ್ರಿಗಳು ಮಾತನಾಡಿದರು. ನವೋದ್ಯಮ ವಿಶ್ವದಲ್ಲಿ ಜರ್ಮಿಯ ನಾವಿನ್ಯ ಮತ್ತು ಭಾರತೀಯ ಯುವಕರು ಒಗ್ಗೂಡಿ ಶ್ರೇಷ್ಠ ಚೈತನ್ಯ ತುಂಬಬಹುದು ಎಂದರು.
ಅಂತರ ಸಂಪರ್ಕಿತ ಮತ್ತು ಅಂತರ ಅವಲಂಬಿತ ವಿಶ್ವದಲ್ಲಿ ಪ್ರಜಾಪ್ರಭುತ್ವ ಆಧಾರಿತ ಜಾಗತಿಕ ವ್ಯವಸ್ಥೆ ಈ ಹೊತ್ತಿನ ಅಗತ್ಯವಾಗಿದೆ ಎಂದು ಪ್ರಧಾನಿ ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಅವರು, ಜರ್ಮನಿ ಮತ್ತು ಭಾರತ‘ಪರಸ್ಪರರಿಗಾಗಿಯೇ ಮಾಡಿದಂತಿದ್ದಾರೆ’ ಎಂದರು. ಜರ್ಮನಿಯ ಸಾಮರ್ಥ್ಯ ಮತ್ತು ಭಾರತೀಯ ಅಗತ್ಯಗಳ ನಡುವೆ ಇರುವ ದೊಡ್ಡ ಹೊಂದಾಣಿಕೆಯನ್ನು ಅವರು ವಿವರಿಸಿದರು. ಎಂಜಿನಿಯರಿಂಗ್, ಮೂಲಸೌಕರ್ಯ ಮತ್ತು ಕೌಶಲ ಅಭಿವೃದ್ಧಿ ಕ್ಷೇತ್ರಗಳಲ್ಲಿ ಭಾರತದ ಅನ್ವೇಷಣೆಯ ಶ್ರೇಷ್ಠತೆ ಕುರಿತು ಮಾತನಾಡಿದರು. ಪ್ರಜಾಪ್ರಭುತ್ವ ಮತ್ತು ನಾವಿನ್ಯತೆಯ ಮೌಲ್ಯಗಳನ್ನು ವಿವರಿಸಿದ ಅವರು, ಇವು ಮನುಕುಲಕ್ಕೆ ವರವಾಗಿವೆ, ಭಾರತ ಮತ್ತು ಜರ್ಮನಿ ಈ ಮೌಲ್ಯ ಹಂಚಿಕೊಂಡಿವೆ ಎಂದರು.
ಹವಾಮಾನ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, ಪ್ರಕೃತಿಯನ್ನು ಸಂರಕ್ಷಿಸುವ ಮತ್ತು ಕಲಾತೀತವಾಗಿ ಪೋಷಿಸುವ ಮೌಲ್ಯಗಳನ್ನು ಪುನರುಚ್ಚರಿಸಿದರು. 2022ರ ಹೊತ್ತಿಗೆ ನವೀಕರಿಸಬಹುದಾದ ಇಂಧನ ಮೂಲದಿಂದ 175 ಗಿಗಾ ವ್ಯಾಟ್ ಇಂಧನವನ್ನು ಉತ್ಪಾದಿಸುವ ಭಾರತದ ಬದ್ಧತೆಯನ್ನು ಸ್ಮರಿಸಿದರು. ಪ್ರಕೃತಿಯನ್ನು ಸಂರಕ್ಷಿಸಬೇಕಾದ ಮಹತ್ವವನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿಗಳು”ಮುಂದಿನ ಪೀಳಿಗೆಯ ಕ್ಷೇಮದೊಂದಿಗೆ ಆಟವಾಡುವುದು ಅನೈತಿಕ ಮತ್ತು ಕ್ರಿಮಿನಲ್ ಕ್ರಿಯೆಯಾಗಿದೆ” ಎಂದು ಹೇಳಿದರು.
ಇದಕ್ಕೂ ಮುನ್ನ ಐಜಿಸಿ ವೇಳೆ, ಪ್ರಧಾನಿ ಮೋದಿ ಅವರು, ಕಾನೂನು ಆಧಾರಿತ ಜಾಗತಿಕ ವ್ಯವಸ್ಥೆಯಲ್ಲಿ ಐರೋಪ್ಯ ಒಕ್ಕೂಟದ ದೊಡ್ಡ ಪಾತ್ರವನ್ನು ಪ್ರತಿಪಾದಿಸಿದರು. ಜಾಗತಿಕ ಭಯೋತ್ಪಾದನೆಯ ಪಿಡುಗಿನ ಬಗ್ಗೆ ಇಬ್ಬರೂ ನಾಯಕರು ತೀವ್ರ ಕಳವಳ ವ್ಯಕ್ತಪಡಿಸಿದರು ಮತ್ತು ಭಯೋತ್ಪಾದನೆ ನಿಗ್ರಹದ ಉಪಕ್ರಮಗಳನ್ನು ಪರಸ್ಪರ ಬಲಪಡಿಸಲು ನಿರ್ಧರಿಸಿದರು.
ರಫ್ತು ನಿಯಂತ್ರಣ ಆಡಳಿತದಲ್ಲಿ ಭಾರತದ ಸದಸ್ಯತ್ವಕ್ಕೆ ಬೆಂಬಲ ನೀಡಿದ ಜರ್ಮನಿಗೆ ಪ್ರಧಾನಮಂತ್ರಿಯವರು ಧನ್ಯವಾದ ಅರ್ಪಿಸಿದರು. ಶುದ್ಧ ಕಲ್ಲಿದ್ದಲು, ವಿದ್ಯುತ್ ಚಲನಶೀಲತೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರ, ಸೈಬರ್ ಭದ್ರತೆ ಮತ್ತು ವಾಯುಯಾನಯಂಥ ವಿಷಯಗಳು ಚರ್ಚೆಗೆ ಬಂದವು. ಆಪ್ಘಾನಿಸ್ತಾನ ಮತ್ತು ಇತರ ಜಾಗತಿಕ ವಿಚಾರಗಳೂ ಈ ಸಮಾಲೋಚನೆಯ ವೇಳೆ ಚರ್ಚೆಯ ವಸ್ತುವಾದವು.
ಎರಡೂ ದೇಶಗಳು 12 ಒಪ್ಪಂದಗಳಿಗೆ ಅಂಕಿತ ಹಾಕಿದವು. ವಿವಿಧ ವಿಚಾರಗಳನ್ನು ಒಳಗೊಂಡ ಮಾತುಕತೆಯ ಸಮಗ್ರ ಜಂಟಿ ಹೇಳಿಕೆಯನ್ನೂ ಬಿಡುಗಡೆ ಮಾಡಲಾಯಿತು.
***
AKT/SH
The deliberations at the IGC Plenary Meeting were fruitful. Various facets of India-Germany cooperation were discussed. pic.twitter.com/0rINSmoaZv
— Narendra Modi (@narendramodi) May 30, 2017