ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದು ಸಂಜೆ ಕೆನಡಾದ ಪ್ರಧಾನಮಂತ್ರಿ ಶ್ರೀ. ಜಸ್ಟಿನ್ ಟ್ರುಡ್ಯೂ ಅವರ ದೂರವಾಣಿ ಕರೆಯನ್ನು ಸ್ವೀಕರಿಸಿದರು.
ಇಬ್ಬರೂ ನಾಯಕರು ಪರಸ್ಪರ ಹಿತದ, ಬೆಳವಣಿಗೆಗಳ ಅದರಲ್ಲೂ ಹವಾಮಾನ ಬದಲಾವಣೆಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಪ್ರಧಾನಮಂತ್ರಿ ಮೋದಿ ಅವರು ಪ್ಯಾರಿಸ್ ಒಪ್ಪಂದವನ್ನು ಮುಂದೆ ತೆಗೆದುಕೊಂಡು ಹೋಗುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.
ಪ್ರಧಾನಮಂತ್ರಿ ಮೋದಿ ಅವರು ಈ ವರ್ಷ ಕೆನಡಾ ಒಕ್ಕೂಟದ 150ನೇ ವಾರ್ಷಿಕೋತ್ಸವಕ್ಕೆ ಪ್ರಧಾನಿ ಟ್ರ್ಯೂಡ್ಯೂ ಅವರನ್ನು ಅಭಿನಂದಿಸಿದರು. ಅವರು ಕೆನಡಾದೊಂದಿಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಕಾರ್ಯಕ್ರಮಗಳ ಸ್ಥಿರವಾದ ಒಟ್ಟಾರೆ ಪ್ರಗತಿಗೆ ಮೆಚ್ಚಿಗೆ ಸೂಚಿಸಿದರು.
ಇಬ್ಬರೂ ನಾಯಕರು ಬಲವಾದ ಬಾಂಧವ್ಯಕ್ಕಾಗಿ ಸಂವಹನ ಮತ್ತು ಸಹಕಾರ ಮುಂದುವರಿಸಲು ಒಪ್ಪಿಗೆ ಸೂಚಿಸಿದರು.
***
AK
PM’s telephonic conversation with Prime Minister @JustinTrudeau of Canada. https://t.co/lgGyGwDrIf
— PMO India (@PMOIndia) June 19, 2017
via NMApp