ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಭಾರತ ಸರ್ಕಾರದ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ ಮತ್ತು ಪೋರ್ಚುಗಲ್ ಗಣರಾಜ್ಯದ ಪ್ರೆಸಿಡೆನ್ಸಿ ಮತ್ತು ಆಡಳಿತ ಆಧುನೀಕರಣ ಸಚಿವಾಲಯದ ನಡುವೆ ಸಾರ್ವಜನಿಕ ಆಡಳಿತ ಮತ್ತು ಆಡಳಿತ ಸುಧಾರಣೆ ಕುರಿತ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಈ ತಿಳಿವಳಿಕೆ ಒಪ್ಪಂದವು ಸಾರ್ವಜನಿಕ ಸೇವೆಗಳ ನಿರ್ವಹಣೆ ಕ್ಷೇತ್ರದಲ್ಲಿ ತ್ವರಿತವಾಗಿ ಬದಲಾಗುತ್ತಿರುವ ಪರಿಸರದ ಹಿನ್ನೆಲೆಯಲ್ಲಿ ಪೋರ್ಚುಗಲ್ ನಲ್ಲಿರುವ ಗ್ರಾಹಕ ಕೇಂದ್ರಿತ ಸಾರ್ವಜನಿಕ ಸೇವೆಗಳನ್ನು ಒದಗಿಸುವ ವ್ಯವಸ್ಥೆಯನ್ನು ಅರಿತುಕೊಳ್ಳಲು ಮತ್ತು ಅದನ್ನು ಭಾರತೀಯ ಸಾರ್ವಜನಿಕ ಸೇವೆ ಒದಗಿಸುವಲ್ಲಿ ಪುನರಾವರ್ತಿಸಲು, ಅಳವಡಿಸಿಕೊಳ್ಳಲು ಮತ್ತು ಕೆಲವು ಉತ್ತಮ ಪದ್ಧತಿಗಳನ್ನು ನಾವಿನ್ಯಗೊಳಿಸಲು ಸಹಕಾರಿ ಆಗುತ್ತದೆ, ಜೊತೆಗೆಭಾರತದಲ್ಲಿ ಸುಧಾರಿತ ಸಾರ್ವಜನಿಕ ಸೇವೆ ವಿತರಣೆಗೆ ಇಂಬು ನೀಡುತ್ತದೆ.
ಈ ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಸಹಕಾರಕ್ಕೆ ಒಳಪಡುವ ಕ್ಷೇತ್ರಗಳು ಈ ಕೆಳಗಿನಂತಿವೆ, ಆದರೆ ಅವು ಇಷ್ಟಕ್ಕೇ ಸೀಮಿತವಾಗಿಲ್ಲ:
(a) ಸರ್ಕಾರದ ಡಿಜಿಟಲ್ ಪರಿವರ್ತನೆ
(b) ಆಡಳಿತಾತ್ಮಕ ಸರಳೀಕರಣ ಮತ್ತು ಮರು-ಇಂಜಿನಿಯರಿಂಗ್ ಪ್ರಕ್ರಿಯೆ
(c) ಸಾರ್ವಜನಿಕ ಸೇವೆಗಳನ್ನು ಒದಗಿಸುವುದು
(d) ಸಿಬ್ಬಂದಿಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ಮತ್ತು ಹೆಚ್ಚಿಸುವುದು
(e) ಸಾರ್ವಜನಿಕ ಆಡಳಿತದಲ್ಲಿ ಉತ್ತಮ ಆಡಳಿತ ಪದ್ಧತಿಗಳನ್ನು ಹಂಚಿಕೊಳ್ಳುವುದು
(f) ಸಾರ್ವಜನಿಕ ಕುಂದುಕೊರತೆ ನಿವಾರಣೆ ವ್ಯವಸ್ಥೆ
ತಿಳಿವಳಿಕೆ ಒಪ್ಪಂದದ ಅಡಿಯಲ್ಲಿ ಸಹಕಾರದ ರೀತಿಗಳು ಈ ಕೆಳಗಿನಂತಿವೆ:
(a) ಸಹಕಾರ ಮತ್ತು ಸಹಯೋಗದ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಹಿರಿಯ ಸಲಹಾ ಮಂಡಳಿ ಮತ್ತು ಕಾರ್ಯಾಧಿವೇಶನಗಳ ಸಂಘಟನೆ;
(b) ಮೇಲೆ ಹೇಳಲಾದ ಕ್ಷೇತ್ರಗಳಲ್ಲಿ ಸೂಕ್ತಸ್ಥಾನ ಮತ್ತು ಆನ್ ಲೈನ್ ನಲ್ಲಿ ಜ್ಞಾನ ಮತ್ತು ಅನುಭವವನ್ನು ಹಂಚಿಕೊಳ್ಳುವುದು ಮತ್ತು ಸಮಾಲೋಚನೆ ನಡೆಸುವುದು;
(c) ಸಾರ್ವಜನಿಕ ಆಡಳಿತ ಮತ್ತು ಆಡಳಿತ ಸುಧಾರಣೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಆಹ್ವಾನ ವಿನಿಮಯ ಮತ್ತು ವಲಯದ ತಜ್ಞರನ್ನು ಕಳುಹಿಸುವುದು;
(d) ಸಾರ್ವಜನಿಕ ಆಡಳಿತ ಮತ್ತು ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಎರಡೂ ಕಡೆಗಳಲ್ಲಿ ಪ್ರಕಟವಾಗಿರುವಪ್ರಕಾಶನಗಳು, ವರದಿಗಳು ಮತ್ತು ವಿವಿಧ ಸಾರ್ವಜನಿಕ ಓದುವ ಸಾಮಗ್ರಿಗಳ ವಿನಿಮಯ;
(e)ಅಧ್ಯಯನ ಪ್ರವಾಸ ಮತ್ತು ಕಾರ್ಯಾಗಾರ, ವಿಚಾರಸಂಕಿರಣ ಮತ್ತು ಸಮಾವೇಶಗಳ ಮೂಲಕ ಮಾಹಿತಿಯ ವಿನಿಮಯ;
(f) ಪರಸ್ಪರರಿಗೆ ಹಿತಾಸಕ್ತಿ ಇರುವಸಾರ್ವಜನಿಕ ಆಡಳಿತ ಮತ್ತು ಆಡಳಿತ ಸುಧಾರಣೆ ಕ್ಷೇತ್ರ ಮತ್ತು ಅಂಕಿತ ಹಾಕಿದವರು ಜಂಟಿಯಾಗಿ ನಿರ್ಧರಿಸುವ ಕ್ಷೇತ್ರದಲ್ಲಿ ಯಾವುದೇ ಸ್ವರೂಪದ ಸಹಕಾರ ಮತ್ತು ಸಹಯೋಗ.
ಸಾರ್ವಜನಿಕ ಆಡಳಿತ ಮತ್ತು ಆಡಳಿತ ಸುಧಾರಣೆ ಕುರಿತ ಜಂಟಿ ಕಾರ್ಯ ಗುಂಪು ಈ ತಿಳಿವಳಿಕೆ ಒಪ್ಪಂದದ ಅನುಷ್ಠಾನದ ಜವಾಬ್ದಾರಿಯನ್ನು ಹೊತ್ತಿರುತ್ತದೆ.
ಹಿನ್ನೆಲೆ:
ನಾಗರಿಕ ಕೇಂದ್ರಿತ ಆನ್ ಲೈನ್ ಸೇವೆಗಳು ಸಮರ್ಥ ಸಾರ್ವಜನಿಕ ಆಡಳಿತ ವ್ಯವಸ್ಥೆಯ ಬುನಾದಿಯಾಗಿವೆ. ಇದು ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಕಾರಣವಾಗುತ್ತದೆ ಮತ್ತು ಸಮಾನ ಬೆಳವಣಿಗೆಗೆ ವೇಗ ನೀಡುತ್ತದೆ.
ದೇಶಾದ್ಯಂತ ಆನ್ ಲೈನ್ ಮೂಲಕ ಸರ್ಕಾರಿ ಸೇವೆಯನ್ನು ಒದಗಿಸಲು ಭಾರತ ಸರ್ಕಾರ ನಿರ್ದಿಷ್ಟ ಪ್ರಮಾಣದ ಬದಲಾವಣೆಯ ಗುರಿಯನ್ನು ಕೈಗೆತ್ತಿಕೊಂಡಿದೆ. ಇದು ಸಾರ್ವಜನಿಕ ಆಡಳಿತ ವ್ಯವಸ್ಥೆ, ಸಾರ್ವಜನಿಕ ಕುಂದುಕೊರತೆ ನಿವಾರಣೆ ವ್ಯವಸ್ಥೆ, ಇ ಆಡಳಿತ ಬಳಕೆ, ಡಿಜಿಟಲ್ ಇಂಡಿಯಾ ಮೊದಲಾದ ಪ್ರಯತ್ನಗಳನ್ನು ಮತ್ತಷ್ಟು ಚೈತನ್ಯಗೊಳಿಸುವ ಗುರಿಯನ್ನು ಹೊಂದಿವೆ., ಕನಿಷ್ಠ ಆಡಳಿತ ಸಿಬ್ಬಂದಿ, ಗರಿಷ್ಠ ಆಡಳಿತದ ಗುರಿಯು ಕೊನೆಯಿಂದ ಕೊನೆಯ ಆನ್ ಲೈನ್ ಸೇವೆಯ ಮೂಲಕ ನಾಗರಿಕ ಕೇಂದ್ರಿತ ಇ ಆಡಳಿತ ಮಾಡುವುದಾಗಿದೆ.
ಈ ಪ್ರಯತ್ನದ ಭಾಗವಾಗಿ, ಉತ್ತಮ ಆಡಳಿತ ಮತ್ತು ಆಡಳಿತ ಸುಧಾರಣೆಯಲ್ಲಿ ಅಂತಾರಾಷ್ಟ್ರೀಯ ಸಹಯೋಗ ಬಯಸಲಾಗಿದೆ, ಡಿಓಆರ್.ಪಿ.ಜಿ. ಈಗಾಗಲೇ ಚೈನಾ, ಮಲೇಷಿಯಾ, ಸಿಂಗಾಪೂರ್, ಫ್ರಾನ್ಸ್, ಯುನೈಟೆಡ್ ಕಿಂಗ್ಡಮ್ ನೊಂದಿಗೆ ದ್ವಿಪಕ್ಷೀಯ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದೆ. ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾದೊಂದಿಗೆ ತ್ರಿಪಕ್ಷೀಯ ಒಪ್ಪಂದವೂ ಏರ್ಪಟ್ಟಿದೆ. ಚೈನಾ ಮತ್ತು ಸಿಂಗಾಪೂರದೊಂದಿಗಿನ ತಿಳಿವಳಿಕೆ ಒಪ್ಪಂದ ನವೀಕರಿಸುವ/ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪರಿಶೀಲನೆಯಲ್ಲಿದೆ. ಈ ನಿಟ್ಟಿನಲ್ಲಿ ಪೋರ್ಚುಗಲ್ ನೊಂದಿಗಿನ ಇತ್ತೀಚಿನ ಒಪ್ಪಂದವೂ ಒಂದಾಗಿದೆ.
*****
KSD/VBA/SH