ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ ಮತ್ತು ಸ್ಪೇನ್ ನಡುವೆ ಭಾರತ-ಸ್ಪೇನ್ ನವೀಕರಿಸಬಹುದಾದ ಇಂಧನ ಸಹಕಾರ ಕುರಿತಂತೆ ಆಗಿರುವ ತಿಳಿವಳಿಕೆ ಒಪ್ಪಂದ (ಎಂ.ಓ.ಯು.) ಬಗ್ಗೆ ವಿವರ ನೀಡಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2017ರ ಮೇ 30ರಂದು ಸ್ಪೇನ್ ನಲ್ಲಿ ಸಹಿ ಹಾಕಲಾಗಿತ್ತು.
ಈ ತಿಳಿವಳಿಕೆ ಒಪ್ಪಂದವು ಮಾಹಿತಿ ಜಾಲದ ಹಾಗೂ ತಜ್ಞತೆಯ ವಿನಿಮಯದೊಂದಿಗೆ ಎರಡೂ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಹಕಾರ ಬಲಪಡಿಸಲು ನೆರವಾಗುತ್ತದೆ.
ಎರಡೂ ಕಡೆಯವರು ಪರಸ್ಪರ ಲಾಭ, ಸಮಾನತೆ ಮತ್ತು ಪರಸ್ಪರತೆಯ ಆಧಾರದ ಮೇಲೆ ಹೊಸ ಮತ್ತು ನವೀಕರಿಸಬಹುದಾದ ಇಂಧನ ವಿಷಯಗಳ ಮೇಲಿನ ತಾಂತ್ರಿಕ ದ್ವಿಪಕ್ಷೀಯ ಸಹಕಾರವನ್ನು ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಸಾಂಸ್ಥಿಕ ಸಹಕಾರ ಸಂಬಂಧವನ್ನು ಸ್ಥಾಪಿಸುವ ಗುರಿಯನ್ನು ಹೊಂದಿವೆ. ಈ ತಿಳಿವಳಿಕೆ ಒಪ್ಪಂದವು ಈ ಸಹಕಾರ ಕ್ಷೇತ್ರದಲ್ಲಿನ ವಿಚಾರಗಳ ಬಗ್ಗೆ ಚರ್ಚಿಸಲು ಮತ್ತು ನಿಗಾವಹಿಸಲು ಮತ್ತು ಪರಾಮರ್ಶಿಸಲು ಜಂಟಿ ಕಾರ್ಯ ಸಮಿತಿ ರಚಿಸಲೂ ಅವಕಾಶ ನೀಡುತ್ತದೆ.
****
AKT/VBA/SH