ಪಿಎಂಇಂಡಿಯಾ
1. ಭಾರತ ಮತ್ತು ಐರೋಪ್ಯ ಒಕ್ಕೂಟ (ಇಯು) ನಡುವೆ 14ನೇ ವಾರ್ಷಿಕ ಶೃಂಗಸಭೆ 2017ರ ಅಕ್ಟೋಬರ್ 6ರಂದು ನವದೆಹಲಿಯಲ್ಲಿ ನಡೆಯಿತು. ಭಾರತ ಗಣರಾಜ್ಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಪ್ರತಿನಿಧಿಸಿದ್ದರು. ಇಯುವನ್ನು ಐರೋಪ್ಯ ಮಂಡಳಿಯ ಅಧ್ಯಕ್ಷ ಶ್ರೀ ಡೋನಾಲ್ಡ್ ಟಸ್ಕ್ ಮತ್ತು ಐರೋಪ್ಯ ಆಯೋಗದ ಅಧ್ಯಕ್ಷ ಶ್ರೀ ಜೀನ್ ಕ್ಲಾಡ್ ಜುಂಕರ್ ವಹಿಸಿದ್ದರು.
2. ನಾಯಕರು, ಭಾರತ – ಇಯು ವ್ಯೂಹಾತ್ಮಕ ಪಾಲುದಾರಿಕೆಯಡಿಯಲ್ಲಿನ ವಿಸ್ತೃತ ಶ್ರೇಣಿಯ ಸಹಕಾರವನ್ನು ಪರಾಮರ್ಶಿಸಿದರು. ಭಾರತ ಮತ್ತು ಇಯು ಸ್ವಾಭಾವಿಕ ಪಾಲುದಾರರು ಎಂಬುದನ್ನು ಗುರುತಿಸಿದ ಈ ನಾಯಕರು, ಭಾರತ-ಇಯು ವ್ಯೂಹಾತ್ಮಕ ಪಾಲುದಾರಿಕೆಯನ್ನು ಹಂಚಿಕೆಯ ನೀತಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು, ಸ್ವಾತಂತ್ರ್ಯ, ಕಾನೂನು ಆಡಳಿತ ಮತ್ತು ಮಾನವಹಕ್ಕುಗಳ ಬಗ್ಗೆ ಗೌರವ ಹಾಗೂ ರಾಜ್ಯಗಳ ಪ್ರಾದೇಶಿಕ ಸಮಗ್ರತೆಯ ಆಧಾರದ ಮೇಲೆ ಮತ್ತಷ್ಟು ಆಳಗೊಳಿಸಲು ಮತ್ತು ಬಲಪಡಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
3. ನಾಯಕರು, 13ನೇ ಭಾರತ-ಇಯು ಶೃಂಗಸಭೆಯ ವೇಳೆ ಅನುಮೋದಿಸಲಾದ ದ್ವಿಪಕ್ಷೀಯ ಸಹಕಾರದ ಮಾರ್ಗಸೂಚಿ – ಭಾರತ –ಇಯು 2020 ಕಾರ್ಯಕ್ರಮ ಪಟ್ಟಿಯ ಜಾರಿ ನಿಟ್ಟಿನಲ್ಲಿ ಆಗಿರುವ ಪ್ರಗತಿಗೆ ಸಂತೃಪ್ತಿ ವ್ಯಕ್ತಪಡಿಸಿದರು.
4. ತಮ್ಮ ವಾಣಿಜ್ಯ ಸಹಕಾರ ಆಳಗೊಳಿಸುವ, ಎರಡೂ ಕಡೆಗಳಿಂದ ಹೂಡಿಕೆಯ ಹರಿವು ಹೆಚ್ಚಿಸುವ ಮತ್ತು ಮಾತುಕತೆಯನ್ನು ಹಾಗೂ ಹವಾಮಾನ ಬದಲಾವಣೆ ಸೇರಿದಂತೆ ಜಾಗತಿಕ ಮತ್ತು ಪ್ರಾದೇಶಿಕ ವಿಷಯಗಳಿಗೆ ಸಂಬಂಧಿಸಿದ ಕಾರ್ಯಕ್ರಮ ವಿಸ್ತರಿಸುವ, ನಿರಾಶ್ರಿತರ ಮತ್ತು ವಲಸಿಗರ ಸಮಸ್ಯೆ ಪರಿಹರಿಸ ಮೂಲಕ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರವನ್ನು ಇನ್ನಷ್ಟು ಹೆಚ್ಚಿಸುವ ಸಂಕಲ್ಪದೊಂದಿಗೆ ಫಲಿತಾಂಶ ಆಧಾರಿತ ಮತ್ತು ಪರಸ್ಪರರಿಗೆ ಲಾಭವಾಗುವಂಥ ಮಾದರಿಯಲ್ಲಿ ಭಾರತ-ಇಯು ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸಲು ಇಬ್ಬರೂ ನಾಯಕರು ತಮ್ಮ ಬದ್ಧತೆ ವ್ಯಕ್ತಪಡಿಸಿದರು.
5. ಭಾರತದಲ್ಲಿ ಪ್ರಮುಖ ವಲಯಗಳಲ್ಲಿ ಅದರಲ್ಲೂ ಹವಾಮಾನ ಕುರಿತ ಕ್ರಮ ಹಾಗೂ ನವೀಕರಿಸಬಹುದಾದ ಇಂಧನ ವಲಯದಲ್ಲಿ ವಿಸ್ತೃತ ಶ್ರೇಣಿಯಲ್ಲಿ ಐರೋಪ್ಯ ಹೂಡಿಕೆ ಬ್ಯಾಂಕಿನ ಪ್ರಬಲ ಕಾರ್ಯಕ್ರಮವನ್ನು ನಾಯಕರು ಪ್ರಶಂಸಿಸಿದ್ದಾರೆ.
6. ಭಾರತ- ಇಯು ಸಹಕಾರ ಮತ್ತು ಪರಸ್ಪರ ತಿಳಿವಳಿಕೆಯನ್ನು ಹೆಚ್ಚಿಸಲು ನಿಯಮಿತ ಉನ್ನತ ಮಟ್ಟದ ಮಾತುಕತೆಗಳ ಪ್ರಾಮುಖ್ಯತೆಯನ್ನು ನಾಯಕರು ಒತ್ತಿ ಹೇಳಿದರು. 2017ರ ಏಪ್ರಿಲ್ 21ರಂದು ನವದೆಹಲಿಯಲ್ಲಿ ನಡೆದ ಭಾರತ – ಇಯು ವಿದೇಶಾಂಗ ಸಚಿವರ ಮಟ್ಟದ ಸಭೆಯ ಫಲಶ್ರುತಿಯನ್ನು ಅವರು ಉಲ್ಲೇಖಿಸಿದರು. ವಿದೇಶಾಂಗ ನೀತಿ ಮತ್ತು ಭದ್ರತಾ ಸಹಕಾರ – ಭದ್ರತೆಗಾಗಿ ಪಾಲುದಾರಿಕೆ.
7. ಭಾರತ ಮತ್ತು ಇ.ಯು. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿ, ಒಗ್ಗೂಡಿ ಶ್ರಮಿಸುವ ಇಚ್ಛೆ ಹಂಚಿಕೊಂಡವು ಮತ್ತು ಎಲ್ಲ ಸೂಕ್ತ ಸಂಸ್ಥೆಗಳೊಂದಿಗೆ ಒಪ್ಪಿತ ಅಂತಾರಾಷ್ಟ್ರೀಯ ನಿಯಮ, ಜಾಗತಿಕ ಶಾಂತಿ ಮತ್ತು ಸ್ಥಿರತೆಗಳನ್ನು ಎತ್ತಿಹಿಡಿಯುವ ಮತ್ತು ಅಂತರ ಸಂಪರ್ಕಿತ ಮತ್ತು ಬಹುಧ್ರುವೀಯ ವಿಶ್ವದ ಎಲ್ಲ ಭಾಗಗಳಲ್ಲಿ ಸಮಗ್ರ ಪ್ರಗತಿ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ನಿಯಮ ಆಧಾರಿತ ಅಂತಾರಾಷ್ಟ್ರೀಯ ಸುವ್ಯವಸ್ಥೆಯನ್ನು ಬೆಂಬಲಿಸುವ ನಿರ್ಧಾರ ವ್ಯಕ್ತಪಡಿಸಿದರು. ಸಮಕಾಲೀನ ಜಾಗತಿಕ ವಿಷಯಗಳ ಬಗ್ಗೆ ವೃದ್ಧಿಸುತ್ತಿರುವ ಒಮ್ಮತವನ್ನು ಅವರು ಸ್ವಾಗತಿಸಿದರು ಮತ್ತು ಎಲ್ಲಾ ಬಹುಪಕ್ಷೀಯ ವೇದಿಕೆಗಳಲ್ಲಿ ಭಾರತ-ಇಯು ಸಹಕಾರವನ್ನು ಹೆಚ್ಚಿಸಲು ಸಮ್ಮತಿಸಿದರು. ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿ ತಮ್ಮ ಸಮಾನ ಜವಾಬ್ದಾರಿ ಮತ್ತು ಮುಕ್ತ ಹಾಗೂ ಸಮಗ್ರ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಅವರು ಗುರುತಿಸಿದರು.
8. ಸಂಘರ್ಷ ತಡೆಯುವ ಮತ್ತು ಭದ್ರತೆ ಮತ್ತು ಪ್ರಗತಿ, ನಿಶ್ಶಸ್ತ್ರೀಕರಣ ಮತ್ತು ಪ್ರಸರಣ ನಿರೋಧ ತ್ವರಿತಗೊಳಿಸುವ ಮತ್ತು ಭಯೋತ್ಪಾದನೆ ಪಿಡುಗು ಎದುರಿಸಲು ಮತ್ತು ಜಾಗತಿಕವಾಗಿ ಸಮಾನವಾದ – ಸಮುದ್ರ ಮಾರ್ಗ, ಸೈಬರ್ ಪ್ರದೇಶ ಮತ್ತು ಬಾಹ್ಯಾಕಾಶವನ್ನು ರಕ್ಷಿಸುವ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ನಾಯಕರು ಸ್ಪಷ್ಟಪಡಿಸಿದರು, ಅವರು 2017ರ ಆಗಸ್ಟ್ 25ರಂದು ನವದೆಹಲಿಯಲ್ಲಿ ನಡೆದ ರಾಜಕೀಯ ಮತ್ತು ಭದ್ರತಾ ಕ್ಷೇತ್ರದಲ್ಲಿ ಸಹಕಾರವನ್ನು ಮತ್ತಷ್ಟು ಆಳಗೊಳಿಸುವ ವೇದಿಕೆಯ 5ನೇ ಭಾರತ-ಇಯು ವಿದೇಶಾಂಗ ನೀತಿ ಮತ್ತು ಭದ್ರತಾ ಸಮಾಲೋಚನೆ ಸ್ವಾಗತಿಸಿದರು.
9. ಮುಕ್ತ, ಸುರಕ್ಷಿತ, ಸ್ಥಿರ, ಶಾಂತಿಯುತ ಮತ್ತು ಪ್ರವೇಶಿಸಬಹುದಾದ ಸೈಬರ್ ಪ್ರದೇಶ, ಆರ್ಥಿಕ ಬೆಳವಣಿಗೆ ಮತ್ತು ನಾವೀನ್ಯತೆಗೆ ಅನುವು ಮಾಡಿಕೊಡುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಅದರಲ್ಲೂ ಸೈಬರ್ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕಾನೂನು ಅನ್ವಯವಾಗುತ್ತದೆ ಎಂಬುದನ್ನು ನಾಯಕರು ಪುನರುಚ್ಚರಿಸಿದರು ಮತ್ತು ಸೈಬರ್ ಪ್ರದೇಶಕ್ಕೆ ಅಂತಾರಾಷ್ಟ್ರೀಯ ಕಾನೂನು ಅನ್ವಯ ಆಗುವ ಕುರಿತಂತೆ ಆಳವಾದ ಮಾತುಕತೆ ನಡೆಸಲು ಮತ್ತು ದೇಶಗಳ ಜವಾಬ್ದಾರಿಯುತ ನಡವಳಿಕೆಯ ಮುಂದುವರಿಕೆಯ ಅಗತ್ಯ ಪ್ರತಿಪಾದಿಸಿದರು.ನವದೆಹಲಿಯಲ್ಲಿ ನವೆಂಬರ್ 23-24ರಂದು ಸೈಬರ್ ಪ್ರದೇಶ ಕುರಿತಂತೆ ಆಯೋಜಿಸಿರುವ 5ನೇ ಜಾಗತಿಕ ಸಮ್ಮೇಳನವನ್ನು ನಾಯಕರು ಸ್ವಾಗತಿಸಿದರು. ಹಾಲಿ ಇರುವ ಮತ್ತು ಭವಿಷ್ಯದ ಸಹಕಾರಕ್ಕೆ ದ್ವಿಪಕ್ಷೀಯ ಸೈಬರ್ ಕುರಿತ ಮಾತುಕತೆ ಬಲವಾದ ಬುನಾದಿ ಒದಗಿಸುತ್ತದೆ ಎಂಬುದನ್ನು ನಾಯಕರು ಉಲ್ಲೇಖಿಸಿದರು ಮತ್ತು ಈ ವರ್ಷ ಆಗಸ್ಟ್ 29ರಂದು ನಡೆಸಿದ ಇತ್ತೀಚಿನ ಸಭೆಯನ್ನು ಮತ್ತು 2018ರಲ್ಲಿ ಬ್ರುಸೆಲ್ಸ್ ನಲ್ಲಿ ನಡೆಯಲಿರುವ ಭಾರತ –ಇಯು ಸೈಬರ್ ಮಾತುಕತೆಯನ್ನು ಸ್ವಾಗತಿಸಿದರು.
10. ನಾಯಕರು ಇತ್ತೀಚೆಗೆ ವಿಶ್ವದ ನಾನಾ ಕಡೆಗಳಲ್ಲಿ ನಡೆದ ಭಯೋತ್ಪಾದಕ ದಾಳಿಗಳನ್ನು ಖಂಡಿಸಿದರು ಮತ್ತು ಭಯೋತ್ಪಾದನೆ ಹಾಗೂ ವಿಧ್ವಂಸಕತೆ ಒಡ್ಡಿರುವ ಜಾಗತಿಕ ಭೀತಿಯ ಬಗ್ಗೆ ಸಮಾನ ಕಳವಳ ವ್ಯಕ್ತಪಡಿಸಿದರು. ತಮ್ಮ ವ್ಯೂಹಾತ್ಮಕ ಮತ್ತು ಭದ್ರತೆಯ ಸಹಕಾರವನ್ನು ಆಳಗೊಳಿಸುವ ನಿಟ್ಟಿನಲ್ಲಿ ಭಯೋತ್ಪಾದನೆ ನಿಗ್ರಹ ಸಹಕಾರ ಕುರಿತ ಜಂಟಿ ಹೇಳಿಕೆಯನ್ನು ಅವರು ಅಳವಡಿಸಿಕೊಂಡರು ಮತ್ತು ಸಮಗ್ರ ದೃಷ್ಟಿಕೋನದೊಂದಿಗೆ ಎಲ್ಲ ವಿಧ ಮತ್ತು ಸ್ವರೂಪದ ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆತಮ್ಮ ಬಲವಾದ ಬದ್ಧತೆಯನ್ನು ವ್ಯಕ್ತಪಡಿಸಿದರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮತ್ತು ನಿಯಮಿತ ದ್ವಿಪಕ್ಷೀಯ ಸಮಾಲೋಚನೆ ಮೂಲಕ ಸಹಕಾರವನ್ನು ಹೆಚ್ಚಿಸಲು ನಾಯಕರು ಸಂಕಲ್ಪಿಸಿದರು. ಈ ನಿಟ್ಟಿನಲ್ಲಿ 2017ರ ಆಗಸ್ಟ್ 30ರಂದು ನವದೆಹಲಿಯಲ್ಲಿ ನಡೆದ ಭಯೋತ್ಪಾದನೆ ನಿಗ್ರಹ ಭಾರತ –ಇಯು ಮಾತುಕತೆ ಮತ್ತು ಇತರ ವಿಷಯಗಳಲ್ಲಿನ ಅವಕಾಶ ಬಳಕೆ, ಮೂಲಭೂತವಾದ ಆನ್-ಲೈನ್ ಬೆದರಿಕೆಯನ್ನು ಎದುರಿಸಲು ಮಾಹಿತಿ, ಉತ್ತಮ ಪದ್ಧತಿಗಳ ವಿನಿಮಯ, ತರಬೇತಿ ಮತ್ತು ಕಾರ್ಯಾಗಾರಗಳಂತಹ ಸಾಮರ್ಥ್ಯ ವರ್ಧನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಜಂಟಿ ಬದ್ಧತೆಯನ್ನು ಸ್ವಾಗತಿಸಿದರು. ವಿಶ್ವಸಂಸ್ಥೆ ಮತ್ತು ಹಣಕಾಸು ಕ್ರಮದ ಕಾರ್ಯಪಡೆ (ಎಫ್.ಎ.ಟಿ.ಎಫ್.)ನೊಳಗೆ ಸಹಕಾರ ಆಳಗೊಳಿಸುವ ಅಗತ್ಯವನ್ನೂ ಪ್ರತಿಪಾದಿಸಿದರು.
11. ಎರಡೂ ಕಡೆಯವರು 2017ರ ಜುಲೈ 18ರಂದು ದೆಹಲಿಯಲ್ಲಿ ನಡೆದ ಭಾರತ –ಇಯು ನಿಶ್ಶಸ್ತ್ರೀಕರಣ ಮತ್ತು ಪ್ರಸರಣ ತಡೆ ಮಾತುಕತೆಯಲ್ಲಿ ಒತ್ತಿ ಹೇಳಲಾದಂತೆ ಜಾಗತಿಕ ಪ್ರಸರಣ ತಡೆ ಪ್ರಯತ್ನವನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂ.ಟಿ.ಸಿ.ಆರ್.)ನಲ್ಲಿ ಪ್ರವೇಶ ಪಡೆದಿರುವುದಕ್ಕಾಗಿ ಭಾರತವನ್ನು ಇ.ಯು. ಅಭಿನಂದಿಸಿತು. ಖಂಡಾಂತರ ಕ್ಷಿಪಣಿ ಪ್ರಸರಣ (ಎಚ್.ಸಿ.ಓಸಿ) ವಿರುದ್ಧದ ಹೇಗ್ ನೀತಿ ಸಂಹಿತೆಯಲ್ಲಿ ಭಾರತದ ಚಂದಾದಾರಿಕೆಯನ್ನೂ ಇಯು ಸ್ವಾಗತಿಸಿತು ಮತ್ತು ಜಾಗತಿಕ ಪ್ರಸರಣ ತಡೆ ಪ್ರಯತ್ನ ಬಲಪಡಿಸುವಲ್ಲಿ ಪರಮಾಣು ಪೂರೈಕೆದಾರರ ಗುಂಪು(ಎನ್.ಎಸ್.ಜಿ.), ವಸೇನರ್ ವ್ಯವಸ್ಥೆ ಮತ್ತು ಆಸ್ಟ್ರೇಲಿಯಾ ಗುಂಪಿನೊಂದಿಗೆ ಭಾರತದ ತೀವ್ರ ಕಾರ್ಯಕ್ರಮವನ್ನು ಗುರುತಿಸಿತು.
12. ಹಿಂದೂ ಮಹಾಸಾಗರ ಮತ್ತು ಅದರಾಚೆ ಸಾಗರ ಭದ್ರತೆ ಸಹಕಾರ ಹೆಚ್ಚಿಸುವ ಬದ್ಧತೆಯನ್ನು ಭಾರತ ಮತ್ತು ಇಯು ಪುನರುಚ್ಚರಿಸಿದವು. ಎರಡೂ ಕಡೆಯವರು ಸೋಮಾಲಿಯಾ ಕರಾವಳಿಯಲ್ಲಿ ಇತ್ತೀಚೆಗೆ ನಡೆದ ಇಯು ನೌಕಾ ಪಡೆ ಮತ್ತು ಭಾರತೀಯ ನೌಕ ಪಡೆಗಳ ನಡುವೆ ನಡೆದ ಜಂಟಿ ಸಮರಕೌಶಲ (ಪಾಸೆಕ್ಸ್) ಪ್ರಸ್ತಾಪಿಸಿ, ಇದು ನೌಕಾ ಸಹಕಾರಕ್ಕೆ ಉತ್ತಮ ಉದಾಹರಣೆ ಎಂದು ಗುರುತಿಸಿದರು. ಹತ್ತಿರದ ಭವಿಷ್ಯದಲ್ಲಿ ಭಾರತವು ವಿಶ್ವಆಹಾರ ಕಾರ್ಯಕ್ರಮ ನೌಕೆಯ ರಕ್ಷಣೆಯಲ್ಲಿ ಭಾಗಿಯಾಗುವ ಸಾಧ್ಯತೆಯನ್ನು ಎದಿರು ನೋಡುತ್ತಿರುವುದಾಗಿ ಇಯು ತಿಳಿಸಿತು. ಅವರು ಜಾಗತಿಕ ಮನ್ನಣೆ ಪಡೆದ ಅಂತಾರಾಷ್ಟ್ರೀಯ ಕಾನೂನು ನೀತಿಗಳು, ಅದರಲ್ಲೂ ವಿಶ್ವಸಂಸ್ಥೆಯ ಸಾಗರದ ಕಾನೂನು (ಯುಎನ್.ಸಿ.ಎಲ್.ಓ.ಎಸ್.) 1982ರನ್ವಯ ಪಥದರ್ಶಕ, ಹಾರಾಟದ ಸ್ವಾತಂತ್ರ್ಯ ಮತ್ತು ವಿವಾದಗಳ ಶಾಂತಿಯುತ ಪರಿಹಾರದ ಮಹತ್ವವನ್ನು ಒತ್ತಿ ಹೇಳಿದವು. ಎರಡೂ ಕಡೆಯ ನಾಯಕರು, ನೀಲಿ ಆರ್ಥಿಕತೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಸಾಗರ ಮತ್ತು ಸಮುದ್ರದ ಭದ್ರತೆ, ಸ್ಥಿರತೆ, ಸಂಪರ್ಕ ಮತ್ತು ಸುಸ್ಥಿರ ಅಭಿವೃದ್ಧಿಯ ಮಹತ್ವಕ್ಕೆ ಸಂಪರ್ಕಿತವಾಗುವ ಮಹತ್ವ ಪ್ರತಿಪಾದಿಸಿದರು.
13.ಎರಡೂ ಕಡೆಯವರು ಭೂಮಿಯ ವೀಕ್ಷಣೆ ಸೇರಿದಂತೆ ಭಾರತ – ಇಯು ಬಾಹ್ಯಾಕಾಶ ಸಹಕಾರ ಹೆಚ್ಚಿಸಲು ಸಮ್ಮತಿಸಿದರು. ಬದುಕಿನ ಎಲ್ಲ ರಂಗದಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಸೇರಿದಂತೆ ಮಾನವ ಹಕ್ಕುಗಳ ಸಹಕಾರಕ್ಕೆ ಹೊಂದಿರುವ ಬದ್ಧತೆಯ ಮಹತ್ವವನ್ನು ಭಾರತ ಮತ್ತು ಇಯು ಪುನರುಚ್ಚರಿಸಿದವು. ಈ ನಿಟ್ಟಿನಲ್ಲಿ ಅವರು ನವದೆಹಲಿಯಲ್ಲಿ ನಡೆಯಲಿರುವ ಮುಂದಿನ ಸಭೆಯನ್ನು ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅದರಲ್ಲೂ ಯು.ಎನ್. ಮಹಾ ಸಭೆ ಮತ್ತು ಯು.ಎನ್. ಮಾನವ ಹಕ್ಕು ಮಂಡಳಿ ಸಭೆಗಳನ್ನು ಎದಿರು ನೋಡುತ್ತಿರುವುದಾಗಿ ತಿಳಿಸಿದರು.
14.ಎರಡೂ ಕಡೆಯವರು, ಅಫ್ಘಾನ್ ನೇತೃತ್ವದ ಮತ್ತು ಅಫ್ಘಾನ್-ಸ್ವಾಮ್ಯದ ರಾಷ್ಟ್ರೀಯ ಶಾಂತಿ ಮತ್ತು ಸಾಮರಸ್ಯವನ್ನು ಸಾಧಿಸುವ ಪ್ರಯತ್ನದಲ್ಲಿ ಸರ್ಕಾರದ ಮತ್ತು ಅಫ್ಘಾನಿಸ್ತಾನದ ಜನರಿಗೆ ಬೆಂಬಲವನ್ನು ವ್ಯಕ್ತಪಡಿಸಿದವು.ಅಂತಾರಾಷ್ಟ್ರೀಯ ಶಾಂತಿ ಮತ್ತು ಸ್ಥಿರತೆಗೆ ಮೂಲಭೂತ ಬೆದರಿಕೆ ಒಡ್ಡಿರುವ ಎಲ್ಲಾ ಸ್ವರೂಪದ ಭಯೋತ್ಪಾದನೆ ಮತ್ತು ಹಿಂಸಾತ್ಮಕ ಉಗ್ರಗಾಮಿತ್ವವನ್ನು ಹತ್ತಿಕ್ಕಲು ಎರಡೂ ಕಡೆಯವರು ನಿರ್ಧರಿಸಿದರು. ಆಫ್ಘಾನಿಸ್ತಾನದಲ್ಲಿ ಶಾಂತಿ, ಭದ್ರತೆ ಮತ್ತು ಪ್ರಗತಿಯ ಖಾತ್ರಿಗಾಗಿ ಪ್ರಾದೇಶಿಕ ಮತ್ತು ಪ್ರಮುಖ ಅಂತಾರಾಷ್ಟ್ರೀಯ ಬಾಧ್ಯಸ್ಥರು ರಾಜಕೀಯ ಪ್ರಕ್ರಿಯೆ ಮತ್ತು ಅದರ ಫಲಶ್ರುತಿಯನ್ನು ಗೌರವಿಸಬೇಕು, ಬೆಂಬಲಿಸಬೇಕು ಮತ್ತು ಉತ್ತೇಜಿಸಬೇಕಾದ ಮಹತ್ವವನ್ನು ಭಾರತ ಮತ್ತು ಇಯು ಒತ್ತಿ ಹೇಳಿದವು. ಸಾಮಾಜಿಕ ಮತ್ತು ಆರ್ಥಿಕ ಮೂಲಸೌಕರ್ಯ, ಆಡಳಿತ ಸಂಸ್ಥೆಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮರ್ಥ್ಯ ವರ್ಧನೆ ಸೇರಿದಂತೆ ಆಫ್ಘಾನಿಸ್ತಾನದಲ್ಲಿ ಅಭಿವೃದ್ಧಿಗಾಗಿ ನೆರವು ನೀಡುವಲ್ಲಿ ಭಾರತದ ಧನಾತ್ಮಕ ಪಾತ್ರವನ್ನು ಇಯು ಪ್ರಶಂಸಿಸಿತು. ಎರಡೂ ಕಡೆಯವರು ಆಫ್ಘಾನಿಸ್ತಾನದಲ್ಲಿ ಅದರ ಅಭಿವೃದ್ಧಿಯ ಹಾದಿಯಲ್ಲಿ ಸ್ವಾವಲಂಬಿಯಾಗಲು ಮತ್ತು ಪ್ರಗತಿಪರ ರಾಷ್ಟ್ರವಾಗಲು ಮತ್ತು ಶಾಂತಿ, ಭದ್ರತೆ ಮತ್ತು ಸ್ಥಿರತೆ ಉತ್ತೇಜಿಸಲು ಬದ್ಧವಾಗಿರುವುದನ್ನು ಪುನರುಚ್ಚರಿಸಿದವು.
15. ದೊಡ್ಡ ಸಂಖ್ಯೆಯ ಜನರು ದೇಶದಿಂದ ಹೊರ ಹೋಗುವಂತೆ ಮಾಡಿದ ಇತ್ತೀಚೆಗೆ ಮ್ಯಾನ್ಮಾರ್ ನ ರಾಖೈನ್ ರಾಜ್ಯದಲ್ಲಿ ನಡೆದ ಹಿಂಸಾಚಾರ ಬಗ್ಗೆಭಾರತ ಮತ್ತು ಇಯು ತೀವ್ರ ಕಳವಳ ವ್ಯಕ್ತಪಡಿಸಿತು, ಇವರಲ್ಲಿ ಹಲವರು ನೆರೆಯ ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿದ್ದಾರೆ. ಅರಾಕನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ (ಎಆರ್.ಎಸ್ಎ) ಉಗ್ರಗಾಮಿಗಳು ನಡೆಸಿದ ಸರಣಿ ದಾಳಿಯಿಂದ ಪ್ರಚೋದಿತವಾದ ಈ ಹಿಂಸಾಚಾರಕ್ಕೆ ಭದ್ರತಾ ಪಡೆಗಳ ಜೊತೆಗೆ ನಾಗರಿಕರೂ ಜೀವ ಕಳೆದುಕೊಳ್ಳುವಂತಾಯಿತು ಎಂಬುದನ್ನು ಎರಡೂ ಕಡೆಯವರು ಗುರುತಿಸಿದರು. ರಾಖೈನ್ ರಾಜ್ಯದಲ್ಲಿ ಯಾವುದೇ ವಿಳಂಬ ಇಲ್ಲದೆ ಹಿಂಸಾಚಾರವನ್ನು ಕೊನೆಗಾಣಿಸುವ ಮತ್ತು ಸಹಜ ಸ್ಥಿತಿಗೆ ತರುವ ಅಗತ್ಯವನ್ನು ಎರಡೂ ಕಡೆಯವರು ಪ್ರತಿಪಾದಿಸಿದರು. ಕೋಫಿ ಅನ್ನನ್ ನೇತೃತ್ವದ ರಾಖೈನ್ ಸಲಹಾ ಸಮಿತಿಯ ಶಿಫಾರಸುಗಳನ್ನು ಕಾರ್ಯಗತಗೊಳಿಸಲು ಮ್ಯಾನ್ಮಾರ್ ಅಧಿಕಾರಿಗಳಿಗೆ ಅವರು ಒತ್ತಾಯಿಸಿದರು ಮತ್ತು ಬಾಂಗ್ಲಾದೇಶದೊಂದಿಗೆ ಕಾರ್ಯೋನ್ಮುಖವಾಗಿ ಎಲ್ಲಾ ಸಮುದಾಯಗಳಿಂದ ಸ್ಥಳಾಂತರಗೊಂಡ ಜನರು ಉತ್ತರದ ರಾಖೈನ್ ರಾಜ್ಯಕ್ಕೆ ಮರಳಲು ಅನುವಾಗುವಂತೆ ಮಾಡುವಂತೆ ಆಗ್ರಹಿಸಿದರು. ಅಗತ್ಯವಿದ್ದ ಜನರಿಗೆ ಮಾನವೀಯ ನೆರವು ನೀಡುವಲ್ಲಿ ಬಾಂಗ್ಲಾದೇಶದ ಪಾತ್ರವನ್ನು ಭಾರತ ಮತ್ತು ಇಯು ಗುರುತಿಸಿದವು.
16.ಇರಾನಿನ ಪರಮಾಣು ವಿಚಾರದಲ್ಲಿ ಜಂಟಿ ಸಮಗ್ರ ಕ್ರಿಯಾ ಯೋಜನೆ (ಜೆಸಿಪಿಓಎ)ಯ ಸಂಪೂರ್ಣ ಜಾರಿಗೆ ಬೆಂಬಲ ಮುಂದುವರಿಸುವುದನ್ನು ಭಾರತ ಮತ್ತು ಇಯು ಪುನರುಚ್ಚರಿಸಿದವು. ಇರಾನ್ ಪರಮಾಣುವಿಗೆ ಸಂಬಂಧಿಸಿದಂತೆ ಜೆಸಿಪಿಓಎ ಬದ್ಧತೆಗಳನ್ನು ಅನುಸರಣೆ ಮಾಡುತ್ತಿದೆಯೇ ಎಂಬ ಬಗ್ಗೆ ಅಂತಾರಾಷ್ಟ್ರೀಯ ಅಣು ಇಂಧನ ಸಂಸ್ಥೆ (ಐಎಇಎ)ಯಿಂದ ಖಾತ್ರಿ ಪಡೆಸಿಕೊಳ್ಳಲು ಅವರು ತಿಳಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅನುಮೋದಿಸಿರುವ ಮತ್ತು ಪ್ರಸರಣ ನಿಷೇಧ ಚೌಕಟ್ಟಿಗೆ ಮತ್ತು ಅಂತಾರಾಷ್ಟ್ರೀಯ ಶಾಂತಿ, ಸ್ಥಿರತೆ ಮತ್ತು ಭದ್ರತೆಗೆ ಪ್ರಮುಖ ಕೊಡುಗೆಯಾಗುವಂಥ ಪೂರ್ಣ ಮತ್ತು ಸಮರ್ಥ ಒಪ್ಪಂದದ ಜಾರಿಗೆ ಭಾರತ ಮತ್ತು ಇಯು ಕರೆ ನೀಡಿದವು.
17.ಎರಡೂ ಕಡೆಯವರು, 2017ರ ಸೆಪ್ಟೆಂಬರ್ 3ರಂದು ಡಿಪಿಆರ್.ಕೆ. ನಡೆಸಿದ ಪರಮಾಣು ಪರೀಕ್ಷೆ, ಡಿಪಿಆರ್.ಕೆ. ಮಾಡಿದ ಅಂತಾರಾಷ್ಟ್ರೀಯ ಬದ್ಧತೆಯ ಮತ್ತೊಂದು ನೇರ ಹಾಗೂ ಒಪ್ಪಿಕೊಳ್ಳಲಾಗದಂಥ ಉಲ್ಲಂಘನೆ ಎಂದು ಖಂಡಿಸಿದರು, ಡಿಪಿಆರ್.ಕೆ.ಯ ಮುಂದುವರಿದ ಪರಮಾಣು ಮತ್ತು ಖಂಡಾಂತರ ಕ್ಷಿಪಣಿಯ ಕಾರ್ಯಕ್ರಮ ಮತ್ತು ಅದರ ಪ್ರಸರಣ ನಂಟು ಅಂತಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಗೆ ದೊಡ್ಡ ಬೆದರಿಕೆಯಾಗಿದೆ ಎಂದು ಅಭಿಪ್ರಾಯಪಟ್ಟ ಎರಡೂ ಕಡೆಯವರು, ಯುಎನ್ಎಸ್ಸಿ ಮತ್ತು ಆರು ಪಕ್ಷಗಳ ಮಾತುಕತೆಯಿಂದ ಅನುಮೋದಿಸಲ್ಪಟ್ಟ ಕೊರಿಯಾದ ಪೆನಿನ್ಸುಲಾದ ಸಂಪೂರ್ಣ, ಪರಿಶೀಲಿಸಬಹುದಾದ, ಹಿಂಪಡೆಯಲಾಗದಂಥ ಪರಮಾಣೀಕರಣನಾಶಕ್ಕೆ ಕರೆ ನೀಡಿದರು. ಡಿಪಿಆರ್.ಕೆ.ಯ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ಬೆಂಬಲಿಸುವವರ ಜವಾಬ್ದಾರಿಯನ್ನು ಒತ್ತಿ ಹೇಳಿದರು. ಈ ಸವಾಲು ಎದುರಿಸುವಲ್ಲಿ, ಎಲ್ಲಾ ಯುಎನ್ಎಸ್ಸಿ ನಿರ್ಬಂಧಗಳು ಸಂಪೂರ್ಣ ಅಂತಾರಾಷ್ಟ್ರೀಯ ಸಮುದಾಯದಿಂದ ಸಂಪೂರ್ಣವಾಗಿ ಜಾರಿಗೆ ಬಂದಿವೆ ಎಂದು ಖಾತರಿಪಡಿಸುವ, ಸಂಭಾಷಣೆಯ ಮೂಲಕ ಶಾಂತಿಯುತ ಮತ್ತು ಸಮಗ್ರ ಪರಿಹಾರವನ್ನು ಸಾಧಿಸುವ ಕಡೆಗೆ ಒತ್ತಡವನ್ನು ಹೆಚ್ಚಿಸಲು ಅಂತಾರಾಷ್ಟ್ರೀಯ ಸಮುದಾಯದ ಏಕತೆಯ ಮಹತ್ವವನ್ನೂ ಅವರು ಪ್ರತಿಪಾದಿಸಿದರು.
18. ಸಿರಿಯಾದ ಪರಿಸ್ಥಿತಿಯ ಕುರಿತಂತೆ, ವಿಶ್ವಸಂಸ್ಥೆ ನೇತೃತ್ವದ ಜಿನೀವಾ ಪ್ರಕ್ರಿಯೆಯ ಪ್ರಾಮುಖ್ಯತೆಯನ್ನು ಭಾರತ ಮತ್ತು ಇ.ಯು ಪುನರುಚ್ಚರಿಸಿದವು ಮತ್ತು ಸಿರಿಯಾದಲ್ಲಿ ರಾಜಕೀಯ ಪರಿಹಾರವನ್ನು ಉತ್ತೇಜಿಸುವ ದೃಷ್ಟಿಯಿಂದ ಅಂತರ್-ಸಿರಿಯನ್ ಮಾತುಕತೆಗಳಿಗೆ ಸಂಪೂರ್ಣ ಬೆಂಬಲವನ್ನು ಬಯಸಿದವು. ನಾಗರಿಕರು ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವುದು ಮೂಲಭೂತವಾಗಿದ್ದು, ಘರ್ಷಣೆಗೆ ಕಾರಣರಾದ ಎಲ್ಲ ಪಕ್ಷಕಾರರು ಮತ್ತು ಅವರ ಬೆಂಬಲಿಗರು ತಮ್ಮ ಬದ್ಧತೆಗಳಿಗನುಗುಣವಾಗಿ ವರ್ತಿಸಬೇಕು ಎಂದು ನಿರೀಕ್ಷಿಸಿದರು.ವಿಶ್ವಸಂಸ್ಥೆಯ ಎಸ್ಸಿಆರ್ 2254 ಮತ್ತು 2012 ರ ಜಿನೀವಾ ಹೇಳಿಕೆಯಲ್ಲಿ ವಿವರಿಸಿರುವಂತೆ ನಂಬಲರ್ಹವಾದ ರಾಜಕೀಯ ಪರಿಹಾರ ಮಾತ್ರ ಸಿರಿಯಾದ ಸ್ಥಿರತೆಯನ್ನು ಖಾತರಿಪಡಿಸುತ್ತದೆ ಮತ್ತು ಸಿರಿಯಾದಲ್ಲಿ ಡಾಯಿಶ್ ಮತ್ತು ಇತರ ಯುಎನ್ ನಿಂದ-ಪಟ್ಟಿಯಾಗಿರುವ ಭಯೋತ್ಪಾದಕ ಗುಂಪುಗಳ ನಿರ್ಣಾಯಕ ಸೋಲಿಗೆ ಶಕ್ತಗೊಳಿಸುತ್ತದೆ ಎಂದು ಭಾರತ ಮತ್ತು ಇಯು ಪುನರುಚ್ಚರಿಸಿವೆ. ಸಿರಿಯಾ ಕುರಿತಂತೆ 2018ರ ವಸಂತ ಋತುವಿನಲ್ಲಿ ನಡೆಯಲಿರುವ ಎರಡನೇ ಬ್ರುಸೆಲ್ಸ್ ಸಮ್ಮೇಳನವು ಸಿರಿಯಾಕ್ಕೆ ಸುಸ್ಥಿರ ಅಂತಾರಾಷ್ಟ್ರೀಯ ಬದ್ಧತೆಯ ಕೊಡುಗೆ ನೀಡುತ್ತದೆ ಎಂಬುದನ್ನು ಭಾರತ ಮತ್ತು ಇಯು ಒಪ್ಪಿಕೊಂಡಿವೆ.
19.ಮಧ್ಯಪ್ರಾಚ್ಯದ ಶಾಂತಿ ಪ್ರಕ್ರಿಯೆ ಕುರಿತಂತೆ ಎರಡೂ ರಾಷ್ಟ್ರಗಳ ಪರಿಹಾರದ, ವಿಶ್ವಸಂಸ್ಥೆಯ ಸೂಕ್ತ ಪರಿಹಾರದ, ಮ್ಯಾಡ್ರಿಡ್ ನೀತಿಗಳ, ಅರಬರ್ ಶಾಂತಿ ಉಪಕ್ರಮದ ಆಧಾರದ ಮೇಲೆ ಮಧ್ಯಪ್ರಾಚ್ಯದ ಶಾಂತಿ ಮತ್ತು ಸ್ಥಿರತೆಗಾಗಿ ಇಸ್ರೇಲಿ – ಪ್ಯಾಲಸ್ತೀನ್ ಸಂಘರ್ಷಕ್ಕೆ ಸಮಗ್ರ ಪರಿಹಾರ ಒದಗಿಸಲು ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಎರಡೂ ರಾಷ್ಟ್ರಗಳಿಗೆ ಭಾರತ ಮತ್ತು ಇಯು ಕರೆ ನೀಡಿರುವುದನ್ನು ಪುನರುಚ್ಚರಿಸಿದವು.
20. ಲಿಬಿಯಾದ ರಾಜಕೀಯ ಬಿಕ್ಕಟ್ಟಿಗೆ ನಿರಂತರ ಪರಿಹಾರವನ್ನು ರೂಪಿಸಲು ವಿಶ್ವಸಂಸ್ಥೆ ಒದಗಿಸಿದ ಲಿಬಿಯಾ-ನೇತೃತ್ವದ ಮತ್ತು ಲಿಬ್ಯಾ-ಸ್ವಾಮ್ಯದ ರಾಜಕೀಯ ಪ್ರಕ್ರಿಯೆಗೆ ತಮ್ಮ ಸಂಪೂರ್ಣ ಬೆಂಬಲವನ್ನು ಎರಡೂ ಪಕ್ಷಗಳು ಪುನರುಚ್ಚರಿಸಿದವು. ಇಡೀ ಅಂತಾರಾಷ್ಟ್ರೀಯ ಸಮುದಾಯದ ಹಿತದೃಷ್ಟಿಯಿಂದ ಲಿಬಿಯಾದಲ್ಲಿ ಸ್ಥಿರತೆ ಮತ್ತು ಶಾಂತಿ ನಿರ್ಮಾಣ ಮತ್ತು ಸಮಗ್ರ ಸರ್ಕಾರ ಸ್ಥಾಪಿಸುವುದನ್ನು ಪುನರುಚ್ಚಿರಿಸಿದವು.
21. ಭಾರತ ಮತ್ತು ಇಯು ಇಂದಿನ ಜಾಗತೀಕರಣ ವಿಶ್ವದಲ್ಲಿ ಸಂಪರ್ಕದ ಮಹತ್ವವನ್ನು ಗುರುತಿಸಿದರು. ಸಂಪರ್ಕದ ಉಪಕ್ರಮಗಳು ಸಾರ್ವತ್ರಿಕವಾಗಿ ಗುರುತಿಸಲಾದ ಅಂತಾರಾಷ್ಟ್ರೀಯ ನಿಯಮಗಳು, ಉತ್ತಮ ಆಡಳಿತ, ಆಡಳಿತ ಕಾನೂನು, ಮುಕ್ತತೆ, ಪಾರದರ್ಶಕತೆ ಮತ್ತು ಸಮಾನತೆ ಮತ್ತು ಕಡ್ಡಾಯವಾಗಿ ಪಾಲಿಸಬೇಕಾದ ಆರ್ಥಿಕ ಜವಾಬ್ದಾರಿಯ, ಜವಾಬ್ದಾರಿಯುತ ಸಾಲ ಹಣಕಾಸು ಆಚರಣೆಗಳು, ಸಮತೋಲಿತ ಪರಿಸರ ಮತ್ತು ಪರಿಸರ ರಕ್ಷಣೆ, ಸಂರಕ್ಷಣೆ ಮಾನದಂಡಗಳು ಮತ್ತು ಸಾಮಾಜಿಕ ಸಮರ್ಥನೀಯತೆ ತತ್ವಗಳ ಆಧಾರದಲ್ಲಿರಬೇಕು ಎಂದು ಒತ್ತಿ ಹೇಳಿದರು.
22. ಎ.ಎಸ್.ಇ.ಎಂ. ಏಷ್ಯಾ ಮತ್ತು ಯುರೋಪ್ ಅನ್ನು ಸಂಪರ್ಕಿಸುವ ಅನೌಪಚಾರಿಕ ವೇದಿಕೆ ಎಂಬುದರ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು. ಎರಡೂ ಕಡೆಯವರು ಎ.ಎಸ್.ಇ.ಎಂ.ಗೆ ಬ್ರುಸೆಲ್ಸ್ ನಲ್ಲಿ ನಡೆಯಲಿರುವ ಮುಂದಿನ ಎ.ಎಸ್.ಇ.ಎಂ. ಶೃಂಗದಲ್ಲಿ ಹೊಸ ಚೈತನ್ಯ ನೀಡಲು ಒಪ್ಪಿದರು. ಅಲ್ಲಿ ಜಾಗತಿಕ ಸವಾಲುಗಳನ್ನು ಒಟ್ಟಾಗಿ ಎದುರಿಸುವ ಬಗ್ಗೆ ಗಮನ ಹರಿಸಲಾಗುವುದು.
23.ಇಬ್ಬರೂ ನಾಯಕರು, ಪೂರ್ವ ಉಕ್ರೇನ್ ನಲ್ಲಿನ ಸಂಘರ್ಷಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಲಿಯ 2202 (2015) ನಿರ್ಣಯದನ್ವಯ ಎಲ್ಲ ಪಕ್ಷಕಾರರೂ ಮಿನ್ಸ್ಕ್ ಒಪ್ಪಂದದ ಪೂರ್ಣ ಜಾರಿಯ ಮೂಲಕ ರಾಜತಾಂತ್ರಿಕ ಪರಿಹಾರಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
24.ಎವಿವಿ ಸೀಮನ್ ಗಾರ್ಡ್ ಓಹಿಯೊ ಪ್ರಕರಣದಲ್ಲಿ ಭಾರತದಲ್ಲಿ ಕಾನೂನಿನ ಪ್ರಕ್ರಿಯೆಯ ಮೂಲಕ ತ್ವರಿತ ಪರಿಹಾರವನ್ನು ಇಯು ಬಯಸಿತು, ಇದರಲ್ಲಿ ಹದಿನಾಲ್ಕು ಎಸ್ಟೊನಿಯನ್ ಮತ್ತು ಆರು ಬ್ರಿಟಿಷ್ ನಾಗರಿಕರು ಭಾರತೀಯ ನ್ಯಾಯಾಲಯದಿಂದ ಸೆರೆಮನೆಯ ಶಿಕ್ಷೆಗೆ ಗುರಿಯಾಗಿದ್ದಾರೆ.
ಜಾಗತಿಕ ಸವಾಲುಗಳು – ಬಹುಪಕ್ಷೀಯ ಸಹಕಾರ.
25.ಎರಡೂ ಕಡೆಯವರು ಶಾಂತಿ ಮತ್ತು ಭದ್ರತೆ, ಅಭಿವೃದ್ಧಿ ಮತ್ತು ನಿರ್ವಹಣೆ ಸುಧಾರಣೆ ಕುರಿತ ಮೂರು ಸುಧಾರಣಾ ಮಾರ್ಗದ ವಿಶ್ವಸಂಸ್ಥೆಯ ನೂತನ ಸುಧಾರಣಾ ಕಾರ್ಯಕ್ರಮಕ್ಕೆ ತಮ್ಮ ಬೆಂಬಲ ಪುನರುಚ್ಚರಿಸಿದರು. ಬಲವಾದ ಜಾಗತಿಕ ಆಡಳಿತ ತನ್ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಗ್ರ ಸುಧಾರಣೆ ಮತ್ತು ಮಹಾಧಿವೇಶನದ ಕಾರ್ಯ ಪುನಶ್ಚೇತನಗೊಳಿಸುವಿಕೆ ಸೇರಿದಂತೆ ವಿಶ್ವಸಂಸ್ಥೆ ವ್ಯವಸ್ಥೆಗಳ ಕಾಯಗಳು ಮತ್ತು ಅಂಗಗಳ ಸುಧಾರಣೆಗೆ, 2030 ಕಾರ್ಯಕ್ರಮಗಳೊಂದಿಗೆ ಅದರ ಸಮಿತಿಗಳನ್ನು ಸೂಕ್ತವಾಗಿ ಹೊಂದಿಸುವುದಕ್ಕೆ ಎರಡೂ ಕಡೆಯವರು ತಮ್ಮ ಬದ್ಧತೆ ವ್ಯಕ್ತಪಡಿಸಿದರು.
26. ಎರಡೂ ಕಡೆಯವರು, ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಸುರಕ್ಷತೆ, ಜಾಗತಿಕ ಆರ್ಥಿಕ ಸ್ಥಿರತೆ ಮತ್ತು ಪ್ರಗತಿಯ ಸವಾಲುಗಳನ್ನು ಎದುರಿಸಲು ವಿಶ್ವಸಂಸ್ಥೆ ಮತ್ತು ಇತರ ಬಹುಪಕ್ಷೀಯ ವೇದಿಕೆಗಳಲ್ಲಿ ದ್ವಿಪಕ್ಷೀಯವಾಗಿ ಮತ್ತು ಜಿ20 ಪಾಲುದಾರರೊಂದಿಗೆ ಕೆಲಸ ಮಾಡಲು ಒಪ್ಪಿಗೆ ಸೂಚಿಸಿದರು.
27. ಇಬ್ಬರೂ ನಾಯಕರು, ಸುಸ್ಥಿರ ಪ್ರಗತಿ ಮತ್ತು ಅಭಿವೃದ್ಧಿ ಸಾಧಿಸಲು ನಿಯಮ ಆಧಾರಿತ ಬಹುಪಕ್ಷೀಯ ಮಾರಾಟ ವ್ಯವಸ್ಥೆ, ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಮುಕ್ತ ವ್ಯಾಪಾರ ಹೆಚ್ಚಿಸುವ ಮಹತ್ವವನ್ನು ಪ್ರತಿಪಾದಿಸಿದರು.
28.ಸಮಗ್ರ ಫಲಿತಾಂಶದೊಂದಿಗೆ ಹನ್ನೊಂದನೇ ಡಬ್ಲ್ಯುಟಿಒ ಸಚಿವರ ಮಟ್ಟದ ಸಮ್ಮೇಳನವನ್ನು ಯಶಸ್ವಿಗೊಳಿಸಲು ಡಬ್ಲ್ಯುಟಿಓನ ಎಲ್ಲಾ ಸದಸ್ಯರ ಜೊತೆಯಲ್ಲಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಅವರು ಪುನರುಚ್ಚರಿಸಿದರು. ನಿಯಮಗಳ ಆಧಾರಿತ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯ ಕೇಂದ್ರೀಯತೆಯನ್ನು ದೃಢೀಕರಿಸುತ್ತದೆ ಮತ್ತು ಮುಕ್ತ ಮತ್ತು ಅಂತರ್ಗತ ಜಾಗತಿಕ ವ್ಯಾಪಾರದ ಪ್ರಾಮುಖ್ಯತೆ ಪ್ರತಿಪಾದಿಸುತ್ತದೆ.
29.ಎರಡೂ ಕಡೆಯವರು ಸುಸ್ಥಿರ ಅಭಿವೃದ್ಧಿಗಾಗಿ 2030 ಕಾರ್ಯಕ್ರಮವನ್ನು ಅಳವಡಿಸಿಕೊಳ್ಳುವುದನ್ನು ಸ್ಮರಿಸಿದರು, ಅಭಿವೃದ್ಧಿ ಮತ್ತು ಭಾರತದ “ಎಲ್ಲರೊಂದಿಗೆ, ಎಲ್ಲರ ವಿಕಾಸ” ನೀತಿಯ ಉಪಕ್ರಮಗಳಿಗೆ ಪೂರಕವಾದ ಹೊಸ ಇಯು ಒಮ್ಮತದೊಂದಿಗೆ ಅದರ ಅನುಷ್ಠಾನಕ್ಕೆ ಜಂಟಿ ಬದ್ಧತೆ, ಮತ್ತು ಸಮರ್ಥನೀಯ ಅಭಿವೃದ್ಧಿ ಗುರಿಗಳನ್ನು ಮತ್ತು ಬಡತನ ನಿರ್ಮೂಲನೆ ಗುರಿ ಸಾಧಿಸಲು ಜಾಗತಿಕ ಪಾಲುದಾರಿಕೆಯ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ ಸಮಾನ ಆದ್ಯತೆಯ ಮೇಲೆ ಸಹಯೋಗ ನೀಡುವ ಬದ್ಧತೆಯನ್ನು ಪುನರುಚ್ಚಿರಿಸಿದರು, ಮತ್ತು ಇಯು – ಭಾರತ ಅಭಿವೃದ್ಧಿ ಮಾತುಕತೆಯ ಮುಂದುವರಿಕೆಯಲ್ಲಿನ ಶೋಧಕ್ಕೆ ಎದಿರು ನೋಡುತ್ತಿರುವುದಾಗಿ ಹೇಳಿದರು. ವಿಪತ್ತು ಅಪಾಯ ತಗ್ಗಿಸುವ 2015-2030 ಸೆಂಡೈ ಚೌಕಟ್ಟಿನ್ನು ಪರಸ್ಪರ ಜಾರಿ ಮಾಡುವ ಅಗತ್ಯವನ್ನು ಎರಡೂ ಕಡೆಯವರು ಗುರುತಿಸಿದರು.ವಿಶ್ವಸಂಸ್ಥೆಯ ಶಾಂತಿಪಾಲನಾ ಅಭಿಯಾನದಲ್ಲಿ ಭಾಗಿಯಾಗುವುದೂ ಸೇರಿದಂತೆ ಆಫ್ರಿಕಾದಲ್ಲಿನ ಅಭಿವೃದ್ಧಿ ಮತ್ತು ಶಾಂತಿಗೆ ಭಾರತದ ಕೊಡುಗೆಯನ್ನು ಇಯು ಸ್ವಾಗತಿಸಿತು. ಇಯು ಮತ್ತು ಭಾರತ ತಮ್ಮ ತಮ್ಮ ಉಪಕ್ರಮಗಳ ನಡುವಿನ ಸಂಯುಕ್ತ ಪ್ರಯತ್ನವನ್ನು ಸರಳೀಕರಿಸುವ ದೃಷ್ಟಿಯೊಂದಿಗೆ ಆಫ್ರಿಕಾ ಕುರಿತಂತೆ ತಮ್ಮ ಸಹಕಾರ ಮತ್ತು ಸಮಾಲೋಚನೆ ಹೆಚ್ಚಿಸುವ ಬದ್ಧತೆಯನ್ನು ವ್ಯಕ್ತಪಡಿಸಿದರು. ಹೆಚ್ಚಿನ ವಾಣಿಜ್ಯ ಹಾಗೂ ಆರ್ಥಿಕ ಸಹಕಾರ; ಭಾರತದ ಆಧುನೀಕರಣದಲ್ಲಿ ಪ್ರಗತಿಯ ಪಾಲುದಾರರಾಗಿ ಮುಂದಿನ ಇಯು-ಆಫ್ರಿಕ ಒಕ್ಕೂಟದ ಶೃಂಗದಲ್ಲಿ ಭಾರತ ವೀಕ್ಷಕನಾಗಿ ಪಾಲ್ಗೊಳ್ಳುವುದನ್ನು ಎದಿರುನೋಡುತ್ತಿರುವುದಾಗಿ ಅವರು ತಿಳಿಸಿದರು.
30.ಇಯು ನಾಯಕರು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಉತ್ತೇಜಿಸುವ ಭಾರತದ ಪ್ರಯತ್ನವನ್ನು ಸ್ವಾಗತಿಸಿದರು ಮತ್ತು ಭಾರತದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ಮಾರ್ಟ್ ಇಂಡಿಯಾ, ಕ್ಲೀನ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಇಂಡಿಯಾದಲ್ಲಿ ಪಾಲ್ಗೊಳ್ಳುವ ಮುಂದುವರಿದ ಆಸಕ್ತಿಯನ್ನು ಇಯು ವ್ಯಕ್ತಪಡಿಸಿತು. ಸುಲಭವಾಗಿ ವಾಣಿಜ್ಯ ನಡೆಸುವುದಕ್ಕೆ ಅವಕಾಶ ಕಲ್ಪಿಸುವ ಮತ್ತು ಸರಳ, ಸಮರ್ಥ ಮತ್ತು ರಾಷ್ಟ್ರವ್ಯಾಪಿ ಪರೋಕ್ಷ ತೆರಿಗೆ ವ್ಯವಸ್ಥೆಯಾದಐತಿಹಾಸಿಕ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಸೇರಿದಂತೆ ಪ್ರಧಾನಮಂತ್ರಿ ಮೋದಿ ಅವರ ಆರ್ಥಿಕ ಸುಧಾರಣೆಗಳನ್ನು ಇಯು ಹತ್ತಿರದಿಂದ ಗಮನಿಸುತ್ತಿದೆ. ಇಯು ಕಂಪನಿಗಳು ಪ್ರಸಕ್ತ ಮಹತ್ವಾಕಾಂಕ್ಷೆಯ ಉಪಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಪ್ರಧಾನಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಭಾರತದ ಅಭಿವೃದ್ಧಿಯ ಆದ್ಯತೆಗಳಲ್ಲಿ ಅವುಗಳ ಆಳವಾದ ಕಾರ್ಯಕ್ರಮಕ್ಕೆ ಕರೆ ನೀಡಿದರು. ಇಯು ಕಡೆಯವರು ಐರೋಪ್ಯ ಉದ್ಯಮ ಜಾಲದಲ್ಲಿ ಭಾರತೀಯ ವಾಣಿಜ್ಯ ಸಂಘಟನೆಗಳ ಹೆಚ್ಚಿನ ಪಾಲುದಾರಿಕೆಯನ್ನು ಪ್ರೋತ್ಸಾಹಿಸಿದರು. ಸಂಪನ್ಮೂಲ ಕ್ಷಮತೆ ಮತ್ತು ವರ್ತುಲ ಆರ್ಥಿಕತೆ ಕುರಿತ ಇಯು-ಇಂಡಿಯಾ ಸಹಕಾರದಲ್ಲಿ ಆಗಿರುವ ಪ್ರಗತಿಯನ್ನು ನಾಯಕರು ಗುರುತಿಸಿದರು. ಎರಡೂ ಕಡೆಯವರು ಭೌದ್ಧಿಕ ಆಸ್ತಿಗಳ ಹಕ್ಕು (ಐಪಿಆರ್) ಮತ್ತು ಸಾರ್ವಜನಿಕ ದಾಸ್ತಾನಿನ ಕ್ಷೇತ್ರದಲ್ಲಿನ ಉತ್ತಮ ರೂಢಿಗಳು ಮತ್ತು ಅನುಭವನನ್ನು ಹಂಚಿಕೊಳ್ಳಲು ಮತ್ತು ಸಹಕಾರ ಹೆಚ್ಚಿಸಲು ಸಮ್ಮತಿಸಿದರು.
31. ಭಾರತ ಮತ್ತು ಇಯು ನಡುವೆ ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸುವ ಹಂಚಿಕೆಯ ಬದ್ಧತೆಯನ್ನು ನಾಯಕರು ವ್ಯಕ್ತಪಡಿಸಿದರು ಮತ್ತು ಸಮಗ್ರ ಮತ್ತು ಪರಸ್ಪರ ಉಪಯುಕ್ತವಾದ ವಿಸ್ತೃತ ಆಧಾರದ ವಾಣಿಜ್ಯ ಮತ್ತು ಹೂಡಿಕೆ ಒಪ್ಪಂದ (ಬಿಟಿಐಎ)ಕ್ಕಾಗಿ ಮಾತುಕತೆಗಳನ್ನು ಪುನರಾವರ್ತಿಸಲು ಸಕ್ರಿಯವಾಗಿ ಮತ್ತೆ ತೊಡಗಿಸಿಕೊಳ್ಳಲು ಎರಡೂ ಕಡೆಗಳಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ಭಾರತ-ಇಯು ಗಮನಿಸಿದವು.
32. ಸಾಮಾನ್ಯವಾಗಿ ಕೃಷಿ ಉತ್ಪನ್ನಗಳಲ್ಲಿನ ಅದರಲ್ಲೂ ನಿರ್ದಿಷ್ಟವಾಗಿ ಅಕ್ಕಿಯ ವ್ಯಾಪಾರದ ಪ್ರಾಮುಖ್ಯತೆಯನ್ನು ಎರಡೂ ಕಡೆಯವರು ಗುರುತಿಸಿ, ವ್ಯಾಪಾರಕ್ಕೆ ಅಡ್ಡಿಯಾಗುವ ಸಂಭಾವ್ಯ ಸಮಸ್ಯೆಗಳನ್ನು ಪರಿಹರಿಸಲು ಒಟ್ಟಾಗಿ ಶ್ರಮಿಸಲು ಸಮ್ಮತಿಸಿದರು. ಟ್ರೈ ಸೈಕ್ಲಜೋಲ್ ಅಕ್ಕಿಯ ಆಮದಿನ ಸಹಿಷ್ಣುತೆಗೆ ಸಂಬಂಧಿಸಿದಂತೆ (ಆಯೋಗದ ನಿಯಂತ್ರಣ (ಇಯು) (EU) 2017 / 983) ಸೂಕ್ತ ಸಸಿಯ ಸಂರಕ್ಷಣೆಗಾಗಿ ಐರೋಪ್ಯ ಆಹಾರ ಸುರಕ್ಷತೆ ಪ್ರಾಧಿಕಾರವು ವಿಳಂಬವಿಲ್ಲದೆ ಹೆಚ್ಚುವರಿ ಅಪಾಯದ ನಿರ್ಧರಣೆ ಕೈಗೊಳ್ಳುವ ಸಲುವಾಗಿ ಕಂಪನಿಗಳಿಗೆ ಹೊಸ ವೈಜ್ಞಾನಿಕ ದತ್ತಾಂಶ ಪ್ರಸ್ತುತಪಡಿಸಲು ಆಹ್ವಾನಿಸಲಾಗಿದೆ. ಈ ಆಧಾರದ ಮೇಲೆ ಐರೋಪ್ಯ ಆಯೋಗವು ಮೇಲೆ ಹೇಳಲಾದ ನಿಯಂತ್ರಣವನ್ನು ತುರ್ತಾಗಿ ಪರಿಗಣಿಸಬೇಕೆ ಎಂಬುದನ್ನು ಪರಾಮರ್ಶಿಸಲಿದೆ. ಎರಡೂ ಕಡೆಯವರು, ದತ್ತಾಂಶ ಸಂಗ್ರಹಣೆ, ಅಪಾಯ ನಿರ್ಧರಣೆ ಮತ್ತು ಅಪಾಯ ಸಂವಹನದಲ್ಲಿನ ಜ್ಞಾನ ಮತ್ತು ತಜ್ಞತೆ ವಿನಿಮಯಕ್ಕಾಗಿ ಐರೋಪ್ಯ ಆಹಾರ ಸುರಕ್ಷತೆ ಪ್ರಾಧಿಕಾರ (ಎಫ್ಎಸ್ಎ) ಮತ್ತು ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್.ಎಸ್.ಎಸ್.ಎ.ಐ) ನಡುವಿನ ಸಹಕಾರವನ್ನು ಶೀಘ್ರ ಸಾಂಸ್ಥೀಕರಿಸಲು ಬೆಂಬಲ ಸೂಚಿಸಿದವು. ಭಾರತ ಮತ್ತು ಇಯು ಆಹಾರ ಭದ್ರತೆಯಲ್ಲಿ ಇನ್ನೂ ಹೆಚ್ಚಿನ ಸಹಕಾರವರ್ಧನೆಗೆ ಒಪ್ಪಿಗೆ ಸೂಚಿಸಿದವು ಅವುಗಳಲ್ಲಿ ಉಲ್ಲೇಖಾರ್ಹವಾದವು:
a. ಹಾಲಿ ಇರುವ ಮಾತುಕತೆಗಳು ಅಂದರೆ ಆಹಾರ ಸುರಕ್ಷತೆ ಮತ್ತು ಸೂಕ್ತವಾದ ಭಾರತೀಯ ಸಚಿವಾಲಯಗಳು/ಇಲಾಖೆಗಳು ಮತ್ತು ಸೂಕ್ತ ಐರೋಪ್ಯ ಆಯೋಗದ ಸೇವೆಗಳ ನಡುವೆ ಕೃಷಿ ವ್ಯಾಪಾರ ಸಂಬಂಧಿತ ವಿಷಯಗಳ ಚರ್ಚೆಗೆ ಕೃಷಿ ಮತ್ತು ಸಾಗರ ಕಾರ್ಯ ಗುಂಪು, ಎಸ್.ಪಿ.ಎಸ್. –ಟಿಬಿಟಿ ಕಾರ್ಯ ಗುಂಪುಗಳ ನಡುವೆ ಮಾತುಕತೆ ಬಲಪಡಿಸಲು.
b. ಉತ್ತಮ ಕೃಷಿ ಅಭ್ಯಾಸಗಳು, ಶೋಧನಾ ಸಾಮರ್ಥ್ಯಗಳ ಅಭಿವೃದ್ಧಿ ಮತ್ತು ಪ್ರಯೋಗಾಲಯ ಚಟುವಟಿಕೆಗಳಲ್ಲಿ ಸಹಕಾರ, ಪರೀಕ್ಷೆ ಮತ್ತು ಮೇಲ್ವಿಚಾರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಂಟಿ ಯೋಜನೆಗಳನ್ನು ಪ್ರಾರಂಭಿಸುವುದು.
c. ಭೌಗೋಳಿಕ ಸಂಕೆತವಾದ ಬಾಸ್ಮಾತಿಯ ರಕ್ಷಣೆಗೆ ಮತ್ತು ಅಂಥ ಯಾವುದೇ ಪ್ರಕ್ರಿಯೆಗೆ ಭವಿಷ್ಯದ ಆನ್ವಯಿಕಗಳಿಗೆ, ಎಷ್ಟು ಸಾಧ್ಯವೋ ಅಷ್ಟು ಬೇಗ ಭಾರತ ಮುಂದಾದಾಗ ಇಯು ಅದನ್ನು ಸ್ವಾಗತಿಸುತ್ತದೆ.
d. ಜಿಎಟಿಟಿಎಸ್ 1994 ವಿಧಿ 28ರ ಅಡಿಯಲ್ಲಿ ಭಾರತ ಈಗಾಗಲೇ ಮಾಡಿರುವ ಮನ ವಿಯಂತೆ ಸುಂಕ ವಿನಾಯಿತಿಗಾಗಿ, ಬಾಸ್ಮತಿ ಅಕ್ಕಿಯ ಹೆಚ್ಚುವರಿ ತಳಿಗಳ ವಿಧಗಳ ಗುರುತಿಸುವಿಕೆ ಪ್ರಕ್ರಿಯೆಯನ್ನು ತ್ವರಿತವಾಗಿ ಆರಂಭಿಸುವ ಇಯು ಇರಾದೆಯನ್ನು ಭಾರತ ಸ್ವಾಗತಿಸಿತು.
33. ಇಯು ಹೂಡಿಕೆಗಾಗಿ ಭಾರತದಲ್ಲಿ ವ್ಯಾಪಾರದ ವಾತಾವರಣವನ್ನು ಸುಧಾರಿಸುವ ಸಾಧನವಾಗಿ ಭಾರತದಲ್ಲಿ ಇಯು ಹೂಡಿಕೆಯ ಅವಕಾಶದ ವ್ಯವಸ್ಥೆಯನ್ನು ರೂಪಿಸುವುದನ್ನು ನಾಯಕರು ಸ್ವಾಗತಿಸಿದರು ಮತ್ತು ಐಎಫ್ಎಂ ಇಯುನಿಂದ ಭಾರತಕ್ಕೆ ಉತ್ತಮ ರೂಢಿಗಳು ಮತ್ತು ನವೀನ ತಂತ್ರಜ್ಞಾನ ಹಂಚಿಕೊಳ್ಳಲು ನೆರವಾಗುತ್ತದೆ ಎಂದು ಆಶಿಸಿದರು. ಮೇಕ್ ಇನ್ ಇಂಡಿಯಾ ಉಪಕ್ರಮವು ಇಯು ಸದಸ್ಯ ರಾಷ್ಟ್ರಗಳ ಕಂಪನಿಗಳಿಗೆ ಹೂಡಿಕೆಯ ಅವಕಾಶಕ್ಕಾಗಿ ಆಹ್ವಾನಿಸುತ್ತದೆ ಎಂಬುದನ್ನು ನಾಯಕರು ಗುರುತಿಸಿದರು.
34.ಐರೋಪ್ಯ ಹೂಡಿಕೆ ಬ್ಯಾಂಕ್ (ಇಐಬಿ)ಯ ದಕ್ಷಿಣ ಏಷ್ಯಾ ಪ್ರಾದೇಶಿಕ ಪ್ರತಿನಿಧಿ ಕಚೇರಿಯನ್ನು ಭಾರತದಲ್ಲಿ ಸ್ಥಾಪಿಸುವುದನ್ನು ನಾಯಕರು ಸ್ವಾಗತಿಸಿದರು ಮತ್ತು ಅದರ ಹೂಡಿಕೆಗಳು, ವಿಶೇಷವಾಗಿ ನಗರ ಚಲನಶೀಲತೆ ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳಲ್ಲಿ, ಹವಾಮಾನ-ಕಾರ್ಯಕ್ರಮಪಟ್ಟಿಯಲ್ಲಿ ಭಾರತ-ಇಯು ಸಹಭಾಗಿತ್ವವನ್ನು ಬೆಂಬಲಿಸುತ್ತದೆ ಎಂಬುದನ್ನು ಗುರುತಿಸಿದರು. ಬೆಂಗಳೂರು ಮೆಟ್ರೋ 2ನೇ ಹಂತದ ಯೋಜನೆಗೆ ಹೊಸ 500 ದಶಲಕ್ಷ ಯೂರೋಗಳ ಇಐಬಿ ಸಾಲದ ಒಪ್ಪಂದವನ್ನು ನಾಯಕರು ಸ್ವಾಗತಿಸಿದರು, ಇದು 2017ರಲ್ಲಿ ಇಐಬಿ ಭಾರತಕ್ಕೆ ಒದಗಿಸಲು ಸಮ್ಮತಿಸಿದ್ದ 1.4ಶತಕೋಟಿ ಯುರೋ ಸಾಲದ ಹೆಚ್ಚುವರಿ ಬದ್ಧತೆಯಾಗಿದೆ.
35.ಐಎಸ್.ಎ.ಯ 121 ಸಂಭವನೀಯ ಸದಸ್ಯ ರಾಷ್ಟ್ರಗಳಾದ್ಯಂತ ಕೈಗೆಟಕುವ ದರದಲ್ಲಿ ಸೌರ ಇಂಧನ ಆನ್ವಯಿಕಗಳ ವಿಸ್ತೃತ ಆಧಾರದ ನಿಯುಕ್ತಿಗಾಗಿ ಹೂಡಿಕೆ ಕ್ರೋಡೀಕರಿಸುವ ಗುರಿಯೊಂದಿಗೆ ಅಂತಾರಾಷ್ಟ್ರೀಯ ಸೌರ ಸಹಯೋಗದ ಮಧ್ಯಂತರ ಸಚಿವಾಲಯ ಮತ್ತು ಐರೋಪ್ಯ ಹೂಡಿಕೆ ಬ್ಯಾಂಕ್ (ಇಐಬಿ) ನಡುವೆ ನಡೆಯುತ್ತಿರುವ ಧನಾತ್ಮಕ ಚರ್ಚೆ ಮತ್ತು ಜಂಟಿ ಘೋಷಣೆಗಳ ವಿನಿಮಯವನ್ನು ನಾಯಕರು ಗುರುತಿಸಿದರು.
36. ಎರಡೂ ಕಡೆಯವರು, ಶುದ್ಧ ಇಂಧನ ಮತ್ತು ಹವಾಮಾನ ಬದಲಾವಣೆ ಕುರಿತ ಜಂಟಿ ಹೇಳಿಕೆಯನ್ನು ಅಳವಡಿಸಿಕೊಂಡರು ಮತ್ತು 2015ರ ಪ್ಯಾರಿಸ್ ಒಪ್ಪಂದದ ಬದ್ಧತೆಯನ್ನು ಪುನರುಚ್ಚರಿಸಿದರು ಮತ್ತು ಅದರ ಜಾರಿಗೆ ಹೆಚ್ಚಿನ ಸಹಕಾರ ನೀಡಲು ಸಮ್ಮತಿಸಿದರು. ಹವಾಮಾನ ಬದಲಾವಣೆ ಸವಾಲು ಎದುರಿಸಲು ಮತ್ತು ಸುರಕ್ಷಿತ, ಕೈಗೆಟಕುವ ಮತ್ತು ಸುಸ್ಥಿರ ಇಂಧನ ಪೂರೈಕೆಯ ಉತ್ತೇಜನ ಪ್ರಮುಖ ಹಂಚಿಕೆಯ ಆದ್ಯತೆ ಎಂಬುದನ್ನು ಭಾರತ ಮತ್ತು ಇಯು ಗುರುತಿಸಿದವು ಮತ್ತು 2016ರ ಇಯು – ಭಾರತ ಶೃಂಗದಲ್ಲಿ ಅಳವಡಿಸಿಕೊಂಡ ಶುದ್ಧ ಇಂಧನ ಮತ್ತು ಹವಾಮಾನ ಪಾಲುದಾರಿಕೆಯಲ್ಲಿನ ಪ್ರಗತಿಯನ್ನು ಸ್ವಾಗತಿಸಿದರು ಮತ್ತು 2016 ರ ಅಕ್ಟೋಬರ್ ನಲ್ಲಿ ಇಯು-ಇಂಡಿಯಾ ಇಂಧನ ಸಮಿತಿ ಸಭೆಯಲ್ಲಿ ಕಾರ್ಯ ಕಾರ್ಯಕ್ರಮಕ್ಕೆ ಅನುಗುಣವಾಗಿ ಅದರ ಜಾರಿ ಹಾಗೂ ಹೆಚ್ಚಿನ ಅಭಿವೃದ್ಧಿಯ ಬದ್ಧತೆಯನ್ನು ಪುನರುಚ್ಚರಿಸಿದರು.
37.ತಂತ್ರಜ್ಞಾನದ ನಾವೀನ್ಯತೆ, ಜ್ಞಾನ ಹಂಚಿಕೆ, ಸಾಮರ್ಥ್ಯ ನಿರ್ಮಾಣ, ವ್ಯಾಪಾರ ಮತ್ತು ಹೂಡಿಕೆ, ಮತ್ತು ಯೋಜನೆಯ ಸ್ಥಾಪನೆಯ ಮೂಲಕ ನವೀಕರಿಸಬಹುದಾದ ಇಂಧನ ಯೋಜನೆಗಳ ಅಭಿವೃದ್ಧಿ ಮತ್ತು ನಿಯೋಜನೆಯ ವೆಚ್ಚವನ್ನು ತಗ್ಗಿಸಲು ಪರಸ್ಪರ ಸಹಕಾರವನ್ನು ಕೈಗೊಳ್ಳಲು ತಮ್ಮ ಬದ್ಧತೆಯನ್ನು ಭಾರತ ಮತ್ತು ಇಯು ಪುನರುಚ್ಚರಿಸಿದವು.
38. ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸಂರಕ್ಷಣೆಯ ಹೊಂದಾಣಿಕೆಯ ಮಹತ್ವವನ್ನು ನಾಯಕರು ಪುನರುಚ್ಚರಿಸಿದರು. ಪ್ರಾಥಮಿಕ ಸಂಪನ್ಮೂಲ ಬಳಕೆ ತಗ್ಗಿಸುವ ಮತ್ತು ಮಾಧ್ಯಮಿಕ ಕಚ್ಚಾ ಸಾಮಗ್ರಿಗಳ ಬಳಕೆಯನ್ನು ಹೆಚ್ಚಿಸುವ ವರ್ತುಲ ಆರ್ಥಿಕ ಮಾದರಿಯ ಕಡೆಗೆ ಸಾಗುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಮಹತ್ವದ ಆರ್ಥಿಕ ಪರಿವರ್ತನೆಯ ಅಭಿವೃದ್ಧಿ ಕಾರ್ಯತಂತ್ರಗಳಿಗೆ ಅಂತಾರಾಷ್ಟ್ರೀಯ ಸಂಪನ್ಮೂಲ ಸಮಿತಿ, ಭಾರತೀಯ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, (ಭಾರತೀಯ ಸಂಪನ್ಮೂಲ ಸಮಿತಿಯ ಮೂಲಕ) ಮತ್ತು ನೀತಿಆಯೋಗದ ಕೊಡುಗೆಯನ್ನು ಅವರು ಸ್ವಾಗತಿಸಿದರು. ಜಾಗತಿಕ ಮಟ್ಟದಲ್ಲಿ ಜ್ಞಾನ ವಿನಿಮಯ ಮತ್ತು ಸಂಪನ್ಮೂಲ ಕ್ಷಮತೆ ಉತ್ತೇಜಿಸಲು ಹೊಸದಾಗಿ ಸ್ಥಾಪಿಸಲಾಗಿರುವ ಜಿ 20 ಸಂಪನ್ಮೂಲ ಕ್ಷಮತೆ ಮಾತುಕತೆಯು ಒಂದು ಮಾದರಿ ವೇದಿಕೆ ಎಂಬುದನ್ನು ಎರಡೂ ಕಡೆಯವರು ಒಪ್ಪಿಕೊಂಡರು.
39. ಜಲ ನಿರ್ವಹಣೆ ಮತ್ತು ವಾಯು ಮಾಲಿನ್ಯ ಸೇರಿದಂತೆ ಪರಿಸರದ ಸವಾಲುಗಳನ್ನು ಎದುರಿಸುವ ಸಹಕಾರವನ್ನು ಇನ್ನೂ ತೀವ್ರಗೊಳಿಸಲು ನಾಯಕರು ಸಮ್ಮತಿಸಿದರು, ಒಪ್ಪಿತ ಕ್ರಿಯಾ ಯೋಜನೆ, ನಾವಿನ್ಯತೆ ಮತ್ತು ಸಂಶೋಧನೆಯ ಅವಕಾಶಗಳ ಹೆಚ್ಚಿನ ಸಹಕಾರದಲ್ಲಿ ಭಾರತ-ಇಯು ಜಲ ಪಾಲುದಾರಿಕೆಯಲ್ಲಿನ ಪ್ರಗತಿಯನ್ನು ಅಂಗೀಕರಿಸಿದರು, ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಭಾರತ –ಇಯು ಜಲ ವೇದಿಕೆ 3ನೇ ಸಭೆ ಎದಿರುನೋಡುತ್ತಿರುವುದಾಗಿ ತಿಳಿಸಿದರು.
40.ಐರೋಪ್ಯ ಮತ್ತು ಭಾರತೀಯ ಕೈಗಾರಿಕೆಗಳು ಮತ್ತು ನವೋದ್ಯಮಗಳ ಪರಿಸರ ವ್ಯವಸ್ಥೆಯಲ್ಲಿಕಾರ್ಯ ಸಹಕಾರ ಬಲವರ್ಧನೆಗಾಗಿ ನಾವಿನ್ಯತೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸಲು ನಾಯಕರು ಒಪ್ಪಿಕೊಂಡರು.
41. ಭಾರತೀಯ ಮತ್ತು ಐರೋಪ್ಯ ದೂರಸಂಪರ್ಕ ಗುಣಮಟ್ಟೀಕರಣ ಕಾಯಗಳ (ಟಿಎಸ್.ಡಿ.ಎಸ್.ಐ ಮತ್ತು ಇಟಿಎಸ್ಐ) ನಡುವೆ ಇಯು ಬೆಂಬಲಿತ ತಾಂತ್ರಿಕ ಸಹಕಾರ ಹೆಚ್ಚಳವನ್ನು ನಾಯಕರು ಸ್ವಾಗತಿಸಿದರು, ಮತ್ತು ಭವಿಷ್ಯದ ಜಾಗತಿಕ ಗುಣಮಟ್ಟವಾದ 5ಜಿ, ಇಂಟಲಿಜೆಂಟ್ ಸಾರಿಗೆ ವ್ಯವಸ್ಥೆ, ಇಂಟರ್ ನೆಟ್ ಆಫ್ ತಿಂಗ್ಸ್, ಭವಿಷ್ಯದ ಜಾಲ ಮತ್ತು ಟೆಲಿಕಾಂ ಭದ್ರತೆಗೆ ಗಮನ ಹರಿಸುವದನ್ನು ಸ್ವಾಗತಿಸಿದರು. ಎರಡೂ ಕಡೆಯವರು ಈ ಸಹಕಾರ ವಿಸ್ತರಿಸಲು, ಸಮಗ್ರ ತಾಂತ್ರಿಕ ಪರಿಹಾರ ಒದಗಿಸಲು, ಮತ್ತು ಡಿಜಿಟಲ್ ಇಂಡಿಯಾ ಮತ್ತು ಯುರೋಪ್ ಗಾಗಿ ಡಿಜಿಟಲ್ ಏಕ ಮಾರುಕಟ್ಟೆ ಬಲಪಡಿಸುವ ಸಂಪರ್ಕ ಬಲಪಡಿಸಲು ಬಾಧ್ಯಸ್ಥರಿಗೆ ಉತ್ತೇಜಿಸಿದರು.
42.ಅಂತರ್ಜಾಲ ಆಡಳಿತ ಕುರಿತ ಧನಾತ್ಮಕ ವಿನಿಮಯವನ್ನು, ಎರಡೂ ಕಡೆಯ ಐಸಿಟಿ ಕಂಪನಿಗಳಿಗೆ ಸುಲಭವಾಗಿ ವಾಣಿಜ್ಯ ಹೆಚ್ಚಿಸಲು, ಭಾರತ ಮತ್ತು ಐರೋಪ್ಯ ನವೋದ್ಯಮ ಪರಿಸರವನ್ನು ನವೋದ್ಯಮ ಯುರೋಪ್ ಇಂಡಿಯಾ ಜಾಲದಲ್ಲಿ ತರವುದನ್ನು” ಎರಡೂ ಕಡೆಯವರು ಗುರುತಿಸಿದರು.
43.ನಿಯಂತ್ರಣ ವ್ಯವಸ್ಥೆಯ ಸಾಮರ್ಥ್ಯ ವರ್ಧನೆಗೆ ಗಮನ ಹರಿಸಿ ಹೆಚ್ಚು ವಿನ್ಯಾಸಿತ ಮತ್ತು ಸ್ಥಿರ ತರಬೇತಿ ಪರಿಸರ ರೂಪಿಸುವುದೂ ಸೇರಿದಂತೆ ಔಷಧ ಕ್ಷೇತ್ರದಲ್ಲಿ ಸಹಕಾರ ಹೆಚ್ಚಳದ ಆಸಕ್ತಿಯನ್ನು ಎರಡೂ ಕಡೆಯವರು ದೃಢಪಡಿಸಿದರು. ಭಾರತದ ಕಡೆಯವರು ಸಂಪೂರ್ಣ ಔಷಧ ಮೌಲ್ಯ ಸರಣಿಯ ಸಾಮರ್ಥ್ಯ ವರ್ಧನೆ ಸಹಕಾರದ ಆಸಕ್ತಿಯನ್ನು ಒತ್ತಿ ಹೇಳಿದರು.
44. ಸಾರಿಗೆ ಮತ್ತು ನೈರ್ಮಲ್ಯಕ್ಕಾಗಿ ನಗರ ಮೂಲಸೌಕರ್ಯವನ್ನು ನವೀಕರಿಸುವುದು, ಭಾರತದಲ್ಲಿನ ಸ್ಮಾರ್ಟ್ ನಗರಗಳನ್ನು ಅಭಿವೃದ್ಧಿಪಡಿಸುವುದು ಮುಂತಾದ ಆದ್ಯತೆಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಹಕಾರವನ್ನು ಕೈಗೆತ್ತಿಕೊಳ್ಳುವ ದೃಷ್ಟಿಯಿಂದ ಭಾರತ-ಇಯು ಜಂಟಿ ಹೇಳಿಕೆಯನ್ನು ಸ್ಮಾರ್ಟ್ ಮತ್ತು ಸುಸ್ಥಿರ ನಗರೀಕರಣದ ಪಾಲುದಾರಿಕೆಯನ್ನು ನಾಯಕರು ಅಳವಡಿಸಿಕೊಳ್ಳಲು, ಜೊತೆಗೆ 2016 ರಲ್ಲಿ ಅಳವಡಿಸಿಕೊಂಡ ವಿಶ್ವಸಂಸ್ಥೆಯ ಹೊಸ ನಗರ ಕಾರ್ಯಕ್ರಮವನ್ನು ಉತ್ತೇಜಿಸಲು ಒಪ್ಪಿದರು.
45.ವಿಜ್ಞಾನ ಮತ್ತು ತಂತ್ರಜ್ಞಾನದ ಮುಂಚೂಣಿ ಕ್ಷೇತ್ರದಲ್ಲಿ ಮತ್ತು ಆರೋಗ್ಯ, ಜಲ ಮತ್ತು ಶುದ್ಧ ಇಂಧನ ಕ್ಷೇತ್ರದ ಜಾಗತಿಕ ಸವಾಲುಗಳನ್ನು ಎದುರಿಸಲು ನವೀಕೃತ ಭಾರತ –ಇಯು ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರ ಒಪ್ಪಂದದ ಅಡಿಯಲ್ಲಿ ಸಹಕಾರ ವರ್ಧಿಸಲು ನಾಯಕರು ಸಮ್ಮತಿಸಿದರು. ಜಲ ಸಂಪನ್ಮೂಲಗಳ ಮೇಲೆ ಹೆಚ್ಚಿನ ಒತ್ತಡವನ್ನು ನಿಭಾಯಿಸಲು ತಾಂತ್ರಿಕ ಮತ್ತು ವೈಜ್ಞಾನಿಕ ಜ್ಞಾನ ಮತ್ತು ನಿರ್ವಹಣೆ ಸಾಮರ್ಥ್ಯಕ್ಕೆ ಸಹಕರಿಸಲು, ಜಲ-ಸಂಬಂಧಿತ ಸವಾಲುಗಳ 30 ದಶಲಕ್ಷ ಯುರೋನ ಪ್ರಮುಖ ಜಂಟಿ ಮಹತ್ವಾಕಾಂಕ್ಷೆಯ ಉಪಕ್ರಮವನ್ನು ಪ್ರಾರಂಭಿಸುವ ಒಪ್ಪಂದವನ್ನು ಸ್ವಾಗತಿಸಿದರು. ಇಯುನ ಹೊರೈಜಾನ್ 2020 ಮತ್ತು ಭಾರತೀಯ ಕಾರ್ಯಕ್ರಮಗಳಲ್ಲಿ ನಾವಿನ್ಯ ಮತ್ತು ಸಂಶೋಧನೆ ಕಾರ್ಯಕ್ರಮ ಚೌಕಟ್ಟಿನ ಪರಸ್ಪರ ಆರಂಭದೆಡೆಗಿನ ಕಾರ್ಯಕ್ಕೆ ಎರಡೂ ಕಡೆಯವರು ಸಮ್ಮತಿಸಿದರು ಮತ್ತು ಸಂಶೋಧಕರಿಗೆ ದ್ವಿಪ್ಥ ಸಂಚಾರ ಹೆಚ್ಚಿಸಲು ಕರೆ ನೀಡಿದರು. ಈ ಹಂತದಲ್ಲಿ, ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ (ಎಸ್ಇಆರ್.ಬಿ) ಮತ್ತು ಯುರೋಪಿಯನ್ ಸಂಶೋಧನಾ ಮಂಡಳಿ (ಇಆರ್.ಸಿ.) ನಡುವಿನ ಅನುಷ್ಠಾನದ ಒಪ್ಪಂದದ ಆಖೈರು ತೀರ್ಮಾನವನ್ನು ಎರಡು ಕಡೆಯವರು ಸ್ವಾಗತಿಸಿದರು.
46.ಪರಮಾಣು ಇಂಧನದ ಶಾಂತಿಯುತ ಬಳಕೆಯ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿಯ ಸಹಕಾರ ಒಪ್ಪಂದವನ್ನು ಆಖೈರುಗೊಳಿಸಲು ಯೂರೋಟಮ್ ಮತ್ತು ಪರಮಾಣು ಇಂಧನ ಇಲಾಖೆಗೆ ನಾಯಕರು ಉತ್ತೇಜನ ನೀಡಿದರು. ಈ ಸಹಕಾರವು ಪರಮಾಣು ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು ಕೊಡುಗೆ ನೀಡುತ್ತದೆ ಮತ್ತು ಇದು ಪರಸ್ಪರ ಉಪಯುಕ್ತವಾಗಿದೆ ಎಂಬುದನ್ನು ಅವರು ಒತ್ತಿ ಹೇಳಿದರು. ಈ ಸಹಕಾರವು ಸಮಾಜದ ಲಾಭಕ್ಕಾಗಿ ಕೌಶಲ ಸುಧಾರಣೆಗೆ ಮತ್ತು ಜಲ, ಆರೋಗ್ಯ ರಕ್ಷಣೆ ಮತ್ತು ವೈದ್ಯ, ಪರಿಸರ ಇತ್ಯಾದಿ ಕ್ಷೇತ್ರದಲ್ಲಿ ಇಂಧನ ರಹಿತ ತಂತ್ರಜ್ಞಾನ ನಿಯೋಜನೆಗೆ ಮತ್ತು ಕೌಶಲ ಸುಧಾರಣೆಗೆ ಇಂಬು ನೀಡುತ್ತದೆ ಎಂದರು.
47.ಸಮ್ಮಿಲಿತ ಇಂಧನ ಸಂಶೋಧನೆ ಕುರಿತಂತೆ ಯುರೋಟಮ್ – ಭಾರತ ಸಹಕಾರ ಒಪ್ಪಂದ ಸೇರಿದಂತೆ ತಾವು ಪಕ್ಷಕಾರರಾಗಿರುವ ಒಪ್ಪಂದಗಳಲ್ಲಿ ಸಮ್ಮಿಲಿತ ಇಂಧನ ಅಭಿವೃದ್ಧಿಯಲ್ಲಿ ಬಲವಾದ ಪಾಲುದಾರಿಕೆ ಮುಂದುವರಿಸಲು ಇಬ್ಬರೂ ಸಮ್ಮತಿಸಿದರು.
48.ಭಾರತ ಮತ್ತು ಯುರೋಪ್ ನಡುವಿನ ವಾಯು ಸಂಪರ್ಕವನ್ನು ಹೆಚ್ಚಿಸುವ ಮತ್ತು ಹೆಚ್ಚಿನ ಜನ ಸಂಪರ್ಕ, ವ್ಯಾಪಾರಾರ್ಥ ಪ್ರಯಾಣ ಮತ್ತು ಪ್ರವಾಸೋದ್ಯಮದ ಹೆಚ್ಚಳಕ್ಕೆ ಸಹಾಯ ಮಾಡುವ 2008ರ ಹಾರಿಜಾಂಟಲ್ ನಾಗರಿಕ ವಾಯುಯಾನ ಒಪ್ಪಂದದ ಕಾರ್ಯಾಚರಣೆ ಸನ್ನಿಹಿತವಾಗಿರುವುದನ್ನು ನಾಯಕರು ಸ್ವಾಗತಿಸಿದರು. ಸಾರಿಗೆಯ ಎಲ್ಲಾ ವಿಧಾನಗಳಲ್ಲೂ, ವಿಶೇಷವಾಗಿ ಕಡಲ, ವಾಯುಯಾನ, ನಗರ ಚಲನಶೀಲತೆ ಮತ್ತು ರೈಲು ಸೇರಿದಂತೆ ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಸಾರಿಗೆ ಸಹಕಾರವನ್ನು ಆಳಗೊಳಿಸುವ ಅವಕಾಶವನ್ನು ನಾಯಕರು ಪರಿಗಣಿಸಿದರು.
49. ಭಾರತ ಮತ್ತು ಇಯು ಎರಡೂ ಕೌಶಲ ಅಭಿವೃದ್ಧಿ ಸಹಕಾರ ತೀವ್ರಗೊಳಿಸಲು ಸಮ್ಮತಿಸಿದವು ಮತ್ತು ಭಾರತದ ಸ್ಕಿಲ್ ಇಂಡಿಯಾ ಉಪಕ್ರಮ ಮತ್ತು ಇಯುನ ಹೊಸ ಕೌಶಲಗಳ ಕಾರ್ಯಕ್ರಮಗಳ ನಡುವಿನ ಪೂರಕತೆಯನ್ನು ಮತ್ತು ಸಮಾನತೆಗಳನ್ನು ಕಂಡುಹಿಡಿಯಲು ಒಪ್ಪಿಕೊಂಡವು.
50. ಭಾರತ ಜಿ.ಐ.ಎ.ಎನ್. ಕಾರ್ಯಕ್ರಮ ಮತ್ತು ಇಯುನ ಎರಾಸ್ಮಸ್ + ಪ್ರೋಗ್ರಾಮ್ ಸೇರಿದಂತೆ ಭಾರತ-ಇಯು 2020 ಕಾರ್ಯ ಕಾರ್ಯಕ್ರಮದ ಭಾಗವಾಗಿ, ಉನ್ನತ ಶಿಕ್ಷಣದ ಮೇಲಿನ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಅಗತ್ಯವನ್ನು ನಾಯಕರು ಒತ್ತಿ ಹೇಳಿದರು. ಎರಾಸ್ಮಸ್ + ಕಾರ್ಯಕ್ರಮವು ಈಗಷ್ಟೇ ತನ್ನ 5000ನೇ ಭಾರತೀಯ ಅಲ್ಯೂಮಿ ಆಚರಿಸಿದೆ ಮತ್ತು ಹಲವು ಭಾರತೀಯ ವಿಶ್ವವಿದ್ಯಾಲಯಗಳಿಗೆ ಜಂಟಿ ಸ್ನಾತಕೋತ್ತರ, ಅಲ್ಪಾವಧಿ ಸಂಚಲನ, ಸಾಮರ್ಥ್ಯ ವರ್ಧನೆ ಯೋಜನೆ ಮತ್ತು ಇಯು ಅಧ್ಯಯನಕ್ಕಾಗಿ ಜೀನ್ ಮಾನ್ನೆಟ್ ಕ್ರಮಕ್ಕಾಗಿ ಸಾಂಸ್ಥಿಕ ಸಹಕಾರ ಅವಕಾಶಗಳ ಹಣಕಾಸು ನೆರವು ನೀಡುವ ಬೇಡಿಕೆ ಇಟ್ಟಿದೆ. ಒಟ್ಟಾರೆಯಾಗಿ, ಭಾರತವು ಸೃಷ್ಟಿಯಾದ ನಂತರ ವಿಶ್ವದ ಎರಾಸ್ಮಸ್ ಚಲನಶೀಲತೆ ಕಾರ್ಯಗಳ ಪ್ರಥಮ ಫಲಾನುಭವಿಯಾಗಿದೆ ಎಂದು ನಾಯಕರು ಸ್ವಾಗತಿಸಿದರು.
51.2017ರ ಏಪ್ರಿಲ್ 4ರಂದು ಬ್ರುಸೆಲ್ಸ್ ನಲ್ಲಿ ನಡೆದ ವಲಸೆ ಮತ್ತು ಚಲನಶೀಲತೆ ಕುರಿತ ಉನ್ನತ ಮಟ್ಟದ ಮಾತುಕತೆಯನ್ನು ಎರಡೂ ಕಡೆಯವರು ಉಲ್ಲೇಖಿಸಿದರು. ಭಾರತ ಮತ್ತು ಇಯು ನಡುವೆ ವಲಸೆ ಮತ್ತು ಚಲನಶೀಲತೆಯನ್ನು ಉತ್ತಮವಾಗಿ ಸಂಘಟಿಸುವ ದೃಷ್ಟಿಯಿಂದ ತಾಂತ್ರಿಕ ಸಹಯೋಗ ಮತ್ತು ಪರಸ್ಪರ ಹಿತದ ಕ್ಷೇತ್ರಗಳಲ್ಲಿ ಯೋಜನೆ ಕೈಗೊಳ್ಳುವ ಮೂಲಕ ವಲಸೆ ಮತ್ತು ಚಲನಶೀಲತೆ ಕುರಿತ ಸಮಾನ ಕಾರ್ಯಕ್ರಮವನ್ನು ಮುಂದುವರಿಸುವ ಕುರಿತಂತೆ ಮೂಡಿದ ಒಮ್ಮತವನ್ನು ಅವರು ಸ್ವಾಗತಿಸಿದರು.
52.ಭಾರತ ಮತ್ತು ಇಯು ನಡುವೆ ಜನರಹೆಚ್ಚಿನ ವಿನಿಮಯ ತೀವ್ರಗೊಳಿಸಲು ಮತ್ತು ಪ್ರವಾಸಿಗಳ, ವಾಣಿಜ್ಯ ವ್ಯಕ್ತಿಗಳ, ವಿದ್ಯಾರ್ಥಿಗಳ ಮತ್ತು ಸಂಶೋಧಕರಓಡಾಟಕ್ಕೆ ಅವಕಾಶ ಕಲ್ಪಿಸಲು ನಾಯಕರು ಸಮ್ಮತಿ ಸೂಚಿಸಿದರು. ಇಯುಗೆ ಅತಿ ಅರ್ಹ ವೃತ್ತಿಪರರ ಓಡಾಟ ಹೆಚ್ಚಿಸುವ ಗುರಿಯನ್ನ ಹೊಂದಿರುವ ಇಯು ನೀಲಿ ಕಾರ್ಡ್ ಯೋಜನೆಯ ಹಾಲಿ ಪರಿಷ್ಕರಣೆಯನ್ನು ಭಾರತದ ಕಡೆಯವರು ಉಲ್ಲೇಖಿಸಿದರು.
53.ಯುರೋಪಿಯನ್ ಸಂಸತ್ತಿನಲ್ಲಿ ” ಭಾರತದೊಂದಿಗೆ ಇಯು ರಾಜಕೀಯ ಸಂಬಂಧ” ವರದಿಯನ್ನು ಅಳವಡಿಸಿಕೊಳ್ಳುವುದನ್ನು ನಾಯಕರು ಉಲ್ಲೇಖಿಸಿದರು ಮತ್ತು ಭಾರತೀಯ ಮತ್ತು ಯುರೋಪ್ ಸಂಸದೀಯ ನಿಯೋಗಗಳ ನಡುವಿನ ವಿನಿಮಯವನ್ನು ತೀವ್ರಗೊಳಿಸುವ ತಮ್ಮ ಶಿಫಾರಸುಗಳನ್ನು ಸ್ವಾಗತಿಸಿದರು. ಸಾಂಸ್ಕೃತಿಕ ಪ್ರತಿನಿಧಿಗಳು, ಚಿಂತಕ ಚಾವಡಿ ಸದಸ್ಯರು ಮತ್ತು ವಿದ್ವಾಂಸರ ಹೆಚ್ಚಿನ ವಿನಿಮಯವನ್ನು ಎದಿರು ನೋಡುತ್ತಿರುವುದಾಗಿಯೂ ನಾಯಕರು ತಿಳಿಸಿದರು.
****