ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ವೃತ್ತಿಪರ ತರಬೇತಿ ಮತ್ತು ಶಿಕ್ಷಣ ಕ್ಷೇತ್ರ (ವಿಇಟಿ)ದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಬೆಲಾರಸ್ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ. ಬೆಲಾರಸ್ ಅಧ್ಯಕ್ಷ ಘನತೆವೆತ್ತ ಶ್ರೀ ಅಲೆಕ್ಸಾಂಡರ್ ಲುಕಶೆಂಕೋ ಅವರು 2017ರ ಸೆಪ್ಟೆಂಬರ್ 12ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದ ವೇಳೆ ಈ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿತ್ತು.
ಇದೇ ಮೊದಲ ಬಾರಿಗೆ ಯುರೇಷಿಯಾ ರಾಷ್ಟ್ರವೊಂದರ ಜೊತೆ ವೃತ್ತಿಪರ ತರಬೇತಿ, ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಕ್ಷೇತ್ರದ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಬೆಲಾರಸ್ ದೊಡ್ಡ ಪ್ರಮಾಣದ ಕೈಗಾರಿಕೆಗಳನ್ನು ಹೊಂದಿದೆ, ಅದರಲ್ಲೂ ಉತ್ಪಾದನೆ ಮತ್ತು ಬೃಹತ್ ಕೈಗಾರಿಕೆಗಳು ಇಲ್ಲಿವೆ, ಅವು ಲಭ್ಯ ಕೌಶಲ ಮಾನವ ಸಂಪನ್ಮೂಲ ಮತ್ತು ಅದು ಹೆಚ್ಚು ಅಭಿವೃದ್ಧಿ ಹೊಂದಿದ ಕೌಶಲ್ಯ ತರಬೇತಿ ವ್ಯವಸ್ಥೆ ಒಳಗೊಂಡಿದೆ. ಅವರ ಕೌಶಲ ಪದ್ಧತಿಗಳ ಜ್ಞಾನದ ವರ್ಗಾವಣೆಯು ನಮ್ಮ ಮೇಕ್ ಇನ್ ಇಂಡಿಯಾ ಮತ್ತು ಕೌಶಲ ಭಾರತದಂಥ ಉಪಕ್ರಮಗಳಿಗೆ ತುಂಬಾ ಸಹಕಾರಿಯಾಗಲಿದೆ. ಈ ತಿಳಿವಳಿಕೆ ಒಪ್ಪಂದವು, ಮಾನವ ಸಂಪನ್ಮೂಲವನ್ನು ಅದರಲ್ಲೂ ಉತ್ಪಾದನಾ ವಲಯದಲ್ಲಿ ಮಾನವ ಶಕ್ತಿಗೆ ತರಬೇತಿ ನೀಡುವ ಅವರ ತಜ್ಞತೆ ಮತ್ತು ಜ್ಞಾನವನ್ನು ವ್ಯವಸ್ಥಿತವಾಗಿ ವರ್ಗಾವಣೆ ಮಾಡಲು ಅನುವು ಮಾಡಿಕೊಡಲಿದೆ. ಎರಡೂ ದೇಶಗಳ ನಡುವೆ ಗುರುತಿಸಲಾದ ಕ್ಷೇತ್ರಗಳಲ್ಲಿನ ಸಹಕಾರವನ್ನು ಬೆಲಾರಸ್ ನ ವೃತ್ತಿಪರ ಶಿಕ್ಷಣ ವ್ಯವಸ್ಥೆಯ ಸರ್ವೋನ್ನತ ಸಂಸ್ಥೆಯಾದ ರಿಪಬ್ಲಿಕನ್ ಇನ್ಸ್ಟಿಟ್ಯೂಟ್ ಫಾರ್ ವೊಕೇಷನಲ್ ಎಡ್ಯುಕೇಷನ್ (ಆರ್.ಐ.ಪಿ.ಓ), ಮತ್ತು ವಿಇಟಿ ವಿತರಣೆಯಲ್ಲಿನ ತಂತ್ರಜ್ಞಾನ ವರ್ಗಾವಣೆ ಕುರಿತ ಮಹಾ ನಿರ್ದೇಶನಾಲಯ ಮತ್ತು ಅದರ ಸುಸ್ಥಿರತೆಯ ನಡುವೆ ಸಾಂಸ್ಥಿಕ ಪಾಲುದಾರಿಕೆಯನ್ನು ಸ್ಥಾಪಿಸುವ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಸೆಕ್ಟರ್ ವಿಇಟಿ / ಬೆಲಾರಸ್ ಶ್ರೇಷ್ಠತೆಯ ಕೇಂದ್ರಗಳೊಂದಿಗೆ ಸಹಕಾರವನ್ನು ಪರಿಣತಿ ಪರಿಸರ ವ್ಯವಸ್ಥೆಯಲ್ಲಿ ಪ್ರಸ್ತಾಪಿಸಲಾಗಿದೆ.
ಸಹಕಾರ ಕ್ಷೇತ್ರ ಈ ಕೆಳಕಂಡಂತಿವೆ:
1. ಬೆಲಾರಸ್ ಕಡೆಯಿಂದ ಹೊರಹೊಮ್ಮುತ್ತಿರುವ ತಂತ್ರಜ್ಞಾನ, ತರಬೇತಿ ಮತ್ತುಮೌಲ್ಯಮಾಪನ ವಿಧಾನಗಳು, ನುರಿತ ತರಬೇತುದಾರರ ಸಾಮಾನ್ಯ / ದೂರ ಶಿಕ್ಷಣ / ಇ-ಕಲಿಕೆ / ತರಬೇತಿಯ ವಿಷಯ ಅಭಿವೃದ್ಧಿ, ತಮ್ಮ ಸಾಮರ್ಥ್ಯ ಮತ್ತು ಜಾಲದ ನಿರ್ಮಾಣ ಮತ್ತು ಉದ್ಯಮ ಸಂಪರ್ಕದ ಪ್ರದೇಶಗಳಲ್ಲಿ ಮೌಲ್ಯಮಾಪಕರ ಸಾಮರ್ಥ್ಯ ನಿರ್ಮಾಣದ ಪ್ರಾಯೋಗಿಕ ಜ್ಞಾನವನ್ನು ಸಮಗ್ರವಾಗಿ ಪೂರೈಸಬೇಕು;
2. ಭಾರತದಲ್ಲಿ ಹೆಚ್ಚಿನ ಬೇಡಿಕೆಯಿರುವ ನಿರ್ಮಾಣ, ವಿದ್ಯುತ್-ಶಕ್ತಿ ಉತ್ಪಾದನೆ ಮತ್ತು ಸರಬರಾಜು, ಉತ್ಪಾದನಾ ಉದ್ಯಮ,ವ್ಯಾಪಾರ, ವಾಹನ ದುರಸ್ತಿ, ಮತ್ತು ಮನೆ ಬಳಕೆಯ ಸರಕು ದುರಸ್ತಿ ಮತ್ತು ನಿರ್ವಹಣೆ, ಸಾರಿಗೆ, ಸಂವಹನ, ಹೋಟೆಲುಗಳು ಮತ್ತು ರೆಸ್ಟೋರೆಂಟುಗಳು ಮತ್ತು ಇತರ ಕ್ಷೇತ್ರಗಳಲ್ಲಿ ಭಾರತೀಯ ನಾಗರಿಕರಿಗೆ ವೃತ್ತಿಪರ ಶಿಕ್ಷಣ ಸೇವೆಗಳ ಕೌಶಲ್ಯ ಅಭಿವೃದ್ಧಿಗಾಗಿ.;
3. ಬೆಲಾರಸ್ ಕಡೆಯಿಂದ ಭಾರತದ ತರಬೇತಿ ವ್ಯವಸ್ಥಾಪಕರು, ಶಿಕ್ಷಕರು ಮತ್ತು ತರಬೇತುದಾರರ ಕೌಶಲ ವರ್ಧನೆಗಾಗಿ ವೃತ್ತಿಪರ ಶಿಕ್ಷಣ ಮತ್ತು ಮರು ತರಬೇತಿ;
4. ಯೋಜನೆ, ನಿರ್ವಹಣೆ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಹಾಗೂ ಕೌಶಲ ಅಭಿವೃದ್ಧಿಯ ವಿತರಣೆಯನ್ನು ಹೆಚ್ಚಿಸುವ ಸಲುವಾಗಿ ಸಲಹಾ ಸೇವೆಗಳು.
ಪ್ರಮುಖ ಪರಿಣಾಮ:
ಈ ತಿಳಿವಳಿಕೆ ಒಪ್ಪಂದವು ಬೆಲಾರಸ್ ನ ಅನುಭವ ಮತ್ತು ತಜ್ಞತೆಯಿಂದ ದೇಶದ ಕೌಶಲ ಪರಿಸರ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಲಿದೆ.
ಪ್ರಸ್ತಾವನೆಯ ಜಾರಿಯು ಈ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ನಾವಿನ್ಯತೆ ಮತ್ತು ಹಾಲಿ ಇರುವ ವೃತ್ತಿಪರ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಯ ಸುಧಾರಣೆಯನ್ನು ಒಳಗೊಂಡಿದೆ.
ಈ ತಿಳಿವಳಿಕೆ ಒಪ್ಪಂದದ ಚೌಕಟ್ಟಿನೊಳಗಿನ ಸಹಕಾರ ಚಟುವಟಿಕೆಗಳಿಗೆ ಹಣಕಾಸು ಪೂರೈಕೆಯು, ಹಣಕಾಸು ಲಭ್ಯತೆಗನುಗುಣವಾಗಿಎರಡೂ ಕಡೆಗಳಿಂದ ಪ್ರಕರಣದಿಂದ ಪ್ರಕರಣದ ಪರಸ್ಪರ ಒಪ್ಪಿಗೆ ಆಧಾರದ ಮೇಲಿರುತ್ತದೆ.
***