Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

16 ನೇ ನವಂಬರ್ 2016 ರಂದು ನಡೆದ ನ್ಯಾಶನಲ್‌ ಪ್ರೆಸ್ ಡೇ ಸಂದರ್ಭದಲ್ಲಿ, ಪ್ರೆಸ್ ಕೌನ್ಸಿಲ್‌ ಆಫ್‌ ಇಂಡಿಯಾದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳವರು ಮಾಡಿದ ಭಾಷಣದ ಅವತರಣಿಕೆ

16 ನೇ ನವಂಬರ್ 2016 ರಂದು ನಡೆದ ನ್ಯಾಶನಲ್‌ ಪ್ರೆಸ್  ಡೇ ಸಂದರ್ಭದಲ್ಲಿ, ಪ್ರೆಸ್  ಕೌನ್ಸಿಲ್‌ ಆಫ್‌ ಇಂಡಿಯಾದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳವರು ಮಾಡಿದ ಭಾಷಣದ ಅವತರಣಿಕೆ


ಇಂದು ಸಮ್ಮಾನಿತ ಮತ್ತು ಗೌರವಾನ್ವಿತರಾದ ಎಲ್ಲ ಮಹನೀಯರಿಗೂ ನನ್ನ ಹೃತ್ಪೂರ್ವಕ ಅಭಿನಂದನೆ ಮತ್ತು ಶುಭಾಶಯಗಳನ್ನು ಸಮರ್ಪಿಸುತ್ತೇನೆ. ಪ್ರೆಸ್ ಕೌನ್ಸಿಲ್‌ ಇಂದು 50 ವರ್ಷಗಳನ್ನು ಪೂರ್ಣಗೊಳಿಸುತ್ತಿದೆ, ಆದರೆ ಈ ಮಧ್ಯದ ಸಮಯದಲ್ಲಿ ಪ್ರೆಸ್ ಕೌನ್ಸಿಲ್‌ನ್ನು ಸಂಪೂರ್ಣವಾಗಿ ಮುಗಿಸಿದ ಒಂದು ಕಾಲಘಟ್ಟವೂ ಕೂಡ ಬಂದಿದ್ದು ನಿಜ ಸಂಗತಿ. ಈ ಕಾಲಘಟ್ಟವನ್ನು ಸೇರಿಸಿಕೊಂಡರೆ ನೀವು ಪುನಃ ಎರಡು ವರ್ಷಗಳ ಅನಂತರ ಮತ್ತೊಮ್ಮೆ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುವ ಕುರಿತು ಯೋಚಿಸಬಹುದು. ಹಾಗೆ ನೋಡಿದರೆ 1916 ರಲ್ಲಿ ಸ್ವೀಡನ್ನಿನಲ್ಲಿ ಈ ದಿಕ್ಕಿನಲ್ಲಿ ಕಾರ್ಯಕ್ರಮ ಮಾಡಿದ್ದರು, ಆಗ ಅದನ್ನು ಕೋರ್ಟ್‌ ಆಫ್‌ ಆನರ್‌ ಫಾರ್‌ ಪ್ರೆಸ್ ಎಂದು ಕರೆಯುತ್ತಿದ್ದರು. ಅನಂತರ ಇದು ಬದಲಾಗುತ್ತ ಬಂದು ಪ್ರೆಸ್ ಕೌನ್ಸಿಲ್‌ ಆಗಿ ಪರಿವರ್ತಿತವಾಯಿತು ಮತ್ತು ಬಹುಶಃ ಇಂದು ಇಡಿ ಪ್ರಪಂಚದಲ್ಲಿ ಇದು ಪ್ರೆಸ್ ಕೌನ್ಸಿಲ್‌ ಎಂದೇ ಪರಿಚಿತವಾಗಿದೆ. ಇದೊಂದು ಸ್ವತಂತ್ರ ವ್ಯವಸ್ಥೆಯಾಗಿದೆ,ಈ ವ್ಯವಸ್ಥೆ ಎಂದರೆ ಈ ಕ್ಷೇತ್ರದಲ್ಲಿ ಹೆಚ್ಚಿನ ಸ್ವತಂತ್ರತೆಯನ್ನು ಅಳವಡಿಸಿಕೊಂಡಿರುವುದು, ಅಭಿವ್ಯಕ್ತಿ ಸ್ವಾತಂತ್ರವನ್ನು ಕಾಯ್ದುಕೊಳ್ಳುವುದು, ಏನಾದರೂ ತೊಂದರೆಗಳು ಬಂದರೆ ಸ್ವಯಂಪ್ರೇರಿತರಾಗಿ ಮುಂದೆ ಹೋಗಿ ಅದನ್ನು ಪರಿಹರಿಸಿಕೊಳ್ಳುವುದು,ನೀವೇಸ್ವಯಂ ಇದರಲ್ಲಿ ಬದಲಾವಣೆ ಮಾಡುತ್ತಿರಬೇಕು. ಬಹುಶಃ ಇತ್ತೀಚಿನ ದಿನಗಳಲ್ಲಿ ಕಂಡುಬರುವ ಸವಾಲುಗಳು ಹಿಂದೆ ಕಂಡುಬರುತ್ತಿರಲಿಲ್ಲ.

ಪತ್ರಿಕೋಧ್ಯಮದೊಂದಿಗೆಗುರುತಿಸಿಕೊಂಡಿರುವ ಬಹಳಷ್ಟು ಹಿರಿಯರಿಗೆ ಆಗ ಯೋಚಿಸುವ ಸಮಯವಿರುತ್ತಿತ್ತು, ಅವರು ತಮ್ಮ ಪತ್ರಿಕಾವರದಿಯನ್ನು ಫೈಲ್ ಮಾಡಿ ಮನೆಗೆ ಬಂದಾಗಲೂ, ನಾನಿಂದು ಫೈಲ್ ಮಾಡಿದ ರಿಪೋರ್ಟ್ ನಾಳೆ ಪತ್ರಿಕೆಯಲ್ಲಿ ಮುದ್ರಿತವಾಗುತ್ತದೆ, ಅದರಲ್ಲಿ ಬಹುಶಃ ಈ ಶಬ್ದಗಳು ಸರಿ ಎನಿಸುತ್ತಿಲ್ಲ, ಪುನಃ ಅವರು ಮನೆಗೆ ಹೋದ ಮೇಲೂ ಆ ಡೆಸ್ಕಿನ ಮುಖ್ಯಸ್ಥರನ್ನು ಸಂಪರ್ಕಿಸಿ ಅಥವಾ ಸಂಪಾದಕರನ್ನು ಸಂಪರ್ಕಿಸಿ, ಸ್ವಾಮಿ ನಾನು ಇದನ್ನು ಬರೆದು ಬಂದಿದ್ದೆ ಆದರೆ ಆ ಶಬ್ದಗಳು ಏಕೋ ಸರಿ ಎನಿಸುತ್ತಿಲ್ಲ, ಅವುಗಳ ಬದಲಿಗೆ ಈ ಶಬ್ದಗಳು ಸರಿಹೊಂದುತ್ತವೆ. ಆ ಸಮಯದಲ್ಲಿ ದೂರವಾಣಿ ಸಂಪರ್ಕಗಳಿರಲಿಲ್ಲ, ಕೆಲವೊಮ್ಮೆ ರಾತ್ರಿಯಾದರೂ ಕೂಡ ಅವರು ವಾಪಸ್ ಹೋಗುತ್ತಿದ್ದರು ಮತ್ತು ಪುಟಗಳು ಪ್ರಿಂಟ್ ಆಗುವ ಸಮಯದಲ್ಲಿಯೂ ಅವರು ಉಪಸ್ಥಿತರಿದ್ದು ನೋಡಣ್ಣ ಇದು ಯಾಕೋ ಸರಿಹೊಂದುತ್ತಿಲ್ಲ ಎನ್ನುತ್ತಿದ್ದರು.ಪತ್ರಿಕಾವರದಿಯನ್ನು ಬರೆದಾದ ಮೇಲೆಯೂ ಬೆಳಿಗ್ಗೆ ಮುದ್ರಿತವಾಗುವವರೆಗೂ ಅವರ ಮನಸ್ಸಿನಲ್ಲಿ ಒತ್ತಡವಿರುತ್ತಿತ್ತು,ಚಿಂತೆ ಇರುತ್ತಿತ್ತು, ನಾನಿಂದು ಮಾಡಿ ಬಂದ ರಿಪೋರ್ಟ್ಅಥವಾ ನಾನಿಂದು ಬರೆದು ಬಂದ ವರದಿ ನಾಳೆ ಪತ್ರಿಕೆಯಲ್ಲಿ ಹೊರಬಂದಾಗ ಯಾವ ರೀತಿಯ ಪ್ರಭಾವ ಬೀರುತ್ತದೆ, ನಾನು ಬಳಸಿದ ಶಬ್ದಗಳು ಸರಿಯೇ ಅಥವಾ ಇಲ್ಲವೇ? ನಾನು ಕೊಟ್ಟ ಶೀರ್ಷಿಕೆ ಹೀಗಿದ್ದರೆ ಸರಿಯಾಗುತ್ತಿತ್ತಲ್ಲವೇ? ಹೀಗೆ ಅವರು ಅದನ್ನು ತಿದ್ದಿಕೊಳ್ಳಲೂ ಪ್ರಯತ್ನಿಸುತ್ತಿದ್ದರು.

ಇಂದಿನ ಪತ್ರಿಕಾ ಮಾಧ್ಯಮದವರಿಗೆ ಈ ಅವಕಾಶವೇ ಇಲ್ಲ. ಅವರು ಬಹಳ ವೇಗವಾಗಿ ನುಗ್ಗಬೇಕಾಗಿದೆ. ವರದಿಗಳನ್ನು ಮಾಡುವಲ್ಲಿ ಸ್ಪರ್ಧೆ ನಡೆಯುತ್ತಿದೆ, ಪತ್ರಿಕೋಧ್ಯಮದಲ್ಲಿಯೂ ಸ್ಪರ್ಧೆ ನಡೆಯುತ್ತಿದೆ, ಇಂತಹ ಸ್ಥಿತಿಯಲ್ಲಿ ಅವರು ಅಸಹಾಯಕ ಸ್ಥಿತಿಯಲ್ಲಿರುತ್ತಾರೆ, ಸ್ವಾಮಿ ಮಾತನಾಡುವವರು ಮಾತನಾಡಿಬಿಟ್ಟರು, ಅದನ್ನು ತೋರಿಸುವವರು ತೋರಿಸಿಬಿಟ್ಟರು ಮತ್ತು ಮುದ್ರಿಸುವವರು ಅದನ್ನು ಮುದ್ರಿಸಿಬಿಟ್ಟರು, ಆದರೆ ಇಂದು ಅವರೆಲ್ಲರೂ ಮೊದಲು ಆನ್‌ಲೈನ್‌ ಮೀಡಿಯಾದಲ್ಲ ತಮ್ಮ ಸುದ್ಧಿಯನ್ನು ಹರಿಬಿಡಬೇಕಿದೆ. ಅಂದರೆ ಅಷ್ಟು ಶೀಘ್ರವಾಗಿ ಬದಲಾವಣೆಗಳಾಗುತ್ತಿವೆ.
ಇಂತಹ ಪರಿವರ್ತನೆಯ ಸ್ಥಿತಿಯಲ್ಲಿ ಇವರೆಲ್ಲರಿಗೂಈ ಸಂಸ್ಥೆ ಹೇಗೆ ಸಹಾಯ ಮಾಡಬಹುದು, ಅವರ ಸಮಸ್ಯೆಗಳನ್ನು ಹೇಗೆ ದೂರ ಮಾಡಬಹುದು? ಹಿರಿಯರೆಲ್ಲರೂ ಕುಳಿತುಕೊಂಡು ಹೊಸ ಪೀಳಿಗೆಗೆ ಸಹಾಯವಾಗುವಂತಹ ಒಂದು ವ್ಯವಸ್ಥೆಯನ್ನು ರಚಿಸಬೇಕಿದೆ, ಏಕೆಂದರೆ ಮಹಾತ್ಮ ಗಾಂಧೀಜಿಯವರು ಈ ಪತ್ರಿಕೋಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೀಗೆ ಹೇಳುತ್ತಿದ್ದರು- ಅನಿಯಂತ್ರಿತ ಲೇಖನಿಯು ಈ ಕ್ಷೇತ್ರದಲ್ಲಿ ಬಹುದೊಡ್ಡ ಸಂಕಟವನ್ನು ತಂದುಬಿಡಬಹುದು, ಗಾಂಧೀಜಿಯವರು ಇನ್ನೊಂದು ಮಾತನ್ನೂ ಹೇಳಿದ್ದಾರೆ – ಹೊರಗಿನ ನಿಯಂತ್ರಣ ಈ ಕ್ಷೇತ್ರದಲ್ಲಿ ವಿನಾಶವನ್ನೇ ಹುಟ್ಟುಹಾಕಬಹುದು. ಸಮಾಜದ ಉನ್ನತಿಯ ಸಂದರ್ಭದಲ್ಲಿ ಪತ್ರಿಕೋಧ್ಯಮದ ಮೇಲೆ ಹೊರಗಿನ ನಿಯಂತ್ರಣದ ಕುರಿತುಯೋಚಿಸುವುದನ್ನುಕಲ್ಪಿಸಿ ಕೊಳ್ಳಲೂ ಸಾಧ್ಯವಿಲ್ಲ.

ಸ್ವತಂತ್ರತೆಯೇಅದರ ಅಭಿವ್ಯಕ್ತಿ, ಅಭಿವ್ಯಕ್ತಿ ಸ್ವಾತಂತ್ರ, ಅದರ ನೀತಿಗಳನ್ನು ಅನುಸರಿಸುವುದು, ಆದರೆ ಅದರೊಂದಿಗಿರುವ ಅನಿಯಂತ್ರಿತ ಪರಿಸ್ಥಿತಿ, ನಾವು ಎಷ್ಟೇ ಆರೋಗ್ಯವಾಗಿದ್ದರೂ ನಮ್ಮ ತಾಯಿ ನಮಗೆ ನಿಯಮಿತವಾಗಿ ಆಹಾರವನ್ನು ಸೇವಿಸು, ಅಥವಾ ಇವುಗಳನ್ನುತಿನ್ನಬೇಡ ಎಂದು ಹೇಳುತ್ತಾಳೆ. ಇಲ್ಲಿ ನಾನು ಹೇಳಬಯಸುವುದೇನೆಂದರೆ ಯಾವ ತಾಯಿಯೂ ಶತ್ರುವಲ್ಲ, ಆ ತಾಯಿ ನಮ್ಮ ಮನೆಯವಳು, ಅವಳಿಗೆ ಆ ಹಕ್ಕಿದೆ,ಅವಳು ಏನು ಬೇಕಾದರೂ ಹೇಳುತ್ತಾಳೆ.ಆದರೆ ಹೊರಗಿನವರು ಯಾರಾದರೂ ಏನಾದರೂ ಹೇಳಿದರೆ? ನನ್ನ ಮಗನ ಬಗ್ಗೆ ಚಿಂತೆ ಮಾಡಲು ನೀನು ಯಾರು, ನಾನಿದ್ದೇನೆ ಎನ್ನುತ್ತಾಳೆ. ಆದ್ದರಿಂದ ಇಲ್ಲಿನ ವ್ಯವಸ್ಥೆ ಹೇಗಿದೆ ಎಂದರೆ, ಕುಟುಂಬದೊಳಗಿನವರೇ ಇದನ್ನು ಸಂಭಾಳಿಸಿದಕೊಂಡು ಹೋಗಬೇಕು, ಇದರಲ್ಲಿಸರ್ಕಾರವಂತೂ ಸ್ವಲ್ಪವೂ ಕೂಡ ತಲೆ ತೂರಿಸಬಾರದು. ನಿಮ್ಮಂಥವರೆಲ್ಲ ಇಲ್ಲಿ ಒಟ್ಟಿಗೆ ಸೇರಿ ಕುಳಿತುಕೊಂಡು ಕೌನ್ಸಿಲ್‌ನಂತಹ ವ್ಯವಸ್ಥೆಯನ್ನು ರೂಪಿಸಿಕೊಂಡು, ಹಿರಿಯರ ಅನುಭವಗಳನ್ನು ಬಳಸಿಕೊಂಡು, ಸಮಾಜದಲ್ಲಿ ಸರ್ವರೂ ಸ್ವೀಕರಿಸುವಂತಹ ಹಿತಗಳನ್ನು ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆಯನ್ನು ಹೇಗೆ ನಿರ್ಮಿಸಬೇಕೆಂದು ಯೋಚಿಸಬೇಕಿದೆ.ನಮ್ಮವರ ನಡುವೆಯೇ ಇದ್ದುಕೊಂಡು ಅವರನ್ನೇ ಹೇಗೆ ಟೀಕಿಸುವುದು? ಇದು ಬಹಳ ಕಷ್ಟದ ವಿಚಾರ. ಯಾರಾದರೂ ಹೊರಗಿನವರು ಹೇಳಿದರೆ ನಾವು ರಿಪೋರ್ಟ್ ಮಾಡಲು ಸಿದ್ಧರಿದ್ದೇವೆ, ಆದರೆ ನಾವು ಆ ಸ್ಥಾನದಲ್ಲಿ ಕುಳಿತುಕೊಂಡು ಏನು ಮಾಡುವುದು? ಹಾಗಾಗಿಯೇ ಇದು ಬಹಳ ಕಷ್ಟದ ಕೆಲಸವಾಗಿದೆ.

ಆತ್ಮಾವಲೋಕನವು ಬಹು ಕಷ್ಟದ ಕೆಲಸವಾಗಿರುತ್ತದೆ. ನನಗೆ ಸರಿಯಾಗಿ ನೆನಪಿದೆ, ಆಗ ನಾನು ದಿಲ್ಲಿಯಲ್ಲಿದ್ದೆ, ನಮ್ಮ ಪಕ್ಷದ ಸಂಘಟನೆಯ ಕಾರ್ಯವನ್ನು ಮಾಡುತ್ತಿದ್ದೆ, ಆಗ ಕಂಧಾರ ಘಟನೆ ನಡೆದಿತ್ತು.ವಿಮಾನವನ್ನು ಕಂಧಾರಿಗೆ ಅಪಹರಿಸಿಕೊಂಡು ಹೋಗಿದ್ದರು, ನಮ್ಮ ದೇಶದಲ್ಲಿ ಎಲೆಕ್ಟ್ರಾನಿಕ್‌ ಮೀಡಿಯಾ ಆಗ ತಾನೇ ಪ್ರಾರಂಭದ ಹಂತದಲ್ಲಿತ್ತು. ಅವರೆಲ್ಲರಲ್ಲಿಯೂ ಇದ್ದ ಪ್ರಶ್ನೆ ಎಂದರೆ, ಇದು ಸಾಧ್ಯವೆ? ಅವರದೇನೂ ತಪ್ಪಿರಲಿಲ್ಲ, ಏಕೆಂದರೆ, ಅಂದು ಅವರ ಪ್ರಾರಂಭದ ದಿನಗಳು ಹಾಗಿದ್ದವು. ವಿಮಾನದಲ್ಲಿ ಸಿಕ್ಕಿಹಾಕಿಕೊಂಡವರ ಕುಟುಂಬದವರ ಸಂಕಟ ಅವರ ಸುದ್ಧಿಗಳು; ಆ ಕುಟುಂಬಗಳು ಮೆರವಣಿಗೆಗಳನ್ನು ಮಾಡುತ್ತಿದ್ದರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು, ಏನಾದರೂ ಆಗಲಿ ಅವರನ್ನು ಬಿಡಿಸಿ, ಇಲ್ಲಿ ಹೇಗೆ ಜನರ ಸಿಟ್ಟು ಹೆಚ್ಚಾಗುತ್ತಿತ್ತೋ, ಅಲ್ಲಿ ಉಗ್ರಗಾಮಿಗಳ ವಿಶ್ವಾಸ ಹೆಚ್ಚಾಗುತ್ತಿತ್ತು. ಭಾರತದ ಸ್ಥಿತಿ ಹೇಗಾಗುತ್ತಿದೆ ಎಂದರೆ ಅವರಿಂದ ನಾವೇನು ಬೇಕಾದರೂ ಮಾಡಿಸಿಕೊಳ್ಳಬಹುದು. ಆದರೆ ನನ್ನ ಮಾಹಿತಿಯ ಪ್ರಕಾರ ಈ ಘಟನೆ ನಡೆಯುತ್ತಿರುವಾಗ ಮಾಧ್ಯಮದ ಎಲ್ಲ ನಾಯಕರೂ ಕುಳಿತುಕೊಂಡಿದ್ದರು, ಎಲ್ಲ ಪ್ರಮುಖರೂ ಕುಳಿತುಕೊಂಡಿದ್ದರು. ಎಲ್ಲರೂ ಒಳಗೆ ಕುಳಿತುಕೊಂಡಿದ್ದರು ಮತ್ತು ಬಹುಶಃ ಅಂದು ಪ್ರೆಸ್ ಕೌನ್ಸಿಲ್‌ ಅವರೊಂದಿಗೆ ಇರಲಿಲ್ಲ.ತಾವೇ ಕುಳಿತುಕೊಂಡು ತಮ್ಮ ತಲೆಯನ್ನು ತಾವೇ ಕೆರೆದುಕೊಳ್ಳುತ್ತಿದ್ದರು. ಇದೇನು ಸಣ್ಣ ಘಟನೆಯಲ್ಲ, ನನಗೆ ಗೊತ್ತಿದೆ. ಅಂದು ಯಾವ ರೀತಿಯ ರಿಪೋರ್ಟಿಂಗ್ ಆಗಿತ್ತೆಂದು ಬಹಳ ಜನರಿಗೆ ನೆನಪಿರಬಹುದು, ಸ್ವಯಂ ಮಾಧ್ಯಮದವರೆಲ್ಲ ಸೇರಿ ಕುಳಿತುಕೊಂಡು ತಮ್ಮದೇ ತಲೆ ಕೆರೆದುಕೊಂಡಿದ್ದು ಮಾತ್ರ ಬಹಳ ಕಡಿಮೆ ಜನರಿಗೆ ತಿಳಿದಿದೆ. ನಾವೇನು ತಪ್ಪು ಮಾಡಿದೆವು, ಏಕೆ ಮಾಡಿದೆವು, ನಮಗೆ ಯಾವ ರೀತಿಯ ನಷ್ಟವಾಯಿತು, ನಾವೆಲ್ಲಿ ದಾರಿ ತಪ್ಪಿದೆವು? ಹಾಗಾಗಿ ನಾವೆಲ್ಲರೂ ಸೇರಿ ಅನಿವಾರ್ಯವಾಗಿ ಕೆಲವು ನಿಯಮಗಳನ್ನು ಪಾಲಿಸಬೇಕು, ಇದರ ಕುರಿತು ಬಹಳ ಚರ್ಚೆಯಾಗಿತ್ತು. ಅರುಣ್‌ಜಿ ಅವರು ಇಲ್ಲಿ ಕುಳಿತಿದ್ದಾರೆ, ಅವರೆಲ್ಲರ ನಡುವೆ ಬಹುಶಃ ಯಾವ ವಿಚಾರಗಳುಚರ್ಚೆಯಾಗಿತ್ತೆಂದು ಬಹುಶಃ ಅವರಿಗೆ ಗೊತ್ತಿರಬಹುದು. ಅವರು ಕೆಲವು ನೀತಿ-ನಿಯಮಗಳನ್ನು ಮಾಡಿದ್ದರು. ನನ್ನ ಅಭಿಪ್ರಾಯದಲ್ಲಿ ಅಂದು ಇದು ಬಹು ದೊಡ್ಡ ಸೇವೆಗೆ ಅವಕಾಶವಾಗಿತ್ತು.

ಇದರಂತೆಯೇ ಇನ್ನೊಂದು ಸಂದರ್ಭ ಬಂದಿದ್ದು 26/11 ರಂದು. ಅದರ ಅನಂತರದಮುಂಬಯಿನಲ್ಲಿ ನಡೆದ ಘಟನೆ, ಅದರಲ್ಲಿಯೂ ಎಲ್ಲರೂ ಕುಳಿತುಕೊಂಡೆವು, ಹಿಂದಿನಘಟನೆಯಅಂದರೆ ಅಫಗಾನಿಸ್ತಾನದ ರೆಫರೆನ್ಸ್‌ ಕೂಡಚರ್ಚೆಗೆ ಬಂದಿತು, ಆದರೆ ಬಹಳಷ್ಟು ಬೇರೆ-ಬೇರೆ ಅಭಿಪ್ರಾಯಗಳು ವ್ಯಕ್ತವಾದವು, ಅವರಾರಿಗೂ ಆತ್ಮನಿರೀಕ್ಷಣೆ ಮಾಡಿಕೊಳ್ಳಲು ಆಗಲಿಲ್ಲ, ಅವರು ಮಾಡಿಕೊಳ್ಳಲು ಬಯಸಲಿಲ್ಲ ಎಂದೇನಿಲ್ಲ,ಅವರೆಲ್ಲರೂಆತ್ಮನಿರೀಕ್ಷಣೆಗಾಗಿಯೇ ಕುಳಿತುಕೊಂಡಿದ್ದರು, ತಾವೇ ಸ್ವತಃ ಬಂದು ಕುಳಿತುಕೊಂಡಿದ್ದರು, ಆದರೆ ಮಾತು ಅರ್ಧದಲ್ಲಿ ನಿಂತುಹೋಯಿತು. ಆದರೆ ಎಲ್ಲಿಯವರೆಗೆ ಇಂತಹ ಸಂವೇದನೆಯ ಮಾನಸಿಕತೆಗೆ ನಾಯಕತ್ವವು ಪ್ರೆಸ್ ಜಗತ್ತಿನಲ್ಲಿದೆಯೋ, ಮೀಡಿಯಾ ಜಗತ್ತಿನಲ್ಲಿದೆಯೋ, ಅಲ್ಲಿಯವರೆಗೆ ನಮ್ಮಿಂದಲೂ ತಪ್ಪುಗಳಾಗುತ್ತವೆ, ನಿಮ್ಮಿಂದಲೂ ತಪ್ಪುಗಳಾಗುತ್ತವೆ, ತಪ್ಪು ಬೇರೊಬ್ಬರಿಂದಲೂ ಆಗುತ್ತದೆ. ತಪ್ಪುಗಳ ಆಧಾರದಲ್ಲಿ ಮೀಡಿಯಾದ ಮೌಲ್ಯವನ್ನು ಅಳೆಯುವುದು ಸರಿಯಲ್ಲ. ಆದರೆ ಸಂತೋಷದ ವಿಚಾರವೇನೆಂದರೆ, ಅದರಲ್ಲಿ ಬಹಳ ಮಾಗಿದ ಜವಬ್ದಾರಿಯುಳ್ಳ ಒಂದು ವರ್ಗವಿದೆ, ತಾವೇ ಕುಳಿತುಕೊಂಡು ಈ ತಪ್ಪುಗಳಿಂದ ಹೇಗೆ ಬಚಾವಾಗುವುದು, ಕೊರತೆಗಳನ್ನು ಹೇಗೆ ನೀಗಿಸಿಕೊಳ್ಳುವುದುಮತ್ತು ಹೇಗೆ ಹೆಚ್ಚು ಶಕ್ತಿಶಾಲಿಗಳಾಗುವುದೆಂದು ಮೀಡಿಯಾದ ವರ್ಗವು ಯೋಚಿಸಬೇಕೆಂದು ನಾನು ಬಯಸುತ್ತೇನೆ. ಈ ಜಗತ್ತಿಗೆ ಇದೊಂದು ತಮ್ಮಲ್ಲಿ ತಾವೇ ಮಾಡಿಕೊಳ್ಳಬಹುದಾದಂತಹ ಶ್ರೇಷ್ಠ ಪ್ರಯತ್ನವೆಂದು ನಾನು ತಿಳಿದುಕೊಂಡಿದ್ದೇನೆ; ಮತ್ತು ಇದು ನಿರಂತರವಾಗಿ ಆಗುತ್ತಿರಬೇಕು, ಆದರೆ ಹೊರಗಿನ ನಿಯಂತ್ರಣ ಮತ್ತು ಹೊರಗಿನ ನಿಯಮಗಳಿಂದ ಈ ಸ್ಥಿತಿ ಬದಲಾಗುವುದಿಲ್ಲ.

ದೇಶದಲ್ಲಿ ಎಮರ್ಜನ್ಸಿ ಬಂದಾಗ ಪ್ರೆಸ್ ಕೌನ್ಸಿಲ್‌ನ್ನೇ ನಾಶ ಮಾಡಲಾಗಿತ್ತು ಅಂದರೆ ಮೂಲಭೂತ ಅಂಗವನ್ನೇ ಮುಗಿಸಲಾಗಿತ್ತು ಮತ್ತು ಅದು ಅಂದಾಜು ಒಂದುವರೆ ವರ್ಷದವರೆಗೆ ಮುಚ್ಚಿಹೋಗಿತ್ತು. ಅನಂತರ (78) ಎಪ್ಪತ್ತೆಂಟರಲ್ಲಿ ಮುರಾರ್ಜಿ ಅವರ ಸರ್ಕಾರ ಬಂದಾಗ ಅವರು ಈ ವ್ಯವಸ್ಥೆಗೆ ಪುನರ್ಜನ್ಮ ನೀಡಿದರು, ಅಂದು ಮೀಡಿಯಾದ ಪುನರ್ನಿರ್ಮಾಣವಾದಾಗ ಅದರ ಕುರಿತು ಬಗ್ಗೆ ಬಹಳ ಉದಾರವಾದ ವಾತಾವರಣವಿತ್ತು. ಆಗ ನಿರ್ಮಾಣವಾದಂತಹ ಇದರ ರೂಪ ಇಂದೂ ಕೂಡ ಹಾಗೆಯೇ ನಡೆದುಕೊಂಡು ಬರುತ್ತಿದೆ.

ನಾವು ಸಮಯಕ್ಕನುಸಾರವಾಗಿ ನಮ್ಮಲ್ಲಿ ಪರಿವರ್ತನೆ ಮಾಡಿಕೊಳ್ಳಲು ಹೇಗೆ ಯಾವ-ಯಾವ ಬದಲಾವಣೆಗಳನ್ನು ಮಾಡಬೇಕು? ಇದು ಪ್ರೆಸ್ ಕೌನ್ಸಿಲ್‌ನೊಂದಿಗಿರುವ, ಪ್ರೆಸ್ ನ ಜೊತೆಗಿರುವ ಜನರ ಜವಾಬ್ದಾರಿಯಾಗಿದೆ.ಹೊಸ ಪೀಳಿಗೆಯನ್ನು ತಯಾರು ಮಾಡಲು ಏನು ಮಾಡಬೇಕು? ಸರ್ಕಾರವೂ ಸಹ ದಿನಂಪ್ರತಿ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳನ್ನು ಏನು ಹೇಳುತ್ತಿರಬೇಕೋ ಅದನ್ನು ಹೇಳುತ್ತಿರಲಿ, ಆದರೆ ಇದನ್ನು ಹೊರತುಪಡಿಸಿ ಒಂದು ಪ್ರತ್ಯೇಕ ವ್ಯವಸ್ಥೆ ಮಾಡಲು ಸಾಧ್ಯವೆ? ಅದರಲ್ಲಿ ಸರ್ಕಾರದ ಮಾಹಿತಿಗಳ ಅಭಾವ, ಅದರಿಂದಾಗಿ ಯಾವ ರೀತಿಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ? ಸರ್ಕಾರಕ್ಕೆ ಮಾಹಿತಿಗಳನ್ನು ನೀಡುವ ನೀತಿ-ನಿಯಮಗಳು 30 ವರ್ಷಗಳಷ್ಟು ಹಳೆಯದಾಗಿದ್ದರೆ ಕೆಲಸ ಹೇಗಾಗುತ್ತದೆ? ಆದರೆ ಸರ್ಕಾರದಲ್ಲಿ ಈ ಬದಲಾವಣೆಯನ್ನು ತರಲು, ಅದರಲ್ಲೂ ಸರ್ಕಾರದ ಕಾರ್ಯಶೈಲಿಯಲ್ಲಿ ಬದಲಾವಣೆಯನ್ನು ತರಲು ಪ್ರೆಸ್ ಕೌನ್ಸಿಲ್‌ನ ಹಿರಿಯರು ಸಹಾಯ ಮಾಡಲು ಸಾಧ್ಯ. ಮಾಹಿತಿಗಳನ್ನು ನೀಡುವ ನೀತಿಗಳನ್ನು ನಾವು ಹೇಗೆ ಬದಲಿಸಬೇಕು? ಮತ್ತಿದೆಲ್ಲವೂ ಸರ್ಕಾರಗಳ ಜವಾಬ್ದಾರಿಗಳಾಗಿವೆ.ಪತ್ರಿಕೋಧ್ಯಮದಲ್ಲಿ ಯಾವುದುಕಾಣಿಸುತ್ತದೆಯೋ, ಯಾವುದುಕೇಳಿಸುತ್ತದೋ, ಅದನ್ನುಹೊರತುಪಡಿಸಿ ಸ್ವಲ್ಪಹುಡುಕುವುದು ಕೂಡ ಒಂದುಮಹತ್ವಪೂರ್ಣಅಂಗವಾಗಿದೆ ಎಂಬುದನ್ನುಅಲ್ಲಗಳೆಯುವುದು ಸಾಧ್ಯವಿಲ್ಲ, ಅಲ್ಲದೇ ಇದು ಪತ್ರಿಕೋಧ್ಯಮದಅನಿವಾರ್ಯ ಭಾಗವೂ ಕೂಡ ಆಗಿದೆ.ಆದರೆ ಯಾವುದು ಸ್ವಲ್ಪ ಕೇಳಿಸಿದೆಯೋ ಅದು ಕಾಣಿಸಬೇಕು, ಅದೂ ಕೂಡ ಸ್ವಲ್ಪ ಸರಿಯಾಗಿ ಕಾಣಿಸಬೇಕು, ಕೇಳಿಸಬೇಕು, ಹೇಗೆಂದರೆ ಸಮಯಕ್ಕೆ ಸರಿಯಾಗಿ ಕೇಳಿಸಬೇಕು, ಸಮಯಕ್ಕೆ ಸರಿಯಾಗಿ ಕಾಣಿಸಬೇಕು, ಈ ಜವಾಬ್ದಾರಿ ಪ್ರಮುಖವಾಗಿ ಸರ್ಕಾರದಲ್ಲಿ ಕುಳಿತುಕೊಂಡವರದ್ದಾಗಿರುತ್ತದೆ. ಆದರೆ ನಾನು ಈ ಕಮ್ಯುನಿಕೇಷನ್ ಗ್ಯಾಪನ್ನು ನೋಡುತ್ತಿದ್ದೇನೆ, ಏಕೆಂದರೆ ಪ್ರತಿ ಬಾರಿ, ಪತ್ರಿಕೋಧ್ಯಮ ಜಗತ್ತಿನ ಮಿತ್ರರೊಂದಿಗಿನ ನನ್ನ ಗೆಳೆತನ ಬಹಳ ಹಳೆಯದು, ಅವರೆಲ್ಲರ ಈ ವಿಶೇಷ ವರ್ತನೆ ಸ್ವಾಮಿ ನನಗಂತೂ ಅಲ್ಲಿ ಏನು ನಡೆಯುತ್ತದೆ ಎಂದು ಒಂದು ಚೂರು ಗೊತ್ತಾಗುತ್ತಿರಲಿಲ್ಲ. ಅವರಿಗೆ 10% ಮಾಹಿತಿ ಬೇಕು, ಉಳಿದ 90% ಎಲ್ಲಿಂದಲೋ ಬಂದುಬಿಡುತ್ತದೆ, ತೆಗೆದುಕೊಳ್ಳುತ್ತಾರೆ, ಹೋ ಇದು ಹೀಗೆ ನಡೆಯುತ್ತಿದೆಯೇ ಎಂಬ ವಿಚಾರ ಮಾತ್ರ ಸಾಕು, ಉಳಿದದ್ದು ಅನಂತರ ತಲಪುತ್ತದೆ. ಅವರಿಗೆ ಆಗುವ ತೊಂದರೆ ಬರುವುದೇ ಮೊದಲು ತಲುಪಿದ 10% ರಿಂದ. ಆದರೆ ಸೆಲೆಕ್ಟಿವ್‌ ಲೀಕೇಜ್‌ (ಆರಿಸಿಕೊಂಡು ಮಾಹಿತಿ ಸೋರಿಕೆ ಮಾಡುವುದು) ಮಾಡುವ ಚಾಳಿಯೂ ಕೂಡ ಸರ್ಕಾರದ ಬಹುದೊಡ್ಡ ದೌರ್ಭಾಗ್ಯವಾಗಿದೆ. ಎಲ್ಲಿ ಸ್ವಲ್ಪ ಸರ್ಕಾರಕ್ಕೆ ಪ್ರಶಂಸೆ ಸಿಗುತ್ತದೆಯೋ, ಒಳ್ಳೆಯದೆನಿಸುತ್ತದೆಯೋ ಅದರ ಕುರಿತು ಸ್ವಲ್ಪ ವಿವರಗಳನ್ನು ಕೊಡು, ಉಳಿದವುಗಳ ಕುರಿತು ಸುಮ್ಮನಿರುವಂತಹ, ಕೆಲವು ಸರ್ಕಾರದ ತಪ್ಪುಗಳು ಮತ್ತು ಕೊರತೆಗಳಿವೆ. ಅಥವಾ ಅಲ್ಲಲ್ಲಿ ಬೇಜವಾಬ್ದಾರಿತನದ ಉಡಾಫೆಯ ಅಹಂಕಾರ, ಇವೆಲ್ಲವುಗಳಲ್ಲಿ ಬದಲಾವಣೆಯ ಆವಶ್ಯಕತೆಯಿದೆ.

ಒಂದು ವೇಳೆ ಪ್ರೆಸ್ ಕೌನ್ಸಿಲ್‌ನಲ್ಲಿ ಇಂತಹ ಹಲವು ಚರ್ಚೆಗಳಾದರೆ, ಅವುಗಳನ್ನು ಸರ್ಕಾರದ ಮುಂದಿಟ್ಟರೆ, ಸರ್ಕಾರವು ಅವುಗಳನ್ನು ಪಾಲಿಸಿದರೆ, ಪಾಲಿಸಲಾಗದಿದ್ದರೂ, ಅದನ್ನು ನಾನು ಹೇಳಲು ಸಾಧ್ಯವಿಲ್ಲ, ಆದರೆ ಕನಿಷ್ಠ ಮೀಡಿಯಾದವರಿಗೆ ಬೆಳಿಗ್ಗೆ ಎದ್ದ ಕೂಡಲೇ ಸರ್ಕಾರವು ನಮ್ಮ ಸಮಸ್ಯೆಯನ್ನು ಕೇಳಬೇಕು ಎನ್ನುವಂತಹ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕಲ್ಲವೇ. ಎರಡೂಕಡೆ ಇಂತಹ ಸಂಪರ್ಕಗಳಿದ್ದರೆ, ಟೂ ವೇ ಚಾನಲ್‌ಗಳಿದ್ದರೆ ನಮ್ಮ ಬದಲಾವಣೆಯ ಅಪೇಕ್ಷೆಗಳು ಜೀವಂತವಾಗಿರುತ್ತದೆ, ಎರಡೂ ಕಡೆ ಅಪೇಕ್ಷೆಗಳಿವೆ; ಅದರ ನೇರ ಲಾಭ ಜನರಿಗೆ ಸಿಗಬೇಕು, ಅದರ ಲಾಭ ಅಧಿಕಾರದಲ್ಲಿದ್ದ ಪಕ್ಷ ಅಥವಾ ಅಧಿಕಾರದಲ್ಲಿದ್ದ ವ್ಯಕ್ತಿಗೆ ಆಗಬಾರದು. ಯಾವುದೇ ಲಾಭಗಳಿದ್ದರೆ ಅವುಗಳು ಜನತೆಗೆ ತಲುಪಬೇಕು, ಲಾಭಗಳೆಲ್ಲವೂ ಭವಿಷ್ಯಕ್ಕಾಗಬೇಕು, ದೇಶದ ಉಜ್ವಲ ಭವಿಷ್ಯಕ್ಕಾಗಿ, ದೇಶದ ಅಡಿಪಾಯವನ್ನಿಡಲು ಆಗಬೇಕು. ಇಂತಹ ಸಂಸ್ಥೆಗಳಲ್ಲಿ ನಾವೆಲ್ಲರೂ ಸೇರಿ ಇದನ್ನು ಮಾಡಲು ಸಾಧ್ಯವಾದರೆ, ಇಂದಿನ ಇಂತಹ ಸಂದರ್ಭಗಳು ಬಹಳ ಕಡಿಮೆ ಬರುತ್ತವೆ. ನಾವು ಅವುಗಳ ಉಪಯೋಗವನ್ನು ಪಡೆದುಕೊಳ್ಳಬೇಕು.

ಇತ್ತೀಚಿಗೆ ಕೆಲದಿನಗಳಲ್ಲಿ ಪ್ರೆಸ್ ಮತ್ತು ಮೀಡಿಯಾ ಕ್ಷೇತ್ರಕ್ಷೆ ಸಂಬಂಧಿಸಿದ ಕೆಲ ವ್ಯಕ್ತಿಗಳ ಕೊಲೆ ಪ್ರಕರಣಗಳು ಬಹಳ ನೋವನ್ನುಂಟು ಮಾಡಿವೆ. ಯಾವುದೇ ವ್ಯಕ್ತಿಯ ಹತ್ಯೆ ನೋವನ್ನುಂಟು ಮಾಡುವಂತಹುದು, ಆದರೆ ಸತ್ಯವನ್ನು ಹೊರತಲು ಪ್ರಯತ್ನಿಸುವಮಾಧ್ಯಮದವರ ಹತ್ಯೆ ಅತಿ ಗಂಭೀರವಾದ ವಿಷಯವಾಗಿದೆ, ಅತಿ ಚಿಂತಾಜನಕವಾದುದಾಗಿದೆ. ನಾನು ಮುಖ್ಯಮಂತ್ರಿಗಳ ಸಭೆಯನ್ನು ಕರೆದು ಮಾತನಾಡುವಾಗ ಬಹಳ ಒತ್ತುಕೊಟ್ಟು ಅವರಲ್ಲಿ ಆಗ್ರಹ ಮಾಡಿಕೊಂಡಿದ್ದೆ.ನಾವು ಸ್ವತಂತ್ರತೆಯ ಪಕ್ಷದೊಂದಿಗಿರುವವರು, ನಾವು ಕೇವಲ ಸ್ವತಂತ್ರಕ್ಕೆ ಬೆಲೆ ಕೊಡುವವರು, ನಾವು ನಮ್ಮ ಸಿದ್ಧಾಂತಗಳನ್ನು ಮಾತ್ರ ಹೇಳುತ್ತಿದ್ದರೆ ಆಗುವುದಿಲ್ಲವೆಂದುತಿಳಿಸಿದ್ದೆ.

ಪತ್ರಿಕೋಧ್ಯಮದವರೊಂದಿಗೆ ನಡೆಯುವ ಕೆಟ್ಟ ವ್ಯವಹಾರಗಳನ್ನು ಕೂಡಲೇ ನಿಲ್ಲಿಸುವುದು ನಮ್ಮ ಸರ್ಕಾರಗಳ ಜವಾಬ್ದಾರಿಯಾಗಿದೆ, ಅವರಿಗೆ ನ್ಯಾಯ ಸಿಗವಂತಾಗಬೇಕು, ನಮಗೆ ಅವರ ಸುರಕ್ಷತೆಯ ಚಿಂತೆ ಇರಬೇಕು, ಮತ್ತು ಇದು ಅವಶ್ಯವಾಗಿ ಸರ್ಕಾರದ ಪ್ರಥಮ ಆದ್ಯತೆಯ ಪಟ್ಟಿಯಲ್ಲಿರಬೇಕು. ಇಲ್ಲದಿದ್ದರೆ ಇದು ಸತ್ಯವನ್ನು ಹತ್ತಿಕ್ಕುವ ಇನ್ನೊಂದು ಅತಿ ಭಯಂಕರದುರುಪಾಯವಾಗುತ್ತದೆ. ಒಂದೆರಡು ಬಾರಿ ಯಾರಿಗಾದರೂ ಮೀಡಿಯಾದವರ ಮೇಲೆ ಬಹಳ ಸಿಟ್ಟು ಬಂದು ಅವರನ್ನು ಟೀಕಿಸಿದರೆ ಅದು ವಾಕ್ ಸ್ವಾತಂತ್ರವಾಗಿದೆ, ಅದು ಋಣಾತ್ಮಕ ಭಾಗವಾಗಿದೆಎಂದು ತಿಳಿದು ಎಲ್ಲರೂ ಅವರನ್ನು ಕ್ಷಮಿಸುತ್ತಾರೆ, ಆದರೆ ಅವರ ಮೇಲೆ ಕೈ ಎತ್ತುವುದು, ಶರೀರವನ್ನು ಘಾಸಿಗೊಳಿಸುವುದು, ಇದು ಸ್ವತಂತ್ರತೆಯ ಹೆಸರಿನಲ್ಲಿ ನಡೆಯುವ ಎಲ್ಲಕ್ಕಿಂತ ಘೋರ ಅಪರಾಧ, ಹಾಗಾಗಿ ಈ ವಿಷಯದಲ್ಲಿ ಸರ್ಕಾರವೂ ಕೂಡ ಸಂವೇದನಶೀಲವಾಗಿರಬೇಕು, ಈ ವಿಷಯಕ್ಕೆ ಆದ್ಯತೆಯನ್ನು ನೀಡುವುದು ಬಹಳ ಆವಶ್ಯಕವಾಗಿದೆ. ಇಂದು ನಮ್ಮ ಅಕ್ಕ-ಪಕ್ಕದ ದೇಶದ ಗಣ್ಯರೂ ಕೂಡ ನಮ್ಮೊಂದಿಗಿರುವುದು ನಮಗೆ ಸಂತೋಷದ ವಿಷಯವಾಗಿದೆ. ಏಕೆಂದರೆ ನಮ್ಮ ಬಹುದೊಡ್ಡ ಜಗತ್ತಿನಲ್ಲಿ ಮಾಧ್ಯಮದ ಪ್ರಭಾವಕ್ಕೆ ಯಾವುದೇ ಸೀಮೆ ಬಂಧನಗಳಿಲ್ಲ, ನಾವು ಒಂದು ರೀತಿಯಲ್ಲಿ ಬಹಳ ವೇಗವಾಗಿ ಮುನ್ನೆಡೆಯುತ್ತಿದ್ದೇವೆ. ಸಹಕಾರದ ಪ್ರಭಾವ ಎಷ್ಟಿರುತ್ತದೆಯೋ ನಮಗೆಅಷ್ಟು ಲಾಭವಾಗುತ್ತದೆ.

ನೇಪಾಳದ ಭೂಕಂಪನದ ಸುದ್ಧಿ ಸಂಪೂರ್ಣ ಹಿಂದುಸ್ತಾನವನ್ನು ನೇಪಾಳದೆಡೆಗೆ ಹೋಗುವಂತೆ ಪ್ರೇರೇಪಿಸಿತ್ತು.

ಆದರೆ ಇನ್ನೊಂದು ದೇಶದ ಸುದ್ಧಿಯಾಗಿದದ್ದರೆ, ಅದು ಕೇವಲ ಸುದ್ಧಿಯಾಗಿರುತ್ತಿತ್ತು, ಅದು ಹೀಗಿರುತ್ತಿರಲಿಲ್ಲ. ಆದರೆ ಬಹುಶಃ ಎಷ್ಟು ವೇಗವಾಗಿ ಹಿಂದುಸ್ತಾನವು ನೇಪಾಳಕ್ಕೆ ಸಹಾಯವನ್ನು ತಲುಪಿಸಿತೋ ಅಷ್ಟೇ ವೇಗದಲ್ಲಿ ಬಹುಶಃ ಭಾರತದ ಪೂರ್ಣ ಸಮಾಜವು ಸಂವೇದನಶೀಲವಾಗಿ ಮನ ಮಿಡಿಯಿತು, ಇಲ್ಲದಿದ್ದರೆ ಗೊತ್ತೇ ಆಗುತ್ತಿರಲಿಲ್ಲ. ಆದರೆ ನೇಪಾಳದ ಸುದ್ಧಿ ಬಂದ ಕೂಡಲೇ ಹಿಂದುಸ್ತಾನದ ಮೀಡಿಯಾ ನೇಪಾಳದ ನೋವನ್ನು ಪೂರ್ಣ ದೇಶದ ಜನತೆಗೆ ತಿಳಿಸಿತು, ನೇಪಾಳಕ್ಕಾಗಿ ನಾವೇನಾದರೂ ಸಹಾಯ ಮಾಡಬೇಕುಎಂಬಂತಹ ವಾತಾವರಣ ರೂಪುಗೊಂಡಿತು, ಮಾನವತೆಯ ಬಹುದೊಡ್ಡ ಕಾರ್ಯ ನೆರವೇರಿತು. ಇಂದು ನಮ್ಮ ಸೀಮಾರೇಖೆಗಳಿಲ್ಲ, ಹೀಗೆ ನಾವು ಒಬ್ಬರಿಗೊಬ್ಬರು ಸಹಕರಿಸಿದೆವು, ಒಬ್ಬರಿಗೊಬ್ಬರು ಸಹಾಯ ಮಾಡಿದೆವು, ಅದರಲ್ಲಿಯೂ ಸಂಪೂರ್ಣ ಭೂಭಾಗದಲ್ಲಿ ಸಹಕಾರದ ಒಂದು ವಾತಾವರಣದಿಂದ, ಇಂಥಹ ಒಗ್ಗೂಡುವಿಕೆಯಿಂದ ನಾವು ಕೆಲವು ವಿಚಾರಗಳನ್ನು ತಿಳಿದುಕೊಳ್ಳಬೇಕೆಂದರೆ ಅತಿ ಸುಲಭವಾಗಿ ತಿಳಿದುಕೊಳ್ಳಬಹುದು.

ಕೆಲವೊಮ್ಮೆ ಪ್ರತಿಯೊಂದು ಪತ್ರಿಕೆಯ ಪ್ರತಿನಿಧಿ ಪತ್ರಕರ್ತರು ಎಲ್ಲ ದೇಶಗಳಲ್ಲಿ ಇರಲು ಸಾಧ್ಯವಿಲ್ಲ, ಆದರೆ ಸಂಪರ್ಕಗಳಿಲ್ಲದ್ದರೆ ವಿಚಾರ ವಿನಿಮಯ ಮಾಡಿಕೊಳ್ಳಬಹುದು, ನಾವು ಏನು ಸ್ವಾಮಿ ಇಂತಹ ಸುದ್ಧಿ ಬರುತ್ತಿದೆ ಎಂದು ಅವರನ್ನು ಕೇಳಿದಾಗ ಒಂದೆರಡು ಘಂಟೆಗಳಲ್ಲಿ ಹೇಳುತ್ತೇನೆ ಎನ್ನುವುದನ್ನು ನಾನು ನೋಡಿದ್ದೇನೆ, ನನ್ನಲ್ಲಿರುವ ಒಂದೆರೆಡು ಮೂಲಗಳಿಂದ ನಾನು ಮಾಹಿತಿ ಪಡೆಯಲು ಪ್ರಯತ್ನಿಸುತ್ತೇನೆ. ನಮ್ಮಲ್ಲಿ ಅನಿವಾರ್ಯವಾಗಿ ಇಂತಹ ಹೊಂದಾಣಿಕೆಯು ಹೆಚ್ಚಾಗಬೇಕು, ಅದರಲ್ಲೂ ಅಕ್ಕ-ಪಕ್ಕದ ದೇಶಗಳೊಂದಿಗೆ ನಮ್ಮ ಗೆಳೆತನವು ಹೆಚ್ಚಿರುವಲ್ಲಿ, ಸುಖ-ದುಃಖಗಳಲ್ಲಿ ಜೊತೆಗಿರುವವರಲ್ಲಿ, ಅವರೊಂದಿಗೆ ನಾವೆಷ್ಟು ಹೊಂದಾಣಿಕೆಯೊಂದಿಗೆ ಮುಂದುವರೆಯುತ್ತೇವೆಯೋ ಅಷ್ಟು ಈ ಪೂರ್ಣ ಭೂಖಂಡಕ್ಕೆ ಮತ್ತು ಸಂಪೂರ್ಣ ವಿಶ್ವಕ್ಕೂ ಒಂದು ಸಕಾರಾತ್ಮಕ ಗುರುತಿನ ಪ್ರಭಾವ ಬೀರಿ ಬೆಳಕು ನೀಡುವಲ್ಲಿ ಇವೆಲ್ಲವೂ ಉಪಯೋಗಕ್ಕೆ ಬರುತ್ತವೆ.

ಒಂದು ಆರೋಗ್ಯಕರ ಸ್ವರ್ಧೆ ಸಾಮಾಜಿಕ ಜೀವನದಲ್ಲಿ ಬಹಳ ಆವಶ್ಯಕವಾಗಿದೆ ಮತ್ತು ಆರೋಗ್ಯಕರ ಸ್ಪರ್ಧೆಗಾಗಿ ಕ್ಯಾಟಿಲೆಸ್ಟಿಕ್ ಎಜೆಂಟಿನ (ವೇಗವಾಗಿ ತಲುಪುವ ಬಾತ್ಮೀದಾರನ) ರೂಪದಲ್ಲಿ ಮೀಡಿಯಾವು ಬಹಳ ಒಳ್ಳೆಯ ಸೇವೆಯನ್ನು ಮಾಡಲು ಸಾಧ್ಯವಿದೆ. ಇತ್ತೀಚಿನ ದಿನಗಳಲ್ಲಿ ನೀವು ನೋಡಿರಬಹುದು, ಬಹುದಿನಗಳ ಮೊದಲೇ ಇಂಡಿಯಾ ಟುಡೆ ಇದನ್ನು ಪ್ರಾರಂಭಿಸಿತ್ತು; ಯಾವ ರಾಜ್ಯ ಯಾವ ಯಾವ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡುತ್ತಿದೆ ಎಂಬುದನ್ನು ರಾಜ್ಯಗಳ ನಡುವೆ ರೇಟಿಂಗ್ ಮಾಡುವುದು, ಅದು ನಿಧಾನವಾಗಿ ಬೇರೆಯವರಿಗೆ ದಾರಿದೀಪವಾಗತೊಡಗಿತು, ಸರಿ ಸ್ವಾಮಿ ನಾವು ಈ ನಾಲ್ಕು ಕ್ಷೇತ್ರಗಳಲ್ಲಿ ಹಿಂದಿದ್ದೇವೆ; ನಾವು ಮುಂದುವರೆಯಬೇಕು, ಅದಕ್ಕೆ ನಾವೇನು ಮಾಡಬೇಕು.

ಒಂದು ಸಕಾರಾತ್ಮಕ ದೇಣಿಗೆ ನೀಡಿದೆ. ಇದು ಒಂದು ಆರೋಗ್ಯಕರ ಸ್ಪರ್ಧೆಯ ವಾತಾವರಣವನ್ನು ನಿರ್ಮಿಸಿತು. ಇತ್ತೀಚಿನ ದಿನಗಳಲ್ಲಿ ಮೀಡಿಯಾದಲ್ಲಿ ಅವರ ಕ್ಷೇತ್ರದಲ್ಲದಿದ್ದರೂ ಸ್ವಚ್ಛತೆಗಾಗಿ ಅವಾರ್ಡ್ ಕೊಡುವುದು, ಸ್ವಚ್ಛತೆಗಾಗಿ ಜನರನ್ನು ಸನ್ಮಾನಿಸಿ ಗೌರವಿಸುವುದು, ಸ್ವಚ್ಛತೆಗಾಗಿ ಸ್ಪರ್ಧೆಗಳನ್ನು ನಡೆಸಿ ಆ ಪ್ರದೇಶಗಳಿಗೆ ಹೋಗುವುದು, ಇಂತಹ ಅನೇಕ ಒಳ್ಳೆಯಕಾರ್ಯಗಳು ಮೀಡಿಯಾದ ಮೂಲಕ ಆಗುತ್ತಿವೆ, ಸರ್ಕಾರಗಳಿಂದಲೂ ಅದು ಆಗುತ್ತಿಲ್ಲ. ನನಗನ್ನಿಸುತ್ತದೆ-ಇಂತಹ ಬದಲಾದ ವಾತಾವರಣ ದೇಶಕ್ಕೆ ಶಕ್ತಿಯನ್ನು ಕೊಡುತ್ತದೆ. ಇದರಿಂದ ದೇಶದಲ್ಲಿ ಒಂದು ಸ್ಪರ್ಧಾತ್ಮಕ ಗುಣ ನಿರ್ಮಾಣವಾಗುತ್ತಿದೆ. ಆರೋಗ್ಯಕರ ಸ್ಪರ್ಧೆಯ ಗುಣ ನಿರ್ಮಾಣವಾಗುತ್ತಿರುವುದರಿಂದ ಆ ರಾಜ್ಯವು ಮಾಡಿದೆ, ನಾವೂ ಕೂಡ ಮಾಡುತ್ತೇವೆ, ಆ ನಗರವು ಮಾಡಿದೆ, ನಾವೂ ಕೂಡ ಮಾಡುತ್ತೇವೆ ಎಂಬ ಸಕಾರಾತ್ಮಕ ವಾತಾವರಣವೊಂದು ನಿರ್ಮಿತವಾಗುತ್ತಿದೆ.

ಜೀವನದಲ್ಲಿ ಒಳ್ಳೆಯತನಕ್ಕೆ ಯಾವುದೇ ಕೊರತೆಗಳಿಲ್ಲ. ಮತ್ತು ನಾನು ಈ ಮೊದಲೂ ಹೇಳಿದ್ದೇನೆ ಮತ್ತು ಇದನ್ನು ಟೀಕೆಯ ರೂಪದಲ್ಲೇನೂ ಹೇಳಿಲ್ಲ, ಜೀವನದೊಳಗಿನ ಸತ್ಯದ ರೂಪದಲ್ಲಿ ಹೇಳಿದ್ದೇನೆ, ಟೀವಿ ಪರದೆಯಲ್ಲಿ ಕಾಣುವುದೇ ದೇಶವಲ್ಲ. ಇದರ ಹೊರತಾಗಿಯೂ ದೇಶ ಬಹುದೊಡ್ಡದಿದೆ, ದಿನಪತ್ರಿಕೆಗಳ ಪುಟಗಳಲ್ಲಿ ಮಿನುಗುವವರೇ ನಾಯಕರಲ್ಲ, ದಿನಪತ್ರಿಕೆಗಳಲ್ಲಿ ಹೆಸರೇ ಬರದ ಅನೇಕ ಒಳ್ಳೆಯ ವ್ಯಕ್ತಿಗಳು ಸಮಾಜ ಜೀವನದಲ್ಲಿ ಉತ್ತಮ ನೇತೃತ್ವ ವಹಿಸವಂತಹ ನಾಯಕರಿದ್ದಾರೆ. ಹಾಗಾಗಿ ಇಂತಹ ಶಕ್ತಿ ಕೇಂದ್ರಗಳನ್ನು ಹೊರತಂದು ಭಾರತದಂತಹ ದೇಶದಲ್ಲಿ ಸ್ಪರ್ಧಾತ್ಮಕವಾದ ಸಕಾರಾತ್ಮಕ ವಾತಾವರಣಕ್ಕೆ ಬಲ ಕೊಟ್ಟರೆ ಅವರಿಗೂ ಕೂಡನಾವು ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಿದ್ದೇವೆ ಇನ್ನು ಮುಂದೆಯೂ ಮಾಡುತ್ತೇವೆ ಎಂಬ ಭಾವನೆ ಮೂಡುತ್ತದೆ.

ಈ ದಿನವು ನಮ್ಮೆಲ್ಲರಿಗೂ ಆತ್ಮಚಿಂತನೆಯೊಂದಿಗೆ ಸಶಕ್ತರಾಗಲು ಸಹಕರಿಸಲಿ, ಮಾನವೀಯ ಮೌಲ್ಯಗಳ ರಕ್ಷಣೆಗಾಗಿ ಮುಡಿಪಾಗಿರಲಿ, ಭಾರತದ ಭವಿಷ್ಯತ್ತಿನ ಪೀಳಿಗೆಗಾಗಿ ದೃಢವಾದ ಅಡಿಪಾಯ ಹಾಕಿ, ಅವರಿಗೆ ಮಾನವೀಯ ಮೌಲ್ಯಗಳ ಸುರಕ್ಷತೆಯ ಸಹಜ ಅನುಭವವಾಗಬೇಕು. ಹಾಗಾಗಿ ಈ ಸಂದರ್ಭದಲ್ಲಿ ಮತ್ತೊಮ್ಮೆ ಈ ಕ್ಷೇತ್ರಕ್ಕೆ ಸಮರ್ಪಿತ ಎಲ್ಲ ಮಹನೀಯರಿಗೆ ಅನೇಕ ಅಭಿನಂದನೆಗಳನ್ನು ತಿಳಿಸುತ್ತೇನೆ. ಧನ್ಯವಾದಗಳು.

***