Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪಾದರಸ ಕುರಿತ ಮಿನಾಮಾಟಾ ಒಪ್ಪಂದದ ಅನುಮೋದನೆ ಸಂಪುಟದ ಅನುಮೋದಿಸಿದೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪಾದರಸ ಕುರಿತಮನಮಾಟಾ ಒಪ್ಪಂದದ ಪ್ರಸ್ತಾಪವನೆಗಳ ಸ್ಥಿರೀಕರಣ ಮತ್ತು ಭಾರತವನ್ನು ಒಪ್ಪಂದದ ಪಕ್ಷಕಾರರಾಗಿ ಪರಿವರ್ತಿಸಲು ಅವಕಾಶ ಕಲ್ಪಿಸುವ ಸ್ಥಿರೀಕರಣ ಸಾಧನದ ಸಲ್ಲಿಕೆಗೆ ತನ್ನ ಅನುಮೋದನೆ ನೀಡಿದೆ.

ಈ ಅನುಮೋದನೆಯು 2025ರವರೆಗೆ ಪಾದರಸ ಆಧಾರಿತ ಉತ್ಪನ್ನಗಳು ಮತ್ತು ಪಾದರಸದ ಸಂಯುಕ್ತಗಳು ಒಳಗೊಂಡ ವಸ್ತುಗಳ ನಿರಂತರ ಬಳಕೆಯಲ್ಲಿನ ನಮ್ಯತೆಯೊಂದಿಗೆ ಪಾದರಸ ಕುರಿತ ಮಿನಿಮಾಟಾ ಒಪ್ಪಂದದ ಸ್ಥಿರೀಕರಣಕ್ಕೆ ಒಳಪಟ್ಟಿರುತ್ತದೆ.

ಪಾದರಸ ಕುರಿತ ಮಿನಿಮಾಟಾ ಒಪ್ಪಂದವನ್ನು ಮಾನವಜನ್ಯ ಹೊರಸೂಸುವಿಕೆಯಿಂದ ಪಾದರಸ ಮತ್ತು ಪಾದರಸ ಸಂಯುಕ್ತಗಳ ಬಿಡುಗಡೆಯಿಂದ ಮಾನವನ ಆರೋಗ್ಯ ಮತ್ತು ಪರಿಸರ ಸಂರಕ್ಷಿಸುವ ಉದ್ದೇಶದೊಂದಿಗೆ ಸುಸ್ಥಿರ ಅಭಿವೃದ್ಧಿಯ ನಿಟ್ಟಿನಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.

ಈ ಒಪ್ಪಂದವು ಪಾದರಸದ ಹಾನಿಕಾರಕ ಪರಿಣಾಮಗಳಿಂದ ಅತ್ಯಂತ ಭೇದ್ಯತೆಯನ್ನು ರಕ್ಷಿಸುತ್ತದೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಅಭಿವೃದ್ಧಿಯ ಪ್ರದೇಶ ರಕ್ಷಿಸುತ್ತದೆ.ಆದ್ದರಿಂದ ಬಡವರ ಮತ್ತು ದುರ್ಬಲ ಗುಂಪುಗಳ ಹಿತವನ್ನು ರಕ್ಷಿಸುತ್ತದೆ.

ಪಾದರಸ ಕುರಿತ ಮಿನಮಾಟಾ ಒಪ್ಪಂದವು, ಉದ್ದಿಮೆದಾರರಿಗೆ ಉತ್ಪಾದನಾ ಪ್ರಕ್ರಿಯೆಯಲ್ಲಿ ಪಾದರಸ ಮುಕ್ತ ಪರ್ಯಾಯ ಉತ್ಪನ್ನಗಳತ್ತ ಮತ್ತು ಪಾದರಸೇತರ ತಂತ್ರಜ್ಞಾನದತ್ತ ಸಾಗಲು ಕೋರುತ್ತದೆ. ಇದು ಸಂಶೋಧನೆ ಮತ್ತು ಅಭಿವೃದ್ಧಿಗೆ ಚಾಲನೆ ನೀಡುತ್ತದೆ ಮತ್ತು ನಾವಿನ್ಯತೆಯನ್ನು ಉತ್ತೇಜಿಸುತ್ತದೆ.

****