Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಿವೃತ್ತಯಾಗುತ್ತಿರುವ ರಾಜ್ಯಸಭಾ ಸದಸ್ಯರಿಗೆ ಪ್ರಧಾನ ಮಂತ್ರಿ ವಿದಾಯ ಭಾಷಣ


ಪ್ರಧಾನ ಮಂತ್ರಿ ಶ್ರಿ ನರೇಂದ್ರ ಮೋದಿ ಅವರು ಇಂದು ನಿವೃತ್ತರಾಗುತ್ತಿರುವ ಎಲ್ಲಾ ರಾಜ್ಯ ಸಭಾ ಸದಸ್ಯರ ಕೊಡುಗೆಗಳನ್ನು ಶ್ಲಾಘಿಸಿದರಲ್ಲದೆ ಅವರಿಗೆ ಉತ್ತಮ ಭವಿಷ್ಯವನ್ನು ಹಾರೈಸಿದರು.

 ರಾಜ್ಯ ಸಭಾದಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಪ್ರಧಾನ ಮಂತ್ರಿ ಅವರು ಸದನದಿಂದ ನಿವೃತ್ತರಾಗುತ್ತಿರುವ ಸದಸ್ಯರು ಇನ್ನು ಮುಂದೆ ಸಮಾಜ ಸೇವೆಯಲ್ಲಿ ಇನ್ನಷ್ಟು ಶಕ್ತಿಶಾಲಿಯಾದ ಪಾತ್ರವನ್ನು ವಹಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಅವರೆಲ್ಲರೂ ವಿಶೇಷವಾದ ಮಹತ್ವವನ್ನು ಹೊಂದಿದ್ದಾರೆ, ಮತ್ತು ತಮ್ಮದೇ ಆದ ರೀತಿಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು. ತಮ್ಮ ಸಾಮರ್ಥ್ಯವನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಬಳಸಿ ಅವರು ದೇಶದ ಭವ್ಯ ಭವಿಷ್ಯತ್ತಿಗಾಗಿ ಕೆಲಸ ಮಾಡಿದ್ದಾರೆ. ದೇಶವು ಅವರ ಕೊಡುಗೆಯನ್ನು ಎಂದೂ ಮರೆಯದು ಎಂದೂ ಪ್ರಧಾನ ಮಂತ್ರಿಗಳು ಹೇಳಿದರು . .

ಮೇಲ್ಮನೆ, ಹಲವು ಹಿರಿಯ ಸದಸ್ಯರೊಂದಿಗೆ ತನ್ನದೇ ಆದ ವಿಶಿಷ್ಟ ಮಹತ್ವವನ್ನು ಹೊಂದಿದೆ. ಅದು ನೀತಿ ರೂಪಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದೂ ಅವರು ಹೇಳಿದರು.

ಪ್ರಧಾನ ಮಂತ್ರಿಗಳು ನಿವೃತ್ತರಾಗುತ್ತಿರುವ ಹಲವು ಸಂಸತ್ ಸದಸ್ಯರನ್ನು ವಿಶೇಷವಾಗಿ ಪ್ರಸ್ತಾಪಿಸಿ ಅವರ ಕೊಡುಗೆಗಳನ್ನು ಉಲ್ಲೇಖಿಸಿದರು

ತ್ರಿವಳಿ ತಲಾಖಿನ ಬಗ್ಗೆ ಬಹಳ ಧೀರ್ಘ ಅವಧಿಯಿಂದ ನಿರ್ಧಾರ ಬಾಕಿ ಉಳಿದಿರುವ ಸಂಧರ್ಭದಲ್ಲಿ ನಿವೃತ್ತರಾಗುತ್ತಿರುವ ಸದಸ್ಯರು ಸಂಸತ್ತಿನ ಭಾಗವಾಗದೇ ಇರುವುದು ದುರದೃಷ್ಟಕರ ಸಂಗತಿ ಎಂದೂ ಪ್ರಧಾನ ಮಂತ್ರಿಗಳು ಹೇಳಿದರು.

ನಿವೃತ್ತರಾಗುತ್ತಿರುವ ಸದಸ್ಯರಿಗೆ ಸಂಸತ್ತಿನ ದ್ವಾರಗಳು ಮತ್ತು ಪ್ರಧಾನ ಮಂತ್ರಿ ಕಚೇರಿಯ ದ್ವಾರಗಳು ಸದಾ ತೆರೆದಿರುತ್ತವೆ ಎಂದು ಭರವಸೆ ನೀಡಿದರಲ್ಲದೆ , ಪ್ರಮುಖ ವಿಷಯಗಳ ಬಗ್ಗೆ ಚಿಂತನೆಯನ್ನು ಹಂಚಿಕೊಳ್ಳುವುದನ್ನು ಮುಂದುವರಿಸಬೇಕು ಎಂದೂ ಅವರಿಗೆ  ಪ್ರಧಾನ ಮಂತ್ರಿಯವರು ಮನವಿ ಮಾಡಿದರು.

***