ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಲಾಶಯ ಸುರಕ್ಷತೆ ವಿಧೇಯಕ 2018ರ ಮಂಡನೆ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.
ಪ್ರಯೋಜನಗಳು:
ಇದು ಅಣೆಕಟ್ಟೆಗಳ ಸುರಕ್ಷತೆ ಮತ್ತು ಅಂಥ ಅಣೆಕಟ್ಟೆಗಳ ಪ್ರಯೋಜನದ ಹಿತ ಕಾಯಲು ಭಾರತದ ಎಲ್ಲ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಏಕರೂಪದ ಜಲಾಶಯ ಸುರಕ್ಷತೆ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ. ಇದು ಜನ ಮತ್ತು ಜಾನುವಾರುಗಳ ಜೀವ ಮತ್ತು ಆಸ್ತಿಯ ರಕ್ಷಣೆಗೂ ನೆರವಾಗುತ್ತದೆ.
ಭಾರತದ ಮತ್ತು ಅಂತಾರಾಷ್ಟ್ರೀಯ ಪ್ರಮುಖ ತಜ್ಞರೊಂದಿಗೆ ವಿಸ್ತೃತ ಸಮಾಲೋಚನೆಯ ಬಳಿಕ ಕರಡು ಮಸೂದೆಯನ್ನು ಆಖೈರುಗೊಳಿಸಲಾಗುತ್ತದೆ.
ವಿವರಗಳು:
ರಾಷ್ಟ್ರೀಯ ಅಣೆಕಟ್ಟೆ ಸುರಕ್ಷತಾ ಪ್ರಾಧಿಕಾರ
ಅಣೆಕಟ್ಟೆ ಸುರಕ್ಷತೆ ಕುರಿತ ರಾಜ್ಯ ಸಮಿತಿ
ಇದು ರಾಜ್ಯದಲ್ಲಿರುವ ಎಲ್ಲ ನಿರ್ದಿಷ್ಟ ಅಣೆಕಟ್ಟೆಗಳ ಸೂಕ್ತ ನಿಗಾ, ಪರಿಶೀಲನೆ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಖಾತ್ರಿ ಒದಗಿಸುತ್ತದೆ ಮತ್ತು ಅವುಗಳ ಸುರಕ್ಷಿತ ಕಾರ್ಯಾಚರಣೆಯ ಖಾತ್ರಿ ನೀಡುತ್ತದೆ. ತರುವಾಯ ಇದು, ಎಲ್ಲ ರಾಜ್ಯಗಳಿಗೂ ‘ರಾಜ್ಯಗಳ ಅಣೆಕಟ್ಟೆ ಸುರಕ್ಷತಾ ಸಂಸ್ಥೆ’ ರಚನೆಗೆ ಅವಕಾಶ ಒದಗಿಸುತ್ತದೆ, ಇದನ್ನು ಅಣೆಕಟ್ಟು-ವಿನ್ಯಾಸಗಳು, ಜಲ-ಯಾಂತ್ರಿಕ ಇಂಜಿನಿಯರಿಂಗ್, ಜಲ ವಿಜ್ಞಾನ, ಭೂ-ತಾಂತ್ರಿಕ ಶೋಧನೆ, ಉಪಕರಣ ಮತ್ತು ಅಣೆಕಟ್ಟೆ-ಪುನರ್ವಸತಿ ಕ್ಷೇತ್ರಗಳಿಗೆ ಸಂಬಂಧಿಸಿದ ಅಧಿಕಾರಿಗಳು ಅದರಲ್ಲೂ ಅಣೆಕಟ್ಟಿನ ಸುರಕ್ಷತೆಯ ಆದ್ಯತೆಯ ಅಧಿಕಾರಿಗಳು ನಿರ್ವಹಿಸುತ್ತಾರೆ.
ಹಿನ್ನೆಲೆ:
ಭಾರತದಲ್ಲಿ 5200ಕ್ಕೂ ಹೆಚ್ಚು ದೊಡ್ಡ ಅಣೆಕಟ್ಟೆಗಳಿವೆ ಮತ್ತು 450 ನಿರ್ಮಾಣ ಹಂತದಲ್ಲಿವೆ. ಇದರ ಜೊತೆಗೆ ಸಾವಿರಾರು ಮಧ್ಯಮ ಮತ್ತು ಸಣ್ಣ ಅಣೆಕಟ್ಟೆಗಳಿವೆ. ಭಾರತದಲ್ಲಿ ಅಣೆಕಟ್ಟೆಗಳ ಸುರಕ್ಷತೆಗಾಗಿ ಕಾನೂನು ಮತ್ತು ಸಾಂಸ್ಥಿಕ ಸ್ವರೂಪದ ಕೊರತೆಯಿಂದ ಅಣೆಕಟ್ಟೆಗಳ ಸುರಕ್ಷತೆ ಕಾಳಜಿಯ ವಿಷಯವಾಗಿದೆ. ಅಸುರಕ್ಷಿತ ಅಣೆಕಟ್ಟೆಗಳು ಅಪಾಯಕಾರಿಯಾಗಿದ್ದು, ಅಣೆಕಟ್ಟೆ ಒಡೆದರೆ ಅದು ಅಪಾರ ಪ್ರಮಾಣದ ಜೀವಹಾನಿ ಮತ್ತು ಆಸ್ತಿ ಹಾನಿಗೆ ಕಾರಣವಾಗುತ್ತದೆ.
ಅಣೆಕಟ್ಟೆ ಸುರಕ್ಷತೆ ವಿಧೇಯಕ 2018, ಅಣೆಕಟ್ಟೆಗಳ ನಿಯಮಿತ ತಪಾಸಣೆ, ತುರ್ತು ಕ್ರಿಯಾ ಯೋಜನೆ, ಸಮಗ್ರ ಅಣೆಕಟ್ಟೆ ಸುರಕ್ಷತಾ ಪರಾಮರ್ಶೆ, ಸೂಕ್ತ ದುರಸ್ತಿ ಮತ್ತು ಅಣೆಕಟ್ಟೆ ಸುರಕ್ಷತೆಯ ನಿಧಿ ನಿರ್ವಹಣೆ, ಸುರಕ್ಷತೆಯ ಕೈಪಿಡಿ ಮತ್ತು ಉಪಕರಣ ಸೇರಿದಂತೆ ಅಣೆಕಟ್ಟೆಗಳ ಸುರಕ್ಷತೆಯ ಎಲ್ಲ ವಿಚಾರಗಳನ್ನೂ ನಿಭಾಯಿಸುತ್ತದೆ. ಇದು ಅಣೆಕಟ್ಟೆಯ ಮಾಲೀಕರ ಮೇಲೆ ಅಣೆಕಟ್ಟೆಯ ಸುರಕ್ಷತೆಯ ಮೇಲುಸ್ತುವಾರಿಯನ್ನು ಹೊರಿಸುತ್ತದೆ ಮತ್ತು ನಿರ್ದಿಷ್ಟ ಕ್ರಮಗಳಲ್ಲಿನ ತಪ್ಪು ಒಪ್ಪುಗಳಿಗೆ ದಂಡನೆಯ ಅವಕಾಶ ಒದಗಿಸುತ್ತದೆ.
*****
AKT/VBA