Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜುಲೈ 28 ಮತ್ತು 29 ರಂದು ಲಕ್ನೋಗೆ ಪ್ರಧಾನ ಮಂತ್ರಿ ಭೇಟಿ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 28 ಮತ್ತು 29 ರಂದು ಲಕ್ನೋಗೆ ಭೇಟಿ ನೀಡಲಿದ್ದಾರೆ.

28 ರಂದು ಅವರು “ನಗರ ಭೂದೃಶ್ಯ ಪರಿವರ್ತನೆ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಗರಾಭಿವೃದ್ದಿಗೆ ಸಂಬಂಧಿಸಿ ಪ್ರಮುಖ ಸರಕಾರೀ ಉಪಕ್ರಮಗಳ ಮೂರನೇ ವಾರ್ಷಿಕೋತ್ಸವ ಆಚರಣೆ ಇದಾಗಿದೆ. ಅವುಗಳೆಂದರೆ ಪ್ರಧಾನ ಮಂತ್ರಿ ಆವಾಸ್ ಯೋಜನಾ (ನಗರ) , ಅಟಲ್ ನಗರ ಪರಿವರ್ತನೆ ಪುನರುತ್ಥಾನ ಯೋಜನೆ,(ಅಮೃತ್) ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳು.

ಪ್ರಧಾನ ಮಂತ್ರಿ ಅವರು ನಗರ ಅಭಿವೃದ್ದಿಗೆ ಸಂಬಂಧಿಸಿದ ಪ್ರಮುಖ ಯೋಜನೆಗಳ ಪ್ರದ್ರಶನಕ್ಕೂ ಭೇಟಿ ನೀಡುವರು ಮತ್ತು ಅವರು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ತಲಾ ಒಬ್ಬರು ಪಿ.ಎಂ.ಎ.ವೈ (ಯು) ಯೋಜನೆಯ ಫಲಾನುಭವಿಗಳನ್ನೊಳಗೊಂಡಂತೆ 35 ಫಲಾನುಭವಿಗಳ ಜೊತೆಯಲ್ಲಿ ಸಂವಾದ ನಡೆಸುವರು.

ಅವರು ಉತ್ತರಪ್ರದೇಶದ ವಿವಿಧ ನಗರಗಳ ಪಿ.ಎಂ.ಎ.ವೈ. ಫಲಾನುಭವಿಗಳಿಂದ ವೀಡಿಯೋ ಸಂಪರ್ಕ ಮೂಲಕ ಹಿಮ್ಮಾಹಿತಿ ಪಡೆಯುವರು

ಉತ್ತರಪ್ರದೇಶದಲ್ಲಿ ಅವರು ವಿವಿಧ ಪ್ರಮುಖ ಯೋಜನೆಗಳ ಅಡಿಯಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಶಿಲಾನ್ಯಾಸ ಮಾಡುವರು. ಅವರು ಸಾರ್ವಜನಿಕ ಸಭೆಗಳನ್ನುದ್ದೇಶಿಸಿಯೂ ಮಾತನಾಡುವರು.

ಹೂಡಿಕೆ ಆಕರ್ಷಿಸುವ ಮತ್ತು ಕೈಗಾರಿಕೆಗಳನ್ನು ಉತ್ತೇಜಿಸುವ ಪ್ರಯತ್ನದ ಅಂಗವಾಗಿ ಉತ್ತರ ಪ್ರದೇಶ ಸರಕಾರವು 2018 ರ ಫೆಬ್ರವರಿಯಲ್ಲಿ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಿತ್ತು. ಇದು ಈಗ ಮರುನವೀಕರಿಸಬಹುದಾದ ಇಂಧನ , ಮೂಲಸೌಕರ್ಯ, ಇಂಧನ, ಮಾಹಿತಿ ತಂತ್ರಜ್ಞಾನ ಮತ್ತು ಇಲೆಕ್ಟ್ರಾನಿಕ್ ಉತ್ಪನ್ನ , ಪ್ರವಾಸೋದ್ಯಮ ಸಹಿತ ಇತರ ಕ್ಷೇತ್ರಗಳಲ್ಲಿ 4.28 ಲಕ್ಷ ಕೋ.ರೂ.ಗಳಿಗೂ ಅಧಿಕ ಮೌಲ್ಯದ ಹೂಡಿಕೆಯನ್ನು ತಂದಿದೆ.

ಕೆಲವೇ ತಿಂಗಳುಗಳಲ್ಲಿ 60,000 ಕೋ.ರೂ. ಮೊತ್ತದ 81 ಯೋಜನೆಗಳ ಹೂಡಿಕೆ ಪ್ರಸ್ತಾಪಗಳು ಈಗ ಶಿಲಾನ್ಯಾಸದ ಮೂಲಕ ಕಾರ್ಯರೂಪಕ್ಕೆ ಬಂದಿವೆ. ಜುಲೈ 29ರಂದು ಲಕ್ನೋದಲ್ಲಿ ಪ್ರಧಾನ ಮಂತ್ರಿಯವರು ಈ ಯೋಜನೆಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವರು.

***