Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜುಲೈ 1, 2018ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚುವರಿ ಶೇ 2 ತುಟ್ಟಿ ಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಪರಿಹಾರ (ಡಿಆರ್) ನೀಡಲು ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಜುಲೈ 1, 2018ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚುವರಿ  ಕಂತು ಶೇ 2 ತುಟ್ಟಿ ಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಪರಿಹಾರ (ಡಿಆರ್)   ಬಿಡುಗಡೆಗೆ ಅನುಮೋದನೆ ನೀಡಿದೆ.  ಬೆಲೆ ಏರಿಕೆಗೆ ಪರಿಹಾರಾರ್ಥಕ ಕ್ರಮವಾಗಿ ಪ್ರಸ್ತುತ ಶೇ7ರಷ್ಟಿರುವ ಮೂಲ ವೇತನಕ್ಕೆ ಶೇ. 2ರಷ್ಟು ಹೆಚ್ಚಳವನ್ನು ಮಾಡಲಾಗಿದೆ.   

 

ಡಿಎ ಮತ್ತು ಡಿಆರ್ ಹೆಚ್ಚಳದಿಂದ ಬೊಕ್ಕಸಕ್ಕೆ  ವರ್ಷಂಪ್ರತಿ ಒಟ್ಟು ರೂ. 6112.20 ಕೋಟಿ ಹೊರೆ ಬೀಳಲಿದೆ.  ಈ ಹೊರೆ  2018-19 ಆರ್ಥಿಕ ವರ್ಷದಲ್ಲಿ ರೂ.4074.80 ಕೋಟಿ ಆಗಲಿದೆ ( ಜುಲೈ,2018 ರಿಂದ ಫೆಬ್ರವರಿ, 2019 ರವರೆಗೆ  8 ತಿಂಗಳ ಅವಧಿಯಲ್ಲಿ) . ಇದರಿಂದ  48.41 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 62.03 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ.  

 

ಈ ಹೆಚ್ಚಳವನ್ನು ಏಳನೇ ವೇತನ ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ರೂಪಿಸಿರುವ ಸ್ವೀಕೃತ ಸೂತ್ರಗಳಿಗೆ ಅನುಗುಣವಾಗಿ ಮಾಡಲಾಗಿದೆ.   

——–