Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮೀನುಗಾರಿಕೆ, ಹೈನುಗಾರಿಕೆ ಮತ್ತು ಪಶು ಸಂಗೋಪನೆ ಕ್ಷೇತ್ರದಲ್ಲಿ ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ ಹಾಗೂ ಉತ್ತರ ಐರ್ಲೆಂಡ್ ನಡುವಿನ ತಿಳಿವಳಿಕೆ ಒಪ್ಪಂದದ ಬಗ್ಗೆ ಸಂಪುಟಕ್ಕೆ ವಿವರಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ (ಯು.ಕೆ.) ಮತ್ತು ಉತ್ತರ ಐರ್ಲೆಂಡ್ ಗಳ ನಡುವೆ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರದ ಸಹಕಾರ ಕುರಿತಂತೆ ಆಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರ ನೀಡಲಾಯಿತು. ಈ ಎಂ.ಓ.ಯು.ಗೆ. 17.04.2018ರಂದು ಅಂಕಿತ ಹಾಕಲಾಗಿತ್ತು.
 
ಭಾರತೀಯ ಜಾನುವಾರು ಮತ್ತು ಮೀನು ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರ ವರ್ಧನೆಯ ಗುರಿಯನ್ನು ಈ ತಿಳಿವಳಿಕೆ ಒಪ್ಪಂದ ಹೊಂದಿದೆ. 
 
ಪರಿಣಾಮ :
 
        ಈ ಪಾಲುದಾರಿಕೆಯು ಜಾನುವಾರುಗಳ ಆರೋಗ್ಯ, ಜಾನುವಾರು ತಳಿ ಮತ್ತು ಮೀನುಗಾರಿಕೆ ಸಂವರ್ಧನೆ ಸುಧಾರಣೆ ಮಾಡುವ ನಿರೀಕ್ಷೆ ಇದ್ದು, ಹೈನುಗಾರಿಕೆ, ಮೀನುಗಾರಿಕೆ ಮತ್ತು ಪಶು ಉತ್ಪನ್ನಗಳನ್ನು ದೇಶೀಯ ಬಳಕೆಗೆ ಮತ್ತು ರಫ್ತಿಗಾಗಿ ಹೆಚ್ಚಳ ಮಾಡುವ ಗುರಿಯನ್ನು ಹೊಂದಿದೆ. ಈ ತಿಳಿವಳಿಕೆ ಒಪ್ಪಂದವು ಜಾನುವಾರು ಸಂಗೋಪನೆ, ಮೀನುಗಾರಿಕೆ ಮತ್ತು ಹೈನುಗಾರಿಕೆಯ ಸಹಕಾರ ಮತ್ತು ಸಮಾಲೋಚನೆಯನ್ನು ಈ ಕೆಳಗಿನವುಗಳ ಮೂಲಕ ಉತ್ತೇಜಿಸಲಿದೆ.: 
 
·   ಪರಸ್ಪರ ಹಿತಾಸಕ್ತಿಯ ವಿಚಾರಗಳು ಅಥವಾ ಜಾನುವಾರು ಸಂಗೋಪನೆ, ಮೀನುಗಾರಿಕೆ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳ ಹಿತಾಸಕ್ತಿಗೆ ಸಂಬಂಧಿಸಿದಂತೆ.
 
·   ಜಾನುವಾರು ಆರೋಗ್ಯ ಮತ್ತು ಸಂಕೋಪನೆ, ತಳಿ, ಹೈನುಗಾರಿಕೆ ಮತ್ತು ಮೀನುಗಾರಿಕೆಯಲ್ಲಿನ  ಸಹಯೋಗ
 
·   ಪಶು ಆಹಾರ ಮತ್ತು ಮೇವಿನ ಪೌಷ್ಟಿಕಾಂಶ ಹೆಚ್ಚಳದ ನಿರ್ವಹಣೆ ಮತ್ತು ವ್ಯವಸ್ಥೆ ಹಾಗೂ ಜಾನುವಾರು ಉತ್ಪಾದಕತೆ ಮತ್ತು ಉತ್ಪಾದನೆಯಲ್ಲಿ ಹೆಚ್ಚಳದ ಸಾಕಾರಕ್ಕಾಗಿ ಕೊರತೆ ಇರುವ ಪ್ರದೇಶಗಳಿಗೆ ಬೃಹತ್ ಪ್ರಮಾಣದಲ್ಲಿ ಸಾಗಣೆ.
 
·   ಜಾನುವಾರು, ಪಶು ಸಂಗೋಪನೆ ಮತ್ತು ಪಶು ಉತ್ಪನ್ನಗಳ ವಿಚಾರಕ್ಕೆ ಸಂಬಂಧಿಸಿದ ನೈರ್ಮಲ್ಯ.
 
·   ಮೇವು ಬೆಳೆಯೊಂದಿಗೆ ಅತ್ಯಾಧುನಿಕ ಮೇವು ಮರಗಳ ತಳಿ ನರ್ಸರಿಗಳ ಅಭಿವೃದ್ಧಿ ಮತ್ತು ಬರ ಪೀಡಿತ ಪ್ರದೇಶಗಳಲ್ಲಿ ಭೂಮಿಯಲ್ಲಿ ತೇವಾಂಶ ಸಂರಕ್ಷಣೆಯ ಮೂಲಕ ಸಮಗ್ರ ಕೃಷಿ ಪದ್ಧತಿ ಸೇರಿದಂತೆ ಕೃಷಿ -ಅರಣ್ಯ ಉತ್ತೇಜನ.
 
·   ಪರಸ್ಪರ ಒಪ್ಪಿತ ಕ್ಷೇತ್ರಗಳಲ್ಲಿ ಅಧ್ಯಯನ ಪ್ರವಾಸ / ತರಬೇತಿಗಾಗಿ ವೈಜ್ಞಾನಿಕ ಸಿಬ್ಬಂದಿಗಳ ವಿನಿಮಯ.
 
·   ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಬಳಕೆಯೂ ಸೇರಿದಂತೆ ನಾವಿನ್ಯ ಕೃಷಿ ವಿಸ್ತರಣೆ ದೃಷ್ಟಿಕೋನದಲ್ಲಿ ಅಡ್ಡ-ಕಲಿಕೆಗಾಗಿ  ಜಂಟಿ ಸಂಶೋಧನೆಯ ಸಹಯೋಗ.
 
·   ಜಂಟಿ ಹಿತಾಸಕ್ತಿಯ ಇತರ ಯಾವುದೇ ವಿಷಯ.
 
ಜಂಟಿ ಕಾರ್ಯಕ್ರಮ ರೂಪಿಸಲು ಮತ್ತು ಸಹಕಾರ ಮತ್ತು ಸಮಾಲೋಚನೆಗಾಗಿ ಪ್ರತಿ ಪಕ್ಷಕಾರರಿಂದ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಕಾರ್ಯ ಗುಂಪಿನ ರಚನೆ 
 
 ಹಿನ್ನೆಲೆ:
 
ಹಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರದ ಸಹಕಾರಕ್ಕಾಗಿ ಈ ತಿಳಿವಳಿಕೆ ಒಪ್ಪಂದಕ್ಕೆ ಭಾರತದ ಕೃಷಿ ಮತ್ತು ರೈತರ ಕಲ್ಯಾಣ  ಸಚಿವಾಲಯದ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆಯ (ಡಿಎಡಿಎಫ್) ಪ್ರತಿನಿಧಿ ಮತ್ತು ಯುನೈಟೆಡ್ ಕಿಂಗ್ಡಮ್ ಮತ್ತು ಉತ್ತರ ಐರ್ಲೆಂಡ್ ನ ಪರಿಸರ, ಆಹಾರ ಮತ್ತು ಗ್ರಾಮೀಣ ವ್ಯವಹಾರಗಳ ಇಲಾಖೆಗಳ ಪ್ರತಿನಿಧಿಗಳು ಏಪ್ರಿಲ್ 2018ರಂದು ಅಂಕಿತ ಹಾಕಿದ್ದರು.
 

——–