Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಉಜ್ಬೆಕಿಸ್ತಾನ್ ನಡುವೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರಗಳನ್ನು ಬಲಿಷ್ಠಗೊಳಿಸುವ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲು ಸಂಪುಟದ ಅಂಗೀಕಾರ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಉಜ್ಬೆಕಿಸ್ತಾನ್ ನಡುವೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ   ಸಹಕಾರಗಳನ್ನು ಬಲಿಷ್ಠಗೊಳಿಸುವ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ಅನುಮೋದನೆ ನೀಡಿತು. ಅಕ್ಟೋಬರ್ 01, 2018ರಂದು ಭಾರತ ಭೇಟಿ ನೀಡಲಿರುವ ಉಜ್ಬೆಕಿಸ್ತಾನದ ವಿಶೇಷ ಪ್ರಮುಖ ಗಣ್ಯರ ಅವಧಿಯಲ್ಲಿ ಈ ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಲಾಗುವುದು. 
 
ಪ್ರಯೋಜನಗಳು:
 
ಪ್ರವಾಸೋದ್ಯಮ ಕ್ಷೇತ್ರಗಳ ಈ ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕುವುದು ಎರಡೂ ದೇಶಗಳಲ್ಲಿ ಪ್ರವಾಸೋದ್ಯಮ ವಲಯದ ಸಹಕಾರಗಳನ್ನು ವೃದ್ಧಿಸಲು ಸಾಂಸ್ಥಿಕ ವ್ಯವಸ್ಥೆಗಳನ್ನು  ಸೃಷ್ಠಿಸಲಿದೆ. ದೇಶಕ್ಕೆ ಉಜ್ಬೆಕಿಸ್ತಾನ್ ನಿಂದ ಬರುವ  ವಿದೇಶಿ ಪ್ರವಾಸಿಗಳ ವೃದ್ಧಿಗೆ ಇದು ಸಹಾಯ ಮಾಡಲಿದೆ. ಈ ಹೆಜ್ಜೆ ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಠಿ ಮಾಡಲಿದೆ. ಎಲ್ಲ ಭಾಗೀದಾರರಿಗೂ ಪರಸ್ಪರ ಪ್ರಯೋಜನವಾಗುವಂತಹ ಸಹಕಾರದ ಕ್ಷೇತ್ರಗಳು ಮತ್ತು ವಿಸ್ತರಿತ ಚೌಕಟ್ಟಿನಲ್ಲಿ ದೀರ್ಘಾವಧಿ ಪ್ರವಾಸೋದ್ಯಮ ಸಹಕಾರಗಳ ಅನುಕೂಲಕರ ಪರಿಸ್ಥಿತಿಗಳನ್ನು ಈ ತಿಳುವಳಿಕಾ ಒಪ್ಪಂದಗಳು ಸೃಷ್ಠಿಸುತ್ತವೆ. ಇದರ ಜೊತೆ, ಗುರಿಯಿಟ್ಟ ಉದ್ಧೇಶಗಳು ಸಾಕಾರಗೊಳ್ಳಲು ತೆಗೆದುಕೊಳ್ಳಲು ಕಾರ್ಯಯೋಜನೆಗಳ ಅನುಷ್ಠಾನದಲ್ಲಿ ಅತ್ಯುತ್ತಮ ಅಭ್ಯಾಸಕ್ರಮಗಳನ್ನು ಅಳವಡಿಸುವ ಅವಕಾಶಗಳನ್ನು ಈ ತಿಳುವಳಿಕಾ ಒಪ್ಪಂದಗಳು ಮಾಡಿಕೊಡುತ್ತವೆ.