ಪಿಎಂಇಂಡಿಯಾ
ಭಾರತ ಮತ್ತು ವಿದೇಶಗಳ ತೈಲ ಮತ್ತು ಅನಿಲ ಕ್ಷೇತ್ರದ ತಜ್ಞರು ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಅವರನ್ನು ಭೇಟಿಯಾದರು. ಸೌದಿ ಅರೇಬಿಯ ಮತ್ತು ಯು.ಎ.ಇ.ಗಳ ಸಚಿವರು, ಸೌದಿ ಆರಮ್ಕೊ, ಅಡ್ನೊಕ್ , ಬಿಪಿ, ರೊಸನೆಫ್ಟ್, ಐ.ಹೆಚ್.ಎಸ್. ಮಾರ್ಕಿಟ್ ,ಪಯೋನೀರ್ ನ್ಯಾಚುರಲ್ ರಿಸೋರ್ಸಸ್ ಕಂಪನಿ, ಎಮರ್ಸನ್ ಎಲೆಕ್ಟ್ರಿಕ್ ಕಂಪನಿ, ಶ್ಲುಮಬೆರ್ಗರ್ ಲಿಮಿಟೆಡ್ , ವುಡ್ ಮೆಕೆನಜಿ, ವಿಶ್ವ ಬ್ಯಾಂಕ್,ಅಂತರರಾಷ್ಟ್ರೀಯ ಇಂಧನ ಎಜೆನ್ಸಿ (ಐ.ಇ.ಎ), ನಿಪೆಪ್, ಬ್ರೂಕಿಂಗಸ್ ಇಂಡಿಯ ಮತ್ತು ಭೂತಳದಿಂದ ಕಚ್ಚಾ ಅನಿಲ ಖನನಮಾಡಿ ಮೇಲೆತ್ತುವ ( ಅಪ್ಸ್ಟ್ರೀಮ್) ಮತ್ತು ಕಚ್ಚಾ ತೈಲ/ಅನಿಲಗಳ ಸಂಸ್ಕರಣಾ ಪ್ರಕ್ರಿಯೆಗಳಲ್ಲಿ (ಡೌನ್ ಸ್ಟ್ರೀಮ್) ತೊಡಗಿಕೊಂಡಿರುವ ವಿವಿಧ ಭಾರತೀಯ ಕಂಪನಿಗಳ ತಜ್ಞರು ಮತ್ತುಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕೇಂದ್ರ ಸಚಿವರುಗಳಾದ ಶ್ರೀ ಅರುಣ್ ಜೈಟ್ಲೆ ಮತ್ತು ಶ್ರೀ ಧರ್ಮೇಂದ್ರ ಪ್ರಧಾನ್ , ನೀತಿ ಆಯೋಗದ ಉಪ-ಗೌರವಾಧ್ಯಕ್ ಡಾ. ರಾಜೀವ್ ಕುಮಾರ್ ಮತ್ತುಕೇಂದ್ರ ಸರಕಾರ ಮತ್ತು ನೀತಿ ಆಯೋಗದ ಹಿರಿಯ ಅಧಿಕಾರಿಗಳು ಸಂವಾದದಲ್ಲಿ ಭಾಗವಹಿಸಿದ್ದರು.
ಭಾರತದಲ್ಲಿ ವ್ಯಾಪಾರ ಮಾಡಲು ಸುಲಭವಾಗುವಂತಹ, ಅದರಲ್ಲೂ ಇಂಧನ ಕ್ಷೇತ್ರದಲ್ಲಿ, ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರಕಾರವು ತೆಗೆದುಕೊಂಡಕ್ರಮಗಳ ಬಗ್ಗೆ ಜಾಗತಿಕ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಮತ್ತು ತಜ್ಞರು ಪ್ರಶಂಸೆ ವ್ಯಕ್ತಪಡಿಸಿದರು. ಬಂಡವಾಳ ಹೂಡಿಕೆ ನಿಟ್ಟಿನಲ್ಲಿ ಭಾರತದಸ್ಪರ್ಧಾತ್ಮಕ ಶ್ರೇಣ್ಯಾಂಕ ಕೆಳಮಟ್ಟದ 56ರಿಂದ ಮೇಲ್ಮಟ್ಟದ 44ಕ್ಕೆ ಏರಿದ ವಿಷಯವನ್ನು ಈ ಸಂದರ್ಭದಲ್ಲಿ ತಜ್ಞರು ವಿಶೇಷವಾಗಿ ಉಲ್ಲೇಖಿಸಿದರು.
ಭಾರತದಲ್ಲಿ ತೈಲ ಮತ್ತು ಅನಿಲ ಮೂಲಸೌಕರ್ಯಗಳ ವಿಸ್ತರಣೆ; ಖನನ ಮತ್ತು ಉತ್ಪಾದನೆಗಳ ಹೆಚ್ಚಿಸುವುದು; ಸೌರ ಶಕ್ತಿ ಮತ್ತು ಜೈವಿಕ ಇಂಧನಗಳಸಂಭಾವ್ಯ ಸಾಧ್ಯತೆಗಳು ಮತ್ತು ಇಂಧನ ಕ್ಷೇತ್ರದಲ್ಲಿ ಕೇಂದ್ರ ಸರಕಾರದ ಸಮಗ್ರ ವಿಧಾನಗಳು – ಮುಂತಾದವುಗಳು ಚರ್ಚೆಯ ವಿಷಯಗಳಾದವು. ನೀತಿ-ನಿಯಮಾವಳಿ ರೂಪಿಸುವ ವಿಷಯದಲ್ಲಿ ವಿವಿಧ ಭಾಗೀದಾರರನ್ನು ಒಟ್ಟಾಗಿ ಸೇರಿಸಿ ನಡೆಸುವ ಈ ಅನನ್ಯ ರೀತಿಯ ಮಾತುಕತೆ ಪ್ರಕ್ರಿಯೆ ಬಗ್ಗೆ ತಜ್ಞರು ಪ್ರಶಂಸೆವ್ಯಕ್ತಪಡಿಸಿದರು.
ಇಂಧನ ಕ್ಷೇತ್ರದ ಜಾಗತಿಕ ನಾಯಕರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ಅವರು, ಭಾರತವನ್ನು ತೈಲ ಮತ್ತು ಅನಿಲ ಮಾರುಕಟ್ಟೆಯಲ್ಲಿಮಹತ್ವಪೂರ್ಣ ಸ್ಥಾನ ಪಡೆದ ಬಗ್ಗೆ ವಿವರಿಸಿದರು. ತೈಲ ಮಾರುಕಟ್ಟೆ ಉತ್ಪಾದಕರಿಂದ ನಿಯಂತ್ರಿಸಲ್ಪಡುತ್ತದೆ; ತೈಲದ ಗುಣಮಟ್ಟ ಮತ್ತು ಬೆಲೆಗಳೆರಡನ್ನೂತೈಲ ಉತ್ಪಾದಕ ದೇಶಗಳು ನಿರ್ಧರಿಸುತ್ತವೆ. ಸಾಕಷ್ಟು ಉತ್ಪಾದನೆಯಿದ್ದರೂ ಕೂಡಾ ತೈಲ ಕ್ಷೇತ್ರದಲ್ಲಿ ಅನನ್ಯ ಮಾರ್ಕೆಟಿಂಗ್ ವ್ಯವಸ್ಥೆಯಿಂದಾಗಿ ತೈಲಬೆಲೆಯ ಹೆಚ್ಚಳ ಸಾಧ್ಯವಾಗಿದೆ. ಇತರ ಮಾರುಕಟ್ಟೆಗಳಲ್ಲಿ ಇರುವಂತೆ , ತೈಲ ಮಾರುಕಟ್ಟೆಯಲ್ಲೂ ಕೂಡಾ ಉತ್ಪಾದಕರು ಮತ್ತು ಗ್ರಾಹಕರ ನಡುವೆಪಾಲುಗಾರಿಕೆಯಾಗಬೇಕು ಎಂಬ ಸಮರ್ಥನೀಯ ವಾದವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದರು.ಇದರಿಂದಾಗಿ ಪುನಶ್ಚೇತನಹಾದಿಯಲ್ಲಿರುವ ಜಾಗತಿಕ ಆರ್ಥಿಕತೆಯಲ್ಲಿ ಸ್ಥಿರತೆಗೆ ಸಹಾಯವಾಗಲಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತಕ್ಕೆ ಪ್ರಸಕ್ತವಾದ ವಿಷಯಗಳಿಗೆ ಸಂಬಂಧಪಟ್ಟಂತೆ ಕೆಲವೊಂದು ಪ್ರಮುಖ ನೀತಿ-ನಿಯಮಾವಳಿಗಳನ್ನುತಜ್ಞರ ಗಮನಕ್ಕೆ ತಂದರು. ಮೊದಲನೆಯದಾಗಿ, ಕಚ್ಚಾತೈಲದ ಬೆಲೆ ಏರಿಕೆಯಿಂದಾಗಿ , ಗಂಭೀರ ಸಂಪನ್ಮೂಲ ಬಿಕ್ಕಟ್ಟು ಸೇರಿದಂತೆ ಹಲವು ಆರ್ಥಿಕಸವಾಲುಗಳನ್ನು ತೈಲ ಬಳಕೆಯ ರಾಷ್ಟ್ರವಾಗಿ ಎದುರಿಸಬೇಕಾಗುತ್ತದೆ ಎಂದು ವಿಶೇಷವಾಗಿ ತಿಳಿಸಿದರು. ಈ ಅಂತರಕ್ಕೆ ಸೇತುವೆ ಬೆಸೆಯಲು ತೈಲಉತ್ಪಾದಕ ದೇಶಗಳ ಸಹಕಾರವು ಅತ್ಯಂತ ನಿರ್ಣಾಯಕ. ಅಭಿವೃದ್ಧಿಶೀಲ ದೇಶಗಳ ತೈಲ ಕ್ಷೇತ್ರದಲ್ಲಿ ವಾಣಿಜ್ಯ ಬಳಕೆಯ ಹೆಚ್ಚಳಕ್ಕಾಗಿ, ತಮ್ಮ ಹೂಡಿಕೆಹೆಚ್ಚುವರಿಗಳನ್ನು ವ್ಯವಸ್ಥಿತವಾಗಿ ಬಳಸುವಂತೆ, ತೈಲ ಉತ್ಪಾದನಾ ದೇಶಗಳಲ್ಲಿ ಪ್ರಧಾನಮಂತ್ರಿ ಅವರು ವಿನಂತಿ ಮಾಡಿದರು. ಎರಡನೆಯದಾಗಿ,ಖನನದಲ್ಲಿ ಅಧಿಕ ವಿಸ್ತೀರ್ಣ ಪ್ರದೇಶ ವ್ಯಾಪ್ತಿ ( ಏಕ್ರೇಜ್) ಬಗ್ಗೆ ಮಾತನಾಡುತ್ತಾ, ತಂತ್ರಜ್ಞಾನ ಹಾಗೂ ವ್ಯಾಪ್ತಿಯ ವಿಸ್ತರಣೆಗಳೆರಡರ ನಿಟ್ಟಿನಲ್ಲಿ ಅಭಿವೃದ್ಧಿಹೊಂದಿದ ದೇಶಗಳ ಸಹಕಾರಗಳನ್ನು ಅವರು ಕೋರಿದರು. ಮೂರನೆಯದಾಗಿ, ಅನಿಲ ಕ್ಷೇತ್ರದಲ್ಲಿ ವಿತರಣೆಯಲ್ಲಿ ಖಾಸಗಿ ಪಾಲ್ಗೊಳ್ಳುವಿಕೆಯಪಾತ್ರವಿರಬೇಕೆಂದು ಅವರು ಆಗ್ರಹಿಸಿದರು. ತಂತ್ರಜ್ಞಾನದ ಬಗ್ಗೆ ಮಾತನಾಡಿ, ನೈಸರ್ಗಿಕ ಅನಿಲ ವಾಣಿಜ್ಯ ಬಳಕೆಗಾಗಿ ಅತಿ ಒತ್ತಡ ಮತ್ತು ಅತಿ ಉಷ್ಣತೆಯತಂತ್ರಜ್ಞಾನಗಳ ಸಮರ್ಪಕ (ಅಗತ್ಯದ ) ಅನುಷ್ಠಾನಗಳ ಸಹಾಯಕ್ಕಾಗಿ ಅವರು ಅಭಿನಂದಿಸಿದರು. ಕೊನೆಯದಾಗಿ ಮತ್ತು ಪ್ರಾಮುಖ್ಯವಾಗಿ, ಪಾವತಿಯಕರಾರುಗಳ ಪುನರಾವಲೋಕನ (ಪರಾಮರ್ಶನ ) ಮಾಡಿದರೆ ಸ್ಥಳೀಯ ಹಣಗಳಲ್ಲಿ ತಾತ್ಕಾಲಿಕ ಪರಿಹಾರ ಸಾದ್ಯ ಎಂದು ಪ್ರಧಾನಮಂತ್ರಿ ಅವರುತಿಳಿಸಿದರು.
ಇಂಧನ ಕ್ಷೇತ್ರದಲ್ಲಿ ಸರಕಾರವು ತೆಗೆದುಕೊಂಡ ವಿವಿಧ ನೀತಿ ಉಪಕ್ರಮಗಳು ಮತ್ತು ಅಭಿವೃದ್ಧಿ ಮಾನದಂಡಗಳ ಕುರಿತಾಗಿ ಪ್ರಧಾನಮಂತ್ರಿ ಅವರುಮಾತನಾಡಿದರು.ವಿಶೇಷವಾಗಿ ಆಳವಾದ ಜಲತಲದಲ್ಲಿ ಮತ್ತು ಅತಿ ಒತ್ತಡ ಹಾಗೂ ಅತಿ ಉಷ್ಣತೆಯ ತೈಲಖನನ ಪ್ರಕ್ರಿಯೆಯ ತಂತ್ರಜ್ಞಾನ ಗಳಿಂದಾಗಿ ಅನಿಲಬೆಲೆ ನಿರ್ಧಾರದಲ್ಲಿ ಮತ್ತು ಮಾರ್ಕೇಟಿಂಗ್ ನಲ್ಲಿ ಉದಾರೀಕರಣ ನೀತಿ ಹೊಂದಿದ್ದೇವೆ , ಮತ್ತು ಓಪನ್ ಏಕ್ರೇಜ್ ಪರವಾನಗಿ ನೀತಿ, ಕೋಲ್ ಬೆಡ್ ಮೆಥನೆಯಪ್ರಾರಂಭಿಕ ಹಂತದಲ್ಲೇ ನಗದೀಕರಣ, ಸಣ್ಣ ತೈಲ ಕ್ಷೇತ್ರಗಳ ಕಂಡುಹಿಡಿಯುವಿಕೆಗಾಗಿ ಮತ್ತು ರಾಷ್ಟ್ರೀಯ ಮಟ್ಟದ ಭೂಕಂಪನ ಸರ್ವೇಕ್ಷಣೆ (ವೀಕ್ಷಣೆ)ಗಾಗಿಪ್ರೋತ್ಸಾಹಧನ ಮುಂತಾದವುಗಳನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಸಮಕಾಲೀನ ವಾಣಿಜ್ಯ ಉಪಯೋಗ (ಬಳಕೆ)ವಿಷಯವಾಗಿ ಮಾತನಾಡುತ್ತಾ , ಪ್ರಧಾನಮಂತ್ರಿ ಅವರು, ವಿಶೇಷವಾಗಿ ಪರಸ್ಪರ ವಿನಿಮಯದ ಉತ್ಪಾದನೆ ಗುತ್ತಿಗೆಯ ವಿಸ್ತರಣೆ ಕುರಿತಾಗಿ ಉಲ್ಲೇಖಿಸಿದರು.
PM's meeting with Global Oil and Gas Experts/CEOs. https://t.co/1ql1ZjskGT
— PMO India (@PMOIndia) October 15, 2018
via NaMo App pic.twitter.com/UK73XyjRul