ಒಡಿಶಾದ ಜರ್ಸುಗುಡ ವಿಮಾನ ನಿಲ್ದಾಣಕ್ಕೆ “ವೀರ್ ಸುರೇಂದ್ರ ಸಾಯಿ ವಿಮಾನ ನಿಲ್ದಾಣ, ಜಾರ್ಸುಗುಡಾ” ಎಂದು ಮರುನಾಮಕರಣ ಮಾಡಲು ಸಂಪುಟದ ಅನುಮೋದನೆ
01 Nov, 2018
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಒಡಿಶಾದ ಜರ್ಸುಗುಡ ವಿಮಾನ ನಿಲ್ದಾಣಕ್ಕೆ “ವೀರ್ ಸುರೇಂದ್ರ ಸಾಯಿ ವಿಮಾನ ನಿಲ್ದಾಣ,ಜಾರ್ಸುಗುಡಾ” ಎಂದು ಮರುನಾಮಕರಣ ಮಾಡಲು ತನ್ನ ಅನುಮೋದನೆ ನೀಡಿದೆ.
ಪ್ರಯೋಜನಗಳು:
ವೀರ್ ಸುರೇಂದ್ರ ಸಾಯಿ ಅವರು ಒಡಿಶಾದ ಖ್ಯಾತ ಸ್ವಾತಂತ್ರ್ಯ ಹೋರಾಟಗಾರರು. ಜುರ್ಸುಗುಡ ವಿಮಾನ ನಿಲ್ದಾಣಕ್ಕೆ ಅವರ ಹೆಸರು ಇಡುವುದರಿಂದ ಒಡಿಶಾ ಸರ್ಕಾರದ ದೀರ್ಘಕಾಲೀನ ಬೇಡಿಕೆಯನ್ನು ಈಡೇರಿಸಿದಂತಾಗುತ್ತದೆ ಮತ್ತು ಸಂಬಂಧಿತ ಪ್ರದೇಶದ ಸ್ಥಳೀಯ ಜನರ ಭಾವನೆಗಳನ್ನೂ ಪ್ರತಿಬಿಂಬವಾಗುತ್ತದೆ. ಇದು ರಾಜ್ಯಕ್ಕೆ ಸಂಬಂಧಿಸಿದ ಪೂಜ್ಯ ವ್ಯಕ್ತಿ ನೀಡಿದ ಕೊಡುಗೆಗೆ ಯೋಗ್ಯ ಗೌರವವಾಗಿದೆ