ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಅಪರಾಧ ವಿಷಯಗಳಲ್ಲಿ ಭಾರತ ಮತ್ತು ಮೊರೊಕ್ಕೊ ನಡುವೆ ಪರಸ್ಪರ ಕಾನೂನು ಸಹಕಾರ ಒಪ್ಪಂದಕ್ಕೆ ಅನುಮೋದನೆ ನೀಡಿದೆ.
ಪ್ರಯೋಜನಗಳು :
ಅಪರಾಧಗಳ ತನಿಖೆ ಮತ್ತು ಕಾನೂನು ಕ್ರಮಕೈಗೊಳ್ಳಲು, ಸುಳಿವು ಪತ್ತೆಹಚ್ಚಲು, ಅಪರಾಧಗಳನ್ನು ನಿಗ್ರಹಿಸಲು, ಅಪರಾಧದ ಉಪಕರಣಗಳ ಮುಟ್ಟುಗೋಲು ಹಾಕುವ, ವಶಪಡಿಸಿಕೊಳ್ಳುವ ಹಾಗೂ ಸೂಕ್ತ ಕ್ರಮಕೈಗೊಳ್ಳುವ ವಿಷಯದಲ್ಲಿ ಭಾರತ ಮತ್ತು ಮೊರೊಕ್ಕೊ ನಡುವೆ ದ್ವಿಪಕ್ಷೀಯ ಸಹಕಾರಕ್ಕೆ ವಿಸ್ತ್ರತ ಕಾನೂನು ಚೌಕಟ್ಟನ್ನು ಈ ಒಪ್ಪಂದ ನೀಡಲಿದೆ.
ಅಪರಾಧದ ತನಿಖೆ ಮತ್ತು ಕಾನೂನು ಕ್ರಮದಲ್ಲಿ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಉದ್ದೇಶ ಈ ಒಪ್ಪಂದದ್ದಾಗಿದೆ. ಸಮಾಜದ ಅಭಿವೃದ್ಧಿಗೆ ಅಗತ್ಯವಾದ ಶಾಂತಿಯುತ ವಾತಾವರಣವನ್ನು ಒದಗಿಸುವಲ್ಲಿ ಈ ಒಪ್ಪಂದ ನೆರವಾಗಲಿದೆ. ಸಂಘಟಿತ ಅಪರಾಧಿಗಳು ಮತ್ತು ಭಯೋತ್ಪಾದಕರ ಕಾರ್ಯಾಚರಣೆಗಳ ಮಾಹಿತಿ ಮತ್ತು ಒಳನೋಟಗಳನ್ನು ಪಡೆಯುವಲ್ಲಿ ಈ ಒಪ್ಪಂದ ಕಾರ್ಯನಿರ್ವಹಿಸಲಿದೆ.
ಆಂತರಿಕ ಭದ್ರತಾ ಕ್ಷೇತ್ರದಲ್ಲಿದಲ್ಲಿ ನೀತಿ ನಿರ್ಣಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಈ ಒಪ್ಪಂದ ಸಹಕರಿಸಲಿದೆ.