Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭೂವಿಜ್ಞಾನ, ಗಣಿಗಾರಿಕೆ ಮತ್ತು ಖನಿಜ ಸಂಪನ್ಮೂಲ ವಲಯದಲ್ಲಿ ಪರಸ್ಪರ ಸಹಕಾರ ಕುರಿತಂತೆ ಭಾರತ ಮತ್ತು ಜಿಂಬಾಬ್ವೆ ನಡುವಿನ ಒಡಂಬಡಿಕೆಗೆ ಕೇಂದ್ರ ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭೂವಿಜ್ಞಾನ, ಗಣಿಗಾರಿಕೆ ಮತ್ತು ಖನಿಜ ಸಂಪನ್ಮೂಲ ವಲಯದಲ್ಲಿ ಪರಸ್ಪರ ಸಹಕಾರ ಕುರಿತಂತೆ ಭಾರತ ಮತ್ತು ಜಿಂಬಾಬ್ವೆ ನಡುವಿನ ಒಡಂಬಡಿಕೆಗೆ ಪೂರ್ವಾನ್ವಯ ಅನುಮೋದನೆ ನೀಡಿದೆ. ಈ ಒಪ್ಪಂದಕ್ಕೆ 2018ರ ನವೆಂಬರ್ 3ರಂದು ಜಿಂಬಾಬ್ವೆಯ ಹರಾರೆಯಲ್ಲಿ ಸಹಿ ಹಾಕಲಾಗಿದೆ. 

 

 

ಪ್ರಮುಖಾಂಶ:-

 

ಈ ಒಪ್ಪಂದದ ಪ್ರಮುಖ ಉದ್ದೇಶವೆಂದರೆ, ಕಾನೂನು, ನೀತಿ ನಿರೂಪಣೆ, ಸಂಪನ್ಮೂಲ ಕುರಿತಂತೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವುದು, ಅಭಿವೃದ್ಧಿ ಕಾರ್ಯತಂತ್ರಗಳ ಕುರಿತು ಅಭಿಪ್ರಾಯಯಗಳ ವಿನಿಮಯಕ್ಕೆ ವಿಚಾರ ಸಂಕಿರಣಗಳನ್ನು ನಡೆಸುವುದು, ಎರಡೂ ದೇಶಗಳ ನಡುವೆ ತಂತ್ರಜ್ಞಾನಗಳ ವರ್ಗಾವಣೆಯನ್ನು ಉತ್ತೇಜಿಸುವುದು ಹಾಗೂ ಗಣಿಗಾರಿಕೆ ವಲಯದಲ್ಲಿ ಬಂಡವಾಳ ಹೂಡಿಕೆ ಅವಕಾಶಗಳು ಮತ್ತು ಮೌಲ್ಯವರ್ಧನೆಯನ್ನು ಉತ್ತೇಜಿಸುವುದಾಗಿದೆ. ಇದರಿಂದಾಗಿ ವ್ಯವಸ್ಥಿತ ದಾಖಲೀಕರಣ ಚಟುವಟಿಕೆಗಳು, ಮಾಹಿತಿ ಹಂಚಿಕೆ ಮತ್ತು ಅನ್ವೇಷಣಾ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. 

 

 

ಪ್ರಯೋಜನಗಳು :-

 

ಗುರುತಿಸಿರುವ ಕ್ಷೇತ್ರಗಳಲ್ಲಿ ಭಾರತ ಮತ್ತು ಜಿಂಬಾಬ್ವೆ ನಡುವೆ ಸಹಕಾರ ಸಂಬಂಧಗಳನ್ನು ಕಾಯ್ದುಕೊಳ್ಳಲು ಸಾಂಸ್ಥಿಕ ಕಾರ್ಯತಂತ್ರ ಅಳವಡಿಕೆಗೆ ಈ ಒಪ್ಪಂದ ನೆರವಾಗಲಿದೆ. 

 

 

ಹಿನ್ನೆಲೆ:- 

 

ತಜಕಿಸ್ಥಾನದೊಂದಿಗೆ ಬಾಹ್ಯಾಕಾಶ ತಂತ್ರಜ್ಞಾನ ಸಹಕಾರ ಸಾಧ್ಯತೆಗಳ ಪ್ರಸ್ತಾವದ ಬಗ್ಗೆ ಪರಿಶೀಲನೆ ನಡೆಸುವಾಗ,  ತಜಕಿಸ್ಥಾನ  ಭೂಸಂಪನ್ಮೂಲಗಳ ನಿರ್ವಹಣೆ/ ಕೃಷಿ ಸಂಪನ್ಮೂಲಗಳ ನಿರ್ವಹಣೆ ಮತ್ತು ನೈಸರ್ಗಿಕ ಪ್ರಕೋಪಗಳ ನಿರ್ವಹಣೆಗೆ ಬೆಂಬಲ ಕುರಿತಂತೆ ತನ್ನ ಅಧಿಕಾರಿಗಳಿಗೆ ವ್ಯವಸ್ಥಿತ ತರಬೇತಿ ಕಾರ್ಯಕ್ರಮದ ಬಗ್ಗೆ ತೀವ್ರ ಆಸಕ್ತಿ ತೋರಿಸಿತು. ಅದರಂತೆ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ – ಇಸ್ರೋದ ಭಾರತೀಯ ದೂರ ಸಂವೇದಿ ಉಪಗ್ರಹ(ಎಂ ಆರ್ ಎಸ್) ಮೂಲಕ 2017ರ ಜುಲೈನಿಂದ ಡಿಸೆಂಬರ್ ವರೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಐಟಿಇಸಿ ಕಾರ್ಯಕ್ರಮದಡಿ ತಜ್ಕೀಸ್ತಾನದ 60 ಅಧಿಕಾರಿಗಳಿಗೆ(3 ಗುಂಪುಗಳಲ್ಲಿ) ಅಲ್ಪಾವಧಿ ತರಬೇತಿ ಕೋರ್ಸ್ ಗಳನ್ನು ನೀಡಲಾಯಿತು. 

 

        ಈ ಮಧ್ಯೆ,  ತಜಕಿಸ್ಥಾನದಲ್ಲಿನ ಭಾರತೀಯ ರಾಯಭಾರಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ(ಯುರೇಷಿಯಾ)  ತಜಕಿಸ್ಥಾನದ ಜೊತೆ ಬಾಹ್ಯಾಕಾಶ ವಲಯದಲ್ಲಿ ಪರಸ್ಪರ ಸಹಕಾರದ ಒಡಂಬಡಿಕೆಯನ್ನು ಅಂತಿಮಗೊಳಿಸಲು ಸಲಹೆ ನೀಡಿದರು. ಅದರಂತೆ ಬಾಹ್ಯಾಕಾಶ ಸಹಕಾರ ಕುರಿತ ಕರಡು ಒಪ್ಪಂದವನ್ನು ನಮ್ಮ ನಿಯೋಗ 2016ರ ನವೆಂಬರ್ ನಲ್ಲಿ ತಜ್ಕೀಸ್ತಾನದೊಂದಿಗೆ ಹಂಚಿಕೊಂಡಿತು. ಕೆಲವು ಬದಲಾವಣೆಗಳ ನಂತರ ಉಭಯ ದೇಶಗಳು ಅಂತರ ಸರ್ಕಾರ ಒಪ್ಪಂದದ ಆವೃತ್ತಿಗೆ ಪರಸ್ಪರ ಸಮ್ಮತಿ ಸೂಚಿಸಿದವು. ಭಾರತದ ರಾಷ್ಟ್ರಪತಿ ಅವರು  ತಜಕಿಸ್ಥಾನಕ್ಕೆ ಭೇಟಿ ನೀಡಿದ ವೇಳೆ ಆ ಒಪ್ಪಂದಕ್ಕೆ ಸಹಿ ಹಾಕಿ,  ವಿನಿಮಯ ಮಾಡಿಕೊಳ್ಳಲಾಯಿತು.

 

****