ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಿಸೆಂಬರ್ 16, 2018ರಂದು ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ರಾಯ್ ಬರೇಲಿಯಲ್ಲಿ ಪ್ರಧಾನಮಂತ್ರಿ ಅವರು ಅಧುನಿಕ ಕೋಚ್ ಕಾರ್ಖಾನೆಯನ್ನು ಪರಿವೀಕ್ಷಿಸಲಿದ್ದಾರೆ. ಅಲ್ಲಿ ಜರಗುವ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಈ ಕಾರ್ಖಾನೆಯ ಹಂಸಫರ್ ರಾಕ್ ಮತ್ತು 900ನೇ ಕೋಚ್ ಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಅಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ದೇಶಾರ್ಪಣೆ ಮಾಡಲಿದ್ದಾರೆ . ಪ್ರಧಾನಮಂತ್ರಿ ಅವರು ನೆರೆದ ಸಭಿಕರನ್ನು ಉದ್ಧೇಶಿಸಿ ಭಾಷಣವನ್ನೂ ಮಾಡಲಿದ್ದಾರೆ.
ಆನಂತರ ಪ್ರಧಾನಮಂತ್ರಿ ಅವರು ಪ್ರಯಾಗರಾಜ್ ಗೆ ಪ್ರಯಾಣಿಸುವರು. ಕುಂಭಮೇಳದ ಅತ್ಯಾಧುನಿಕ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ಉದ್ಘಾಟಿಸಿಲಿದ್ದಾರೆ. ಅಲ್ಲಿ ಅವರು ಗಂಗಾ ಪೂಜೆ ನೆರವೇರಿಸಲಿದ್ದಾರೆ ಹಾಗೂ ಸ್ವಚ್ಛಕುಂಭ ವಸ್ತುಪ್ರದರ್ಶನಕ್ಕೆ ಭೇಟಿ ನೀಡಲಿದ್ದಾರೆ. ಪ್ರಯಾಗರಾಜ್ ದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ಅಕ್ಷಯ್ವತ್” ಗೆ ಭೇಟಿ ನೀಡಲಿದ್ದಾರೆ.
ಆನಂತರ ಪ್ರಧಾನಮಂತ್ರಿ ಅವರು ಅಣಡವಾಕ್ಕೆ ಪಯಣ ಬೆಳೆಸಲಿದ್ದಾರೆ ಮತ್ತು ಅಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ದೇಶಾರ್ಪಣೆ ಮಾಡಿಲಿದ್ದಾರೆ. ಪ್ರಧಾನಮಂತ್ರಿ ಅವರು ನೆರೆದ ಸಭಿಕರನ್ನು ಉದ್ಧೇಶಿಸಿ ಭಾಷಣವನ್ನೂ ಮಾಡಲಿದ್ದಾರೆ.
ಬಳಿಕ ಪ್ರಧಾನಮಂತ್ರಿ ಅವರು ಪ್ರಯಾಗರಾಜ್ ನ ಬಾಮ್ರೌಳಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಲಿದ್ದಾರೆ. ದೆಹಲಿಗೆ ಹಿಂತಿರುಗುವ ಮೊದಲು ವಿಮಾನನಿಲ್ದಾಣದ ನೂತನ ಕಟ್ಟಡವನ್ನು ಅವರು ಉದ್ಘಾಟಿಸಲಿದ್ದಾರೆ.
***