Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಫ್ರಾನ್ಸ್ ನಡುವೆ ಹೊಸ ಮತ್ತು ಪುನರ್ನವೀಕರಿಸಬಹುದಾದ ಇಂಧನ ಕ್ಷೇತ್ರದ ತಿಳುವಳಿಕಾ ಒಡಂಬಡಿಕೆಗೆ ಸಂಪುಟದ ಅನುಮೋದನೆ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಭಾರತದ ಭಾರತೀಯ ಸೌರ ಇಂಧನ ನಿಗಮ ಲಿಮಿಟೆಡ್ (ಎಸ್.ಇ.ಸಿ.ಐ.) ಮತ್ತು ಫ್ರಾನ್ಸಿನ ಕಮಿಸರಿಯೇಟ್ ಅ ಲ ಎನರ್ಜಿಯಟೋಮಿಕ್ ಎಟ್ ಆಕ್ಸ್ ಎನರ್ಜೀಸ್ ಆಲ್ಟರ್ನೇಟಿವ್ಸ್ (ಸಿ.ಇ.ಎ.) ಫ್ರೆಂಚ್ ಸರಕಾರಿ ಸ್ವಾಮ್ಯದ ಸಂಶೋಧನಾ ಸಂಸ್ಥೆ ಮತ್ತು ಫ್ರೆಂಚ್ ಕಂಪೆನಿ ಬ್ಲ್ಯು ಸ್ಟೊರೇಜ್ ಎಸ್.ಎ.ಎಸ್. ನಡುವೆ ಅಂಕಿತ ಹಾಕಲಾದ ತಿಳುವಳಿಕಾ ಒಡಂಬಡಿಕೆ ಬಗ್ಗೆ ಪರಾಮರ್ಶೆ ನಡೆಸಲಾಯಿತು. ಈ ತಿಳುವಳಿಕಾ ಒಡಂಬಡಿಕೆಗೆ ಹೊಸದಿಲ್ಲಿಯಲ್ಲಿ 2018 ರ ಅಕ್ಟೋಬರ್ 3 ರಂದು ಸಹಿ ಹಾಕಲಾಗಿತ್ತು. ತಿಳುವಳಿಕಾ ಒಡಂಬಡಿಕೆಯ ಹಿಂದಿ, ಇಂಗ್ಲೀಷ್ ಮತ್ತು ಫ್ರೆಂಚ್ ಭಾಷೆಯ ತಲಾ ಮೂರು ಮೂಲ ಪ್ರತಿಗಳಿಗೆ ಅಂಕಿತ ಹಾಕಲಾಗಿತ್ತು.

ಈ ತಿಳುವಳಿಕಾ ಒಡಂಬಡಿಕೆಯ ಧ್ಯೇಯೋದ್ದೇಶವೆಂದರೆ ನಿರ್ದಿಷ್ಟವಾಗಿ ವಿದ್ಯುತ್ ಚಾಲಿತ ವಾಹನಗಳನ್ನು ನಿಯೋಜಿಸಿ ಸೌರ ಚಲನಶೀಲತೆಯನ್ನು ಹೆಚ್ಚಿಸಿ ಮತ್ತು ಜಾಲದ ಮೇಲಿನ ಅದರ ಪರಿಣಾಮವನ್ನು ಕನಿಷ್ಟ ಪ್ರಮಾಣಕ್ಕೆ ಇಳಿಸುವ ಭಾರತೀಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಬೆಂಬಲಿಸಲು ಸೌರ ಫಲಕಗಳ ಮೂಲಕ ಶಕ್ತಿ ಸಂಪಾದಿಸುವ ಬ್ಯಾಟರಿಗಳನ್ನು ಒಳಗೊಂಡಂತೆ ಇಲೆಕ್ಟ್ರಿಕ್ ವಾಹನ ಇಂಧನ ಮರುಪೂರಣ ಕೇಂದ್ರವನ್ನು ಎಸ್.ಇ.ಸಿ.ಐ. ಗೆ ಒದಗಿಸುವ ಹಾಗು ಗ್ರಿಡ್ ಗೆ ಉತ್ತಮ ಸಂಪರ್ಕವನ್ನು ಒದಗಿಸುವ ಪೈಲೆಟ್ ಯೋಜನೆಗೆ ಸಂಬಂಧಿಸಿದಂತೆ ಭವಿಷ್ಯದ ಸಹಯೋಗದ ಕುರಿತ ಸಮಾಲೋಚನೆಗಳಿಗೆ ಮಾದರಿಗಳನ್ನು ರೂಪಿಸುವುದಾಗಿದೆ.

ಭಾರತ ಮತ್ತು ಫ್ರಾನ್ಸ್ ನಡುವೆ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಈ ತಿಳುವಳಿಕಾ ಒಡಂಬಡಿಕೆ ಸಹಾಯ ಮಾಡಲಿದೆ.