Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿಯವರು ನೀಡಿದ ಉತ್ತರದ ಮುಖ್ಯಾಂಶಗಳು


ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇಂದು ಉತ್ತರ ನೀಡಿದರು. ಈ ಕೆಳಗಿನ ಸರಣಿ ಟ್ವೀಟ್ ಗಳ ಮೂಲಕ ಪ್ರಧಾನಿ ಹೀಗೆ ಹೇಳಿದ್ದಾರೆ.

 

ಸರ್ಕಾರ ಯಾವತ್ತೂ ಭಾರತದ ಜನತೆಗಾಗಿ ಕೆಲಸ ಮಾಡುತ್ತದೆ. ಸರ್ಕಾರ ಜನರ ಆಶೋತ್ತರಗಳ ಬಗ್ಗೆ ಹೆಚ್ಚು ಸೂಕ್ಷ್ಮ ಸಂವೇದಿಯಾಗಿದೆ. ಇದರಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶ ಇಲ್ಲ.

 

ಸಂಸತ್ತಿನ ಚರ್ಚೆಯ ಸಂದರ್ಭದಲ್ಲಿ ಅನೇಕರು ಮಾತನಾಡಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ.

 

2019ರ ಲೋಕಸಭಾ ಚುನಾವಣೆಯಲ್ಲಿ ಮೊದಲಬಾರಿಗೆ ಮತ ಚಲಾಯಿಸುತ್ತಿರುವ ಎಲ್ಲರಿಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. 21ನೇ ಶತಮಾನದಲ್ಲಿ ಜನಿಸಿದವರೆಲ್ಲರೂ ಈಗ ಮತದಾರರಾಗಿದ್ದಾರೆ. ಅವರೆಲ್ಲರೂ ಭಾರತದ ಪ್ರಗತಿಯ ಚಿತ್ರವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ.

 

ನಮ್ಮ ರಾಷ್ಟ್ರ ಮುನ್ನಡೆಯಬೇಕಾದರೆ ನಂಬಿಕೆ ಮತ್ತು ಆಶಾವಾದ ಮುಖ್ಯ ಪಾತ್ರ ವಹಿಸುತ್ತದೆ. ನಾವು ಯಾರೂ ಸವಾಲುಗಳಿಂದ ತಪ್ಪಿಸಿಕೊಂಡು ಪಲಾಯನ ಮಾಡಲು ಸಾಧ್ಯವಿಲ್ಲ. ಈ ಸವಾಲುಗಳನ್ನು ಎದುರಿಸುತ್ತಲೇ ಜನರ ಆಶೋತ್ತರಗಳನ್ನು ಪೂರೈಸಲು ಕಾರ್ಯಪ್ರವೃತ್ತರಾಗಬೇಕಾಗುತ್ತದೆ.

 

ಕಾಂಗ್ರೆಸ್ ನಲ್ಲಿರುವ ನನ್ನ ಮಿತ್ರರು ಎರಡು ಕಾಲಾವಧಿಯ ಸಂಗತಿಗಳನ್ನು ಗಮನಿಸಿದ್ದಾರೆ. ಮೊದಲನೆಯದಾಗಿ ಏನೂ ಅಭಿವೃದ್ಧಿ ಕಾಣದ ಕಾಂಗ್ರೆಸ್ ಗೂ ಮೊದಲಿನ ಅವಧಿ; ಮತ್ತು ಸರ್ವತೋಮುಖ ಅಭಿವೃದ್ಧಿಯ ವಂಶಪಾರಂಪರ್ಯ ನಂತರದ ಅವಧಿ.

 

ಕಳೆದ ನಾಲ್ಕು ವರ್ಷಗಳಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಅಭಿವೃದ್ಧಿ ಸಾಧಿಸುತ್ತಿದೆ. ಬಂಡವಾಳ ಹೂಡಿಕೆ, ಉಕ್ಕು ವಲಯ, ನವೋದ್ಯಮ, ಹೈನುಗಾರಿಕೆ ಮತ್ತು ಕೃಷಿ, ನಾಗರೀಕ ವಿಮಾನ ಯಾನ ಈ ಎಲ್ಲ ಕ್ಷೇತ್ರಗಳಲ್ಲಿ ಭಾರತದ ಪ್ರಗತಿ ಅಸಾಧಾರಣ.

 

ಮೋದಿಯನ್ನು ದ್ವೇಷಿಸುವ ಭರದಲ್ಲಿ ಇಡೀ ವಿರೋಧ ಪಕ್ಷ ಇಡೀ ರಾಷ್ಟ್ರವನ್ನು ದ್ವೇಷಿಸುವ ಕೆಲಸ ಮಾಡುತ್ತಿದೆ. ಅದಕ್ಕಾಗಿ ಅದರ ನಾಯಕರು ಲಂಡನ್ ಗೆ ಭೇಟಿ ಕೊಡುತ್ತಾರೆ ಮತ್ತು ಅಲ್ಲಿ ಪತ್ರಿಕಾಗೋಷ್ಠಿ ನಡೆಸಿ ಭಾರತದ ಸ್ಥಿತಿ ದಯನೀಯವಾಗಿದೆ ಎನ್ನುತ್ತಾರೆ.

 

ನಾನು ಅವರಿಗೆ ಮಾಡಿದ ಅಪರಾಧವಾದರೂ ಏನು ಎಂಬುದು ನಿಮಗೆ ಗೊತ್ತೇ? ಬಡ ಕುಟುಂಬದಲ್ಲಿ ಜನಿಸಿದವನೊಬ್ಬ ಅವರ ಸುಲ್ತಾನ್ ಗಿರಿಗೇ ಸವಾಲೊಡ್ಡಿರುವುದೇ ನಾನು ಮಾಡಿರುವ ಅಪರಾಧ.

 

ಅವರ 55 ವರ್ಷಗಳ ಆಡಳಿತದಲ್ಲಿ ನಡೆಸಿದ ನೈರ್ಮಲ್ಯೀಕರಣ ಸುಮಾರು ಶೇ.38. ಆದರೆ ನಮ್ಮ 55 ತಿಂಗಳುಗಳ ಆಡಳಿತದಲ್ಲಿ ಇದು ಶೇ.98. ಅವರ 55 ವರ್ಷಗಳ ಆಡಳಿತದಲ್ಲಿ ಕೊಟ್ಟ ಅಡುಗೆ ಅನಿಲ ಸಂಪರ್ಕ 12 ಕೋಟಿ. ನಾವು 55 ತಿಂಗಳುಗಳಲ್ಲಿ 13 ಕೋಟಿ ಸಂಪರ್ಕವನ್ನು ಸಾಧಿಸಿದ್ದೇವೆ. 5 ವರ್ಷಗಳ ನಮ್ಮ ಆಡಳಿತದಲ್ಲಿ ತ್ವರಿತಗತಿಯಲ್ಲಿ ಕೆಲಸ ಮಾಡಿದ್ದೇವೆ.

 

ಇವೆಲ್ಲದರ ಬಗ್ಗೆ ಯೋಚನೆ ಮಾಡಿ; ಕಾಂಗ್ರೆಸ್ ತುರ್ತುಪರಿಸ್ಥಿತಿಯನ್ನು ಹೇರಿದೆ. ಆದರೆ, ಮೋದಿ ಸಂಸ್ಥೆಗಳನ್ನು ನಾಶ ಮಾಡುತ್ತಿದ್ದಾರೆ ಎನ್ನುತ್ತಾರೆ. ಕಾಂಗ್ರೆಸ್ ಸೇನೆಯನ್ನು ಅಪಮಾನಿಸುತ್ತದೆ, ಸೇನಾ ಮುಖ್ಯಸ್ಥರನ್ನು ಗೂಂಡಾ ಎಂದು ಕರೆಯುತ್ತದೆ. ಆದರೆ ಮೋದಿ ಸಂಸ್ಥೆಗಳನ್ನು ನಾಶ ಮಾಡುತ್ತಿದ್ದಾರೆ ಎನ್ನುತ್ತಾರೆ. ಭಾರತೀಯ ಸೇನೆ ದಂಗೆ ಏಳುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಕತೆಗಳನ್ನು ಕಟ್ಟುತ್ತಾರೆ…. ಆದರೆ ಮೋದಿ ಸಂಸ್ಥೆಗಳನ್ನು ನಾಶ ಮಾಡುತ್ತಿದ್ದಾರೆ ಎಂದು ಬೊಬ್ಬೆ ಹಾಕುತ್ತಾರೆ.

 

ಕಾಂಗ್ರೆಸ್ 356ನೇ ವಿಧಿಯನ್ನು ಅನೇಕ ಬಾರಿ ದುರ್ಬಳಕೆ ಮಾಡಿಕೊಂಡಿದೆ…. ಆದರೆ ಮೋದಿ ಸಂಸ್ಥೆಗಳನ್ನು ನಾಶ ಮಾಡುತ್ತಿದ್ದಾರೆ ಎನ್ನುತ್ತಾರೆ.

 

ಒಂದು ಪೂರ್ಣ ಬಹುಮತವಿರುವ ಸರ್ಕಾರ ಯಾವರೀತಿ ಕೆಲಸ ಮಾಡಬಹುದು ಎಂಬುದನ್ನು ಭಾರತದ ಜನ ನೋಡಿದ್ದಾರೆ. ಅವರು ಎನ್ ಡಿ ಎ ಅವಧಿಯ ಕೆಲಸಗಳನ್ನೂ ಗಮನಿಸಿದ್ದಾರೆ. ಅವರಿಗೆ ಕೋಲ್ಕತ್ತಾದಲ್ಲಿ ಸಮಾವೇಶಗೊಂಡಿದ್ದ ಮಹಾಘಟಬಂಧನ್ ಸರ್ಕಾರವೇನು ಬೇಕಿಲ್ಲ.

 

2010 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಮ್ಮ ಕ್ರೀಡಾಪಟುಗಳು ಪದಕಗಳನ್ನು ಗೆಲ್ಲಲು ಕಠಿಣ ಶ್ರಮ ಪಡಬೇಕಾಯಿತು. ಆದರೆ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಪಕ್ಷದ ಕೆಲವರ ಸಂಪತ್ತು ವೃದ್ಧಿಗೆ ಸಿಕ್ಕ ಅವಕಾಶವಾಗಿ ಕಾಂಗ್ರೆಸ್ ಬಳಸಿಕೊಂಡಿತು.

 

ಯುಪಿಎ ಸರ್ಕಾರದ ಅವಧಿಯಲ್ಲಿ ಫೋನ್ ಬ್ಯಾಂಕಿಂಗ್ ವ್ಯವಸ್ಥೆ ಅವರ ನಾಯಕರ ಮಿತ್ರರ ಪಾಲಿಗೆ ಪವಾಡಗಳನ್ನೇ ಸೃಷ್ಟಿಸಿತು. ಇಂತಹ ಕೆಲಸಗಳಿಂದಾಗಿ ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಸಮಸ್ಯೆಗಳಿಗೆ ಸಾಕ್ಷಿಯಾಗಬೇಕಾಯಿತು.

 

ನಮ್ಮ ಸಶಸ್ತ್ರ ಪಡೆಗಳು ಸಶಕ್ತವಾಗುವುದು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬೇಕಾಗಿಲ್ಲ ಎಂದು ಸಂಸತ್ತಿನಲ್ಲಿ ನಾನು ಹೇಳಲು ಬಯಸುತ್ತೇನೆ  ನಮ್ಮ ಸಶಸ್ತ್ರ ಪಡೆಗಳು ಬಲಗೊಳ್ಳುವುದು ಅವರಿಗೆ ಬೇಕಿಲ್ಲ. ಇಷ್ಟೊಂದು ನಾಚಿಕೆಗೇಡಿತನದಿಂದ ವರ್ತಿಸಲು ಅವರು ಬಿಡ್ಡಿಂಗ್ ಮಾಡುತ್ತಿರುವ ಕಂಪನಿಗಳಾದರೂ ಯಾವುವು?

 

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದೆಯೇ ಯೋಚಿಸಿದ್ದರು. ಕಾಂಗ್ರೆಸ್ ಸೇರುವುದೆಂದರೆ ಆತ್ಮಹತ್ಯೆ ಮಾಡಿಕೊಮಡಂತೆ ಎಂದು ಅವರು ಹೇಳುತ್ತಿದ್ದರು.

 

ಸಾವಿರಾರು ಸಂಸ್ಥೆಗಳಿಗೆ ವಿದೇಶಗಳಿಂದ ಹಣಕಾಸಿನ ನೆರವು ಬರುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕೆಂದು ನಾವು ಬಯಸಿದೆವು. ಆದರೆ ಅಂತಹ ಸಂಸ್ಥೆಗಳನ್ನೇ ಮುಚ್ಚಲಾಯಿತು. ಯಾವುದೇ ಉತ್ತರದಾಯಿತ್ವವೂ ಇಲ್ಲದೇ ಅಂತಹ ಹಣ ಹರಿದು ಬರಲು ಅವಕಾಶ ಕೊಟ್ಟಿದ್ದು ಏಕೆ?

 

ಬೆಲೆ ಏರಿಕೆ ಮತ್ತು ಕಾಂಗ್ರೆಸ್ ಒಂದು ಗುಂಪಿನಂತೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಬೆಲೆಗಳ ಏರಿಕೆಯಾಗುತ್ತದೆ. ಆದರೆ ಎನ್ ಡಿ ಎ ಸರ್ಕಾರ ಬೆಲೆಗಳ ನಿಯಂತ್ರಣಕ್ಕೆ ಪರಿಶ್ರಮ ಪಡುತ್ತದೆ.

 

ಯುಪಿಎ ಸರ್ಕಾರದ ಅವಧಿಯಲ್ಲಿ ಎಲ್ ಇ ಡಿ ಬಲ್ಬ್ ಗಳು ಅಷ್ಟೊಂದು ದುಬಾರಿಯಾಗಿದ್ದರ ಕಾರಣವಾದರೂ ಏನು?

 

ಭಾರತದ ಜನರ ಉತ್ತಮ ಆರೋಗ್ಯ ಮತ್ತು ಸೌಖ್ಯಕ್ಕಾಗಿ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಸ್ಟೆಂಟ್ ಗಳ ಬೆಲೆ, ಮಂಡಿ ಶಸ್ತ್ರಚಿಕಿತ್ಸೆ ಮತ್ತು ಇತರ ಔಷಧಿಗಳ ಬೆಲೆಗಳಲ್ಲಿ ಇಳಿಕೆಯಾಗಿದೆ. ಇದರಿಂದ ಕಡುಬಡವರಿಗೆ ಸಹಾಯವಾಗಿದೆ.

 

सितंबर 2017 से लेकर नवंबर 2018 तक यानि करीब-करीब 15 महीने में लगभग 1 करोड़ 80 लाख लोगों ने पहली बार प्रॉविडेंट फंड का पैसा कटाना शुरू किया है। इनमें से भी 64 प्रतिशत 28 साल से कम आयु के हैं।

 

इसके अलावा एक और तथ्य है। हमारे देश में मार्च 2014 में करीब-करीब 65 लाख लोगों को नेशनल पेंशन सिस्टम (NPS) में रजिस्टर किया गया था। पिछले साल अक्तूबर में ये संख्या बढ़कर करीब 1 करोड़ 20 लाख हो गई है। क्याये भी बिना नई नौकरी के ही हो गया।

 

एक और आकड़ा है। हर साल इनकम टैक्स रिटर्न भरते समय, Non-Corporate Taxpayers भी अपनी आय घोषित करते हैं। इन्हें खुद Salary नहीं मिलती, लेकिन ये लोग यहां नियुक्त लोगों को Salary देते हैं।

 

पिछले चार वर्षों में देश में ऐसे 6 लाख 35 हजार नए प्रोफेशनल्स जुड़े। क्या आपको लगता है कि एक डॉक्टर ने अपना क्लिनिक या नर्सिंग होम खोला है, तो उसने सिर्फ एक व्यक्ति को ही नौकरी दी होगी, या कोई चार्टर्ड अकाउंटेंटसिर्फ एक व्यक्ति को नौकरी पर रखकर अपना दफ्तर चला रहा होगा? नहीं।

 

 

 

हज़ारों करोड़ रुपए की लागत से 99 लटकी पड़ी सिंचाई परियोजनाओं को पूरा किया जा रहा है:

 

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎರಡೂ ದೇಶಗಳಿಗೂ ಭಾರತವು ಸ್ನೇಹಿತನಾಗಲಿದೆ. ಸೌದಿ ಅರೇಬಿಯಾ ಮತ್ತು ಇರಾನ್ ಎರಡೂ ರಾಷ್ಟ್ರಗಳಿಗೆ ಭಾರತವು ಸ್ನೇಹಿತನಾಗಲಿದೆ. ವಿದೇಶಾಂಗ ನೀತಿಯ ಬಗ್ಗೆ ಭಾರತ ಎತ್ತಿದ ಧ್ವನಿಗೆ  ಜಾಗತಿಕ ವೇದಿಕೆಯಲ್ಲಿ ಮನ್ನಣೆ ದೊರೆತಿದೆ.

 

ನಾವು ಯಾವತ್ತೂ ಭಾರತದ ಜನರ ಆಶೋತ್ತರಗಳನ್ನು ಪೂರೈಸುತ್ತೇವೆ.

 

ಅವರ ಅಹಂಕಾರದಿಂದಾಗಿಯೇ 400 ರಿಂದ 44 ಕ್ಕೆ ಇಳಿದಿದ್ದಾರೆ. ಬದ್ಧತೆ ಮತ್ತು ಕಠಿಣ ಶ್ರಮದಿಂದಾಗಿ ನಮ್ಮ ಸಂಖ್ಯೆ 2 ರಿಂದ 282ಕ್ಕೇರಿದೆ.

 

ನಾನು ನಿಮಗೆ ಭರವಸೆ ನೀಡುತ್ತೇನೆ, ಯಾರು ಈ ರಾಷ್ಟ್ರವನ್ನು ಲೂಟಿ ಮಾಡಿದ್ದಾರೋ ಅವರು ಮುಂದೆಯೂ ನರೇಂದ್ರ ಮೋದಿಗೆ ಭಯಗೊಳ್ಳುವಂತೆ ಮಾಡಲಿದ್ದೇನೆ.

 

सूरज जायेगा भी तो कहाँ

 

उसे यहीं रहना होगा

 

यहीं हमारी सांसों में

 

हमारी रगों में

 

हमारे संकल्पों में

 

हमारे रतजगों में

 

तुम उदास मत होओ

 

अब मैं किसी भी सूरज को नही डूबने दूंगा।“