Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶಿಕ್ಷಕರ ಶ್ರೇಣಿ ಆಧ್ಯಾದೇಶ , 2019 ರಲ್ಲಿ ಮೀಸಲಾತಿಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ವಿಭಾಗ/ ವಿಷಯವನ್ನು ಪರಿಗಣಿಸುವುದಕ್ಕೆ ಬದಲಾಗಿ ವಿಶ್ವವಿದ್ಯಾಲಯ/ ಕಾಲೇಜುಗಳನ್ನು ಘಟಕ ಎಂದು ಪರಿಗಣಿಸುವ “ಕೇಂದ್ರೀಯ ಶಿಕ್ಷಣ ಸಂಸ್ಥೆಗಳ (ಶಿಕ್ಷಕರ ಶ್ರೇಣಿಯಲ್ಲಿ ಮೀಸಲಾತಿ ) ಆಧ್ಯಾದೇಶ , 2019 ” ನ್ನು ಜಾರಿಗೆ ತರುವ ಪ್ರಸ್ತಾವಕ್ಕೆ ತನ್ನ ಅನುಮೋದನೆ ನೀಡಿತು.

ಪರಿಣಾಮ:

ಈ ನಿರ್ಧಾರವು ಎಲ್ಲಾ ಅರ್ಹ ಪ್ರತಿಭಾ ಸಂಪನ್ನ ಅಭ್ಯರ್ಥಿಗಳನ್ನು ಆಕರ್ಷಿಸುವ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಗುಣಮಟ್ಟವನ್ನು ಸುಧಾರಿಸುವ ಆಶಯವನ್ನು ಹೊಂದಿದೆ.

ಪ್ರಯೋಜನಗಳು:

ಈ ನಿರ್ಧಾರದಿಂದ ಸಂವಿಧಾನದ ಅನುಚ್ಛೇದ 14, 16 ಮತ್ತು 21 ರ ಪ್ರಸ್ತಾವನೆಗಳ ಅನ್ವಯ , ಅವುಗಳನ್ನು ಅನುಸರಿಸಿ ಮತ್ತು ಪರಿಶಿಷ್ಟ ಜಾತಿಗಳು / ಪರಿಶಿಷ್ಟ ಬುಡಕಟ್ಟುಗಳಿಗೆ ಮತ್ತು ಸಾಮಾಜಿಕವಾಗಿ ಹಾಗು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ನಿಗದಿತ ಮೀಸಲಾತಿ ಮಾನದಂಡಗಳನ್ನು ಅಳವಡಿಸಿಕೊಂಡು ಖಾಲಿ ಇರುವ 5000 ಕ್ಕೂ ಅಧಿಕ ಹುದ್ದೆಗಳ ಶಿಕ್ಷಕರ ಶ್ರೇಣಿಗೆ ನೇರ ನೇಮಕಾತಿ ಮಾಡಲು ಅವಕಾಶ ಲಭಿಸುತ್ತದೆ.