ಪಿಎಂಇಂಡಿಯಾ
ಗುಜರಾತ್ ನಲ್ಲಿ ಸರ್ದಾರ್ ವಿಶ್ವದ ಅತಿ ಎತ್ತರದ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಯನ್ನು ಸ್ಥಾಪಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಮಂತ್ರಿ ಶ್ರೀ ಎಚ್.ಡಿ. ದೇವೇಗೌಡ ಅವರು ಶ್ಲಾಘಿಸಿದ್ದಾರೆ. ಈ ಹಿಂದೆ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ ಮತ್ತು ಸರ್ದಾರ್ ವಲ್ಲಭಬಾಯ್ ಪಟೇಲ್ ಸ್ಮಾರಕವನ್ನು ಗುಜರಾತ್ನ ಅವರ ತವರು ಗ್ರಾಮ ನಾಡಿಯಾಡ್ನಲ್ಲಿ ನಿರ್ಮಿಸಲಾಗಿತ್ತು ಎಂಬುದನ್ನೂ ಅವರು ಸ್ಮರಿಸಿದ್ದಾರೆ. ಭಾರತದ ಉಕ್ಕಿನ ಮನುಷ್ಯನ ಪುತ್ಥಳಿಯನ್ನು ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿ ನಿರ್ಮಿಸುವ ಮೂಲಕ ಇದೆಲ್ಲಕ್ಕೂ ತಾರ್ಕಿಕ ಅಂತ್ಯ ನೀಡಲಾಗಿದೆ ಎಂದಿದ್ದಾರೆ. ಇದನ್ನು ಹೆಚ್ಚು ಆಕರ್ಷಕ ಮತ್ತು ದೇಶೀಯ ಸೊಗಡಿನಿಂದ ನಿರ್ಮಿಸಲಾಗಿದೆ, ಹೀಗಾಗಿಯೇ ಜಗತ್ತಿನಾದ್ಯಂತದ ಜನರು ಈ ಪ್ರದೇಶಕ್ಕೆ ಭೇಟಿ ನೀಡಿ “ಏಕತೆಯ ಪ್ರತಿಮೆ’’ ಮತ್ತು “ಸರ್ದಾರ್ ಸರೋವರ’’ದ ಸೌಂದರ್ಯವನ್ನು ಸವಿಯುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ. ಏಕತೆಯ ಪ್ರತಿಮೆಯ ಸ್ಥಳಕ್ಕೆ ಮಾಜಿ ಪ್ರಧಾನಿ ದೇವೇಗೌಡ ಅವರು ಭೇಟಿ ನೀಡಿದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದರು.