Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತ ಮತ್ತು ಅಮೆರಿಕ ನಡುವೆ ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರ ಕುರಿತ ಒಪ್ಪಂದದ ಪ್ರಸ್ತಾವಕ್ಕೆ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಅಮೆರಿಕ ನಡುವೆ ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರ ಕುರಿತ ಒಪ್ಪಂದದ ಪ್ರಸ್ತಾವಕ್ಕೆ ಅನುಮೋದನೆ ನೀಡಿತು.

ಅನುಕೂಲಗಳು:

•       ಒಪ್ಪಂದ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲಿದೆ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಸ್ಪರ ಹಿತಾಸಕ್ತಿಯ ಮಹತ್ವದ ಸೇರ್ಪಡೆಯ ಪೂರಕ ಸಾಮರ್ಥ್ಯಗಳ ಬಲವರ್ಧನೆಗೆ ಸಹಕಾರಿಯಾಗಲಿದೆ.

•       ಈ ಒಪ್ಪಂದದಿಂದಾಗಿ ಸಂಶೋಧನೆ ಮತ್ತು ಆವಿಷ್ಕಾರಿ ಪಾಲುದಾರಿಕೆಯಲ್ಲಿ ‘ಉನ್ನತ ಗುಣಮಟ್ಟ’ ಮತ್ತು ಉನ್ನತ ಪರಿಣಾಮ ಉತ್ತೇಜಿಸುವ ಅವಕಾಶ ದೊರಕುವುದಲ್ಲದೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಮುದಾಯಗಳ ನಡುವೆ ವಿಸ್ತೃತ ರೀತಿಯಲ್ಲಿ ಸಂಬಂಧಗಳು ವಿಸ್ತರಣೆ ಮತ್ತು ಇನ್ನಷ್ಟು ತೆರೆದುಕೊಳ್ಳಲಿವೆ.

ಪ್ರಮುಖಾಂಶಗಳು:

ಈ ಸಹಕಾರದಿಂದಾಗಿ ಈ ಕೆಳಗಿನ ಅಂಶಗಳು ಸೇರಿದಂತೆ ಹಲವು ಪ್ರಮುಖ ಅಂಶಗಳನ್ನು ಒಳಗೊಂಡಿದೆ.

•       ವೈಜ್ಞಾನಿಕ ಮತ್ತು ತಾಂತ್ರಿಕ ಮಾಹಿತಿ ಮತ್ತು ನೈಪುಣ್ಯತೆಯನ್ನು ವಿನಿಮಯ ಮಾಡಿಕೊಳ್ಳುವುದು.

•       ವಿಚಾರ ಸಂಕಿರಣಗಳು ಮತ್ತು ಸಭೆಗಳನ್ನು ಆಯೋಜಿಸುವುದು.

•       ವಿಜ್ಞಾನಿಗಳು ಮತ್ತು ತಾಂತ್ರಿಕ ಪರಿಣಿತರಿಗೆ ತರಬೇತಿ ನೀಡುವುದು.

•       ಸಹಕಾರ ಸಂಶೋಧನಾ ಯೋಜನೆಗಳನ್ನು ನಡೆಸುವುದು.

•       ಸಾರ್ವಜನಿಕ ಖಾಸಗಿ ಪಾಲುದಾರಿಕೆ ಆಧಾರದಲ್ಲಿ ವಿಜ್ಞಾನ ಮತ್ತು ಆವಿಷ್ಕಾರಿ ಸಂಸ್ಥೆಗಳನ್ನು ಸ್ಥಾಪಿಸುವುದು.

•       ಅತ್ಯಾಧುನಿಕ ಸಂಶೋಧನಾ ಸೌಕರ್ಯಗಳನ್ನು ಬಳಕೆ ಮಾಡಿಕೊಳ್ಳುವುದು.