Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿ ತಮ್ಮ ಕುಟುಂಬ – ಜಮ್ಮು ಕಾಶ್ಮೀರದ ಗಡಿಯಲ್ಲಿರುವ ವೀರ ಯೋಧರೊಂದಿಗೆ ದೀಪಾವಳಿ ಆಚರಿಸಿದರು


ಪ್ರಥಮ ಆಡಳಿತಾವಧಿಯಲ್ಲಿ ಆರಂಭಿಸಲಾದ ಸಂಪ್ರದಾಯವನ್ನು ಮುಂದುವರೆಸುತ್ತಾ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಮ್ಮು-ಕಾಶ್ಮೀರದ ರಜೌರಿಯ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯ ಭಾರತೀಯ ಸೇನೆಯ ಯೋಧರೊಂದಿಗೆ ಇಂದು ದೀಪಾವಳಿಯನ್ನು ಆಚರಿಸಿದರು. ಜಮ್ಮು-ಕಾಶ್ಮೀರದ ಸೇನಾ ತಂಡದೊಂದಿಗೆ ಪ್ರಧಾನ ಮಂತ್ರಿ ಅವರು ಪವಿತ್ರ ಹಬ್ಬವನ್ನು ಆಚರಿಸುತ್ತಿರುವುದು ಇದು ಮೂರನೇ ಬಾರಿ.

ರಜೌರಿಯಲ್ಲಿರುವ ಹಾಲ್ ಆಫ್ ಫೇಮ್ ಗೆ ಭೇಟಿ ನೀಡಿದ ಪ್ರಧಾನ ಮಂತ್ರಿಗಳು ರಜೌರಿ ಮತ್ತು ಪೂಂಚ್ ವಿಭಾಗವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ಯೋಧರು ಮತ್ತು ನಾಗರಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಹಾಲ್ ಆಫ್ ಫೇಮ್ ಅನ್ನು ‘ಪರಾಕ್ರಮ ಭೂಮಿ, ಪ್ರೇರಣಾ ಭೂಮಿ, ಪಾವನ ಭೂಮಿ’ ಎಂದು ವರ್ಣಿಸಿದರು.

ನಂತರ ಪ್ರಧಾನ ಮಂತ್ರಿಗಳು ಭಾರತೀಯ ವಾಯು ಪಡೆಯ ಯೋಧರನ್ನು ಭೇಟಿಯಾಗಲು ಪಠಾನ್ ಕೋಟ್ ವಾಯುನೆಲೆಗೆ ಭೇಟಿ ನೀಡಿದರು.

ಯೋಧರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು, ಪ್ರತಿಯೊಬ್ಬರೂ ದೀಪಾವಳಿ ಹಬ್ಬವನ್ನು ತಮ್ಮ ಕುಟುಂಬದೊಂದಿಗೆ ಆಚರಿಸಲು ಬಹು ದೂರ ಪ್ರಯಾಣ ಮಾಡುತ್ತಾರೆ ಅಂತೆಯೇ, ಪ್ರಧಾನ ಮಂತ್ರಿಗಳೂ ಕೂಡ ತಮ್ಮ ಕುಟುಂಬವಾದ ವಾಯು ಪಡೆಯ ಯೋಧರೊಂದಿಗೆ ಹಬ್ಬವನ್ನು ಆಚರಿಸಲು ಬಂದಿರುವುದಾಗಿ ಹೇಳಿದರು.

ಇನ್ಫೆಂಟ್ರಿ ದಿನವೆಂದೂ ಆಚರಿಸಲಾಗುವ, ಅಕ್ಟೋಬರ್ 27, 1947 ರಂದು ಸೇನಾ ಪಡೆ ಗೈದಂತಹ ಬಲಿದಾನವನ್ನು ಪ್ರಧಾನ ಮಂತ್ರಿಗಳು ನೆನೆಪಿಸಿಕೊಂಡರು. ಭಾರತೀಯ ವಾಯು ಪಡೆಯ ಶೌರ್ಯವನ್ನು ಪ್ರಶಂಸಿಸಿದ ಅವರು, ಅಸಾಧ್ಯವೆಂದು ಪರಿಗಣಿಸಲಾದಂತಹ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳುವಂತೆ ನೀವು ಸಾಧ್ಯವಾಗಿಸಿದ್ದೀರಿ ಎಂದು ಹೇಳಿದರು. ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವಲ್ಲಿ ವಾಯುಪಡೆಯ ಧೈರ್ಯ ಮತ್ತು ಶೌರ್ಯವನ್ನು ಅವರು ಕೊಂಡಾಡಿದರು. ಅವರ ಅವಿಸ್ಮರಣೀಯ ಸೇವೆಗೆ, ದೇಶದ ಜನತೆಯ ಪರವಾಗಿ ಪ್ರಧಾನ ಮಂತ್ರಿಗಳು ಧನ್ಯವಾದ ತಿಳಿಸಿದರು.

ಅವರು ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಲು ಮತ್ತು ಅವರಿಗೆ ಗೌರವ ಸೂಚಿಸಲೆಂದು ಸರ್ಕಾರ ರಾಷ್ಟ್ರ ರಾಜಧಾನಿಯಲ್ಲಿ, ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣಕ್ಕೆ ನಾಂದಿ ಹಾಡಿದೆಯೆಂದು ಪ್ರಧಾನ ಮಂತ್ರಿಗಳು ತಿಳಿಸಿದರು. ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಹೆಚ್ಚೆಚ್ಚು ಜನತೆ ಭೇಟಿ ನೀಡುತ್ತಿರುವುದು ಸಶಸ್ತ್ರ ಪಡೆ ದೇಶಕ್ಕೆ ನೀಡಿದ ಕೊಡುಗೆಗೆ ನಾಗರೀಕರು ತೋರುತ್ತಿರುವ ಗೌರವವಾಗಿದೆ ಎಂದೂ ಅವರು ಹೇಳಿದರು.

ಭಾರತೀಯ ರಕ್ಷಣಾ ಪಡೆಯನ್ನು ಇನ್ನಷ್ಟು ಸಬಲಗೊಳಿಸಲು ಮತ್ತು ಆಧುನೀಕರಣಗೊಳಿಸಲು ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಪ್ರಧಾನ ಮಂತ್ರಿಗಳು ತಿಳಿಸಿದರು. ಸೇನಾ ಯೋಧರ ಶ್ರೇಯೋಭಿವೃದ್ಧಿಯನ್ನು ಖಾತರಿ ಪಡೆಸುವುದಕ್ಕೆ ಸರ್ಕಾರ ಬದ್ಧವಾಗಿದೆಯೆಂದು ಕೂಡಾ ಅವರು ತಿಳಿಸಿದರು.

*******