Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಪಾನ್‌ನ ರಾಷ್ಟ್ರೀಯ ಭದ್ರತಾ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಶಿಗೇರು ಕಿತಾಮುರಾ ಅವರಿಂದ ಪ್ರಧಾನ ಮಂತ್ರಿಯವರ ಭೇಟಿ


 

ಜಪಾನ್ ರಾಷ್ಟ್ರೀಯ ಭದ್ರತಾ ಸಚಿವಾಲಯದ (ಎನ್ಎಸ್ಎಸ್ಪ್ರಧಾನ ಕಾರ್ಯದರ್ಶಿ ಶ್ರೀ ಶಿಗೇರು ಕಿತಾಮುರಾ ಅವರು ಇಂದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.

2019  ಸೆಪ್ಟೆಂಬರ್ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಕಿತಾಮುರಾ ಅವರ ಮೊದಲ ಭಾರತ ಭೇಟಿ ಇದಾಗಿದ್ದು, ಅವರನ್ನು ಪ್ರಧಾನ ಮಂತ್ರಿಯವರು ಸ್ವಾಗತಿಸಿದರುಶಾಂತಿಪ್ರಗತಿ ಮತ್ತು ಸುರಕ್ಷತೆಗಾಗಿ ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಕಾರ್ಯತಂತ್ರದ ಸಹಭಾಗಿತ್ವದ ಮಹತ್ವವನ್ನು ಅವರು ಒತ್ತಿ ಹೇಳಿದರುಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರೊಂದಿಗೆ ಶ್ರೀ ಕಿತಾಮುರಾ ಅವರ ಚರ್ಚೆಗಳು ದ್ವಿಪಕ್ಷೀಯ ಸಹಕಾರದ  ಪ್ರಮುಖ ಅಂಶವನ್ನು ಬಲಪಡಿಸಲು ದಾರಿ ಮಾಡಿಕೊಡುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಅಬೆ ಅವರೊಂದಿಗಿನ ಆತ್ಮೀಯ ಸ್ನೇಹವನ್ನು ನೆನಪಿಸಿಕೊಂಡ ಪ್ರಧಾನಿಯವರುಮುಂದಿನ ತಿಂಗಳು ನಡೆಯಲಿರುವ ಭಾರತಜಪಾನ್ ವಾರ್ಷಿಕ ಶೃಂಗಸಭೆಗೆ ಅವರನ್ನು ಸ್ವಾಗತಿಸಲು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದರು.