Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾವಿಕರ ಸಾಮರ್ಥ್ಯ ಪ್ರಮಾಣಪತ್ರಗಳ ಏಕಪಕ್ಷೀಯ/ ದ್ವಿಪಕ್ಷೀಯ ಮಾನ್ಯತೆಗಾಗಿ ವಿದೇಶಗಳೊಂದಿಗಿನ ಮಾದರಿ ಒಪ್ಪಂದಕ್ಕೆ ಸಂಪುಟದ ಅಂಗೀಕಾರ


 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ತರಬೇತಿ, ಪ್ರಮಾಣೀಕರಣ ಮತ್ತು ವಾಚ್‌ಕೀಪಿಂಗ್ (ಎಸ್‌ಟಿಸಿಡಬ್ಲ್ಯು) ಮಾನದಂಡಗಳ 1978ರ ಅಂತರರಾಷ್ಟ್ರೀಯ ಸಮಾವೇಶದ 1/10 ರ ನಿಯಮಕ್ಕೆ ಅನುಸಾರವಾಗಿ ನಾವಿಕರ ಪ್ರಮಾಣಪತ್ರಗಳ ಏಕಪಕ್ಷೀಯ / ದ್ವಿಪಕ್ಷೀಯ ಮಾನ್ಯತೆಗಾಗಿ ಮಾದರಿ ತಿಳುವಳಿಕೆ ಒಪ್ಪಂದಕ್ಕೆ ಭಾರತ ಸರ್ಕಾರದ ಹಡಗು ಮಹಾ ನಿರ್ದೇಶಕರು ಮತ್ತು ವಿದೇಶಗಳಲ್ಲಿನ ಅದರ ಸಹವರ್ತಿಗಳ ನಡುವೆ ಶಿಪ್ಪಿಂಗ್ ಸಚಿವರು ಮತ್ತು ವಿದೇಶಾಂಗ ಸಚಿವರ ಅನುಮೋದನೆಯೊಂದಿಗೆ ಸಹಿ ಮಾಡಲು ಅನುಮೋದನೆ ನೀಡಿದೆ.

ಪ್ರಯೋಜನಗಳು

ಈ ಏಕಪಕ್ಷೀಯ ಒಪ್ಪಂದವು ಆ ದೇಶವು ನೀಡುವ ಪ್ರಮಾಣಪತ್ರಗಳಿಗೆ ಭಾರತದಿಂದ ಇದೇ ರೀತಿಯ ಮಾನ್ಯತೆ ಪಡೆಯದೆ, ಭಾರತೀಯ ನಾವಿಕರಿಗೆ ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ ನೀಡಿದ ಪ್ರಮಾಣಪತ್ರಗಳ ಮತ್ತೊಂದು ದೇಶದಿಂದ ಏಕಪಕ್ಷೀಯ ಮಾನ್ಯತೆಗೆ ಅನುಕೂಲವಾಗಲಿದೆ.

ಆದ್ದರಿಂದ, ಭಾರತೀಯ ನಾವಿಕರು ಆ ದೇಶದ ಹಡಗುಗಳಲ್ಲಿ ಉದ್ಯೋಗಕ್ಕೆ ಅರ್ಹರಾಗುತ್ತಾರೆ. ಇದರಿಂದಾಗಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಪ್ರಸ್ತಾವಿತ ದ್ವಿಪಕ್ಷೀಯ ಒಪ್ಪಂದವು ಭಾರತ ಮತ್ತು ಒಪ್ಪಂದಕ್ಕೆ ಸಹಿ ಹಾಕುವ ಮತ್ತೊಂದು ದೇಶಕ್ಕೆ, ಕಡಲ ಶಿಕ್ಷಣ ಮತ್ತು ತರಬೇತಿಯನ್ನು ಪರಸ್ಪರ ಗುರುತಿಸಲು, ಸಾಮರ್ಥ್ಯದ ಪ್ರಮಾಣಪತ್ರಗಳು, ಅನುಮೋದನೆಗಳು, ತರಬೇತಿಯ ಸಾಕ್ಷ್ಯಗಳು ಮತ್ತು ವೈದ್ಯಕೀಯ ಸದೃಢತೆ ಪ್ರಮಾಣಪತ್ರಗಳನ್ನು ಎಸ್‌ಟಿಸಿಡಬ್ಲ್ಯೂ ಸಮಾವೇಶದ 1/10 ನಿಬಂಧನೆಗಳಿಗೆ ಅನುಗುಣವಾಗಿ ಆಯಾ ದೇಶಗಳು.ನಾವಿಕರಿಗೆ ನೀಡಲಾಗುತ್ತದೆ.

ಆದ್ದರಿಂದ ದ್ವಿಪಕ್ಷೀಯ ಒಪ್ಪಂದವು ಎರಡೂ ದೇಶಗಳ ನಾವಿಕರನ್ನು ಗುರುತಿಸಿದ ಪ್ರಮಾಣಪತ್ರಗಳ ಆಧಾರದ ಮೇಲೆ ಎರಡೂ ದೇಶಗಳ ಹಡಗುಗಳಲ್ಲಿ ಉದ್ಯೋಗಕ್ಕೆ ಅರ್ಹವಾಗುವಂತೆ ಮಾಡುತ್ತದೆ. ಭಾರತವು ನಾವಿಕರ ಸರಬರಾಜುದಾರ ರಾಷ್ಟ್ರವಾಗಿದ್ದು, ತರಬೇತಿ ಪಡೆದ ನಾವಿಕರ ದೊಡ್ಡ ಸಮೂಹವನ್ನೇ ಹೊಂದಿದ್ದು ಇದರಿಂದ ಪ್ರಯೋಜನ ಪಡೆಯಲಿದೆ.

***