Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ದಿನಾಂಕ 1.04.2020 ರಿಂದ ಜಾರಿಗೆ ಬರುವಂತೆ ಸಾರ್ವಜನಿಕ ರಂಗದ ಬ್ಯಾಂಕುಗಳ ಬೃಹತ್ ಸಂಚಯನಕ್ಕೆ (ಪಿ.ಎಸ್.ಬಿ.ಗಳು) ಸಂಪುಟದ ಅನುಮೋದನೆ.


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು 10 ಸಾರ್ವಜನಿಕ ರಂಗದ ಬ್ಯಾಂಕುಗಳನ್ನು ನಾಲ್ಕು ಸಾರ್ವಜನಿಕ ರಂಗದ ಬ್ಯಾಂಕುಗಳಾಗಿ ವಿಲಯನಗೊಳಿಸಿ ಬೃಹತ್ ಬ್ಯಾಂಕುಗಳನ್ನಾಗಿ ರೂಪಿಸುವುದಕ್ಕೆ ಅನುಮೋದನೆ ನೀಡಿತು. ಅವುಗಳೆಂದರೆ-

(a) ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗಳು, ಪಂಜಾಬ್ ನ್ಯಾಶನಲ್ ಬ್ಯಾಂಕಿನಲ್ಲಿ ವಿಲೀನ.

(b) ಸಿಂಡಿಕೇಟ್ ಬ್ಯಾಂಕು ಕೆನರಾ ಬ್ಯಾಂಕಿನಲ್ಲಿ ವಿಲೀನ

(c) ಆಂಧ್ರ ಬ್ಯಾಂಕು ಮತ್ತು ಕಾರ್ಪೋರೇಶನ್ ಬ್ಯಾಂಕುಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನ.

(d) ಇಂಡಿಯನ್ ಬ್ಯಾಂಕಿನಲ್ಲಿ ಅಲಹಾಬಾದ್ ಬ್ಯಾಂಕ್ ವಿಲೀನ.

ಈ ವಿಲಯನ 1.04.2020 ರಿಂದ ಜಾರಿಗೆ ಬರುತ್ತದೆ. ಮತ್ತು ಇದರಿಂದ 7 ಬೃಹತ್ ಪ್ರಮಾಣದ ಪಿ.ಎಸ್.ಬಿ.ಗಳ ನಿರ್ಮಾಣವಾಗುತ್ತದೆ. ಇವು ರಾಷ್ಟ್ರೀಯ ವ್ಯಾಪ್ತಿಯಲ್ಲಿರುತ್ತವೆ ಮತ್ತು ಪ್ರತಿಯೊಂದೂ 8 ಲಕ್ಷ ಕೋ.ರೂ. ವ್ಯವಹಾರ ಹೊಂದಿರುತ್ತವೆ. ಈ ಬೃಹತ್ ಸಂಚಯನವು ಬ್ಯಾಂಕುಗಳಿಗೆ ಜಾಗತಿಕ ಬ್ಯಾಂಕುಗಳ ಜೊತೆ ಹೋಲಿಕೆ ಮಾಡಬಹುದಾದ ಬ್ಯಾಂಕುಗಳ ಸೃಷ್ಟಿಗೆ ಸಹಾಯ ಮಾಡುತ್ತದೆ. ಮತ್ತು ಅವು ಭಾರತದಲ್ಲಿ ಹಾಗು ಜಾಗತಿಕ ಮಟ್ಟದಲ್ಲಿ ಕ್ರಿಯಾಶೀಲವಾಗಿ ಸ್ಪರ್ಧಿಸುವ ಸಾಮರ್ಥ್ಯವನ್ನು ಗಳಿಸಲಿವೆ. ಈ ವಿಲಯನ ಖರ್ಚು ಲಾಭದತ್ತ ಬ್ಯಾಂಕುಗಳನ್ನು ಕೊಂಡೊಯ್ಯಲಿದೆ ಮತ್ತು ಪಿ.ಎಸ್.ಬಿ.ಗಳಿಗೆ ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲಿದೆ ಹಾಗು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ.

ಇದರ ಜೊತೆಗೆ , ಈ ವಿಲಯನವು ಒಗ್ಗೂಡಿ ನಿರ್ಮಾಣವಾದ ಸಂಸ್ಥೆಗಳಿಗೆ ಅವುಗಳ ಸಾಮರ್ಥ್ಯ ವರ್ಧನೆಗೆ ವೇಗ ದೊರಕಿಸಿಕೊಡಲಿದೆ ಮತ್ತು ದೊಡ್ಡ ಪ್ರಮಾಣದ ಸಾಲ/ ಮುಂಗಡ ನೀಡಿಕೆಯ ಸಾಮರ್ಥ್ಯವನ್ನು ದೊರಕಿಸಿಕೊಡಲಿದೆ. ಹಾಗು ಹೆಚ್ಚಿನ ಹಣಕಾಸು ಸಾಮರ್ಥ್ಯ ಅವುಗಳಿಗೆ ದೊರಕಲಿದೆ. ವಿಲಯನಗೊಂಡ ಸಂಸ್ಥೆಗಳಲ್ಲಿಯ ಉತ್ತಮ ಪದ್ದತಿಗಳನ್ನು ಅಂಗೀಕರಿಸುವ ಮೂಲಕ ಬ್ಯಾಂಕುಗಳಿಗೆ ಅವುಗಳ ವೆಚ್ಚ ದಕ್ಷತೆ ಮತ್ತು ಅಪಾಯ ನಿರ್ವಹಣೆಯಲ್ಲಿ ಸುಧಾರಣೆ ಸಾಧ್ಯವಾಗಲಿದೆ ಮತ್ತು ಇದು ವ್ಯಾಪಕ ಲಭ್ಯತೆಯ ಮೂಲಕ ಹಣಕಾಸು ಸೇರ್ಪಡೆಯ ಗುರಿಯನ್ನು ತಲುಪಲು ಸಹಾಯ ಮಾಡಲಿದೆ.

ಜೊತೆಗೆ , ವಿಲಯನಗೊಂಡ ಬ್ಯಾಂಕುಗಳಲ್ಲಿಯ ತಂತ್ರಜ್ಞಾನದ ಅಳವಡಿಕೆ ವಿಸ್ತಾರ ವ್ಯಾಪ್ತಿಯ ಪ್ರತಿಭೆಗಳ ಸಮೂಹವನ್ನು ನಿರ್ಮಾಣ ಮಾಡಲಿದೆ ಮತ್ತು ವಿಸ್ತಾರ ವ್ಯಾಪ್ತಿಯ ದತ್ತಾಂಶ ನೆಲೆ ಲಭ್ಯವಾಗಲಿದೆ. ಡಿಜಿಟಲೀಕೃತ ಬ್ಯಾಂಕಿಂಗ್ ವ್ಯವಸ್ಥೆಯಿಂದ ತ್ವರಿತ ವಿಶ್ಲೇಷಣೆಯ ಮೂಲಕ ಪಿ.ಎಸ್.ಬಿ.ಗಳು ಸ್ಪರ್ಧಾತ್ಮಕ ಪ್ರಯೋಜನ ಪಡೆಯುವುದಕ್ಕೆ ಸಾಧ್ಯವಾಗಲಿದೆ.

***