ಪಿಎಂಇಂಡಿಯಾ

ಧನ್ಯವಾದಗಳು, ಗೌರವಾನ್ವಿತ ಅಧ್ಯಕ್ಷರೇ..!
ಭಾರತದ ಜನರ ಪರವಾಗಿ ನಾನು ತನ್ನ ಹೃದಯಾಂತರಾಳದಿಂದ ಧನ್ಯವಾದಗಳನ್ನು ಹೇಳುತ್ತೇನೆ, ನೀವು ಮಹಾತ್ಮಾ ಗಾಂಧಿ, ಸ್ವಾಮಿ ವಿವೇಕಾನಂದ ಮತ್ತು ಸರ್ದಾರ್ ಪಟೇಲ್ ಅವರನ್ನು ಸ್ಮರಿಸಿದ್ದೀರಿ ಮತ್ತು ಭಾರತದ ಬಗ್ಗೆ, ಭಾರತೀಯರ ಸಾಮರ್ಥ್ಯದ ಬಗ್ಗೆ, ನಮ್ಮ ಸಾಧನೆಗಳು ಮತ್ತು ಸಂಸ್ಕೃತಿ ಹಾಗೂ ನನ್ನ ಬಗ್ಗೆ ಏನೆಲ್ಲಾ ಹೇಳಿದ್ದೀರಿ ಅದಕ್ಕಾಗಿ ಧನ್ಯವಾದಗಳು. ಅಧ್ಯಕ್ಷ ಟ್ರಂಪ್ ಅವರು ಭಾರತದ ಹೆಮ್ಮೆಯನ್ನು ಹೆಚ್ಚಿಸಿರುವುದೇ ಅಲ್ಲದೆ, ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರಿಗೆ ಗೌರವ ತಂದಿದ್ದಾರೆ.
ಗೌರವಾನ್ವಿತ ಅಧ್ಯಕ್ಷರೇ, ನೀವು ಯಾವ ಕ್ರೀಡಾಂಗಣದಿಂದ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದೀರೋ ಆ ಕ್ರೀಡಾಂಗಣ ಇಡೀ ಜಗತ್ತಿನಲ್ಲಿಯೇ ಅತಿ ದೊಡ್ಡ ಕ್ರೀಡಾಂಗಣವಾಗಿದೆ. ಕೆಲವು ಕ್ರೀಡಾ ಸೌಕರ್ಯಗಳ ಕಾಮಗಾರಿಗಳು ಇನ್ನೂ ಪ್ರಗತಿಯ ಹಂತದಲ್ಲಿವೆ. ಆದರೂ ನಿಮ್ಮ ಉಪಸ್ಥಿತಿ ಕ್ರೀಡಾ ಜಗತ್ತಿನೊಂದಿಗೆ ಬಾಂಧವ್ಯಹೊಂದಿರುವ ಪ್ರತಿಯೊಬ್ಬರಲ್ಲೂ ಉತ್ಸಾಹ ಹೆಚ್ಚಿಸಿದೆ. ಈ ಅದ್ಧುತ ಸ್ಥಳವನ್ನು ನೀಡಿದ್ದಕ್ಕಾಗಿ ನಾನು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಗೆ ಧನ್ಯವಾದಗಳನ್ನು ಹೇಳುತ್ತೇನೆ. ಇದರಿಂದ ಅವರಿಗೆ ನಿಗದಿತ ವೇಳೆ ಕಾಮಗಾರಿ ಪೂರ್ಣಗೊಳಿಸಲು ಸ್ವಲ್ಪ ಮಟ್ಟಿನ ತೊಂದರೆ ಆಗಿರಬಹುದು, ಆದರೆ ಅವರು ಅದನ್ನು ಸರಿದೂಗಿಸಿಕೊಳ್ಳುತ್ತಾರೆಂಬ ಭರವಸೆ ನನಗಿದೆ.
ಗೆಳೆಯರೇ,
ಎರಡು ದೇಶಗಳ ನಡುವೆ ಅಥವಾ ಎರಡು ವ್ಯಕ್ತಿಗಳ ನಡುವಿನ ಸಂಬಂಧಕ್ಕೆ ಸತ್ಯ ಅತ್ಯಂತ ಭದ್ರವಾದ ತಳಹದಿಯಾಗಿದೆ. ನಮ್ಮ ದೇಶದಲ್ಲಿ ಅದನ್ನು ಹೀಗೆ ಹೇಳಲಾಗುತ್ತದೆ-
तन् मित्रम् यत्र विश्वास:॥
ಎಲ್ಲಿ ನಿಜವಾದ ಸ್ನೇಹ ಇರುತ್ತದೆಯೋ ಅಲ್ಲಿ ನಂಬಿಕೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ.
ಕಳೆದ ಕೆಲವು ವರ್ಷಗಳಿಂದೀಚೆಗೆ ಭಾರತ ಮತ್ತು ಅಮೆರಿಕಾ ನಡುವಿನ ವಿಶ್ವಾಸ ಹೊಸ ಎತ್ತರಕ್ಕೆ ಏರಿದೆ ಮತ್ತು ಅದು ಹೇಗೆ ಬಲವರ್ಧನೆಗೊಂಡಿದೆ ಎಂಬುದು ಐತಿಹಾಸಿಕ. ನಾನು ಅಮೆರಿಕಾ ಪ್ರವಾಸ ಕೈಗೊಂಡಾಗಲೆಲ್ಲಾ ದಿನದಿಂದ ದಿನಕ್ಕೆ ನಂಬಿಕೆ ಬಲವರ್ಧನೆ ಆಗುತ್ತಿರುವುದನ್ನು ಕಣ್ಣಾರೆ ಕಂಡಿದ್ದೇನೆ.
ನಾನು ಮೊದಲ ಬಾರಿಗೆ ವಾಷಿಂಗ್ಟನ್ ನಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಭೇಟಿ ಮಾಡಿದ್ದು ನನಗೆ ನೆನಪಿದೆ, ಆಗ ಅವರು ನನಗೆ “ಶ್ವೇತ ಭವನದಲ್ಲಿ ಭಾರತಕ್ಕೆ ನಿಜವಾದ ಸ್ನೇಹಿತರಿದ್ದಾರೆ’’ಎಂದು ಹೇಳಿದ್ದರು.
ಅಧ್ಯಕ್ಷ ಟ್ರಂಪ್ ಅವರು ಸದಾ ಭಾರತದ ಬಗೆಗಿನ ವಿಶೇಷ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ. ಶ್ವೇತ ಭವನದಲ್ಲಿ ದೀಪಾವಳಿ ಆಚರಣೆ ಮಾಡಿದಾಗ, ಅಮೆರಿಕಾದಲ್ಲಿರುವ ಸುಮಾರು 40 ಲಕ್ಷ ಭಾರತೀಯರು ಅಮೆರಿಕಾದ ಪ್ರಗತಿ ಮತ್ತು ಏಳಿಗೆಯ ಭಾಗವಾಗಿರುವುದಕ್ಕೆ ಹೆಮ್ಮೆಪಟ್ಟಿದ್ದರು.
ಗೆಳೆಯರೇ,
ಅಮೆರಿಕಾದಂತೆ ಭಾರತವೂ ಸಹ ಇಂದು ಪರಿವರ್ತನೆಯ ಉತ್ಸುಕತೆಯಲ್ಲಿದೆ. ಇಂದು 130 ಕೋಟಿ ಭಾರತೀಯರು ಒಂದಾಗಿ ನವ ಭಾರತವನ್ನು ನಿರ್ಮಿಸುತ್ತಿದ್ದಾರೆ.
ನಮ್ಮ ಯುವಕರು ಸಂಪೂರ್ಣ ಆಶೋತ್ತರಗಳನ್ನು ಹೊಂದಿದ್ದಾರೆ. ಗುರಿಗಳನ್ನು ನಿಗದಿಪಡಿಸುವುದು ಮತ್ತು ಅವುಗಳನ್ನು ಸಾಧಿಸುವುದು ಇಂದು ನವ ಭಾರತದ ಹೆಗ್ಗರುತಾಗಿದೆ.
ಇಂದು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಮಾತ್ರ ಭಾರತದಲ್ಲಿಲ್ಲ, ಇಂದು ಭಾರತ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯನ್ನೂ ಸಹ ನಿರ್ವಹಿಸುತ್ತಿದೆ.
ಇಂದು ಭಾರತದಲ್ಲಿ ವಿಶ್ವದ ಅತಿದೊಡ್ಡ ಸೌರ ಪಾರ್ಕ್ ಮಾತ್ರ ಅಭಿವೃದ್ಧಿಗೊಳಿಸಿಲ್ಲ, ವಿಶ್ವದ ಅತಿದೊಡ್ಡ ನೈರ್ಮಲೀಕರಣ ಯೋಜನೆಯೂ ಪ್ರಗತಿಯಲ್ಲಿದೆ.
ಭಾರತ ಇಂದು ಅತಿ ಹೆಚ್ಚಿನ ಸಂಖ್ಯೆಯ ಉಪಗ್ರಹಗಳನ್ನು ಉಡಾಯಿಸುವ ಮೂಲಕ ಕ್ರಮೇಣ ವಿಶ್ವ ದಾಖಲೆಯನ್ನು ಸೃಷ್ಟಿಸುತ್ತಿರುವುದಲ್ಲದೆ, ಅತಿ ವೇಗದ ಆರ್ಥಿಕ ಸೇರ್ಪಡೆ ಮೂಲಕ ವಿಶ್ವ ದಾಖಲೆ ನಿರ್ಮಿಸುತ್ತಿದೆ.
21ನೇ ಶತಮಾನದಲ್ಲಿ ನಮ್ಮ ಮೂಲ ಸೌಕರ್ಯದಲ್ಲಾಗಲಿ ಅಥವಾ ಸಾಮಾಜಿಕ ವಲಯದಲ್ಲಾಗಲಿ ನಾವು ಜಾಗತಿಕ ಮಾನದಂಡದ ಜೊತೆ ಮುನ್ನುಗುತ್ತಿದ್ದೇವೆ.
ಇತ್ತೀಚೆಗಷ್ಟೇ ಭಾರತ ಸುಮಾರು 1500 ಪುರಾತನ ಕಾನೂನುಗಳನ್ನು ರದ್ದುಗೊಳಿಸಿತು ಮತ್ತು ಸಮಾಜದ ಸಬಲೀಕರಣಕ್ಕೆ ಹಲವು ಹೊಸ ಕಾನೂನುಗಳನ್ನು ರಚಿಸಿದೆ.
ನಾವು ಸಮಾಜದ ನಾನಾ ವರ್ಗದವರ ಹಲವು ಬಗೆಯ ಹಕ್ಕುಗಳನ್ನು ದೊರಕಿಸಿಕೊಟ್ಟಿದ್ದೇವೆ, ಅದು ಮಂಗಳಮುಖಿ ಅಥವಾ ತೃತೀಯ ಲಿಂಗಿಗಳ ಹಕ್ಕುಗಳು ಅಥವಾ ತ್ರಿವಳಿ ತಲಾಖ್ ವಿರುದ್ಧ ಕಾನೂನು ರೂಪಿಸುವ ಮೂಲಕ ಮುಸ್ಲಿಂ ಮಹಿಳೆಯರ ಗೌರವ ರಕ್ಷಣೆ ಅಥವಾ ದಿವ್ಯಾಂಗರಿಗೆ ಆದ್ಯತೆ ನೀಡುವುದು ಅಥವಾ ಮಹಿಳೆಯರು ಗರ್ಭ ಧರಿಸಿದ ವೇಳೆ 26 ವಾರಗಳ ವೇತನ ಸಹಿತ ಹೆರಿಗೆ ರಜೆ ನೀಡುವುದು ಮತ್ತಿತರವು ಸೇರಿವೆ.
ಗೆಳೆಯರೇ,
ಭಾರತದಲ್ಲಿ ಇಂತಹ ಬದಲಾವಣೆಗಳ ಮಧ್ಯೆಯೇ, ಇಂದು ಅಮೆರಿಕಾ ಭಾರತದ ಅತ್ಯಂತ ವಿಶ್ವಾಸಾರ್ಹ ಪಾಲುದಾರರಾಷ್ಟ್ರವಾಗಿರುವುದಕ್ಕೆ ನನಗೆ ಹರ್ಷವಾಗುತ್ತಿದೆ.
ಇಂದು ಅಮೆರಿಕಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಇಂದು ಭಾರತೀಯ ಸೇನೆಗಳೊಂದಿಗೆ ಅಮೆರಿಕಾ ಹೆಚ್ಚಿನ ಮಿಲಿಟರಿ ಅಭ್ಯಾಸಗಳಲ್ಲಿ ಭಾಗವಹಿಸುತ್ತಿದೆ.
ಭಾರತ ಇಂದು ಅಮೆರಿಕಾದೊಂದಿಗೆ ಹೆಚ್ಚಿನ ಸಂಶೋಧನಾ ಮತ್ತು ಅಭಿವೃದ್ಧಿ ಸಹಭಾಗಿತ್ವವನ್ನು ಹೊಂದಿರುವ ದೇಶವಾಗಿದೆ. ರಕ್ಷಣಾ, ಇಂಧನ ವಲಯ, ಆರೋಗ್ಯ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಎಲ್ಲ ವಲಯಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ನಿರಂತರವಾಗಿ ವಿಸ್ತರಣೆಗೊಳ್ಳುತ್ತಿದೆ.
ಗೆಳೆಯರೇ,
21ನೇ ಶತಮಾನದ ಈ ದಶಕದಲ್ಲಿ ನವ ಭಾರತವೂ ಸಹ ವೈಭವದ ಅಮೆರಿಕಾಕ್ಕೆ ಹಲವು ಬಗೆಯ ಅವಕಾಶಗಳನ್ನು ಒದಗಿಸುತ್ತಿದೆ.
ಅಭಿವೃದ್ಧಿಯ ಪ್ರತಿಯೊಂದು ವಲಯದಲ್ಲೂ ಉಭಯ ದೇಶಗಳಿಗೂ ಸಾಕಷ್ಟು ಲಾಭವಿದೆ.
ಭಾರತದಲ್ಲಿ ಮೂಲಸೌಕರ್ಯ ವಿಸ್ತರಣೆ ಮತ್ತು ಉತ್ಪಾದನಾ ಚಟುವಟಿಕೆಗಳ ಹೆಚ್ಚಳ, ಅಮೆರಿಕಾಕ್ಕೆ ಹೊಸ ಸಾಧ್ಯತೆಗಳನ್ನು ತಂದುಕೊಡಲಿದೆ.
ಕೈಗಾರಿಕೆ 4.0 ಯುಗದಲ್ಲಿ, ಭಾರತದಲ್ಲಿ ಡಿಜಿಟಲ್ ಆರ್ಥಿಕತೆ ವಿಸ್ತರಣೆ ಮಾಡುತ್ತಿರುವುದು ಅಮೆರಿಕಾದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯ ಅವಕಾಶಗಳನ್ನೂ ಸಹ ಸೃಷ್ಟಿಸಲಿದೆ.
ಗೌರವಾನ್ವಿತ ಅಧ್ಯಕ್ಷರೇ,
ಕಳೆದ ಕೆಲವು ದಶಕಗಳಿಂದ ಭಾರತ-ಅಮೆರಿಕಾ ನಡುವಿನ ಸಂಬಂಧಕ್ಕೆ ಹೊಸ ಆಯಾಮ ನೀಡುವಲ್ಲಿ ಡಿಜಿಟಲ್ ತಂತ್ರಜ್ಞಾನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ.
ಭಾರತದ ಪ್ರತಿಭೆ ಮತ್ತು ಅಮೆರಿಕಾದ ತಂತ್ರಜ್ಞಾನ ಈ ವಲಯಕ್ಕೆ ಹೊಸ ನಾಯಕತ್ವವನ್ನು ತಂದುಕೊಟ್ಟಿದೆ.
21ನೇ ಶತಮಾನದಲ್ಲಿ ಭಾರತ ಮತ್ತು ಅಮೆರಿಕಾ ಜಂಟಿಯಾಗಿ ಡಿಜಿಟಲ್ ಯುಗವನ್ನು ಮತ್ತು ಕೈಗಾರಿಕೆ 4.0 ಅನ್ನು ಮುನ್ನೆಡಸಲಿವೆ ಎಂದು ನಾನು ನಂಬಿದ್ದೇನೆ.
ಗೆಳೆಯರೇ,
21ನೇ ಶತಮಾನದಲ್ಲಿ ಹೊಸ ಮೈತ್ರಿಗಳು, ಹೊಸ ಸ್ಪರ್ಧೆಗಳು, ಹೊಸ ಸವಾಲುಗಳು ಮತ್ತು ಹೊಸ ಅವಕಾಶಗಳು ಬದಲಾವಣೆಗೆ ಭದ್ರ ಬುನಾದಿ ಹಾಕುತ್ತಿವೆ.
ಇಂತಹ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧ ಮತ್ತು ಸಹಕಾರ 21ನೇ ಶತಮಾನದ ಜಗತ್ತಿನ್ನು ಯಾವ ದಿಕ್ಕಿನಲ್ಲಿ ಮುನ್ನೆಡೆಸಬೇಕು ಎಂಬುದನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನನ್ನ ಪ್ರಕಾರ ಭಾರತ ಮತ್ತು ಅಮೆರಿಕಾ ನೈಜ ಅಥವಾ ಸಹಜ ಪಾಲುದಾರರು.
ನಾವು ಕೇವಲ ಇಂಡೋ-ಪೆಸಿಫಿಕ್ ಪ್ರಾಂತ್ಯಕ್ಕೆ ಮಾತ್ರ ಪರಿಣಾಮಕಾರಿ ಕೊಡುಗೆ ನೀಡುವುದು ಮಾತ್ರವಲ್ಲ, ಇಡೀ ಜಗತ್ತಿನ ಶಾಂತಿ, ಪ್ರಗತಿ ಮತ್ತು ಭದ್ರತೆಗೂ ಕೊಡುಗೆ ನೀಡುತ್ತೇವೆ.
ಭಯೋತ್ಪಾದನೆಯನ್ನು ಸೋಲಿಸುವ ಅಮೆರಿಕಾದ ಬದ್ಧತೆ ಮತ್ತು ಟ್ರಂಪ್ ಅವರ ಅಧ್ಯಕ್ಷತೆ ಮಾನವೀಯತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿದೆ ಮತ್ತು ಆದ್ದರಿಂದ ಅಧ್ಯಕ್ಷ ಟ್ರಂಪ್ ಅವರಂತಹ ಭಿನ್ನ ನಾಯಕ ಮತ್ತು ಭಾರತದಂತಹ ಭಿನ್ನ ಮಿತ್ರ ರಾಷ್ಟ್ರ ಈ ಶತಮಾನದ ಆರಂಭದಲ್ಲಿ ಒಂದಾಗಿರುವುದು ಪ್ರಮುಖ ಅವಕಾಶವಾಗಿದೆ ಎಂದು ನಾನು ಭಾವಿಸಿದ್ದೇನೆ.
ಹಿಂದೆ ಕೈಗೊಂಡ ಹಲವು ಕ್ರಮಗಳಿಂದಾಗಿ ಭಾರತ-ಅಮೆರಿಕಾ ಸಂಬಂಧಗಳು ಬಲವರ್ಧನೆಗೊಂಡಿವೆ, ಇದೀಗ ಅಧ್ಯಕ್ಷರ ಈ ಭೇಟಿಯಿಂದ ಅವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿವೆ.
ನಾವು ಕೇವಲ ಅಲ್ಪಾವಧಿಯ ಪ್ರಯೋಜನಗಳನ್ನು ನೋಡುತ್ತಿಲ್ಲ ಮತ್ತು ದೀರ್ಘಾವಧಿಯ ದೂರದೃಷ್ಟಿಯಿಂದ ಉತ್ತೇಜಿತರಾಗಿದ್ದೇವೆ. ನಮ್ಮ ದ್ವೀಪಕ್ಷೀಯ ಸಂಬಂಧಗಳು ಇನ್ನಷ್ಟು ಬೆಳೆಯಲಿವೆ, ನಮ್ಮ ಆರ್ಥಿಕ ಪಾಲುದಾರಿಕೆ ವಿಸ್ತರಣೆಯಾಗಲಿದೆ ಮತ್ತು ನಮ್ಮ ಡಿಜಿಟಲ್ ಸಹಕಾರ ಮತ್ತಷ್ಟು ಹೆಚ್ಚಾಗಲಿದೆ.
ಹೊಸ ಎತ್ತರಗಳನ್ನು ಏರುವ ಮೂಲಕ ಭಾರತ ಮತ್ತು ಅಮೆರಿಕಾ ಜಂಟಿಯಾಗಿ ತಮ್ಮ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲಿವೆ ಎಂದು ನಾನು ನಂಬಿದ್ದೇನೆ. ಇಂದು ಅಧ್ಯಕ್ಷ ಟ್ರಂಪ್ ಮತ್ತು ಅವರ ಕುಟುಂಬವನ್ನು ಸ್ವಾಗತಿಸುವ ದೊರೆತಿರುವುದು ನನ್ನ ಅದೃಷ್ಟವಾಗಿದೆ. ನಮಸ್ತೆ ಟ್ರಂಪ್ ಕೂಗಿನ ಪ್ರತಿಧ್ವನಿ ನಡುವೆಯೇ ನಾನು ನಿಮ್ಮೆಲ್ಲರಲ್ಲಿ ಹೀಗೆ ಹೇಳಿ ಎಂದು ಮನವಿ ಮಾಡುತ್ತೇನೆ- ಭಾರತ್ ಮಾತಾ ಕೀ ಜೈ..! ಭಾರತ್ ಮಾತಾ ಕೀ ಜೈ..! ಭಾರತ್ ಮಾತಾ ಕೀ ಜೈ..!
ಭಾರತ-ಅಮೆರಿಕಾ ಸ್ನೇಹ, ಬಹುಕಾಲ ಉಳಿಯಲಿ, ಬಹುಕಾಲ ಉಳಿಯಲಿ..!
ತುಂಬಾ ಧನ್ಯವಾದಗಳು.
आज 130 करोड़ भारतवासी मिलकर न्यू इंडिया का निर्माण कर रहे हैं।
— PMO India (@PMOIndia) February 24, 2020
हमारी युवा शक्ति aspirations से भरी हुई है।
बड़े लक्ष्य रखना, उन्हें प्राप्त करना, आज न्यू इंडिया की पहचान बन रहा है: PM @narendramodi
आज भारत में दुनिया का सबसे बड़ा क्रिकेट स्टेडियम ही नहीं है,
— PMO India (@PMOIndia) February 24, 2020
आज भारत दुनिया की सबसे बड़ी हेल्थ एश्योरेंस स्कीम भी चला रहा है।
आज भारत में दुनिया का सबसे बड़ा सोलर पार्क ही नहीं बन रहा,
आज भारत में दुनिया का सबसे बड़ा सेनीटेशन प्रोग्राम भी चल रहा है: PM
आज भारत एक साथ सबसे ज्यादा सैटेलाइट भेजने का वर्ल्ड रिकॉर्ड ही नहीं बना रहा,
— PMO India (@PMOIndia) February 24, 2020
आज भारत सबसे तेज Financial Inclusion करके भी वर्ल्ड रिकॉर्ड बना रहा है: PM
आज जो देश भारत का Largest Trading Partner है, वो है अमेरिका।
— PMO India (@PMOIndia) February 24, 2020
आज भारत की सेनाएं जिस देश के साथ सबसे ज्यादा युद्ध अभ्यास कर रही हैं- वो है अमेरिका।
आज जिस देश के साथ भारत की सबसे व्यापक रीसर्च एंड डवलपमेंट पार्टनरशिप है- वो है अमेरिका: PM
21वीं सदी में,
— PMO India (@PMOIndia) February 24, 2020
नए Alignments,
नए Competition,
नए Challenges और
नई Opportunities, बदलाव की नींव रख रहे हैं।
भारत और अमेरिका के संबंध और सहयोग की, 21वीं सदी के विश्व की दिशा तय करने में महत्वपूर्ण भूमिका होगी।
मेरा स्पष्ट मत है कि भारत और अमेरिका Natural Partners हैं: PM
हम सिर्फ Indo-Pacific Region में ही नहीं, बल्कि पूरी दुनिया की Peace, Progress और Security में एक प्रभावी योगदान दे सकते हैं।
— PMO India (@PMOIndia) February 24, 2020
और
इसलिए, मैं मानता हूं कि प्रेसिडेंट ट्रंप का इस दशक की शुरुआत में ही भारत आना, एक बहुत बड़ा अवसर है: PM