Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಕೃಷಿ ಹಾಗೂ ಪೂರಕ ವಲಯಗಳ ಸಹಕಾರಕ್ಕಾಗಿ ಥೈವಾನ್ ನೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟ ಸಮ್ಮತಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದಲ್ಲಿನ ಥೈಪೆ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರ ಮತ್ತು ಥೈಪೆಯಲ್ಲಿರುವ ಭಾರತ – ಥೈಪೆ ಅಸೋಸಿಯೇಷನ್ ನಡುವೆ ಆಗಿರುವ ಕೃಷಿ ಮತ್ತು ಅದಕ್ಕೆ ಪೂರಕವಾದ ವಲಯಗಳ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಪೂರ್ವಾನ್ವಯ ಅನುಮೋದನೆ ನೀಡಿದೆ.

ಈ ತಿಳಿವಳಿಕೆ ಒಪ್ಪಂದವು ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಆಕ್ವಾಕಲ್ಚರ್ ಮತ್ತು ಆಹಾರ ಸಂಸ್ಕರಣೆ, ತಳಿ ಸಂಪನ್ಮೂಲ ಹಾಗೂ ಪರಿಸರ ಸುಸ್ಥಿರತೆ ಕ್ಷೇತ್ರಗಳಲ್ಲಿನ ಸಹಕಾರವನ್ನು ಈ ತಿಳಿವಳಿಕೆ ಒಪ್ಪಂದ ಒದಗಿಸುತ್ತದೆ. ಈ ಕ್ಷೇತ್ರಗಳಲ್ಲಿ ಎರಡೂ ದೇಶಗಳಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ಎರಡೂ ರಾಷ್ಟ್ರಗಳು ಉತ್ತೇಜನ ನೀಡಲಿವೆ. ಎರಡೂ ರಾಷ್ಟ್ರಗಳ ನಡುವಿನ ಸಹಕಾರವು ಭೇಟಿಗಳು, ಮಾಹಿತಿ, ತಂತ್ರಜ್ಞಾನದ ವಿನಿಮಯ ಮತ್ತು ತರಬೇತಿ ಹಾಗೂ ವಾಣಿಜ್ಯದ ಅಡೆತಡೆ ನಿವಾರಿಸಿ ಕೃಷಿ ವಾಣಿಜ್ಯ ವಿಸ್ತರಣೆಯನ್ನು ಒಳಗೊಂಡಿರುತ್ತದೆ.

ಎಂ.ಓ.ಯು. ಅಡಿಯಲ್ಲಿ ಪರಸ್ಪರ ಹಿತಾಸಕ್ತಿಯ ಆದ್ಯತೆಯ ವಲಯಗಳನ್ನು ಗುರುತಿಸಲು ಒಂದು ಜಂಟಿ ಕಾರ್ಯ ಸಮಿತಿಯನ್ನು ರಚಿಸಲಾಗುತ್ತದೆ ಮತ್ತು ಎರಡೂ ಕಡೆಗಳಿಂದ ಗುರುತಿಸಲಾದ ಚಟುವಟಿಕೆಗಳ ಅನುಷ್ಠಾನದ ಪ್ರಗತಿಯನ್ನು ಪರಾಮರ್ಶಿಸಲಾಗುತ್ತದೆ. ಆರಂಭದಲ್ಲಿ ಈ ತಿಳಿವಳಿಕೆ ಒಪ್ಪಂದವನ್ನು 5 ವರ್ಷಗಳ ಅವಧಿಗೆ ಸಹಿ ಮಾಡಲಾಗುತ್ತದೆ ಮತ್ತು ಎರಡೂ ಕಡೆಯವರು ಈ ದನ್ನು ಕೊನೆಗಾಣಿಸಲು ತಮ್ಮ ಇಚ್ಛೆ/ ಇರಾದೆ ವ್ಯಕ್ತಪಡಿಸದ ಹೊರತು ಅದು ತಂತಾನೆ ಮುಂದಿನ ಐದು ವರ್ಷಗಳಿಗೆ ನವೀಕರಿಸಲ್ಪಡುತ್ತದೆ.

***