ಪಿಎಂಇಂಡಿಯಾ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಭಾರತದ ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಸಲು ಮತ್ತು ರಫ್ತುಗಳನ್ನು ಹೆಚ್ಚಿಸಲು– ಆತ್ಮನಿರ್ಭರ ಭಾರತ– ಉತ್ಪಾದನೆ ಆಧಾರಿತ ಪ್ರೋತ್ಸಾಹ (ಪಿಎಲ್ಐ) ಯೋಜನೆಯನ್ನು ಈ ಕೆಳಗಿನ 10 ಪ್ರಮುಖ ಕ್ಷೇತ್ರಗಳಲ್ಲಿ ಪರಿಚಯಿಸಲು ಅನುಮೋದನೆ ನೀಡಿದೆ.

ಪಿಎಲ್ಐ ಯೋಜನೆಯನ್ನು ಸಂಬಂಧಪಟ್ಟ ಸಚಿವಾಲಯಗಳು / ಇಲಾಖೆಗಳು ಅನುಷ್ಠಾನಗೊಳಿಸುತ್ತವೆ ಮತ್ತು ನಿಗದಿಪಡಿಸಿದ ಒಟ್ಟಾರೆ ಹಣಕಾಸು ಮಿತಿಯಲ್ಲಿರುತ್ತದೆ. ವೈಯಕ್ತಿಕ ಕ್ಷೇತ್ರಗಳಿಗೆ ಪಿಎಲ್ಐನ ಅಂತಿಮ ಪ್ರಸ್ತಾಪಗಳನ್ನು ವೆಚ್ಚ ಹಣಕಾಸು ಸಮಿತಿ (ಇ ಎಫ್ ಸಿ) ಮೌಲ್ಯಮಾಪನ ಮಾಡಲಿದೆ. ನಂತರ ಸಂಪುಟವು ಅನುಮೋದಿಸುತ್ತದೆ. ಅನುಮೋದಿತ ವಲಯದ ಒಂದು ಪಿಎಲ್ಐ ಯೋಜನೆಯಿಂದ ಉಳಿತಾಯದ ಹಣವಿದ್ದರೆ, ಸಶಕ್ತ ಕಾರ್ಯದರ್ಶಿಗಳ ಗುಂಪು ಮತ್ತೊಂದು ಅನುಮೋದಿತ ವಲಯಕ್ಕೆ ಹಣವನ್ನು ಒದಗಿಸಬಹುದು. ಯಾವುದೇ ಹೊಸ ವಲಯದ ಪಿಎಲ್ಐಗೆ ಸಂಪುಟದ ಹೊಸ ಅನುಮೋದನೆ ಅಗತ್ಯವಿರುತ್ತದೆ.
ಈ 10 ಪ್ರಮುಖ ನಿರ್ದಿಷ್ಟ ಕ್ಷೇತ್ರಗಳ ಪಿಎಲ್ಐ ಯೋಜನೆಯು ಭಾರತದ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುತ್ತದೆ, ಪ್ರಮುಖ ಸಾಮರ್ಥ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಆಕರ್ಷಿಸುತ್ತದೆ; ದಕ್ಷತೆಯನ್ನು ಖಚಿತಪಡಿಸುತ್ತದೆ; ಹೆಚ್ಚಿನ ಆರ್ಥಿಕತೆಯನ್ನು ಸೃಷ್ಟಿಸುತ್ತದೆ; ರಫ್ತು ಹೆಚ್ಚಿಸಲು ಮತ್ತು ಭಾರತವನ್ನು ಜಾಗತಿಕ ಪೂರೈಕೆ ಸರಪಳಿಯ ಅವಿಭಾಜ್ಯ ಅಂಗವನ್ನಾಗಿ ಮಾಡುತ್ತದೆ.
ಮೇಲೆ ಹೇಳಲಾದ ಕ್ಷೇತ್ರಗಳು ಈಗಾಗಲೇ ಪಿಎಲ್ಐ ಯೋಜನೆಗಳಿಗೆ ಅಧಿಸೂಚಿತವಾಗಿರುವ ೀ ಕೆಳಕಂಡ ಕ್ಷೇತ್ರಗಳಿಗೆ ಹೆಚ್ಚುವರಿಯಾಗಿವೆ

ದೇಶದಲ್ಲಿ ದಕ್ಷ, ನ್ಯಾಯಸಮ್ಮತ ಮತ್ತು ಸ್ಥಿತಿಸ್ಥಾಪಕ ಉತ್ಪಾದನಾ ಕ್ಷೇತ್ರವನ್ನು ಪ್ರೋತ್ಸಾಹಿಸಲು ನೀತಿಗಳನ್ನು ರೂಪಿಸಲು ಪ್ರಧಾನ ಮಂತ್ರಿಯವರ ‘ಆತ್ಮನಿರ್ಭರ ಭಾರತ‘ ಕರೆಯು ಕಾರಣವಾಗಿದೆ. ಕೈಗಾರಿಕಾ ವಸ್ತುಗಳ ಉತ್ಪಾದನೆ ಮತ್ತು ರಫ್ತುಗಳಲ್ಲಿನ ಬೆಳವಣಿಗೆ ಭಾರತೀಯ ಉದ್ಯಮವನ್ನು ವಿದೇಶಿ ಸ್ಪರ್ಧೆ ಮತ್ತು ಆಲೋಚನೆಗಳಿಗೆ ಹೆಚ್ಚು ಒಡ್ಡುತ್ತದೆ. ಅದರ ಸಾಮರ್ಥ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಉತ್ಪಾದನಾ ಕ್ಷೇತ್ರದ ಉತ್ತೇಜನ ಮತ್ತು ಅನುಕೂಲಕರ ಉತ್ಪಾದನಾ ವ್ಯವಸ್ಥೆಯನ್ನು ಸೃಷ್ಟಿಸುವುದರಿಂದ ಜಾಗತಿಕ ಪೂರೈಕೆ ಸರಪಳಿಗಳೊಂದಿಗೆ ಜೋಡಿಸುವುದಲ್ಲದೆ, ದೇಶದ ಎಂಎಸ್ಎಂಇ ವಲಯದ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ಆರ್ಥಿಕತೆಯ ಒಟ್ಟಾರೆ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಕ್ಷೇತ್ರವಾರು ಉತ್ಪಾದನೆಗಳು


***
Cabinet decision of PLI scheme for 10 sectors will boost manufacturing, give opportunities to youth while making India a preferred investment destination. This is an important step towards improving our competitiveness & realising an Aatmanirbhar Bharat. https://t.co/KDQvMEBubJ
— Narendra Modi (@narendramodi) November 11, 2020