Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶೇರು ವಿನಿಮಯ ಕೇಂದ್ರಗಳಲ್ಲಿ ವಿದೇಶೀ ಹೂಡಿಕೆಯ ಮಿತಿಯನ್ನು ಶೇಕಡ 5ರಿಂದ ಶೇ.15ಕ್ಕೆ ಏರಿಕೆ ಮಾಡಲು ಸಚಿವ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತೀಯ ಶೇರು ವಿನಿಮಯ ಕೇಂದ್ರಗಳಲ್ಲಿ, ಒಂದು ಸ್ಟಾಕ್ ಎಕ್ಸ್ ಚೇಂಜ್, ಒಂದು ಮೋತೀಖಾನೆ, ಒಂದು ಬ್ಯಾಂಕಿಂಗ್ ಕಂಪನಿ, ಒಂದು ವಿಮಾ ಕಂಪನಿ, ಒಂದು ಸರಕು ಉತ್ಪನ್ನ ವಿನಿಮಯದಲ್ಲಿ ವಿದೇಶೀ ಶೇರು ಮಿತಿಯನ್ನು ಶೇಕಡ 5ರಿಂದ ಶೇಕಡ 15ಕ್ಕೆ ಏರಿಕೆ ಮಾಡಲು ತನ್ನ ಅನುಮೋದನೆ ನೀಡಿದೆ. ವಿದೇಶೀ ಬಂಡವಾಳ ಹೂಡಿಕೆದಾರರಿಗೆ ಶೇರು ಪೇಟೆಗಳ ಸೆಕೆಂಡರಿ ಮಾರುಕಟ್ಟೆಯ ಜೊತೆಗೆ ಆರಂಭಿಕ ಹಂಚಿಕೆಯಲ್ಲಿಯೇ ಶೇರುಗಳನ್ನು ಪಡೆದುಕೊಳ್ಳುವ ಪ್ರಸ್ತಾಪಕ್ಕೂ ಸಂಪುಟ ತನ್ನ ಸಮ್ಮತಿ ಸೂಚಿಸಿದೆ.

ಈ ನಿರ್ಧಾರ, ಭಾರತೀಯ ಬಂಡವಾಳ ಪೇಟೆಯ ಒಟ್ಟಾರೆ ಪ್ರಗತಿ ಮತ್ತು ಅಭಿವೃದ್ಧಿಗೆ ಕಾರಣವಾಗುವಂಥ ಉತ್ತಮ ಜಾಗತಿಕ ಪದ್ಧತಿಗಳು ಮತ್ತು ಇತ್ತೀಚಿನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅವಕಾಶ ನೀಡುವ ಮೂಲಕ ಭಾರತೀಯ ಶೇರು ವಿನಿಮಯ ಕೇಂದ್ರಗಳ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ನೆರವಾಗುತ್ತದೆ.

ಈ ಅನುಮೋದನೆಯು ಹಣಕಾಸು ಸಚಿವ ಶ್ರೀ ಅರುಣ್ ಜೈಟ್ಲಿ ಅವರು 2016-17ನೇ ಸಾಲಿನ ಆಯವ್ಯಯ ಮಂಡಿಸಿದ ಸಂದರ್ಭದಲ್ಲಿ ಎಫ್.ಡಿ.ಐ. ನೀತಿಯ ಸುಧಾರಣೆಗೆ ಸಂಬಂಧಿಸಿದಂತೆ ದೇಶೀಯ ಸಂಸ್ಥೆಗಳಿಗೆ ಸರಿ ಸಮಾನವಾಗಿ ವಿದೇಶೀ ಕಾಯಗಳ ಭಾರತೀಯ ಶೇರು ವಿನಿಮಯ ಕೇಂದ್ರದಲ್ಲಿನ ಹೂಡಿಕೆಯ ಮಿತಿಯನ್ನು ಶೇ.5ರಿಂದ ಶೇ.15ಕ್ಕೆ ಹೆಚ್ಚಿಸುವ ನಿರ್ಧಾರದ ಪ್ರಕಟಣೆಯ ಅನುಷ್ಠಾನಕ್ಕೆ ಅನುಗುಣವಾಗಿದೆ.